ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cannes Film Festival: ACID ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಆರೋಪಿ ಅಮಾನತು

ಕಾನ್ಸ್‌ ಫೆಸ್ಟಿವಲ್‌ನಂತೆ ನಡೆಯುವ ACID ಕಾನ್ಸ್‌ ಚಲನಚಿತ್ರೋತ್ಸವ ಕಾರ್ಯಕ್ರಮದ ಉಪಾಧ್ಯಕ್ಷನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ(Physical Abuse) ಕೇಳಿಬಂದಿದೆ. ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, ಇದೀಗ ಆತನ ವಿರುದ್ಧ ಕ್ರಮಗೊಂಡು ಅಮಾನತುಗೊಳಿಸಲಾಗಿದೆ. ಫ್ರಾನ್ಸನ್‌ ಚಲನಚಿತ್ರ ಮಂಡಳಿ ಆಯೋಜಿಸಿದ್ದ ಸಭೆಯೊಂದರಲ್ಲಿ, ಏಕಾಏಕಿ ಎದ್ದು ನಿಂತ ಮಹಿಳೆ ACID ಕಾನ್ಸ್‌ ಚಲನಚಿತ್ರ ವಿಭಾಗದ ಉಪಾಧ್ಯಕ್ಷನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾಳೆ.

ACID  ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ?

Profile Rakshita Karkera May 16, 2025 12:31 PM

ನವದೆಹಲಿ: ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ಖ್ಯಾತ ಕಾನ್ಸ್ ಚಲನಚಿತ್ರೋತ್ಸವ(Cannes Film Festival controversy) ಕಾರ್ಯಕ್ರಮದಲ್ಲಿ ನಿನ್ನೆ ಫ್ರೆಂಚ್‌ ನಟ ಸಿನಿಮಾವೊಂದನ್ನು ಬ್ಯಾನ್‌ ಮಾಡಿರುವ ಸುದಿ ಬಹಳ ಸದ್ದು ಮಾಡಿತ್ತು. ಇದೀಗ ಕಾನ್ಸ್‌ ಫೆಸ್ಟಿವಲ್‌ನಂತೆ ನಡೆಯುವ ACID ಕಾನ್ಸ್‌ ಚಲನಚಿತ್ರೋತ್ಸವ ಕಾರ್ಯಕ್ರಮದ ಉಪಾಧ್ಯಕ್ಷನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ(Physica Abuse) ಕೇಳಿಬಂದಿದೆ. ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, ಇದೀಗ ಆತನ ವಿರುದ್ಧ ಕ್ರಮಗೊಂಡು ಅಮಾನತುಗೊಳಿಸಲಾಗಿದೆ.

ಫ್ರಾನ್ಸನ್‌ ಚಲನಚಿತ್ರ ಮಂಡಳಿ ಆಯೋಜಿಸಿದ್ದ ಸಭೆಯೊಂದರಲ್ಲಿ, ಏಕಾಏಕಿ ಎದ್ದು ನಿಂತ ಮಹಿಳೆ ACID ಕಾನ್ಸ್‌ ಚಲನಚಿತ್ರ ವಿಭಾಗದ ಉಪಾಧ್ಯಕ್ಷನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾಳೆ. ತಕ್ಷಣವೇ ಅಲ್ಲಿದ್ದ ಸಹಚರರು ಆಕೆಯನ್ನು ವಿಚಾರಿಸಿದ್ದಾರೆ. ತಕ್ಷಣ ಆಕೆ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ.

ಇನ್ನು ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಕಾರ್ಯಕ್ರಮದಲ್ಲಿ ನಿನ್ನೆ ಫ್ರೆಂಚ್‌ ನಟನೊಬ್ಬನ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಆತನ ವಿರುದ್ಧ ಮೂವರು ಲೈಂಗಿಕ ದೌರ್ಜನ್ಯದ ಪ್ರಕರಣದ ದಾಖಲಿಸಿದ್ದರು. ಹೀಗಾಗಿ ಆತನ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಇಂತಹದ್ದೊಂದು ಆರೋಪ ಕೇಳಿಬಂದಿದೆ. ಇನ್ನು ತನ್ನ ವಿರುದ್ಧ ಕೇಳಿಬಂದಿರುವ ಆರೋಪವನ್ನು ನಿರಾಕರಿಸಿರುವ ಆರೋಪಿ ಸಾಕ್ಷಿ ನೀಡುವಂತೆ ಕೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Star Fashion: ಕಾನ್ಸ್‌ ರೆಡ್‌ ಕಾರ್ಪೆಟ್‌ನಲ್ಲಿ ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ಸ್ಟೈಲಿಂಗ್‌ಗೆ ಅಭಿಮಾನಿಗಳು ಫಿದಾ!

ಅದಾಗ್ಯೂ ಆ ವ್ಯಕ್ತಿಯನ್ನು ಆತನ ಸ್ಥಾನದಿಂದ ಅಮಾನತು ಮಾಡಲಾಗಿದೆ. ಮತ್ತು ಪ್ರಕರಣದ ಬಗೆಗಿನ ಸತ್ಯಾಸತ್ಯತೆಯನ್ನು ತೆರೆದಿಡಲು ಆಂತರಿಕ ತನಿಖಾ ಬಾಹ್ಯ ಸಂಸ್ಥೆಗೆ ಪ್ರಕರಣವನ್ನು ವಹಿಸಲಾಗಿದೆ. ಕಾನೂನಿನ ಕೆಲವು ಕಾರಣಗಳಿಂದ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದರು. ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದರು, ಕಾರ್ಯಕರ್ತರು, ಸಾರ್ವಜನಿಕರಿಂದ ವ್ಯಾಪಕವಾಗಿ ಕಾನ್ಸ್‌ ಮೇಲೆ ಒತ್ತಡ ಹೇರಲಾಗುತ್ತಿದೆ.