INDA vs ENGA: ಖಲೀಲ್ ಬೌಲಿಂಗ್ ದಾಳಿಗೆ ಕುಸಿದ ಇಂಗ್ಲೆಂಡ್ ಲಯನ್ಸ್
ನಾಯಕ ಅಭಿಮನ್ಯು ಈಶ್ವರನ್ ನಾಯಕನ ಆಟವಾಡಿ 80 ರನ್ ಬಾರಿಸಿದರು. ಆದರೆ ಕರುಣ್ ನಾಯರ್(15) ಮತ್ತು ಆರಂಭಕಾರ ಯಶಸ್ವಿ ಜೈಸ್ವಾಲ್(5) ರನ್ ಗಳಿಸಿದರು. ಧ್ರುವ್ ಜುರೆಲ್(6) ಮತ್ತು ನಿತೀಶ್ ಕುಮಾರ್ ರೆಡ್ಡಿ(1) ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂದು ಅಂತಿಮ ದಿನವಾಗಿದ್ದು ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವುದು ಖಚಿತವಾದಂತಿದೆ.


ನಾರ್ತಾಂಪ್ಟನ್: ಇಂಗ್ಲೆಂಡ್ ಲಯನ್ಸ್(INDA vs ENGA) ಎದುರಿನ ದ್ವಿತೀಯ ಅನಧಿಕೃತ ಟೆಸ್ಟ್(Unofficial Test) ಪಂದ್ಯದಲ್ಲಿ ಭಾರತ ಎ ತಂಡ(India A) ಮುನ್ನಡೆ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 163 ರನ್ ಗಳಿಸಿ 184 ರನ್ ಮುನ್ನಡೆ ಕಾಯ್ದುಕೊಂಡಿದೆ. ವೇಗಿ ಖಲೀಲ್ ಅಹಮದ್ (70ಕ್ಕೆ4) ಅವರ ಅಮೋಘ ಬೌಲಿಂಗ್ ಮೊದಲ ಇನಿಂಗ್ಸ್ನ ಹೈಲೆಟ್ಸ್ ಆಗಿತ್ತು.
ಭಾನುವಾರ ಬೆಳಗ್ಗೆ ನಾಟಕೀಯ ರೀತಿಯಲ್ಲಿ ಉಳಿದ ವಿಕೆಟ್ಗಳನ್ನು ಕಳೆದುಕೊಂಡ ಲಯನ್ಸ್ 10 ರನ್ಗಳ ಅಂತರದಲ್ಲಿ ನಾಲ್ಕು ವಿಕೆಟ್ ಪತನವಾದವು. ಖಲೀಲ್ ಘಾತಕ ಬೌಲಿಂಗ್ನಲ್ಲಿ ಆತಿಥೇಯ ತಂಡದ ನಾಯಕ ಜೇಮ್ಸ್ ರಿವ್ ಮತ್ತು ಜಾರ್ಜ್ ಹಿಲ್ ಅವರು ಸತತ ಎರಡು ಎಸೆತಗಳಲ್ಲಿ ಔಟಾದರು.
21 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಕೆ.ಎಲ್ ರಾಹುಲ್ ದ್ವಿತೀಯ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. 64 ಎಸೆತಗಳಿಂದ 51 ರನ್ ಗಳಿಸಿದರು.
ನಾಯಕ ಅಭಿಮನ್ಯು ಈಶ್ವರನ್ ನಾಯಕನ ಆಟವಾಡಿ 80 ರನ್ ಬಾರಿಸಿದರು. ಆದರೆ ಕರುಣ್ ನಾಯರ್(15) ಮತ್ತು ಆರಂಭಕಾರ ಯಶಸ್ವಿ ಜೈಸ್ವಾಲ್(5) ರನ್ ಗಳಿಸಿದರು. ಧ್ರುವ್ ಜುರೆಲ್(6) ಮತ್ತು ನಿತೀಶ್ ಕುಮಾರ್ ರೆಡ್ಡಿ(1) ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂದು ಅಂತಿಮ ದಿನವಾಗಿದ್ದು ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವುದು ಖಚಿತವಾದಂತಿದೆ.
ಇದನ್ನೂ ಓದಿ IPL 2025: ಆರ್ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್ಗಳನ್ನು ಆರಿಸಿದ ವಿಜಯ್ ಮಲ್ಯ!
ಅಭ್ಯಾಸ ಆರಂಭಿಸಿದ ಭಾರತ
ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿತ್ತು. ಶುಭಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಪ್ರಸಿದ್ದ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದರು.