RCB vs PBKS: ʻಐಪಿಎಲ್ ಫೈನಲ್ನಲ್ಲಿ ಟಿಮ್ ಡೇವಿಡ್ ಆಡ್ತಾರಾ?ʼ-ಪಾಟಿದಾರ್ ಮಾಹಿತಿ!
ಗಾಯದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಆಲ್ರೌಂಡರ್ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅವರ ಬದಲು ಲಿಯಾಮ್ ಲಿವಿಂಗ್ಸ್ಟೋನ್ ಆಡಿದ್ದರು. ಜೂನ್ 3 ರಂದು ಮಂಗಳವಾರ ಅಹಮದಾಬಾದ್ನಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ನಡೆಯಲಿದೆ. ಈ ಪಂದ್ಯಕ್ಕೆ ಟಿಮ್ ಡೇವಿಡ್ ಲಭ್ಯತೆ ಬಗ್ಗೆ ನಾಯಕ ರಜತ್ ಪಾಟಿದಾರ್ ಮಾಹಿತಿ ನೀಡಿದ್ದಾರೆ.

ಟಿಮ್ ಡೇವಿಡ್ ಬಗ್ಗೆ ರಜತ್ ಪಾಟಿದಾರ್ ಹೇಳಿಕೆ.

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು(RCB vs PBKS) ಜೂನ್ 3 ರಂದು ಮಂಗಳವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಫೈನಲ್ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಆರ್ಸಿಬಿ ಸ್ಪೋಟಕ ಆಲ್ರೌಂಡರ್ ಟಿಮ್ ಡೇವಿಡ್ (Tim David) ಲಭ್ಯರಾಗುವ ಬಗ್ಗೆ ಇನ್ನು ಖಚಿತ ಮಾಹಿತಿ ಇಲ್ಲ. ಆದರೆ, ಫೈನಲ್ ಪಂದ್ಯಕ್ಕೂ ಮುನ್ನ ಆರ್ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar), ಆಲ್ರೌಂಡರ್ ಟಿಮ್ ಡೇವಿಡ್ ಅವರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ವೇಳೆ ಟಿಮ್ ಡೇವಿಡ್ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಸ್ನಾಯ ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಇದರ ಪರಿಣಾಮವಾಗಿ ಅವರು ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ ಹಾಗೂ ಅವರ ಸ್ಥಾನದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಆಡಿದ್ದರು. ಇದೀಗ ಜೂನ್ 3 ರಂದು ನಡೆಯುವ ಫೈನಲ್ನಲ್ಲಿ ಟಿಮ್ ಡೇವಿಡ್ ಅವರು ಆಡುವ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ. ಅಂದ ಹಾಗೆ ಫೈನಲ್ ಪಂದ್ಯಕ್ಕೂ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಟಿಮ್ ಡೇವಿಡ್ ಅವರ ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಯಿತು.
IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?
ರಜತ್ ಪಾಟಿದಾರ್ ವೈದ್ಯರು ಮಾಹಿತಿ ನೀಡಲಿದ್ದಾರೆ: ರಜತ್ ಪಾಟಿದಾರ್
"ಆರ್ಸಿಬಿಯಂತಹ ದೊಡ್ಡ ತಂಡವನ್ನು ಫೈನಲ್ನಲ್ಲಿ ಮುನ್ನಡೆಸುತ್ತಿರುವಾಗ ನಿರೀಕ್ಷೆಗಳು ಸ್ವಾಭಾವಿಕವಾಗಿ ಬಂದೇ ಬರುತ್ತವೆ. ಆದರೆ, ನನ್ನ ನಿಯಂತ್ರಣದಲ್ಲಿ ಏನಿದೆ ಎಂಬುದರ ಕಡೆಗೆ ಗಮನವನ್ನು ಕೊಡುತ್ತೇನೆ ಹಾಗೂ ವರ್ತಮಾನದಲ್ಲಿ ಉಳಿಯಲು ಪ್ರಯತ್ನಿಸುತ್ತೇನೆ. ಈ ನಾಯಕತ್ವದ ಪ್ರಯಾಣವು ನನಗೆ ಉತ್ತಮ ಕಲಿಕೆಯ ಅನುಭವವಾಗಿದೆ, ಆಟದಲ್ಲಿ ಕೆಲವು ಅತ್ಯುತ್ತಮ ನಾಯಕರು ಮತ್ತು ವಿದೇಶಿ ಆಟಗಾರರ ಸುತ್ತಲೂ ಇರುವುದು ನಿಜವಾಗಿಯೂ ನನ್ನ ವಿಧಾನವನ್ನು ರೂಪಿಸಿದೆ. ದೇಶಿ ಮತ್ತು ಅಂತಾರಾಷ್ಟ್ರೀಯ ಆಟಗಾರರು ಆತ್ಮವಿಶ್ವಾಸದಿಂದಿರುವಂತೆ, ಶಾಂತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವತ್ತ ನಾನು ಗಮನಹರಿಸಿದ್ದೇನೆ. ನಾವು ಫೈನಲ್ ವೇದಿಕೆಯ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ; ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲು ನಾವು ಇಲ್ಲಿದ್ದೇವೆ. ಶ್ರೇಯಸ್ ಅಯ್ಯರ್ ಅವರನ್ನು ಫೈನಲ್ನಲ್ಲಿ ಮತ್ತೊಮ್ಮೆ ಎದುರಿಸುವುದು ಒಳ್ಳೆಯ ಕಾಕತಾಳೀಯ, ಆದರೆ ಸವಾಲು ಹೊಸದು, ಮತ್ತು ನಾವು ಅದಕ್ಕೆ ಸಿದ್ಧರಿದ್ದೇವೆ," ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.
RCB vs PBKS: ಐಪಿಎಲ್ ಫೈನಲ್ಗೆ ಆರ್ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
ಕಪ್ ಗೆಲ್ಲುವುದು ಕೊಹ್ಲಿ, ಆರ್ಸಿಬಿ ಫ್ಯಾನ್ಸ್ಗೆ ದೊಡ್ಡದು: ಪಾಟಿದಾರ್
2025ರ ಐಪಿಎಲ್ ಟೂರ್ನಿಯನ್ನು ಗೆಲ್ಲುವುದು ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ಅಭಿಮಾನಿಗಳ ಪಾಲಿಗೆ ದೊಡ್ಡ ಸಂಗತಿಯಾಗಿದೆ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಆಡಿದ 14 ಪಂದ್ಯಗಳಿಂದ 55ರ ಸರಾಸರಿಯಲ್ಲಿ 614 ರನ್ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಚೊಚ್ಚಲ ಐಪಿಎಲ್ ಕಪ್ ಗೆಲ್ಲಲು ವಿರಾಟ್ ಕೊಹ್ಲಿ ಎದುರು ನೋಡುತ್ತಿದ್ದಾರೆ.
"ಕಳೆದ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ಈ ಬಾರಿ ಐಪಿಎಲ್ ಗೆಲ್ಲುವುದು ವಿರಾಟ್ ಕೊಹ್ಲಿಗೆ ಹಾಗೂ ಅಭಿಮಾನಿಗಳಿಗೆ ಅತ್ಯಂತ ವಿಶೇಷವಾಗಿದೆ,"ಎಂದು ಆರ್ಸಿಬಿ ಕಪ್ತಾನ ತಿಳಿಸಿದ್ದಾರೆ.
RCB vs PBKS Final: ಫೈನಲ್ ಕಂಟಕದಿಂದ ಪಾರಾಗಿ ಕಪ್ ಗೆಲ್ಲಲಿ ಆರ್ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್/ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿ.ಕೀ), ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜಾಶ್ ಹೇಝಲ್ವಿಡ್, ಸುಯೇಶ್ ಶರ್ಮಾ
ಇಂಪ್ಯಾಕ್ಟ್ ಪ್ಲೇಯರ್: ಮಯಾಂಕ್ ಅಗರ್ವಾಲ್