ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Hassan Controversy: ಕಮಲ್‌ ಹಾಸನ್‌ ಥಗ್‌ ಲೈಫ್‌ ರಾಜ್ಯದಲ್ಲಿ ಬಿಡುಗಡೆ: ಇಂದು ಕೆಎಫ್‌ಸಿಸಿ ಮಹತ್ವದ ಸಭೆ

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ರಾಜ್ಯದಲ್ಲಿ ಚಿತ್ರವನ್ನು ಸುಗಮವಾಗಿ ಬಿಡುಗಡೆ ಮಾಡಲು ಅವಕಾಶ ಕೊಡುವಂತೆ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿದೆ. ಕೆಎಫ್‌ಸಿಸಿ ಇಂದು ಈ ಕುರಿತು (Kamal Hassan Controversy) ನಿರ್ಧಾರ ತೆಗೆದುಕೊಳ್ಳಲಿದೆ.

ಕಮಲ್‌ ಹಾಸನ್‌ ಥಗ್‌ ಲೈಫ್‌ ರಾಜ್ಯದಲ್ಲಿ ಬಿಡುಗಡೆ: ಇಂದು ಕೆಎಫ್‌ಸಿಸಿ ಸಭೆ

ಥಗ್‌ ಲೈಫ್‌ ಪೋಸ್ಟರ್

ಹರೀಶ್‌ ಕೇರ ಹರೀಶ್‌ ಕೇರ Jun 3, 2025 7:42 AM

ಬೆಂಗಳೂರು: ನಟ ಕಮಲ್ ಹಾಸನ್ (Actor Kamal Hassan) ಅಭಿನಯದ ‘ಥಗ್ ಲೈಫ್’ (Thug Life) ಚಿತ್ರವನ್ನು ಕರ್ನಾಟಕದಲ್ಲಿ (Karnataka) ಬಿಡುಗಡೆ ಮಾಡುವ ಕುರಿತು ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಮಂಗಳವಾರ ಸಭೆ ನಡೆಸಲಿದೆ. ಕನ್ನಡದ ಕುರಿತು ಕಮಲ್‌ ನೀಡಿದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡಿಗರು ರೊಚ್ಚಿಗೆದ್ದಿದ್ದು, ಕಮಲ್‌ ಕ್ಷಮೆ ಕೇಳುವವರೆಗೆ ಅವರ ಅಭಿನಯದ ಹೊಸ ಚಿತ್ರ ʼಥಗ್‌ ಲೈಫ್‌ʼ ಅನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ಕೊಡದಿರುವಂತೆ ಆಗ್ರಹಿಸುತ್ತಿದ್ದಾರೆ.

ಕಮಲ್‌ ಇತ್ತೀಚೆಗೆ “ಕನ್ನಡವು ತಮಿಳಿನಿಂದ ಹುಟ್ಟಿತು” ಎಂದು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಈ ಹೇಳಿಕೆ ತಪ್ಪು, ಇದಕ್ಕಾಗಿ ಕಮಲ್‌ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ವ್ಯಾಪಕವಾಗಿ ಕನ್ನಡಿಗರು ಹಾಗೂ ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದ ಸಂಘಟನೆಗಳು ಆಗ್ರಹಿಸಿದ್ದವು. ಆದರೆ "ನಾನು ಕ್ಷಮೆ ಕೇಳುವುದಿಲ್ಲ" ಎಂದು ಕಮಲ್‌ ಉದ್ಧಟತನ ಮೆರೆದಿದ್ದರು. ಅವರು ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕೆಎಫ್‌ಸಿಸಿ, ಕನ್ನಡದ ಹೋರಾಟಗಾರರು ಎಚ್ಚರಿಸಿದ್ದರು.

ಈ ಹಿನ್ನೆಲೆಯಲ್ಲಿ, ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ರಾಜ್ಯದಲ್ಲಿ ಚಿತ್ರವನ್ನು ಸುಗಮವಾಗಿ ಬಿಡುಗಡೆ ಮಾಡಲು ಅವಕಾಶ ಕೊಡುವಂತೆ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿದೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಕಮಲ್ ಹಾಸನ್ ಒಡೆತನದ ಸಂಸ್ಥೆಯಾಗಿದೆ.

ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಜೂನ್ 5 ರಂದು ಬಿಡುಗಡೆಯಾಗಲಿದ್ದು, ನಟ ತನ್ನ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ನಂತರ ಕನ್ನಡ ಪರ ಸಂಘಟನೆಗಳು ಕರ್ನಾಟಕದಲ್ಲಿ ಬಹಿಷ್ಕಾರವನ್ನು ಹೇರಲಿವೆ. “ಪ್ರದರ್ಶಕರು ಕರ್ನಾಟಕದಲ್ಲಿ ತಮ್ಮ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ. ರಾಜ್ಯದ ಎಲ್ಲ ರಾಜಕೀಯ ನಾಯಕರು ಮತ್ತು ಕನ್ನಡ ಪರ ಸಂಘಟನೆಗಳು ಇದಕ್ಕೆ ಬೆಂಬಲ ನೀಡುತ್ತವೆ’ ಎಂದು ಕೆಎಫ್‌ಸಿಸಿ ಅಧ್ಯಕ್ಷ ಎಂ.ನರಸಿಂಹಲು ತಿಳಿಸಿದರು.

ಮಂಗಳವಾರ ಬೆಳಿಗ್ಗೆ 11.30ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೆಎಫ್ ಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ.

ಇದನ್ನೂ ಓದಿ: Ram Gopal Varma: ಕನ್ನಡ ಪರ ಸಂಘಟನೆಗಳ ಹೋರಾಟ ಗೂಂಡಾಗಿರಿಗೆ ಹೋಲಿಸಿದ ರಾಮ್‌ ಗೋಪಾಲ್‌ ವರ್ಮಾ; ಕಮಲ್‌ ಹಾಸನ್‌ಗೆ ಬೆಂಬಲ