ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 'ವಿಶ್ವ ಸುಂದರಿ' ಸ್ಪರ್ಧಿಗಳ ಪಾದ ತೊಳೆದ ಮಹಿಳೆಯರು; ಏನಿದು ವೈರಲ್‌ ಸುದ್ದಿ?

2025ರ ವಿಶ್ವ ಸುಂದರಿ ಸ್ಪರ್ಧಿಗೆ ಭಾಗವಹಿಸಲು ಬಂದ ವಿದೇಶಿ ಮಹಿಳೆಯರು ರಾಮಪ್ಪ ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಸ್ಥಳೀಯ ಮಹಿಳೆಯರು ಅವರ ಪಾದಗಳನ್ನು ತೊಳೆದಿದ್ದಾರಂತೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದು ಮಹಿಳೆಯರಿಗೆ ಮಾಡಿದ ಘೋರ ಅವಮಾನ ಎಂದು ಜನರು ಟೀಕಿಸಿದ್ದಾರೆ.

'ವಿಶ್ವ ಸುಂದರಿ' ಸ್ಪರ್ಧಿಗಳ ಪಾದ ತೊಳೆದ ಮಹಿಳೆಯರು- ವಿಡಿಯೊ ಫುಲ್‌ ವೈರಲ್‌

Profile pavithra May 16, 2025 2:11 PM

ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯ ರಾಮಪ್ಪ ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಸ್ಥಳೀಯ ಮಹಿಳೆಯರು 2025ರ ವಿಶ್ವ ಸುಂದರಿ ಸ್ಪರ್ಧಿಗಳ ಪಾದಗಳನ್ನು ತೊಳೆದು ಒರೆಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಘಟನೆ ರಾಷ್ಟ್ರವ್ಯಾಪಿ ವಿವಾದವನ್ನು ಹುಟ್ಟುಹಾಕಿದೆ. ಈ ವಿಡಿಯೊಗೆ ಸಂಬಂಧಿಸಿದಂತೆ, ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರ ಮಹಿಳೆಯರ ಸ್ವಾಭಿಮಾನವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದೆ.

ನಡೆದಿದ್ದೇನು?

ಈ ಬಾರಿ ವಿಶ್ವ ಸುಂದರಿ 2025 ಸ್ಪರ್ಧೆ ಮೇ 31 ರಂದು ಹೈದರಾಬಾದ್‍ನಲ್ಲಿ ನಡೆಯಲಿದೆ. ಪ್ರಪಂಚದಾದ್ಯಂತ 109 ದೇಶಗಳ ಸುಂದರಿಯರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಅವರನ್ನು ತೆಲಂಗಾಣ ಸರ್ಕಾರದ ಪ್ರವಾಸೋದ್ಯಮದ ಇಲಾಖೆ ವಿಶ್ವ ಪರಂಪರೆಯ ತಾಣವಾದ ರಾಮಪ್ಪ ದೇವಾಲಯದ ಪ್ರವಾಸಕ್ಕೆ ಕರೆದೊಯ್ಯದಿದೆ. ಸಂಪ್ರದಾಯದ ಪ್ರಕಾರ, ಕಾಲು ತೊಳೆದು ದೇವಸ್ಥಾನ ಪ್ರವೇಶ ಮಾಡಬೇಕು ಎಂಬ ನಿಯಮವಿದೆ. ಹಾಗಾಗಿ ಸ್ಥಳೀಯ ಮಹಿಳೆಯರು ಅವರ ಪಾದಗಳನ್ನು ತೊಳೆದು ಟವೆಲ್‌ನಿಂದ ಒರೆಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ತಕ್ಷಣ, ಅದು ಅತಿರೇಕದ ವರ್ತನೆ ಎಂದು ಜನರ ಕಿಡಿಕಾರಿದ್ದಾರೆ.

ವಿಡಿಯೊ ನೋಡಿ...



ವೈರಲ್ ಆದ ವಿಡಿಯೊದಲ್ಲಿ ವಿದೇಶಿ ಮಹಿಳೆಯರನ್ನು ಸಾಲಾಗಿ ಕೂರಿಸಲಾಗಿದೆ. ಅವರ ಕಾಲುಗಳನ್ನು ತೆಲಂಗಾಣದ ಸ್ಥಳೀಯ ಮಹಿಳೆಯರಿಂದ ತೊಳೆಸಲಾಗಿದೆ. ಬಳಿಕ ಕಾಲು ಒರೆಸಲಾಗಿದೆ. ಅವರಲ್ಲಿ ಕೆಲವರು ಯಾರ ಸಹಾಯವಿಲ್ಲದೆ ತಮ್ಮ ಕಾಲುಗಳನ್ನು ತಾವೇ ತೊಳೆದುಕೊಂಡರು. ಆದರೆ ಇನ್ನುಳಿದ ಸ್ಪರ್ಧಿಗಳಿಗೆ ತೆಲಂಗಾಣದ ಮಹಿಳೆಯರು ಕಾಲು ತೊಳೆಸಿದ್ದಾರೆ. ಇದು ಮಹಿಳೆಯರಿಗೆ ಮಾಡಿದ ಘೋರ ಅವಮಾನ ಎಂದು ಜನರು ಟೀಕಿಸಿದ್ದಾರೆ.

ಈ ಬಗ್ಗೆ ವಿರೋಧ ಪಕ್ಷಗಳು ಕಾಂಗ್ರಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾಂಗ್ರೆಸ್ ಸರ್ಕಾರವು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಹೀಗಾಗಿ ಅವರು ಮಹಿಳೆಯರ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಈ ಮಹಿಳೆಯ ಡ್ರೈವಿಂಗ್‌ ಸ್ಕಿಲ್‌ ನೋಡಿ ನೆಟ್ಟಿಗರು ಫುಲ್‌ ಫಿದಾ; ವಿಡಿಯೊ ವೈರಲ್‌

ದೆಹಲಿಯ ಹೈಕಮಾಂಡ್ ಅನ್ನು ಮೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಭಾರತೀಯ ಮಹಿಳೆಯರ ಘನತೆಗೆ ಧಕ್ಕೆ ತಂದಿದೆ. ಹಾಗಾಗಿ ವಿರೋಧ ಪಕ್ಷದವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. ಇದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ವಿದೇಶಿ ಸ್ಪರ್ಧಿಗಳ ಮುಂದೆ ತೆಲಂಗಾಣ ಮಹಿಳೆಯರನ್ನು ಅವಮಾನಿಸುವ ಅವಮಾನಕರ ಕೃತ್ಯ ಎಂದು ಅವರು ಹೇಳಿದ್ದಾರೆ. ದಲಿತ, ಬುಡಕಟ್ಟು ಮತ್ತು ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಈ ಕೆಲಸ ಮಾಡಲು ಒತ್ತಾಯಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.