French Open 2025 prize money: ಫ್ರೆಂಚ್ ಓಪನ್ ವಿಜೇತರಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?
ಆರಂಭಿಕ ಎರಡು ಸೆಟ್ ಸೋತ ಬಳಿಕವೂ ಫಿನಿಕ್ಸ್‌ನಂತೆ ಎದ್ದು ನಿಂತ ಅಲ್ಕರಾಜ್ ಆ ಬಳಿಕ ಮೂರು ಸೆಟ್‌ಗಳನ್ನು ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು. ಫ್ರೆಂಚ್ ಓಪನ್ ಇತಿಹಾಸದಲ್ಲೇ 5 ಗಂಟೆಗೂ ಅಧಿಕ ಕಾಲ ನಡೆದ ಮೊದಲ ಫೈನಲ್ ಪಂದ್ಯ ಇದಾಗಿದೆ.


ಪ್ಯಾರಿಸ್: ಬರೋಬ್ಬರಿ 5 ಗಂಟೆ 29 ನಿಮಿಷಗಳ ಕಾಲ ನಡೆದ ಫ್ರೆಂಚ್ ಓಪನ್ ಫೈನಲ್(French Open final) ಪಂದ್ಯದಲ್ಲಿ ವಿಶ್ವ ನಂ.1 ಇಟಲಿಯ ಜಾನ್ನಿಕ್ ಸಿನ್ನರ್‌ರನ್ನು(Jannik Sinner) 4-6, 6-7(4/7), 6-4, 7-6(7/3), 7-6(10/2) ಸೆಟ್‌ಗಳಲ್ಲಿ ಸೋಲಿಸಿದ ಹಾಲಿ ಚಾಂಪಿಯನ್, ವಿಶ್ವ ನಂ.2 ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್(Carlos Alcaraz), ಸತತ 2ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟರು. ಟ್ರೋಫಿ ಗೆದ್ದ ಅಲ್ಕರಾಜ್ ಮತ್ತು ರನ್ನರ್ ಅಪ್ ಸಿನ್ನರ್ ಸೇರಿ ಸೆಮಿಫೈನಲ್ ಪ್ರವೇಶಿಸಿದ ಆಟಗಾರರಿಗೆ ಸಿಕ್ಕ ಬಹುಮಾನ(French Open 2025 prize money) ಮೊತ್ತದ ವಿವರ ಹೀಗಿದೆ.
ಆರಂಭಿಕ ಎರಡು ಸೆಟ್ ಸೋತ ಬಳಿಕವೂ ಫಿನಿಕ್ಸ್‌ನಂತೆ ಎದ್ದು ನಿಂತ ಅಲ್ಕರಾಜ್ ಆ ಬಳಿಕ ಮೂರು ಸೆಟ್‌ಗಳನ್ನು ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು. ಫ್ರೆಂಚ್ ಓಪನ್ ಇತಿಹಾಸದಲ್ಲೇ 5 ಗಂಟೆಗೂ ಅಧಿಕ ಕಾಲ ನಡೆದ ಮೊದಲ ಫೈನಲ್ ಪಂದ್ಯ ಇದಾಗಿದೆ.
#WATCH | Carlos Alcaraz pulls off a historic comeback vs Jannik Sinner to win the French Open 2025. #CarlosAlcaraz #JannikSinner #FrenchOpen2025 #FrenchOpen pic.twitter.com/64eLqTvOu1
— The Federal (@TheFederal_News) June 9, 2025
ಈ ಮೊದಲು 1982ರ ಫೈನಲ್‌ನಲ್ಲಿ ಸ್ವೀಡನ್‌ನ ಮ್ಯಾಟ್ಸ್ ವಿಲಾಂಡರ್ ಅರ್ಜೆಂಟೀನಾದ ಗ್ಗುಲೆರ್ಮೊ ವಿಲಸ್ ವಿರುದ್ದ 4 ಗಂಟೆ 42 ನಿಮಿಷಸೆಣಸಿ ಚಾಂಪಿಯನ್ ಆಗಿದ್ದರು. ಅಲ್ಲದೇ ಅಲ್ಕರಜ್-ಸಿನ್ನರ್ ನಡುವಿನ ಫೈನಲ್, ಗ್ಯಾನ್ ಸ್ಲಾಂ ಇತಿಹಾಸದಲ್ಲೇ 2ನೇ ಸುದೀರ್ಘ ಫೈನಲ್. ಜೋಕೋವಿಕ್ ಹಾಗೂ ನಡಾಲ್ ನಡುವೆ 2012ರ ಆಸ್ಟ್ರೇಲಿಯನ್ ಓಪನ್ ಫೈನಲ್ 5 ಗಂಟೆ 53 ನಿಮಿಷ ನಡೆದಿತ್ತು.
ಬಹುಮಾನ ಮೊತ್ತದ ಪಟ್ಟಿ ಹೀಗಿದೆ
ಫ್ರೆಂಚ್ ಓಪನ್ ಗೆದ್ದ ಅಲ್ಕರಾಜ್ 24.83 ಕೋಟಿ ರು. ಬಹುಮಾನ ಪಡೆದರು.
ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಆದ ಸಿನ್ನರ್‌ಗೆ 12.42 ಕೋಟಿ ದೊರೆಯಿತು.
ಸೆಮಿಫೈನಲ್ ಪ್ರವೇಶಿಸಿದ್ದ ಜೋಕೋವಿಕ್ ಮತ್ತು ಲೊರೆಂಜೊ ಮುಸೆಟ್ಟಿ ತಲಾ 6.72 ಕೋಟಿ ಪಡೆದರು.
ಕ್ವಾರ್ಟರ್ ಫೈನಲ್ ಆಡಿದ್ದ ಅಲೆಕ್ಸಾಂಡರ್ ಬುಬ್ಲಿಕ್, ಟಾಮಿ ಪಾಲ್, ಅಲೆಕ್ಸಾಂಡರ್ ಜ್ವೆರೆವ್, ಫ್ರಾನ್ಸಿಸ್ ಟಿಯಾಫೊಗೆ ತಲಾ 4.3 ಕೋಟಿ ದೊರೆಯಿತು.
ಇದನ್ನೂ ಓದಿ French Open final: ದಾಖಲೆ ಬರೆದ ಅಲ್ಕರಾಜ್-ಸಿನ್ನರ್ ನಡುವಿನ ಫೈನಲ್ ಪಂದ್ಯ