Viral Video: ತಂದೂರಿ ರೋಟಿ ತಿನ್ನೋ ಮುನ್ನ ಎಚ್ಚರ... ಶಾಕಿಂಗ್ ವಿಡಿಯೊ ಇಲ್ಲಿದೆ ನೋಡಿ
ವ್ಯಕ್ತಿಯೊಬ್ಬ ರಸ್ತೆಬದಿಯ ಡಾಬಾವೊಂದರಲ್ಲಿ ತಂದೂರಿ ರೊಟ್ಟಿ ಆರ್ಡರ್ ಮಾಡಿದ್ದು, ಅದನ್ನು ತಿನ್ನಲು ಹೋದಾಗ ಅದರಲ್ಲಿ ಸತ್ತ ಹಲ್ಲಿ ಇರುವುದು ಪತ್ತೆಯಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದ್ದು, ವಿಡಿಯೊ ನೋಡಿದವರು ಶಾಕ್ ಆಗಿದ್ದಾರೆ.


ಐಸ್‌ಕ್ರೀಂನಲ್ಲಿ ಕೈ ಬೆರಳು, ಹಾವು ಸಿಕ್ಕಿರುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ರಸ್ತೆಬದಿಯ ಡಾಬಾವೊಂದರಲ್ಲಿ ನೀಡಿದ ತಂದೂರಿ ರೊಟ್ಟಿಯಲ್ಲಿ ಸತ್ತ ಹಲ್ಲಿಯೊಂದು ಇರುವುದು ಪತ್ತೆಯಾಗಿದೆ. ವ್ಯಕ್ತಿಯೊಬ್ಬ ಡಾಬಾವೊಂದರಲ್ಲಿ ತಂದೂರಿ ರೊಟ್ಟಿ(Tandoori Roti) ಆರ್ಡರ್ ಮಾಡಿದ್ದಾನೆ. ಇನ್ನೇನು ತಿನ್ನಬೇಕು ಎಂದು ಕೈಹಾಕಿದಾಗ ಸತ್ತ ಹಲ್ಲಿಯೊಂದು ಸಿಕ್ಕಿದೆಯಂತೆ. ಈ ಶಾಕಿಂಗ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತಂದೂರಿ ರೊಟ್ಟಿನ್ನು ತಿನ್ನಲು ತೆಗೆದಾಗ ಅದರೊಳಗೆ ಸಣ್ಣ ಹಲ್ಲಿ ಕಾಣಿಸಿಕೊಂಡಿರುವುದು ಸೆರೆಯಾಗಿದೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ಸಾಕಷ್ಟು ವ್ಯೂವ್ಸ್ ಹಾಗೂ ಕಾಮೆಂಟ್‌ಗಳನ್ನು ಗಳಿಸಿದೆ. ಕೆಲವರು ಇದನ್ನು ನೋಡಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ, "ರೊಟ್ಟಿಯೊಂದಿಗೆ ಉಚಿತ ಪ್ರೋಟೀನ್ ! " ಎಂದು ತಮಾಷೆ ಮಾಡಿದರೆ, ಇತರರು ನೈರ್ಮಲ್ಯ ಕೊರತೆಯನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, "ಡಾಬಾದಲ್ಲಿ ತಂದೂರಿ ರೊಟ್ಟಿ ತಿನ್ನುವ ಮೊದಲು ಎರಡು ಬಾರಿ ಯೋಚಿಸಿ" ಎಂದು ಬರೆದಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ರೀತಿಯಾದ ವಿಡಿಯೊಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ! ಇತ್ತೀಚೆಗೆ ಹೈದರಾಬಾದ್‌ನ ಗ್ರಾಹಕರೊಬ್ಬರಿಗೆ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಸತ್ತ ಹಲ್ಲಿಯೊಂದು ಸಿಕ್ಕಿತ್ತು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದೇ ರೀತಿ, 2019 ರಲ್ಲಿ, ನಾಗ್ಪುರದ ಹಲ್ದಿರಾಮ್ ರೆಸ್ಟೋರೆಂಟ್‌ನಲ್ಲಿ ಸಾಂಬಾರ್‌ನಲ್ಲಿ ಹಲ್ಲಿ ಕಂಡುಬಂದಿದ್ದು, ಇದು ಕೋಲಾಹಲಕ್ಕೆ ಕಾರಣವಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈ ನವದಂಪತಿಯ ಫಸ್ಟ್‌ನೈಟ್ ವಿಡಿಯೊ! ನೆಟ್ಟಿಗರು ಏನಂದ್ರು?
ಇತ್ತೀಚೆಗೆ ಬಾಗ್‌ಪತ್‌ನ ಗುಲ್ಜಾರ್ ಡಾಬಾದಲ್ಲಿ ತಂದೂರಿ ರೊಟ್ಟಿಯ ಮೇಲೆ ಉಗುಳುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಇಂತಹ ಘಟನೆಗಳು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಬೇಡಿಕೆಗಳನ್ನು ಹೆಚ್ಚಿಸಿವೆ.