ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಲಿವಿಂಗ್‌ ಟುಗೆದರ್‌ ಬೇಡವೆಂದು ಬುದ್ಧಿ ಹೇಳಿದ ಪೋಷಕರು, ರೈಲಿಗೆ ತಲೆಕೊಟ್ಟ ಯುವಕ

ಮಹಿಳೆಯ ಜೊತೆ ಲಿವಿಂಗ್‌ ಟುಗೆದರ್‌ನಲ್ಲಿದ್ದ ಯುವಕನಿಗೆ, ಇಂಥ ಸಂಬಂಧ ಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದರು. ಇದರಿಂದ ನೊಂದ ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಹಿಳೆಗೂ ಗಾಯಗಳಾಗಿವೆ.

ಲಿವಿಂಗ್‌ ಟುಗೆದರ್‌ ಬೇಡವೆಂದ ಪೋಷಕರು, ರೈಲಿಗೆ ತಲೆಕೊಟ್ಟ ಯುವಕ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Apr 21, 2025 7:50 AM

ಕಲಬುರಗಿ: ಮಹಿಳೆಯೊಬ್ಬರ ಜೊತೆ ತಮ್ಮ ಮಗ ಲಿವಿಂಗ್ ಟುಗೆದರ್ (living together) ನಲ್ಲಿರುವ ವಿಚಾರದ ತಿಳಿದ ಪೋಷಕರು ತಮ್ಮ ಮಗನಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ಕಲಬುರಗಿ (Kalaburagi news) ಜಿಲ್ಲೆಯ ನಾಗನಹಳ್ಳಿ ಬಳಿ ನಡೆದಿದೆ. ಮೃತ ಯುವಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಲಿವಿಂಗ್ ಟುಗೆದರ್‌ನಲ್ಲಿದ್ದ ಮಹಿಳೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.

ಇದರಿಂದ ಆತಂಕಗೊಂಡ ಮಹಿಳೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು ಯುವಕನ ಮನವೊಲಿಸಲು ಯತ್ನಿಸಿದ್ದಾಳೆ. ಆದರೆ ಇದಕ್ಕೆ ಕಿವಿಗೊಡದ ಶಿವಕುಮಾರ್ ರೈಲಿಗೆ ರೈಲಿನ ಮುಂದೆ ಬಿದ್ದಿದ್ದಾನೆ. ಈ ವೇಳೆ ಮಹಿಳೆ ಆತನ ರಕ್ಷಣೆಗೆ ಮುಂದಾಗಿದ್ದು ರಕ್ಷಿಸಲು ಸಾಧ್ಯವಾಗಿಲ್ಲ. ರಕ್ಷಿಸಲು ಹೋಗಿದ್ದ ಮಹಿಳೆಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಮಿನಿ ಬಸ್!‌

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ನಿಂತಿದ್ದ ಇಂಡಿಗೋ ವಿಮಾನಕ್ಕೆ (Indigo flight) ಮಿನಿ ಬಸ್ ಡಿಕ್ಕಿ ಹೊಡೆದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಕೆಳ ಭಾಗಕ್ಕೆ (ಅಂಡರ್‌ಕ್ಯಾರೇಜ್) ಬಸ್‌ ಡಿಕ್ಕಿ ಹೊಡೆದಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 12:15 ರ ಸುಮಾರಿನಲ್ಲಿ ಪಾರ್ಕಿಂಗ್ ಬೇ (71 ಆಲ್ಫಾ) ಬಳಿ ಈ ಘಟನೆ ಸಂಭವಿಸಿದೆ.

ಆದರೆ ಯಾವುದೇ ಗಾಯದ ಕುರಿತು ವರದಿಯಾಗಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. 2022ರಿಂದ ಇಂಜಿನ್ ಸಮಸ್ಯೆಗಳಿಂದಾಗಿ ಇಂಡಿಗೊ A320 ವಿಮಾನವನ್ನು ಪಾರ್ಕಿಂಗ್ ಬೇನಲ್ಲಿ ನಿಲ್ಲಿಸಲಾಗಿತ್ತು. ಗ್ರೌಂಡ್ ನಿರ್ವಹಣೆಯ ಕಂಪನಿಯಿಂದ ನಿಯೋಜಿಸಲಾಗಿದ್ದ ಮಿನಿ ಬಸ್ ಚಾಲಕ ನಿದ್ರೆಯ ಮಂಪರಿನಲ್ಲಿದಾಗ ಇಂಡಿಗೋ ವಿಮಾನದ ಅಂಡರ್ ಕ್ಯಾರೇಜ್‌ಗೆ ಡಿಕ್ಕಿ ಹೊಡೆದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆಕಾಶ್ ಏರ್ ಸಿಬ್ಬಂದಿಗಾಗಿ ಆ ಮಿನಿ ಬಸ್ಸನ್ನು ಬಳಸಲಾಗುತ್ತಿತ್ತು. ಅದೃಷ್ಟವಶಾತ್, ಆ ಸಂದರ್ಭದಲ್ಲಿ ಚಾಲಕ ಮಾತ್ರ ಮಿನಿ ಬಸ್ ನಲ್ಲಿದ್ದರು ಎನ್ನಲಾಗಿದೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ತಿಳಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರು, ವಿಮಾನಯಾನ ಪಾಲುದಾರರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗಳ ಸುರಕ್ಷತೆ ಮತ್ತು ಭದ್ರತೆಯು ನಮ್ಮ ಹೆಚ್ಚಿನ ಆದ್ಯತೆಯಾಗಿದೆ ಎಂದು ಬಿಐಎಎಲ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ವಕ್ತಾರರು, ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Tractor Accident: ಟ್ರ್ಯಾಕ್ಟರ್‌ ಅಡಿಯಲ್ಲಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು