ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs LSG: 150 ಕಿಮೀ ವೇಗವಾಗಿ ಬೌಲ್‌ ಮಾಡುವ ಮಯಾಂಕ್‌ ಯಾದವ್‌ ಕಮ್‌ಬ್ಯಾಕ್‌!

ಲಖನೌ ಸೂಪರ್‌ ಜಯಂಟ್ಸ್‌ ತಂಡದ ಸ್ಟಾರ್ ವೇಗಿ ಮಯಾಂಕ್ ಯಾದವ್, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪ್ರವೇಶ ಮಾಡಿದ್ದಾರೆ. ಗಾಯದ ಕಾರಣದಿಂದಾಗಿ ಮಯಾಂಕ್, ಈ ಟೂರ್ನಿಯ ಮೊದಲ ಅವಧಿಯ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಇವರ ಮರಳುವಿಕೆಯಿಂದ ಲಖನೌ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ.

ಕಮ್‌ಬ್ಯಾಕ್‌ ಪಂದ್ಯದಲ್ಲಿ ರೋಹಿತ್‌ ವಿಕೆಟ್‌ ಕಿತ್ತ ಮಯಾಂಕ್‌ ಯಾದವ್‌!

ರೋಹಿತ್‌ ಶರರ್ಮಾ ವಿಕೆಟ್‌ ಕಿತ್ತ ಮಯಾಂಕ್‌ ಯಾದವ್‌

Profile Ramesh Kote Apr 27, 2025 5:31 PM

ಮುಂಬೈ: ಮಾರಕ ವೇಗಿ ಮಯಾಂಕ್ ಯಾದವ್ (Mayank Yadav) 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಗೆ ಮರಳಿದ್ದಾರೆ. ಲಖನೌ ಸೂಪರ್ ಜಯಂಟ್ಸ್ (Lucknow Super Giants) ತಂಡಕ್ಕೆ ಇದು ಸಿಹಿ ಸುದ್ದಿ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿದ್ದಾರೆ. ಶಾರ್ದುಲ್ ಠಾಕೂರ್ ಬದಲು ಎಲ್‌ಎಸ್‌ಜಿ ಪ್ಲೇಯಿಂಗ್‌ XIನಲ್ಲಿ ಮಯಾಂಕ್‌ ಆಡಿದರು. ಟಾಸ್ ಗೆದ್ದ ರಿಷಭ್ ಪಂತ್ ಮೊದಲು ಬೌಲ್‌ ಮಾಡಲು ನಿರ್ಧರಿಸಿದರು. ಈ ವೇಳೆ ಮಾಯಾಂಕ್ ಯಾದವ್ ಮರಳುವ ಬಗ್ಗೆ ಪಂತ್‌ ಮಾಹಿತಿ ನೀಡಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ಮಯಾಂಕ್ ಯಾದವ್‌ ಇಂಪ್ಯಾಕ್ಟ್ ಸಬ್ ಲಿಸ್ಟ್‌ನಲ್ಲಿದ್ದರು. ಆದರೆ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ.

ಶಾರ್ದುಲ್ ಠಾಕೂರ್ ಬದಲಿಗೆ ಮಯಾಂಕ್ ಯಾದವ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕಳೆದ ಒಂಬತ್ತು ಪಂದ್ಯಗಳಲ್ಲಿ ಶಾರ್ದುಲ್‌ ಠಾಕೂರ್‌ 12 ವಿಕೆಟ್ ಪಡೆದಿದ್ದರು. ಆದ್ದರಿಂದ, ಅವರನ್ನು ತಂಡದಿಂದ ಹೊರಗಿಡುವುದು ಸ್ವಲ್ಪ ಅಚ್ಚರಿಯ ನಿರ್ಧಾರ. ಆದರೆ ಟೀಮ್‌ ಮ್ಯಾನೇಜ್‌ಮೆಂಟ್‌ ಮಾಯಾಂಕ್ ಯಾದವ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದೆ. ಟಾಸ್ ಗೆದ್ದ ನಂತರ, ರಿಷಭ್ ಪಂತ್, ಮಯಾಂಕ್ ಯಾದವ್ ತಂಡದಲ್ಲಿದ್ದಾರೆ ಎಂದು ಹೇಳಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ, ಮಯಾಂಕ್ ಅವರನ್ನು ಏಕೆ ಆಡಿಸಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಮಯಾಂಕ್ ನಿಧಾನವಾಗಿ ತನ್ನ ಲಯಕ್ಕೆ ಮರಳಬೇಕೆಂದು ತಂಡದ ಆಡಳಿತ ಮಂಡಳಿ ಬಯಸುತ್ತಿದೆ ಎಂದು ಅವರು ಹೇಳಿದ್ದರು. ಮಾಯಾಂಕ್ ಮೇಲೆ ಹೆಚ್ಚಿನ ಒತ್ತಡ ಹೇರಬಾರದು ಎಂದು ಅವರು ಬಯಸುತ್ತಾರೆ.

IPL 2025: ಸಾಮರ್ಥ್ಯವಿದ್ದರೂ ಪಂಜಾಬ್‌ ಕಪ್‌ ಗೆಲ್ಲಲ್ಲ; ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

ರೋಹಿತ್‌ ಶರ್ಮಾ ವಿಕೆಟ್‌ ಕಿತ್ತ ಮಯಾಂಕ್‌

ಐಪಿಎಲ್‌ ಟೂರ್ನಿಯ ತಮ್ಮ ಕಮ್‌ಬ್ಯಾಕ್‌ ಪಂದ್ಯದಲ್ಲಿ ಮಯಾಂಕ್‌ ಯಾದವ್‌, ಎರಡು ಸಿಕ್ಸರ್‌ ಹೊಡೆಸಿಕೊಂಡರೂ ಮುಂಬೈ ಇಂಡಿಯನ್ಸ್‌ ಆರಂಭಿಕ ರೋಹಿತ್‌ ಶರ್ಮಾ ವಿಕೆಟ್‌ ಕಿತ್ತರು. ಈ ಪಂದ್ಯದಲ್ಲಿ ಬೌಲ್‌ ಮಾಡಿದ ನಾಲ್ಕು ಓವರ್‌ಗಳಲ್ಲಿ ಅವರು 40 ರನ್‌ಗಳನ್ನು ಹೊಡೆಸಿಕೊಂಡರೂ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಮಯಾಂಕ್‌ ಯಾದವ್‌ರನ್ನು ರಿಟೈನ್‌ ಮಾಡಿಕೊಂಡಿದ್ದ ಲಖನೌ

2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಖನೌ ಸೂಪರ್ ಜಯಂಟ್ಸ್‌ ತಂಡ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂ. ಗಳಿಗೆ ಉಳಿಸಿಕೊಂಡಿತು. ಇದರರ್ಥ ತಂಡವು ಮಯಾಂಕ್ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದೆ. ಆದರೆ ಗಾಯದ ಕಾರಣದಿಂದಾಗಿ ಅವರು ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಯಾದವ್ ತಮ್ಮ ವೇಗದ ಬೌಲಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅವರು 150 ಕಿಲೋಮೀಟರ್‌ಗಳಿಗಿಂತ ಹೆಚ್ಚು ವೇಗದಲ್ಲಿ ಸ್ಥಿರವಾಗಿ ಬೌಲ್‌ ಮಾಡಿದರು. ಆದರೆ ಅವರು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದ್ದರು. ಗಾಯದ ಕಾರ ಅವರು ಟೂರ್ನಿಯಿಂದ ಹೊರ ನಡೆದಿದ್ದರು.



2024ರಲ್ಲಿ ನಾಲ್ಕು ಪಂದ್ಯಗಳಲ್ಲಿ ಮಯಾಂಕ್ ಯಾದವ್‌ ಏಳು ವಿಕೆಟ್ ಕಬಳಿಸಿದ್ದರು. ನಂತರ ಅವರು 2024ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪರ ಟಿ20ಐಗೆ ಪದಾರ್ಪಣೆ ಮಾಡಿದ್ದರು. ಆದರೆ ಬೆನ್ನುನೋವಿನಿಂದಾಗಿ ಅಂದಿನಿಂದ ಅವರು ಆಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಅವರು ದೇಶಿ ವೈಟ್-ಬಾಲ್ ಋತುವಿನಲ್ಲಿಯೂ ಆಡಲು ಸಾಧ್ಯವಾಗಲಿಲ್ಲ.

IPL 2025: ಹರಾಜಿನ ಎಡವಟ್ಟು ತಂಡದ ವೈಫಲ್ಯಕ್ಕೆ ಕಾರಣ ಎಂದ ಸಿಎಸ್​ಕೆ ಕೋಚ್​

ಭಾನುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಲಾಗಿತ್ತು. ಲಖನೌ ಸೂಪರ್‌ ಜಯಂಟ್ಸ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಆದರೆ, ಮುಂಬೈ ಇಂಡಿಯನ್ಸ್ ಎರಡು ಬದಲಾವಣೆಗಳನ್ನು ಮಾಡಿದೆ. ವಿಘ್ನೇಶ್ ಪುತ್ತೂರ್ ಮತ್ತು ಮಿಚೆಲ್ ಸ್ಯಾಂಟ್ನರ್ ಬದಲಿಗೆ ಕರಣ್ ಶರ್ಮಾ ಮತ್ತು ಕಾರ್ಬಿನ್ ಬಾಷ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.