ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

China Visa: 85 ಸಾವಿರಕ್ಕೂ ಹೆಚ್ಚು ಭಾರತೀಯರಿಗೆ ಚೀನಾ ವೀಸಾ

ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ನಡೆಯುತ್ತಿರುವ ಮಧ್ಯೆಯೇ ಇದೀಗ ಚೀನಾವು ಭಾರತೀಯ ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ವಿಧಿಸಿದ ಸುಂಕಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲೆ ಚೀನಾ ಸುಂಕ ವಿಧಿಸಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ನಡುವೆ ಎರಡು ರಾಷ್ಟ್ರಗಳ ನಡುವೆ ಸುಂಕ ಸಮರ ಪ್ರಾರಂಭವಾಗಿತ್ತು. ಬಳಿಕ ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕ ವಿರುದ್ಧ ಹೋರಾಡಲು ಚೀನಾವು ಭಾರತದ ನೆರವು ಕೇಳಿತ್ತು.

ಸುಂಕ ಸಮರ: ಭಾರತವನ್ನು ಸೆಳೆಯಲು ಚೀನಾ ತಂತ್ರ

ನವದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ (Trade war) ನಡೆಯುತ್ತಿರುವ ಮಧ್ಯೆಯೇ ಇದೀಗ ಚೀನಾವು ಭಾರತೀಯ ನಾಗರಿಕರಿಗೆ (Indian citizens) 85,000ಕ್ಕೂ ಹೆಚ್ಚು ವೀಸಾಗಳನ್ನು (china visa) ನೀಡಿದೆ. ಆ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರಿಗೆ ತಿರುಗೇಟು ನೀಡಲು ಮುಂದಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ವಿಧಿಸಿದ ಸುಂಕಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲೆ ಚೀನಾ ಸುಂಕ ವಿಧಿಸಿತ್ತು. ಹೀಗಾಗಿ ಎರಡು ರಾಷ್ಟ್ರಗಳ ನಡುವೆ ಸುಂಕ ಸಮರ ಪ್ರಾರಂಭವಾಗಿತ್ತು. ಬಳಿಕ ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕ ವಿರುದ್ಧ ಹೋರಾಡಲು ಚೀನಾವು ಭಾರತದ ನೆರವು ಕೇಳಿತ್ತು.

ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿನ ಚೀನಿ ರಾಯಭಾರ ಕಚೇರಿಯು 2025ರ ಜನವರಿ 1ರಿಂದ ಏಪ್ರಿಲ್ 9ರವರೆಗೆ ಭಾರತೀಯ ನಾಗರಿಕರಿಗೆ 85,000ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ. ಇದು ಎರಡು ರಾಷ್ಟ್ರಗಳ ನಡುವಿನ ಜನರ ನಡುವೆ ಸಂಬಂಧಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್, ಈ ವರ್ಷದ ಆರಂಭದಿಂದ ಏಪ್ರಿಲ್ 9ರವರೆಗೆ ಭಾರತದಲ್ಲಿನ ಚೀನಿ ರಾಯಭಾರ ಕಚೇರಿಯು 85,000ಕ್ಕೂ ಹೆಚ್ಚು ಭಾರತೀಯ ನಾಗರಿಕರಿಗೆ ವೀಸಾ ನೀಡಿದೆ. ಚೀನಾಕ್ಕೆ ಭೇಟಿ ನೀಡುವ ಭಾರತೀಯರನ್ನು ಮುಕ್ತ, ಸುರಕ್ಷಿತ, ಪ್ರಾಮಾಣಿಕ ಮತ್ತು ಸ್ನೇಹಪರವಾಗಿ ಸ್ವಾಗತಿಸಿ ಎಂಬುದಾಗಿ ಚೀನಿಯರಿಗೆ ಹೇಳಿದ್ದಾರೆ.

ಭಾರತೀಯರಿಗೆ ವೀಸಾ ಸಡಿಲಿಕೆಯಿಂದ ಏನು ಲಾಭ?

ಭಾರತ ಮತ್ತು ಚೀನಾ ನಡುವೆ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಚೀನಾ ಸರ್ಕಾರವು ಭಾರತೀಯರಿಗೆ ವೀಸಾ ಸಡಿಲಿಕೆ ಸೇರಿದಂತೆ ಹಲವು ಅನುಕೂಲವನ್ನು ಮಾಡಿಕೊಟ್ಟಿದೆ. ಭಾರತೀಯ ಅರ್ಜಿದಾರರು ಕೆಲಸದ ದಿನಗಳಲ್ಲಿ ವೀಸಾ ಕೇಂದ್ರಗಳಲ್ಲಿ ತಮ್ಮ ವೀಸಾ ಅರ್ಜಿಗಳನ್ನು ನೇರವಾಗಿ ಸಲ್ಲಿಸಬಹುದು. ಈ ಹಿಂದೆ ಆನ್ ಲೈನ್ ಮೂಲಕ ಅಪಾಯಿಂಟ್‌ಮೆಂಟ್‌ ಪಡೆದುಕೊಳ್ಳಬೇಕಿತ್ತು. ಕಡಿಮೆ ಅವಧಿಗೆ ಚೀನಾಕ್ಕೆ ಪ್ರಯಾಣಿಸುವವರು ಬಯೋಮೆಟ್ರಿಕ್ ಡೇಟಾವನ್ನು ಒದಗಿಸಬೇಕಿಲ್ಲ.

ಜತೆಗೆ ಚೀನಿ ವೀಸಾವನ್ನು ಹೆಚ್ಚು ಮತ್ತು ಕಡಿಮೆ ದರದಲ್ಲಿ ಪಡೆಯಬಹುದು. ಇದು ಭಾರತೀಯ ಸಂದರ್ಶಕರಿಗೆ ಪ್ರಯಾಣವನ್ನು ಕೈಗೆಟುಕುವಂತೆ ಮಾಡಿದೆ.



ವೀಸಾ ಅನುಮೋದನೆಯ ಸಮಯ ಸುವ್ಯವಸ್ಥಿತವಾಗಿದೆ. ಇದು ತ್ವರಿತ ವಿತರಣೆಗೆ ಅವಕಾಶ ನೀಡುತ್ತದೆ. ಭಾರತೀಯರಿಗೆ ನಿರ್ಧಿಷ್ಟ ಸಂದರ್ಭಕ್ಕೆ ಅನುಗುಣವಾಗಿ ಚೀನಾ ಪ್ರವಾಸ ಮಾಡಲು ಅವಕಾಶವಿದೆ. ಉದಾಹರಣೆಗೆ ಹಬ್ಬ, ಪ್ರವಾಸಿ ತಾಣ, ಸಾಂಸ್ಕೃತಿಕ ಆಕರ್ಷಣೆಗಳನ್ನು ಸಮಯಕ್ಕೆ ಅನುಗುಣವಾಗಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: US-China tariff War: ಅಮೆರಿಕದ ಸುಂಕದ ವಿರುದ್ದ ಹೋರಾಡಲು ಭಾರತದ ನೆರವು ಕೇಳಿದ ಚೀನಾ; ಚೈನೀಸ್‌ ಅಧಿಕಾರಿ ಹೇಳಿದ್ದೇನು?

ಒಗ್ಗಟ್ಟಿನ ಮಂತ್ರ ಪಠಿಸಿದ ಚೀನಾ

ಅಮೆರಿಕ ಅಧ್ಯಕ್ಷರ ಸುಂಕ ಬೆದರಿಕೆಗೆ ಜಗ್ಗದ ಚೀನಾ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿದೆ. ಭಾರತ- ಚೀನಾ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಮಹತ್ವವನ್ನು ಒತ್ತಿ ಹೇಳಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್ ಅವರು, ಚೀನಾ ಮತ್ತು ಭಾರತ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪೂರೈಕೆ ಮತ್ತು ಲಾಭವನ್ನು ಆಧರಿಸಿದೆ. ಅಮೆರಿಕದ ಸುಂಕದಿಂದ ಆಗಿರುವ ತೊಂದರೆಯನ್ನು ಎದುರಿಸಲು ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ವ್ಯಾಪಾರ ಮತ್ತು ಸುಂಕ ಯುದ್ಧದಲ್ಲಿ ಯಾರೂ ವಿಜೇತರಾಗುವುದಿಲ್ಲ. ಇದನ್ನು ಎಲ್ಲರೂ ಒಟ್ಟಾಗಿ ವಿರೋಧಿಸಬೇಕು ಎಂದು ತಿಳಿಸಿದ್ದಾರೆ.

ಭಾರತ - ಚೀನಾ ಸಂಬಂಧ

ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸವಾಲುಗಳಿಂದ ತುಂಬಿದೆ. ಮುಖ್ಯವಾಗಿ ನಿರಂತರ ಗಡಿ ವಿವಾದದಿಂದ ಮಿಲಿಟರಿ ಬಿಕ್ಕಟ್ಟು ಉದ್ಭವವಾಗುತ್ತಿದೆ. ಇದೀಗ ಚೀನಾದ ಹೊಸ ನಡೆ ಭಾರತದ ಕಡೆಗೆ ಮುಕ್ತತೆಯನ್ನು ತೋರಿಸಲು ಮತ್ತು ಸದ್ಭಾವನೆಯನ್ನು ಬೆಳೆಸುವತ್ತ ಒಂದು ಪ್ರಮುಖ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರಿಂದ ಗಡಿ ಮತ್ತು ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಬಹುದು.

ಚೀನಾ ಬಹಳ ಹಿಂದಿನಿಂದಲೂ ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವೈದ್ಯಕೀಯ ಪದವಿಗಳನ್ನು ಪಡೆಯುವವರಿಗೆ ಜನಪ್ರಿಯ ತಾಣ. ಸಾವಿರಾರು ಭಾರತೀಯರು ಚೀನಾದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಅನೇಕ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಇದೀಗ ವೀಸಾ ಸಡಿಲಿಕೆ ವಿದ್ಯಾರ್ಥಿಗಳ ಪ್ರಯಾಣದ ಪುನರಾರಂಭ ಮಾಡಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಅನೇಕರು.