IPL 2025: ಉಳಿದ ಐಪಿಎಲ್ ಪಂದ್ಯ ಆಡದಿರಲು ನಿರ್ಧರಿಸಿದ ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯದ ಜೇಕ್ ಫ್ರೇಸರ್ ಮೆಕ್‌ಗರ್ಕ್ ಕೂಡ ಉಳಿದ ಐಪಿಎಲ್ ಪಂದ್ಯಗಳಲ್ಲಿ ಆಡದಿರಲು ನಿರ್ಧರಿಸಿರುವ ಕಾರಣ ಅವರ ಸ್ಥಾನಕ್ಕೆ ಬಾಂಗ್ಲಾದೇಶದ ಎಡಗೈ ಸೀಮರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಆರಿಸಲಾಗಿದೆ. 2016ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಮುಸ್ತಫಿಜುರ್, 2022 ಮತ್ತು 2023ರ ಸೀಸನ್‌ನಲ್ಲಿ ಡೆಲ್ಲಿ ಪರ ಆಡಿದ್ದರು.


ನವದೆಹಲಿ: ಭಾರತ–ಪಾಕ್ ಸಂಘರ್ಷದ ಕಾರಣ ಐಪಿಎಲ್(IPL 2025) ಟೂರ್ನಿಗೆ ಒಂದು ವಾರ ಬಿಡುವು ನೀಡಿದ್ದ ಸಂದರ್ಭದಲ್ಲಿ ಬಹುತೇಕ ವಿದೇಶಿ ಆಟಗಾರರು ತಮ್ಮತವರಿಗೆ ಮರಳಿದ್ದರು. ಅದರಲ್ಲಿ ಬಹಳಷ್ಟು ಆಟಗಾರರು ಮರಳಿ ಬಂದಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್(Mitchell Starc) ಭಾರತಕ್ಕೆ ಹಿಂತಿರುಗದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಉಳಿದ ಪಂದ್ಯಗಳಲ್ಲಿ ಸ್ಟಾರ್ಕ್ ಇಲ್ಲದೆ ಆಡಲಿದೆ ಎನ್ನಲಾಗಿದೆ.
ಸ್ಟಾರ್ಕ್ ದೆಹಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆಡಿದ 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಸ್ಟಾರ್ಕ್ ಸೇವೆ ಕಳೆದುಕೊಂಡಿರುವುದು ಡೆಲ್ಲಿಗೆ ಭಾರೀ ಹೊಡೆತ ಬಿದ್ದಿದೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದೆ. ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಇನ್ನುಳಿದಿರುವ ಮೂರು ಪಂದ್ಯಗಳನ್ನೂ ಜಯಿಸುವ ಒತ್ತಡದಲ್ಲಿದೆ. ಎರಡರಲ್ಲಿ ಜಯಿಸಿದರೆ, ಬೇರೆ ತಂಡಗಳ ಅಂಕಗಳ ಲೆಕ್ಕಾಚಾರವನ್ನು ಕಾಯಬೇಕಾಗುತ್ತದೆ. ಅದೃಷ್ಟದ ಮೊರೆ ಹೋಗಬೇಕು. ಎರಡರಲ್ಲಿ ಸೋತರೆ ನಾಕೌಟ್ ಬಾಗಿಲು ಮುಚ್ಚಲಿದೆ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಸೇರಿದ ಕುಸಲ್ ಮೆಂಡಿಸ್
ಆಸ್ಟ್ರೇಲಿಯದ ಜೇಕ್ ಫ್ರೇಸರ್ ಮೆಕ್‌ಗರ್ಕ್ ಕೂಡ ಉಳಿದ ಐಪಿಎಲ್ ಪಂದ್ಯಗಳಲ್ಲಿ ಆಡದಿರಲು ನಿರ್ಧರಿಸಿರುವ ಕಾರಣ ಅವರ ಸ್ಥಾನಕ್ಕೆ ಬಾಂಗ್ಲಾದೇಶದ ಎಡಗೈ ಸೀಮರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಆರಿಸಲಾಗಿದೆ. 2016ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಮುಸ್ತಫಿಜುರ್, 2022 ಮತ್ತು 2023ರ ಸೀಸನ್‌ನಲ್ಲಿ ಡೆಲ್ಲಿ ಪರ ಆಡಿದ್ದರು. 2022ರಲ್ಲಿ 8 ವಿಕೆಟ್ ಉರುಳಿಸಿದ್ದರು. ಒಟ್ಟು 38 ಐಪಿಎಲ್ ಪಂದ್ಯಗಳಲ್ಲಿ 38 ವಿಕೆಟ್ ಉರುಳಿಸಿದ ಸಾಧನೆ ಮುಸ್ತಫಿಜುರ್ ರಹಮಾನ್ ಅವರದ್ದಾಗಿದೆ.