police Firing: ದರೋಡೆಕೋರರ ಕಾಲಿಗೆ ಪೊಲೀಸ್ ಗುಂಡು, ಬಂಧನ
ಏಪ್ರಿಲ್ 8ರಂದು ಬೆಳಗಿನ ಜಾವ ಗ್ಯಾಸ್ ಕಟ್ಟರ್ ಬಳಸಿ ಭದ್ರತೆ ಇಲ್ಲದ ಎಸ್‌ಬಿಐ ಎಟಿಎಂ ಅನ್ನು ಮುರಿದ ಖದೀಮರು 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಅಂತಾರಾಜ್ಯ ದರೋಡೆಕೋರರಾದ ಇವರು ಇನ್ನೂ ಹಲವು ಕಳವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದಾರೆ.


ಕಲಬುರಗಿ: ಕಲಬುರಗಿಯಲ್ಲಿ (Kalaburagi news) ಶನಿವಾರ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ (Police firing) ನಡೆದಿದ್ದು, ಪೊಲೀಸರು ಇಬ್ಬರು ಅಂತಾರಾಜ್ಯ ದರೋಡೆಕೋರರ (robbers) ಮೇಲೆ ಫೈರಿಂಗ್ ನಡೆಸಿದ್ದಾರೆ. ಕಲಬುರಗಿಯಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ (ATM) 18 ಲಕ್ಷ ರೂ. ದೋಚಿದ್ದ ಖದೀಮರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಹರಿಯಾಣ ಮೂಲದ ತಸ್ಲಿಮ್, ಶರೀಫ್ ಬಂಧಿತ ಅಂತಾರಾಜ್ಯ ಕಳ್ಳರು. ಇಬ್ಬರನ್ನೂ ಬಂಧಿಸಲು ಹೋಗಿದ್ದ ವೇಳೆ ಕಲಬುರಗಿ ಗ್ರಾಮೀಣ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು.
ಈ ವೇಳೆ ಪೊಲೀಸರು ಕಳ್ಳರ ಮೊಣಕಾಲಿಗೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಘಟನೆಯಲ್ಲಿ ಪಿಎಸ್ ಐ ಬಸವರಾಜ್ ಹಾಗೂ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಏಪ್ರಿಲ್ 8ರಂದು ಬೆಳಗಿನ ಜಾವ ಗ್ಯಾಸ್ ಕಟ್ಟರ್ ಬಳಸಿ ಭದ್ರತೆ ಇಲ್ಲದ ಎಸ್‌ಬಿಐ ಎಟಿಎಂ ಅನ್ನು ಮುರಿದ ಖದೀಮರು 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಅಂತಾರಾಜ್ಯ ದರೋಡೆಕೋರರಾದ ಇವರು ಇನ್ನೂ ಹಲವು ಕಳವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.
ಗೋಕರ್ಣದಲ್ಲಿ ಇಬ್ಬರು ಯುವತಿಯರು ಸಮುದ್ರಪಾಲು
ಗೋಕರ್ಣ: ಪ್ರವಾಸಕ್ಕೆ ಹೋಗಿದ್ದ ವೇಳೆ ತಮಿಳುನಾಡು ಮೂಲದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ (Gokarna tragedy) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯರನ್ನು ಕಾಂಝಿಮೋಳಿ ಮತ್ತು ಸಿಂಧುಜಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಜಟಾಯು ತೀರ್ಥದಲ್ಲಿ ಈಜಲು ಇಳಿದಿದ್ದಾಗ ಸಮುದ್ರದ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯರು ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಸಮುದ್ರದ ಅಲೆಗಳು ಜೋರಾಗಿದ್ದರಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಮೃತರು ತಮಿಳುನಾಡಿನ ತಿರುಚ್ಚಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಅಂತಿಮ ವರ್ಷದ ಅಧ್ಯಯನವನ್ನು ಮುಗಿಸಿ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಸುದೀರ್ಘ ಹುಡುಕಾಟದ ನಂತರ ರಕ್ಷಣಾ ತಂಡವು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Self Harming: ತೋಟದ ಮನೆಯಲ್ಲಿ ಯುವ ವಕೀಲೆ, ಯುವಕ ಅನುಮಾನಾಸ್ಪದ ಸಾವು