ʻಈ ಸಲವೂ ಪಂಜಾಬ್ ಕಿಂಗ್ಸ್ ಪ್ರಶಸ್ತಿ ಗೆಲ್ಲಲ್ಲʼ: ಮನೋಜ್ ತಿವಾರಿ ಅಚ್ಚರಿ ಹೇಳಿಕೆ!
Manoj Tiwary on Punjab Kings: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಹೊರತಾಗಿಯೂ ಈ ಬಾರಿ ಪಂಜಾಬ್ ಕಿಂಗ್ಸ್ ತಂಡ ಪ್ರಶಸ್ತಿ ಗೆಲ್ಲುವುದಿಲ್ಲ ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಮನೋಜ್ ತಿವಾರಿ ಭವಿಷ್ಯ ನುಡಿದಿದ್ದಾರೆ.



ಈ ಬಾರಿಯೂ ಪಂಜಾಬ್ ಕಪ್ ಗೆಲ್ಲಲ್ಲ
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದರ ಹೊರತಾಗಿಯೂ ಪಂಜಾಬ್ ಕಿಂಗ್ಸ್ (Punjab Kimngs) ತಂಡ ಪ್ರಶಸ್ತಿ ಗೆಲ್ಲುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಮನೋಜ್ ತಿವಾರಿ (Manoj Tiwary) ಭವಿಷ್ಯ ನುಡಿದಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಪಂಜಾಬ್
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಇಲ್ಲಿಯವರೆಗೂ ಆಡಿದ 9 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು, ಇನ್ನುಳಿದ 4ರಲ್ಲಿ ಸೋಲು ಅನುಭವಿಸಿದೆ. ಒಟ್ಟು 11 ಅಂಕಗಳೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.

ಕೆಕೆಆರ್ vsv ಪಿಬಿಕೆಎಸ್ ಫಲಿತಾಂಶವಿಲ್ಲದೆ ಅಂತ್ಯ
ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಿದ್ದವು. ಆದರೆ, ಮಳೆಯ ಕಾರಣ ಈ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ನೀಡಲಾಗಿತ್ತು.

ವಧೇರಾ-ಶಶಾಂಕ್ ಕಡೆಗಣನೆ
ಶನಿವಾರದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ವಿಕೆಟ್ ಒಪ್ಪಿಸಿದ ಬಳಿಕ ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕೊ ಯೆನ್ಸನ್ ಹಾಗೂ ಜಾಶ್ ಇಂಗ್ಲಿಸ್ ಆಡಿದ್ದರು. ಆ ಮೂಲಕ ನೆಹಾಲ್ ವಧೇರಾ ಹಾಗೂ ಶಶಾಂಕ್ ಸಿಂಗ್ ಅವರನ್ನು ಕಡೆಗಣಿಸಲಾಗಿತ್ತು. ಇದು ಮನೋಜ್ ತಿವಾರಿಗೆ ಇಷ್ಟವಾಗಲಿಲ್ಲ. ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರನ್ನು ಟೀಕಿಸಿದರು.

ಮನೋಜ್ ತಿವಾರಿ ಹೇಳಿದ್ದೇನು?
"ಈ ಬಾರಿಯೂ ಪಂಜಾಬ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆಲ್ಲಲ್ಲ. ಏಕೆಂದರೆ, ಶನಿವಾರ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಇದು ಸಾಭೀತಾಗಿದೆ. ಭಾರತೀಯ ಬ್ಯಾಟ್ಸ್ಮನ್ಗಳಾದ ನೆಹಾಲ್ ವಧೇರಾ ಹಾಗೂ ಶಶಾಂಕ್ ಸಿಂಗ್ ಅವರನ್ನು ಆಡಲು ಕಳುಹಿಸಿರಲಿಲ್ಲ. ಇವರ ಬದಲು ವಿದೇಶಿ ಆಟಗಾರರನ್ನು ಮೇಲಿನ ಕ್ರಮಾಂಕಗಳಲ್ಲಿ ಆಡಿಸಲಾಗಿತ್ತು. ಇಲ್ಲಿ ಭಾರತೀಯ ಆಟಗಾರರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಆದರೆ, ವಿದೇಶಿ ಆಟಗಾರತು ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ," ಎಂದು ಮನೋಜ್ ತಿವಾರಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಶಶಾಂಕ್-ವಧೇರಾ ಮಿಂಚಿನ ಬ್ಯಾಟಿಂಗ್
ಶಶಾಂಕ್ ಸಿಂಗ್ ಇಲ್ಲಿಯ ತನಕ ಆಡಿದ 7 ಇನಿಂಗ್ಸ್ಗಳಿಂದ 52.66ರ ಸರಾಸರಿಯಲ್ಲಿ 158 ರನ್ಗಳನ್ನು ಸಿಡಿಸಿದ್ದಾರೆ ಹಾಗೂ ಇವರು ಒಂದು ಅರ್ಧಶತಕವನ್ನು ಕೂಡ ಬಾರಿಸಿದ್ದಾರೆ. ಮತ್ತೊಂದೆಡೆ ನೆಹಾಲ್ ವಧೇರಾ ಅವರು 7 ಇನಿಂಗ್ಸ್ಗಳಿಂದ 189 ರನ್ಗಳನ್ನು ಬಾರಿಸಿದ್ದಾರೆ.