Malaika Arora: 51 ನೇ ವಯಸ್ಸಿನಲ್ಲೂ ಮಿಂಚುತ್ತಿರುವ ಮಲೈಕಾ; ನಟಿಯ ಹಾಟ್ ಫೋಟೋಸ್ಗೆ ಫ್ಯಾನ್ಸ್ ಫಿದಾ
ಡ್ಯಾನ್ಸರ್, ಮಾಡೆಲ್ ಸ್ಟಾರ್ , ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಮಲೈಕಾ ಅರೋರ ಅವರು ತಮ್ಮ ವಿಶೇಷ ಅಭಿನಯದ ಮೂಲಕ ಅಪಾರ ಮಟ್ಟದ ಅಭಿಮಾನಿಗಳ ಮನ ಗೆದ್ದ ನಟಿ ಯಾಗಿದ್ದಾರೆ. ಕಾಂತೆ, ಇಎಂಐ ಇತರ ಸಿನಿಮಾದಲ್ಲಿ ಅಭಿನಯಿಸುವ ಜೊತೆಗೆ ಡ್ಯಾನ್ಸರ್ ಆಗಿಯೂ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಕಾಲ್ ಧಮಾನ್ , ಚೈಯ್ಯಾ ಚೈಯ್ಯಾ, ಮಾಹಿವೇ, ಮುನ್ನಿ ಬದ್ ನಾಮ್ ಹುಯಿ ಇತರ ಸಿನಿಮಾ ಹಾಡಿನಲ್ಲಿ ಕೂಡ ಫೇಮಸ್ ಆಗಿದ್ದಾರೆ. ಸೋಶಿಯಲ್ ಮಿಡಿಯಾದಲ್ಲೂ ಬಹಳ ಆ್ಯಕ್ಟಿವ್ ಆಗಿರುವ ಇವರು ತಮ್ಮ ಫೋಟೊಗಳನ್ನು ಆಗಾಗ ಶೇರ್ ಮಾಡಿ ಕೊಳ್ಳುತ್ತಿರುತ್ತಾರೆ. ಇದೀಗ ಮಲೈಕಾ ಅರೋರಾ ಅವರು ತಮ್ಮ ಮಗ ಅರ್ಹಾನ್ ಜೊತೆ ಇಟಲಿಯ ಫ್ಲಾರೆನ್ಸ್ ಗೆ ತೆರಳಿದ್ದು ಅವರ ಕೆಲವು ಫೋಟೋ ಸದ್ಯ ವೈರಲ್ ಆಗುತ್ತಿದೆ.

Malaika Arora


ನಟಿ ಮಲೈಕಾ ಅರೋರಾ ಅವರು ಇಟಲಿಯ ಫ್ಲಾರೆನ್ಸ್ ಗೆ ಪ್ರವಾಸ ತೆರಳಿದ್ದು ಅವರ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡುತ್ತಿದೆ. ಬಿಕಿನಿ ತೊಟ್ಟು ನಟಿ ಮಲೈಕಾ ಅವರು ಸ್ಟನಿಂಗ್ ಲುಕ್ ನಿಂದ ನೆಟ್ಟಿಗರ ಗಮನವನ್ನು ಸೆಳೆಯುತ್ತಿದ್ದಾರೆ.

ವೈರಲ್ ಆದ ಫೋಟೊ ಒಂದರಲ್ಲಿ ನಟಿ ಮಲೈಕಾ ಅವರು ಮಾಡರ್ನ್ ಡ್ರೆಸ್ನಲ್ಲಿ ಪ್ರಿಟಿಯಾಗಿ ಕಂಡಿದ್ದಾರೆ. ಅವರು ಉಳಿದುಕೊಂಡಿದ್ದ ಹೊಟೇಲ್ನ ಲಕ್ಶೂರಿ ಲುಕ್ ಅನ್ನು ಈ ಫೋಟೊದಲ್ಲಿ ಕಾಣಬಹುದಾಗಿದೆ. ಇಟಲಿಯ ಟ್ರೆಡಿಶನಲ್ ಹೋಂ ಡೆಕೋರ್ ನಲ್ಲಿ ಮಲೈಕಾ ತುಂಬಾ ಕೂಲ್ ಆಗಿ ಫೋಟೊಗೆ ಪೋಸ್ ನೀಡಿದ್ದಾರೆ.

ನಟಿ ಮಲೈಕಾ ಅವರು ಯುರೋಪಿನ ಫೇಮಸ್ ಸ್ಥಳಕ್ಕೆ ತೆರಳಿದ್ದು ಅಲ್ಲಿನ ಸೇತುವೆ ಮುಂಭಾಗದಲ್ಲಿ ವೆಸ್ಟರ್ನ್ ಲುಕ್ ನಲ್ಲಿ ಫೋಟೊ ತೆಗೆಸಿಕೊಂಡಿದ್ದಾರೆ. ವೈಟ್ ಕಲರ್ ವೆಸ್ಟರ್ನ್ ಡ್ರೆಸ್ ನಲ್ಲಿ ನಟಿ ಮಲೈಕಾ ಅವರು ತುಂಬಾ ಯಂಗ್ ಲುಕ್ನಿಂದ ಅಭಿಮಾನಿಗಳ ಮನ ಸೆಳೆದಿದ್ದಾರೆ.

ಫ್ಲಾರೆನ್ಸ್ನಲ್ಲಿ ನಟಿ ಮಲೈಕಾ ಅವರು ರಾತ್ರಿ ಪಾರ್ಟಿಗೆ ಮಾಡರ್ನ್ ಡ್ರೆಸ್ ನಲ್ಲಿ ತೆರಳಿದ್ದಾರೆ. ರೆಡ್ ಕಲರ್ ಪಾರ್ಟಿ ವೇರ್ ಧರಿಸಿದ್ದು ಫ್ರೀ ಹೇರ್ ಸ್ಟೈಲ್ ನಲ್ಲಿ ಗ್ಲಾಮರಸ್ ಆಗಿ ಕಂಡಿದ್ದಾರೆ.

ಫ್ಲವರ್ ಡಿಸೈನ್ ಇರುವ ಮ್ಯಾಕ್ಸಿ ಬಟ್ಟೆಯಲ್ಲಿ ನಟಿ ಮಲೈಕಾ ಅವರು ಬ್ಯುಟಿಫುಲ್ ಆಗಿ ಕಂಡಿ ದ್ದಾರೆ. ಇಟಲಿಯ ರೆಸ್ಟೋರೆಂಟ್ ನಲ್ಲಿ ಜ್ಯೂಸ್ ಸವಿಯುತ್ತಾ ಕೂಲಿಂಗ್ ಗ್ಲಾಸ್ ಧರಿಸಿ ನಟಿ ಮಲೈಕಾ ಬೋಲ್ಡ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಮಲೈಕಾ ಮತ್ತು ಅವರ ಪುತ್ರ ಅರ್ಹಾನ್ ಅವರು ತಮ್ಮ ರಜಾ ದಿನಗಳನ್ನು ಇಟಲಿಯ ಪ್ರವಾಸ ದಲ್ಲಿ ಅದ್ಭುತವಾಗಿ ಕಳೆಯುತ್ತಿದ್ದ ಫೋಟೊ ಕೂಡ ವೈರಲ್ ಆಗಿದೆ. ಇಬ್ಬರು ಜ್ಯೂಸ್ ಗ್ಲಾಸ್ ಹಿಡಿದುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನಟಿ ಮಲೈಕಾ ಅವರಿಗೆ 51ವರ್ಷ ವಯಸ್ಸಾಗಿದ್ದರೂ ಈಗಲೂ ಯಂಗ್ ಆಗಿ ಕಾಣುತ್ತಿದ್ದು ಅಭಿಮಾನಿಗಳಿಗೆ ಅಚ್ಚರಿ ಎನಿಸಿದೆ...