ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG-W vs IND-W: ಇಂದು ಭಾರತ-ಇಂಗ್ಲೆಂಡ್‌ ಮೊದಲ ಏಕದಿನ ಪಂದ್ಯ

ತೊಡೆಸಂದು ಗಾಯದಿಂದಾಗಿ ಐದು ಪಂದ್ಯಗಳ ಸರಣಿಯ ಕೊನೆಯ ಮೂರು ಟಿ20ಐಗಳಿಂದ ಹೊರಗುಳಿದಿದ್ದ ನಾಯಕಿ ನಾಟ್‌ ಸ್ಕಿವರ್-ಬ್ರಂಟ್ ಮತ್ತೆ ತಂಡ ಸೇರಿದ್ದಾರೆ. ಇವರಲ್ಲದೆ ಸೋಫಿ ಎಕ್ಲೆಸ್ಟೋನ್ ಮತ್ತು ಮಾಯಾ ಬೌಚಿಯರ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ಕೂಡ ಬಲಿಷ್ಠವಾಗಿ ಗೋಚರಿಸಿದೆ.

ಇಂದು ಭಾರತ-ಇಂಗ್ಲೆಂಡ್‌ ಮೊದಲ ಏಕದಿನ ಪಂದ್ಯ

Profile Abhilash BC Jul 16, 2025 9:39 AM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಐತಿಹಾಸಿಕ ಟಿ20 ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ಇದೀಗ ಏಕದಿನ(ENG-W vs IND-W) ಸರಣಿಯನ್ನಾಡಲು ಸಜ್ಜಾಗಿದಾರೆ. ಮೊದಲ ಪಂದ್ಯ ಇಂದು ನಡೆಯಲಿದೆ. ಏಕದಿನ ಸರಣಿಯನ್ನೂ ಕೂಡ ಗೆಲ್ಲುವುದು ಹರ್ಮನ್‌ಪ್ರೀತ್‌ ಕೌರ್‌ ಪಡೆಯ ಗುರಿಯಾಗಿದೆ.

ಟಿ20 ಸರಣಿ ಆಡಿದ್ದ ಶಫಾಲಿ ವರ್ಮ ಅವರಿಗೆ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿರುವ ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್, ಶಫಾಲಿ ವರ್ಮಾ ಇಂಗ್ಲೆಂಡ್ ಸರಣಿಯ ಏಕದಿನ ತಂಡದಲ್ಲಿ ಇಲ್ಲದಿರಬಹುದು ಆದರೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಇನ್ನೂ ಹೆಚ್ಚಿನ ಯೋಜನೆಗಳಲ್ಲಿದ್ದಾರೆ ಎಂದು ಒಪ್ಪಿಕೊಂಡರು.

ತೊಡೆಸಂದು ಗಾಯದಿಂದಾಗಿ ಐದು ಪಂದ್ಯಗಳ ಸರಣಿಯ ಕೊನೆಯ ಮೂರು ಟಿ20ಐಗಳಿಂದ ಹೊರಗುಳಿದಿದ್ದ ನಾಯಕಿ ನಾಟ್‌ ಸ್ಕಿವರ್-ಬ್ರಂಟ್ ಮತ್ತೆ ತಂಡ ಸೇರಿದ್ದಾರೆ. ಇವರಲ್ಲದೆ ಸೋಫಿ ಎಕ್ಲೆಸ್ಟೋನ್ ಮತ್ತು ಮಾಯಾ ಬೌಚಿಯರ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ಕೂಡ ಬಲಿಷ್ಠವಾಗಿ ಗೋಚರಿಸಿದೆ.

ಪಂದ್ಯ ಆರಂಭ: ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ಆರಂಭವಾಗಲಿದೆ.

ಪ್ರಸಾರ: ಸೋನಿ ನ್ಪೋರ್ಟ್ಸ್

ಇಂಗ್ಲೆಂಡ್‌ ತಂಡ

ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಎಮ್ ಆರ್ಲಾಟ್, ಸೋಫಿಯಾ ಡಂಕ್ಲಿ, ಎಮ್ಮಾ ಲ್ಯಾಂಬ್, ಟ್ಯಾಮಿ ಬ್ಯೂಮಾಂಟ್ (ವಿ.ಕೀ.), ಆಮಿ ಜೋನ್ಸ್, ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸಿ, ಕೇಟ್ ಕ್ರಾಸ್, ಆಲಿಸ್ ಡೇವಿಡ್ಸನ್-ರಿಚರ್ಡ್ಸ್, ಚಾರ್ಲಿ ಡೀನ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.

ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿ.ಕೀ.), ಯಾಸ್ತಿಕಾ ಭಾಟಿಯಾ, ತೇಜಲ್ ಹಸಾಬ್ನಿಸ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ಶುಚಿ ಉಪಾಧ್ಯಾಯ, ಅರುಂಧಾ ಗತ್ತಿ ರೆಡ್ಡಿ, ಕೆ. ಸತ್ಘರೆ.