IPL 2025: ಚೆನ್ನೈ ತಂಡ ಸೇರಿದ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್
ಬ್ರೆವಿಸ್ ಅವರು ಈ ಋತುವಿನಲ್ಲಿ ಸಿಎಸ್‌ಕೆ ತಂಡ ಸೇರಿದ ಎರಡನೇ ಬದಲಿ ಆಟಗಾರ. ಇದಕ್ಕೂ ಮುನ್ನ ನಾಯಕ ಋತುರಾಜ್ ಗಾಯಕ್ವಾಡ್ ಬದಲಿಗೆ ಮುಂಬೈನ ಯುವ ಆಟಗಾರ ಆಯುಷ್ ಮ್ಹಾತ್ರೆ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಸಿಎಸ್‌ಕೆ ಮುಂದಿನ ಪಂದ್ಯವನ್ನು ಏಪ್ರಿಲ್ 20 ರಂದು ವಾಂಖೆಡೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.


ಚೆನ್ನೈ: ಗಾಯಗೊಂಡು ಐಪಿಎಲ್(IPL 2025) ಟೂರ್ನಿಯಿಂದ ಹೊರಬಿದ್ದ ವೇಗಿ ಗುರ್ಜಪ್ನೀತ್ ಸಿಂಗ್(Gurjapneet Singh) ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಐಪಿಎಲ್ 2025 ರ ಉಳಿದ ಭಾಗಕ್ಕಾಗಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್, ಜೂನಿಯರ್ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್(Dewald Brevis) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಹರಾಜಿನಲ್ಲಿ ಬ್ರೆವಿಸ್ 75 ಲಕ್ಷ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದೀಗ ಚೆನ್ನೈ ತಂಡ ಅವರನ್ನು 2.2 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಬ್ರೆವಿಸ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟು 10 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 21 ವರ್ಷದ ಈ ಆಟಗಾರ ಒಟ್ಟಾರೆಯಾಗಿ 81 ಟಿ20 ಪಂದ್ಯಗಳನ್ನು ಆಡಿದ್ದಾರೆ. 145 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಸ್ಥಿರವಾಗಿ ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಎಸ್‌ಎ20ಯಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದರು.
ಇದನ್ನೂ ಓದಿ IPL 2025: ಸಿಕ್ಸರ್ ಮೂಲಕ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್
ಬ್ರೆವಿಸ್ ಅವರು ಈ ಋತುವಿನಲ್ಲಿ ಸಿಎಸ್‌ಕೆ ತಂಡ ಸೇರಿದ ಎರಡನೇ ಬದಲಿ ಆಟಗಾರ. ಇದಕ್ಕೂ ಮುನ್ನ ನಾಯಕ ಋತುರಾಜ್ ಗಾಯಕ್ವಾಡ್ ಬದಲಿಗೆ ಮುಂಬೈನ ಯುವ ಆಟಗಾರ ಆಯುಷ್ ಮ್ಹಾತ್ರೆ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಸಿಎಸ್‌ಕೆ ಮುಂದಿನ ಪಂದ್ಯವನ್ನು ಏಪ್ರಿಲ್ 20 ರಂದು ವಾಂಖೆಡೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.
Bringing a whole lot of Protea Firepower! 💪🏻#WhistlePodu #Yellove 🦁💛 pic.twitter.com/9seFMWU1fI
— Chennai Super Kings (@ChennaiIPL) April 18, 2025
ಗುಜರಾತ್ ತಂಡ ಸೇರಿದ ದಾಸುನ್ ಶನಕ
ಗುಜರಾತ್ ಟೈಟಾನ್ಸ್(Gujarat Titans) ತಂಡವು ಶ್ರೀಲಂಕಾದ ದಾಸುನ್ ಶನಕ(Dasun Shanaka) ಅವರನ್ನು ಐಪಿಎಲ್ 2025(IPL 2025) ರ ಉಳಿದ ಪಂದ್ಯಗಳಿಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ. ತೊಡೆಸಂದು ಗಾಯದಿಂದಾಗಿ ಹೊರಬಿದ್ದ ಗ್ಲೆನ್ ಫಿಲಿಪ್ಸ್(Glenn Phillips) ಬದಲಿಗೆ ಶನಕ ಅವರನ್ನು ಆಯ್ಕೆ ಮಾಡಲಾಗಿದೆ. ಗುಜರಾತ್ ಟೈಟಾನ್ಸ್ ಪರ ಫಿಲಿಪ್ಸ್ 2 ಕೋಟಿ ಮೂಲ ಬೆಲೆಗೆ ಆಯ್ಕೆಯಾಗಿದ್ದರು.
ಶ್ರೀಲಂಕಾ ಪರ 102 ಟಿ20 ಆಡಿರುವ ಶನಕ, 2023ರಲ್ಲಿ ಗುಜರಾತ್ ತಂಡದ ಭಾಗವಾಗಿದ್ದರು. ಇದೀಗ ಮತ್ತೆ ಒಂದು ವರ್ಷದ ಬಳಿಕ ಫ್ರಾಂಚೈಸಿಗೆ ಮರಳಿದ್ದಾರೆ. 2023ರ ಋತುವಿನಲ್ಲಿ ಶನಕ ಗುಜರಾತ್ ಪರ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಶಕನ 75 ಲಕ್ಷ ರೂ. ಮೂಲ ಬೆಲೆಗೆ ಟೈಟಾನ್ಸ್ ತಂಡವನ್ನು ಸೇರಿದ್ದಾರೆ.