ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಹರಾಜಿನ ಎಡವಟ್ಟು ತಂಡದ ವೈಫಲ್ಯಕ್ಕೆ ಕಾರಣ ಎಂದ ಸಿಎಸ್​ಕೆ ಕೋಚ್​

Stephen Fleming: ಆರ್​. ಅಶ್ವಿನ್​, ರಾಹುಲ್​ ತ್ರಿಪಾಠಿ, ದೀಪಕ್​ ಹೂಡಾ, ವಿಜಯ್​ ಶಂಕರ್​ ಅವರಂಥ ಅನುಭವಿ ಆಟಗಾರರು ಆಡಿದ ಎಲ್ಲ ಪಂದ್ಯಗಳಲ್ಲಿಯೂ ನೀರಸ ನಿರ್ವಹಣೆಯಿಂದ ನಿರಾಸೆ ಮೂಡಿಸಿದ್ದಾರೆ. ಇಂಪ್ಯಾಕ್ಟ್‌ ಆಟಗಾರ ಶಿವಂ ದುಬೆ ಯಾವುದೇ ಇಂಪ್ಯಾಕ್ಟ್‌ ಮಾಡಿಲ್ಲ.

ಹರಾಜಿನ ಎಡವಟ್ಟು ತಂಡದ ವೈಫಲ್ಯಕ್ಕೆ ಕಾರಣ ಎಂದ ಸಿಎಸ್​ಕೆ ಕೋಚ್​

Profile Abhilash BC Apr 27, 2025 8:15 AM

ಚೆನ್ನೈ: 5 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ಹಿಂದೆಂದು ಕಾಣದ ವೈಫಲ್ಯವನ್ನು ಈ ಬಾರಿಯ ಐಪಿಎಲ್‌(IPL 2025)ನಲ್ಲಿ ಕಂಡಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 7ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸಿಎಸ್​ಕೆ ತಂಡ ಪ್ಲೇ ಆಫ್‌​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಇದರ ಬೆನ್ನಲ್ಲೇ ಸಿಎಸ್​ಕೆ ಮುಖ್ಯ ಕೋಚ್​ ಸ್ಟೀಫನ್​ ಫ್ಲೆಮಿಂಗ್(Stephen Fleming)​, ಮೆಗಾ ಹರಾಜಿನಲ್ಲಿ ಆಟಗಾರರನ್ನು ಆಯ್ದುಕೊಳ್ಳುವ ವೇಳೆ ಕೆಲ ಎಡವಟ್ಟುಗಳನ್ನು ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಹರಾಜಿನಲ್ಲಿ ಇತರ ತಂಡಗಳು ಉತ್ತಮ ಆಟಗಾರರನ್ನು ಆಯ್ದುಕೊಳ್ಳುವಲ್ಲಿ ಯಶಸ್ವಿಯಾದವು. ಆದರೆ ನಾವು ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುವಲ್ಲಿ ಎಡವಿದೆವು. ನಾವು ಉತ್ತಮವಾದ ತಂಡವನ್ನೇ ಆರಿಸಿದೆವು ಎನಿಸಿದರೂ, ನಮಗೆ ಬೇಕಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಕೆಲ ಆಟಗಾರರಿಗೆ ಫಾರ್ಮ್​ ಕೈಕೊಟ್ಟದ್ದು ಕೂಡ ತಂಡದ ಸತತ ಸೋಲಿಗೆ ಕಾರಣ ಎಂದು ಫ್ಲೆಮಿಂಗ್ ಹೇಳಿದರು. ಆರ್​. ಅಶ್ವಿನ್​, ರಾಹುಲ್​ ತ್ರಿಪಾಠಿ, ದೀಪಕ್​ ಹೂಡಾ, ವಿಜಯ್​ ಶಂಕರ್​ ಅವರಂಥ ಅನುಭವಿ ಆಟಗಾರರು ಆಡಿದ ಎಲ್ಲ ಪಂದ್ಯಗಳಲ್ಲಿಯೂ ನೀರಸ ನಿರ್ವಹಣೆಯಿಂದ ನಿರಾಸೆ ಮೂಡಿಸಿದ್ದಾರೆ. ಇಂಪ್ಯಾಕ್ಟ್‌ ಆಟಗಾರ ಶಿವಂ ದುಬೆ ಯಾವುದೇ ಇಂಪ್ಯಾಕ್ಟ್‌ ಮಾಡಿಲ್ಲ.

ಇದನ್ನೂ ಓದಿ IPL 2025: ಪಂಜಾಬ್ ವಿರುದ್ಧದ ಪಂದ್ಯ ರದ್ದಾದ ನಂತರ ಕೆಕೆಆರ್‌ ಪ್ಲೇ-ಆಫ್‌ ಅವಕಾಶ ಹೇಗಿದೆ?

ಪ್ಲೇ ಆಫ್‌ ಪ್ರವೇಶದ ಕ್ಷೀಣ ಅವಕಾಶ ಹೊಂದಿರುವ ಚೆನ್ನೈ ಉಳಿದಿರುವ ಉಳಿದ ಎಲ್ಲಾ 5 ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕಗಳನ್ನು ಪಡೆಯಬಹುದು. ಅಲ್ಲದೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿರಲಿದೆ. ಸದ್ಯ ಅಗ್ರ ನಾಲ್ಕು ಸ್ಥಾನದಲ್ಲಿರುವ ತಂಡಗಳ ಪೈಕಿ ಒಂದು ತಂಡವು ಮುಂದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು.