ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs IND: ಸರಣಿ ಆರಂಭಕ್ಕೆ ನಾಲ್ಕು ತಿಂಗಳ ಮೊದಲೇ ಪಂದ್ಯದ ಟಿಕೆಟ್‌ ಸೋಲ್ಡ್‌ ಔಟ್‌

ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ, ಆತಿಥೇಯರು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದರು. ಮತ್ತು ಭಾರತವು ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಈ ಬಾರಿ ಉಭಯ ತಂಡಗಳು ಒಟ್ಟು ಮೂರು ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಅಕ್ಟೋಬರ್‌ 19ರಂದು ನಡೆಯುವ ಏಕದಿನ ಪಂದ್ಯದೊಂದಿಗೆ ಸರಣಿ ಆರಂಭಗೊಳ್ಳಲಿದೆ.

ಭಾರತ-ಆಸೀಸ್‌ ಸರಣಿ ಆರಂಭಕ್ಕೆ ಮೊದಲೇ ಪಂದ್ಯದ ಟಿಕೆಟ್‌ ಸೋಲ್ಡ್‌ ಔಟ್‌

Profile Abhilash BC Jun 26, 2025 2:36 PM

ಸಿಡ್ನಿ: ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯ ನಡುವಿನ ಬಹುನಿರೀಕ್ಷೆಯ ಕ್ರಿಕೆಟ್‌ ಸರಣಿಗೆ ವೀಕ್ಷಕರು ದೊಡ್ಡ ಮಟ್ಟದಲ್ಲಿ ಸ್ಪಂದಿಸಿದ್ದಾರೆ. ಟಿಕೆಟ್‌ ಮಾರಾಟ ಆರಂಭಗೊಂಡ ಎರಡು ವಾರದಲ್ಲೇ ಎರಡು ಪಂದ್ಯಗಳ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಇತ್ತಿಚೆಗಷ್ಟೇ ಸಾರ್ವಜನಿಕರಿಗಾಗಿ ಟಿಕೆಟ್‌ ಕೌಂಟರ್‌ ತೆರೆಯಲಾಗಿತ್ತು. ಜತೆಗೆ ಆನ್‌ಲೈನ್‌ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ(Cricket Australia) ಪ್ರಕಾರ, ಮಾರಾಟವಾದ ಟಿಕೆಟ್‌ಗಳಲ್ಲಿ ಶೇಕಡಾ 16 ಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಭಾರತೀಯ ಅಭಿಮಾನಿ ಖರೀದಿಸಿದ್ದಾರೆ ಎಂದು ತಿಳಿಸಿದೆ.

ಸರಣಿ ಆರಂಭಕ್ಕೂ ಮುನ್ನವೇ ಎರಡು ಪಂದ್ಯಗಳ ಟಿಕೆಟ್‌ ಈಗಾಗಲೇ ಸೋಲ್ಡ್‌ ಔಟ್‌ ಆಗಿರುವುದನ್ನು ನೋಡುವಾಗ ಕ್ರಿಕೆಟ್ ಅಭಿಮಾನಿಗಳಲ್ಲಿ ಮುಂಬರುವ ಋತುವಿನ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಕೊಯೆಲ್ ಮಾರಿಸನ್ ಹೇಳಿದರು. ಟಿಕೆಟ್‌ ಸೋಲ್ಡ್‌ ಆಗಿರುವುದು ಸಿಡ್ನಿಯಲ್ಲಿ ನಡೆಯುವ ಮೂರನೇ ಏಕದಿನ ಮತ್ತು ಕ್ಯಾನ್‌ಬೆರಾದ ಮೊದಲ ಟಿ20 ಪಂದ್ಯಗಳದ್ದು.

ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ, ಆತಿಥೇಯರು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದರು. ಮತ್ತು ಭಾರತವು ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಈ ಬಾರಿ ಉಭಯ ತಂಡಗಳು ಒಟ್ಟು ಮೂರು ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಅಕ್ಟೋಬರ್‌ 19ರಂದು ನಡೆಯುವ ಏಕದಿನ ಪಂದ್ಯದೊಂದಿಗೆ ಸರಣಿ ಆರಂಭಗೊಳ್ಳಲಿದೆ.

ಇದನ್ನೂ ಓದಿ WI vs AUS Test: ವಿಂಡೀಸ್‌ ಮೊದಲ ಟೆಸ್ಟ್‌ನಿಂದ ಲ್ಯಾಬುಶೇನ್‌ಗೆ ಕೊಕ್‌

ಸರಣಿಯ ವೇಳಾಪಟ್ಟಿ

ಅ.19, ಮೊದಲ ಏಕದಿನ; ತಾಣ, ಪರ್ತ್‌

ಅ.23, ದ್ವಿತೀಯ ಏಕದಿನ; ತಾಣ, ಅಡಿಲೇಡ್‌

ಅ.25, ಮೂರನೇ ಏಕದಿನ; ತಾಣ, ಸಿಡ್ನಿ

ಟಿ20 ಸರಣಿ

ಅ.29, ಮೊದಲ ಟಿ20, ತಾಣ; ಕ್ಯಾನ್‌ಬೆರಾ

ಅ.31, ದ್ವಿತೀಯ ಟಿ20, ತಾಣ; ಮೆಲ್ಬೋರ್ನ್‌

ನ.2, ಮೂರನೇ ಟಿ20, ತಾಣ; ಹೋಬರ್ಟ್‌

ನ.6 ನಾಲ್ಕನೇ ಟಿ20, ತಾಣ; ಗೋಲ್ಡ್‌ ಕಾಸ್ಟ್‌

ನ.8 ಐದನೇ ಟಿ20, ತಾಣ; ಬ್ರಿಸ್ಬೇನ್‌