IPL 2025 Points Table: ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ
ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್(RCB vs PBKS) 2 ಸ್ಥಾನಗಳ ಜಿಗಿತದೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಈ ಹಿಂದೆ ದ್ವಿತೀಯ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡ ಮೂರನೇ ಸ್ಥಾನಕ್ಕೆ ಜಾರಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲೇ ಮುಂದುವರಿದಿದೆ.


ಬೆಂಗಳೂರು: ತವರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಹ್ಯಾಟ್ರಿಕ್ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಅಂಕಪಟ್ಟಿಯಲ್ಲಿ(IPL 2025 Points Table) ಒಂದು ಸ್ಥಾನಗಳ ನಷ್ಟ ಅನುಭವಿಸಿದೆ. ಸದ್ಯ ಆರ್‌ಸಿಬಿ 4ನೇ ಸ್ಥಾನದಲ್ಲಿದೆ. ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್(RCB vs PBKS) 2 ಸ್ಥಾನಗಳ ಜಿಗಿತದೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಈ ಹಿಂದೆ ದ್ವಿತೀಯ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡ ಮೂರನೇ ಸ್ಥಾನಕ್ಕೆ ಜಾರಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ಇಂದು(ಶನಿವಾರ) ಡಬಲ್ ಹೆಡರ್ ಪಂದ್ಯ ನಡೆಯಲಿದ್ದು, ಹಗಲು ಪಂದ್ಯದಲ್ಲಿ ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡದ ಸವಾಲು ಎದುರಿಸಿದರೆ, ರಾತ್ರಿ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕಾದಾಟ ನಡೆಸಲಿದೆ. ಡೆಲ್ಲಿ ಗೆದ್ದರೆ ಪ್ಲೇ ಆಫ್ ಸನಿಹಕ್ಕೆ ಬಂದು ನಿಲ್ಲಲಿದೆ.
ತವರಿನಲ್ಲಿ ಮುಗ್ಗರಿಸಿದ ಆರ್‌ಸಿಬಿ
ತವರಿನಾಚೆ ಆಡಿದ 4 ಪಂದ್ಯಗಳಲ್ಲೂ ಗೆದ್ದಿರುವ ಆರ್‌ಸಿಬಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲುವು ಒಲಿಯುತ್ತಿಲ್ಲ. ಆಡಿದ ಮೂರು ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಶುಕ್ರವಾರ ನಡೆದ ಮಳೆಯಿಂದ 14 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಟಿಮ್ ಡೇವಿಡ್ ಅವರ ಅಜೇಯ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 95 ರನ್ ಬಾರಿಸಿತು. ಜಾವಾಬಿತ್ತ ಪಂಜಾಬ್ ಕಿಂಗ್ಸ್ ಹಲವು ಏರಿಳಿತದ ಮಧ್ಯೆಯೂ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಬಾರಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿತು.
ಇದನ್ನೂ ಓದಿ IPL 2025: ಚೆನ್ನೈ ತಂಡ ಸೇರಿದ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್
ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪಂದ್ಯ ಮುಗಿದ ಬೆನ್ನಲ್ಲೇ ಸುಮಾರು 2 ಸಾವಿರ ಕಿಲೋಮೀಟರ್ ದೂರದ ಚಂಡೀಗಢಕ್ಕೆ 3 ಗಂಟೆಗೂ ಅಧಿಕ ಸಮಯದ ವಿಮಾನ ಪ್ರಯಾಣ ಮಾಡಿ ತೆರಲಿದ್ದು, ಭಾನುವಾರ(ಎ.20) ಮಧ್ಯಾಹ್ನ 3.30ರಿಂದ ಮುಲ್ಲನ್ಪುರದಲ್ಲಿ ಮತ್ತೆ ಪಂದ್ಯ ಆಡಲಿವೆ. ಅಂದರೆ 32 ಗಂಟೆಗಳ ಅಂತರದಲ್ಲೇ ಉಭಯ ತಂಡಗಳು 2 ಬಾರಿ ಕಾದಾಡಲಿವೆ.
ಅಂಕಪಟ್ಟಿ ಹೀಗಿದೆ
IPL 2025 POINTS TABLE. 📈
— Mufaddal Vohra (@mufaddal_vohra) April 18, 2025
- DC and PBKS with 10 Points each. pic.twitter.com/TCHnJteyPr