ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshak Bullet: ಕೊನೆಗೂ ರಮೋಲಗೆ ಪ್ರಪೋಸ್ ಮಾಡೇ ಬಿಟ್ಟ ರಕ್ಷಕ್ ಬುಲೆಟ್

Bharjari Bachelors season 2: ಈ ವಾರ ಬ್ಯಾಚುಲರ್ಸ್ಗೆ ಜಡ್ಜಸ್ ಪ್ರಪೋಸಲ್ ಟಾಸ್ಕ್ ನೀಡಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಒಬ್ಬೋಬ್ಬರಾಗಿ ಬಂದು ತಮ್ಮ ಮೆಂಟರ್ಸ್ಗಳಿಗೆ ಬ್ಯಾಚುಲರ್ಸ್ ಪ್ರಪೋಸ್ ಮಾಡಬೇಕು. ರಕ್ಷಕ್ ಬುಲೆಟ್ ವೇದಿಕೆ ಮೇಲೆ ಮುದ್ದಾಗಿ ರಮೋಲಗೆ ಪ್ರಪೋಸ್ ಮಾಡಿದ್ದಾರೆ.

ಕೊನೆಗೂ ರಮೋಲಗೆ ಪ್ರಪೋಸ್ ಮಾಡೇ ಬಿಟ್ಟ ರಕ್ಷಕ್ ಬುಲೆಟ್

Rakshak Bullet and Ramola

Profile Vinay Bhat Jun 27, 2025 12:03 PM

ಝೀ ಕನ್ನಡದಲ್ಲಿ ಭರ್ಜರಿ ಆಗಿ ಸಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಸೀಸನ್ 2ಗೆ (Bharjari Bachelors season 2) ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್​ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿರುವ ಈ ಶೋ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಪ್ರತಿ ವಾರ ಈ ಶೋ ಒಂದಲ್ಲ ಒಂದು ದೊಡ್ಡ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಜಡ್ಜಸ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇದ್ದಾರೆ.

ಈ ಶೋನಲ್ಲಿ ಬುಲೆಟ್ ಪ್ರಕಾಶ್ ಮಗ ಹಾಗೂ ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಮಿಂಚುತ್ತಿದ್ದಾರೆ. ರಕ್ಷಕ್​ ಬುಲೆಟ್​ಗೆ ಕನ್ನಡತಿ ಸೀರಿಯಲ್​ ಖ್ಯಾತಿಯ ರಮೋಲ ಅವರು ಜೋಡಿಯಾಗಿದ್ದಾರೆ. ಈ ವಾರ ಭರ್ಜರಿ ಬ್ಯಾಚುಲರ್ಸ್​ನಲ್ಲಿ ವಿಶೇಷ ಟಾಸ್ಕ್ ನೀಡಲಾಗಿದೆ. ಇದರಲ್ಲಿ ರಕ್ಷಕ್ ಅವರು ರಮೋಲಾ ಕೆನ್ನೆಗೆ ಮುತ್ತಿಟ್ಟು ಪ್ರಪೋಸ್ ಮಾಡಿದ್ದಾರೆ.

ಈ ವಾರ ಬ್ಯಾಚುಲರ್ಸ್​ಗೆ ಜಡ್ಜಸ್ ಪ್ರಪೋಸಲ್ ಟಾಸ್ಕ್ ನೀಡಿದ್ದಾರೆ​. ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಮೇಲೆ ಒಬ್ಬೋಬ್ಬರಾಗಿ ಬಂದು ತಮ್ಮ ಮೆಂಟರ್ಸ್​ಗಳಿಗೆ ಬ್ಯಾಚುಲರ್ಸ್​ ಪ್ರಪೋಸ್​ ಮಾಡಬೇಕು. ಅದರಂತೆ ಬ್ಯಾಚುಲರ್ಸ್ ಭಿನ್ನ ವಿಭಿನ್ನ ಥೀಮ್​ನಲ್ಲಿ ವೇದಿಕೆ ರೆಡಿ ಮಾಡಿ ಸರ್​ಪ್ರೈಸ್​ ಕೊಟ್ಟಿದ್ದಾರೆ. ಅದರಲ್ಲೂ, ರಕ್ಷಕ್​ ಬುಲೆಟ್​ ವೇದಿಕೆ ಮೇಲೆ ಮುದ್ದಾಗಿ ರಮೋಲಗೆ ಪ್ರಪೋಸ್​ ಮಾಡಿದ್ದಾರೆ.

ಆಕಾಶದ ಎತ್ತರಕ್ಕೆ ಕರೆದುಕೊಂಡು ಹೋಗಿ ತನ್ನ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದಾರೆ ರಕ್ಷಕ್​. ನಾನು ಎಷ್ಟೇ ದೌಲತ್​ನಿಂದ ಇರಬಹುದು ಆದ್ರೆ ನಿಮ್ಮ ಮುಂದೆ ಯಾವತ್ತು ನಾನು ತಲೆ ಬಗ್ಗಿಸಿಕೊಂಡೆ ಇರುತ್ತೇನೆ. ಈ ಪ್ರೀತಿಗೆ ನಾನು ಯಾವತ್ತು ಚಿರರುಣಿಯಾಗಿ ಇರುತ್ತೇನೆ ಎಂದು ಕೈಗೆ ಉಂಗುರ ಹಾಕಿ, ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದಕ್ಕೆ ರಮೋಲ, ಇಡೀ ಜೀವನ ನಾನು ನಿಮ್ಮ ಜೊತೆಗೆ ಇರಲು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಕಂಡು ಇವರಿಬ್ಬರೂ ನಿಜಕ್ಕೂ ಲವ್ವರ್ಸ್ ಹಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಮೋಸಲ್ ನೋಡಲು ನೈಜ್ಯವಾದಂತೆ ಕಾಣುತ್ತಿತ್ತು. ಕಳೆದ ವಾರ ಈ ಸ್ಟೇಜ್ ಮೇಲೆ ರಕ್ಷಕ್ ತಾಯಿ ಬಂದಿದ್ದರು, ಈ ಸಂದರ್ಭ ನಿರೂಪಕ ನಿರಂಜನ್ ದೇಶಪಾಂಡೆ ನಿಮ್ಮ ಸೊಸೆ ಆಗಿ ಬರುವವರು ಹೇಗೆ ಇರಬೇಕು? ಎಂದು ಕೇಳಿದ್ದಾರೆ. ಆಗ ರಕ್ಷಕ್ ತಾಯಿ, ‘ನಾನು ಇಷ್ಟು ದಿನ ಹುಡುಗಿ ಹುಡುಕಬೇಕು ಅಂತ ಅಂದುಕೊಂಡಿದ್ದೆ. ಆದರೆ ಈಗ ಹುಡುಕೋದು ಇಲ್ಲ. ಏಕೆಂದರೆ ರಮೋಲಾ ಓಕೆ ಅಂದ್ರೆ ಸಾಕು’ ಅಂತ ಹೇಳಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಸಮ್​ಥಿಂಗ್ ಸಮ್​ಥಿಂಗ್ ಇದೆಯಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Ugramm Manju: ಗೌತಮಿಯಿಂದ ನನ್ನ ಜೀವನ ಬದಲಾಗಿದೆ ಎಂದ ಉಗ್ರಂ ಮಂಜು