ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ದಾಳಿಗೂ ಮುನ್ನ ಉಗ್ರರ ಪ್ಲಾನ್‌ ಹೇಗಿತ್ತು? ಸಂದೇಶ ಕಳುಹಿಸಲು ಬಳಸಿದ್ರು ಚೀನಾ ಮೆಸೆಂಜರ್‌ ಅಪ್ಲಿಕೇಶನ್‌!

ಏ. 22 ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ನಂತರ ತನಿಖೆಯನ್ನು NIA ಕೈಗೆತ್ತಿಕೊಂಡಿದೆ. ತನಿಖೆ ಚುರುಕುಗೊಂಡಿದ್ದು, ಒಂದೊಂದೇ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ದಾಳಿಯನ್ನು ನಡೆಸಲು ಉಗ್ರರು ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದು, ಅದಕ್ಕಾಗಿಯೇ ತಯಾರಿ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.

ಸಂದೇಶ ಕಳುಹಿಸಲು ಬಳಸಿದ್ರು ಚೀನಾ ಮೆಸೆಂಜರ್‌ ಅಪ್ಲಿಕೇಶನ್‌

Profile Vishakha Bhat Apr 28, 2025 1:38 PM

ಶ್ರೀನಗರ: ಏ. 22 ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ನಂತರ (Pahalgam Terror Attack) ತನಿಖೆಯನ್ನು NIA ಕೈಗೆತ್ತಿಕೊಂಡಿದೆ. ತನಿಖೆ ಚುರುಕುಗೊಂಡಿದ್ದು, ಒಂದೊಂದೇ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ದಾಳಿಯನ್ನು ನಡೆಸಲು ಉಗ್ರರು ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದು, ಅದಕ್ಕಾಗಿಯೇ ತಯಾರಿ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನೊಂದೆಡೆ ಉಗ್ರರು ಪಹಲ್ಗಾಮ್‌ಗೆ ತಲುಪಲು ಸುಮಾರು 2o-22 ಕಿ.ಮೀ ದುರ್ಗಮ ಪ್ರದೇಶದಲ್ಲಿ ನಡೆದು ಬಂದಿದ್ದರು ಎಂಬುದು ತಿಳಿದು ಬಂದಿತ್ತು. ಇದೀಗ ಭಯೋತ್ಪಾದಕರು ಪಾಕಿಸ್ತಾನದ ಗಡಿಯುದ್ದಕ್ಕೂ ತಮ್ಮ ಸಹರರೊಂದಿಗೆ ಸಂವಹನ ನಡೆಸಲು ಚೀನಾ ನಿರ್ಮಿತ ಸಂದೇಶ ವಾಹಕಗಳನ್ನು ಬಳಸಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ತನಿಖೆಯಲ್ಲಿ ಉಗ್ರರು ಚೀನಾ ಮೆಸೆಂಜರ್‌ ಆಪ್‌ಗಳ ಬಳಕೆ ಮಾಡಿರುವುದು ಕಂಡು ಬಂದಿದೆ. ಈ ಚೀನೀ ಅಪ್ಲಿಕೇಶನ್‌ಗಳು ಅತ್ಯಂತ ಎನ್‌ಕ್ರಿಪ್ಟ್ ಆಗಿದ್ದು, ಗಲ್ವಾನ್‌ ಕಣಿವೆಯ ಸಂಘರ್ಷದ ಬಳಿಕ ಇದನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಪಹಲ್ಗಾಮ್ ದಾಳಿ ನಡೆದ ದಿನವೇ ಆ ಪ್ರದೇಶದಲ್ಲಿ ಒಂದು ಚೀನೀ ಸಾಟ್‌ಲೈಟ್‌ ಫೋನ್‌ ಕಾರ್ಯ ನಿರ್ವಹಿಸಿದ್ದು, ಬೆಳಕಿಗೆ ಬಂದಿದೆ. ಪ್ರಸ್ತುತ, ಲಷ್ಕರ್ ಮತ್ತು ಜೈಶ್ ನಂತಹ ಭಯೋತ್ಪಾದಕ ಗುಂಪುಗಳು ಬಳಸುವ ಸಂವಹನ ಸಾಧನಗಳು ಎನ್‌ಕ್ರಿಪ್ಟ್ ಮಾಡಲಾದ, ಪತ್ತೆ ಮತ್ತು ಪ್ರತಿಬಂಧವನ್ನು ತಪ್ಪಿಸಲು ವಿನ್ಯಾಸಗೊಳಿಸಲಾದ ಮಿಲಿಟರಿ ದರ್ಜೆಯ ಸಾಧನಗಳಾಗಿವೆ. ಈ ವ್ಯವಸ್ಥೆಗಳನ್ನು ಸರ್ಕಾರಗಳು, ಮಿಲಿಟರಿಗಳು ಮತ್ತು ಕೆಲವೊಮ್ಮೆ ಭಯೋತ್ಪಾದಕರು ಮತ್ತು ಕಾರ್ಟೆಲ್‌ಗಳು ಬಳಸುತ್ತವೆ. ದಾಳಿ ಸಮಯದಲ್ಲಿ ಬಳಸಲಾದ ಕೆಲ ಸುಧಾರಿತ ಶಸ್ತ್ರಾಸ್ತ್ರಗಳು ಎನ್‌ಐಗೆ ದೊರೆತಿವೆ. ಮಹತ್ವದ ಸುಳಿವಿನ ಬೆನ್ನು ಹತ್ತಿ ತನಿಖೆ ನಡೆಯುತ್ತಿದೆ.

ಪಾಕಿಸ್ತಾನಕ್ಕೆ ಚೀನಾ ಬೆಂಬಲ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದಾರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ಮೂಲಕ ಪಾಕ್‌ಗೆ ಚೀನಾ ಬೆಂಬಲ ವ್ಯಕ್ತಪಡಿಸಿದೆ. ಈ ಕರೆಯ ಸಮಯದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿತು ಮತ್ತು ನಿಷ್ಪಕ್ಷಪಾತ ತನಿಖೆಗೆ ಕರೆ ನೀಡಿದೆ.

ಈ ಸುದ್ದಿಯನ್ನೂ ಓದಿ: BBC News: "ಪಾಕಿಸ್ತಾನ ಭಾರತೀಯರಿಗೆ ವೀಸಾ ಬ್ಯಾನ್‌ ಮಾಡಿದೆ" ; ಪಹಲ್ಗಾಮ್‌ ದಾಳಿಯ ಕುರಿತು ವರದಿ ಮಾಡಿದ್ದ BBCಗೆ ಬಿಸಿ ಮುಟ್ಟಿಸಿದ ಸರ್ಕಾರ

ಹೆಚ್ಚುತ್ತಲೇ ಇದೆ ಉದ್ವಿಗ್ನತೆ

ರಾಜತಾಂತ್ರಿಕತೆಯ ಮೂಲಕ ಪಾಕಿಸ್ತಾನವನ್ನು ಕಟ್ಟಿಹಾಕಲು ಯೋಜಿಸಿದ್ದ ಭಾರತ ಒಂದೊಂದೇ ಹಂತವಾಗಿ ವೈರಿ ರಾಷ್ಟ್ರಕ್ಕೆ ತಿರುಗೇಟು ನೀಡುತ್ತಿದೆ. ಸಿಂಧೂ ನದಿ ನೀರಿನ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಪಾಕಿಸ್ತಾನ ಇದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿತ್ತು. ಆದರೆ ಮೊನ್ನೆ ಭಾನುವಾರ ಏಕಾಏಕಿಯಾಗಿ ಭಾರತ ಝೇಲಂ ನದಿಯ ನೀರನ್ನು ಹೊರಬಿಟ್ಟಿದೆ. ಇದರಿಂದಾಗಿ ಪಾಕಿಸ್ತಾನದ ಕೆಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.