ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Mysuru News: ಮೈಸೂರಿನಲ್ಲಿ ಆಘಾತಕಾರಿ ಘಟನೆ; ಹೆಂಡತಿ, ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಗಂಡ ಆತ್ಮಹತ್ಯೆ!

ಮೈಸೂರಿನಲ್ಲಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ಗಂಡ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Gold Price Today On 21st July 2026: ಮತ್ತೆ ಗಗನಮುಖಿಯಾದ ಚಿನ್ನ; ಇಂದು ಏರಿಕೆಯಾಗಿದ್ದು ಬರೋಬ್ಬರಿ 700 ರುಪಾಯಿ

ಮತ್ತೆ ಗಗನಮುಖಿಯಾದ ಚಿನ್ನ; ಇಂದು ಏರಿಕೆಯಾಗಿದ್ದು ಇಷ್ಟು

Gold Price Today: ಮಂಗಳವಾರ (ಜುಲೈ 21) ಚಿನ್ನದ ದರದಲ್ಲಿ ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 70 ರುಪಾಯಿ ಹೆಚ್ಚಾಗಿ 13,220 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 76 ರುಪಾಯಿ ಅಧಿಕವಾಗಿ 14,422 ರುಪಾಯಿಗೆ ಬಂದಿದೆ.

ಅಂಜಲಿ ನಿಂಬಾಳ್ಕರ್ ದಾಖಲೆ ಬಿಡುಗಡೆ ಮಾಡಲಿ ಅಥವಾ ಕ್ಷಮೆ ಕೋರಲಿ: ಸದಾನಂದ ಭಟ್

ಅಂಜಲಿ ನಿಂಬಾಳ್ಕರ್ ದಾಖಲೆ ಬಿಡುಗಡೆ ಮಾಡಲಿ ಅಥವಾ ಕ್ಷಮೆ ಕೋರಲಿ

ಎಐಸಿಸಿ(AICC) ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್(Anjali Nimbalkar) ಅವರು ಎಸ್‌ಐಆರ್ (SIR) ಕುರಿತು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು, ಇಲ್ಲವೇ ಬೇಷರತ್ ಕ್ಷಮೆ ಕೋರಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಸದಾನಂದ ಭಟ್ ನಿಡಗೋಡ್ ಆಗ್ರಹಿಸಿದ್ದಾರೆ

Shops caught burnt: ಶಾರ್ಟ್ ಸರ್ಕ್ಯೂಟ್‌ಗೆ ಲಕ್ಷಾಂತರ ನಷ್ಟ: ಮೊಬೈಲ್, ಎಲೆಕ್ಟ್ರಾನಿಕ್ಸ್, ಟೀ ಶಾಪ್ ಭಸ್ಮ!

ಶಾರ್ಟ್ ಸರ್ಕ್ಯೂಟ್‌ಗೆ ಮೊಬೈಲ್, ಎಲೆಕ್ಟ್ರಾನಿಕ್ಸ್, ಟೀ ಶಾಪ್ ಭಸ್ಮ!

ತಾಲ್ಲೂಕಿನ ಕೆಂಚಾರ್ಲಹಳ್ಳಿ ಗ್ರಾಮದಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಶಿರೀಶ್, ಶಶಿಕುಮಾರ್ ಮತ್ತು ಸುರೇಶ್ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿ,ಟೀ ಅಂಗಡಿ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜಿ ಇಲ್ಲ: ಗುಣಮಟ್ಟದ ಸೇವೆ ಕಡ್ಡಾಯ: ಸಂತೋಷ್ ಕುಮಾರ್ ಎಚ್ಚರಿಕೆ

ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜಿ ಇಲ್ಲ: ಗುಣಮಟ್ಟದ ಸೇವೆ ಕಡ್ಡಾಯ

ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಆರೋಗ್ಯ ಸಂಸ್ಥೆಗಳು ಹಾಗೂ ಮಕ್ಕಳ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ, ಸುರಕ್ಷಿತ ವಾತಾವರಣ ಹಾಗೂ ಗುಣಮಟ್ಟದ ಸೇವೆಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದರು

Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್

ಡಿಸಿ ಬರದಿದ್ದರೆ ಉಪವಾಸ ಸತ್ಯಾಗ್ರಹ! ಹೋರಾಟಗಾರ ಮಂಜುನಾಥ್ ಖಡಕ್ ಎಚ್ಚರಿಕೆ

ಕಳೆದ 2014ರಲ್ಲೇ ಸಮಗ್ರ ಗ್ರಾಮಗಳ ಅಜೆಂಡಾ ಕಾರ್ಯಸೂಚಿ ಎಂಬ ಮಹತ್ವದ ಪುಸ್ತಕವನ್ನು ಸಿದ್ಧಪಡಿಸಿ, ಮುಖ್ಯಮಂತ್ರಿಗಳ ಕಚೇರಿ ಹಾಗೂ ರಾಜ್ಯಪಾಲರ ಕಚೇರಿಗೆ ತಲುಪಿಸಲಾಗಿತ್ತು.ಅಂದು ಗ್ರಾಮಸ್ಥರ ಸಮ್ಮುಖದಲ್ಲೇ ಈ ಮನವಿಯನ್ನು ಸಲ್ಲಿಸಲಾಗಿದ್ದರೂ, ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Bagepally News: ಬಾಗೇಪಲ್ಲಿ: ಬಿಜಿಎಸ್ ಶಾಲಾ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ಕಾರ್ಯಕ್ರಮ

ಬಿಜಿಎಸ್ ಶಾಲಾ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ಕಾರ್ಯಕ್ರಮ

ಬಹಳಷ್ಟು ಜನ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಶೃಂಗೇರಿ, ಉಡುಪಿ, ಧರ್ಮಸ್ಥಳ ಹೀಗೆ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರ ಸನ್ನಿಧಿಯಲ್ಲಿ ಅಕ್ಷರ ತಿದ್ದಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ. ಆದರೆ,ಬಿ.ಜಿ.ಎಸ್ ಸಂಸ್ಥೆ ಸ್ಥಳಿಯವಾಗಿಯೇ ಹಳೆಯ ಗುರುಕುಲ ಪದ್ಧತಿ ನೆನಪಿಸುವಂತೆ,ಶಾಲೆಯ ಆವರಣದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪರಿಪಾಠ ಬೆಳೆಸಿಕೊಂಡಿದ್ದೇವೆ

ಸಿಎಸ್ಆರ್ ರಾಷ್ಟ್ರ ನಿರ್ಮಾಣದ ಶಕ್ತಿಯಾಗಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ

ಸಿಎಸ್ಆರ್ ರಾಷ್ಟ್ರ ನಿರ್ಮಾಣದ ಶಕ್ತಿಯಾಗಬೇಕು

ಎರಡು ದಿನಗಳ ಸಿಎಸ್ಆರ್ ಸಮಾವೇಶ–2026ರ ಸಮಾರೋಪ ಸಮಾರಂಭದಲ್ಲಿ ಗುರುವಾರ ಆಶೀರ್ವಚನ ನೀಡಿದ ಅವರು, ಭಾರತದ ನಾಗರಿಕತೆ ಪ್ರೀತಿ, ಸೇವೆ ಹಾಗೂ ಮಾನವೀಯ ಮೌಲ್ಯಗಳ ಮೇಲೆ ನೆಲೆಗೊಂಡಿದೆ. ಈ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸರ್ಕಾರ, ಕೈಗಾರಿಕೆಗಳು, ಕಾರ್ಪೊರೇಟ್ ಸಂಸ್ಥೆ ಗಳು ಹಾಗೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು

MLA S R Srinivas: ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ : ಶಾಸಕ ವಾಸಣ್ಣ

ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ : ಶಾಸಕ ವಾಸಣ್ಣ

ಕೇಂದ್ರ ಸಚಿವರಾಗಿ ಒಂದು ಕೈಗಾರಿಕೆ ರಾಜ್ಯಕ್ಕೆ ತರಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ತಕ್ಷಣ ಅವರ ಮೇಲಿನ ದ್ವೇಷ ಮತ್ಸರ ಹೆಚ್ಚು ಮಾಡಿಕೊಂಡು ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲ್ಲ ಎಂದು ಹೇಳುತ್ತಾರೆ. 18 ಸೀಟು ಪಡೆದು ಇವರು ಒಪ್ಪಿ ಏನೂ ಆಗಬೇಕಿಲ್ಲ. ಸುಖಾಸುಮ್ಮನೆ ಒಕ್ಕಲಿಗ ಮುಖಂಡರ ಬೆಳವಣಿಗೆ ಸಹಿಸದೆ ತುಳಿಯುವುದು ಹೇಗೆ ಎಂದೇ ಕಾಲಹರಣ ಮಾಡುತ್ತಿದ್ದಾರೆ

Chinthamani News:ಹಾದಿಗೆರೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ

ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ

ಟ್ರಸ್ಟಿನ ಸದಸ್ಯರು ಹಾಗೂ ಬಿ ಎಸ್ ಏನ್ ಎಲ್ ನಿವೃತ್ತ ಅಧಿಕಾರಿಯದ ಆರ್. ನರಸಿಂಹಮೂರ್ತಿ ರವರು ಮಾತನಾಡಿ, ಹಿಂದಿನ ವರ್ಷದಲ್ಲೂ ಶಾಲೆಗೆ ಹಲವು, ಕೊಡುಗೆ ನೀಡಿದ್ದು, ಮುಂದಿನ ವರ್ಷದಲ್ಲೂ ಸಹ ಸಹಾಯ ಒದಗಿಸುವುದಾಗಿ ನುಡಿದರು. ಮಕ್ಕಳು ಶ್ರದ್ದಾ ಭಕ್ತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು

Gubbi News: ದಸಂಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರಾಯ್ಕೆ

ದಸಂಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರಾಯ್ಕೆ

ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು ಮಾತನಾಡಿ ಜಿಲ್ಲಾದ್ಯಂತ ಪ್ರತಿ ತಾಲೂಕು ಘಟಕಗಳ ಪುನರ್ ರಚನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಗುಬ್ಬಿ ಪ್ರವಾಸಿ ಮಂದಿರದಲ್ಲಿ ದಸಂಸ ತಾಲ್ಲೂಕು ಸಂಚಾಲಕರನ್ನಾಗಿ ಕಡಬ ಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸರ್ವಾನುಮತದ ನಿರ್ಣಯದಂತೆ ಶಂಕರ್ ಅವರ ಆಯ್ಕೆ ಸಂಘಟನೆಯ ಶಕ್ತಿ ಹೆಚ್ಚಿಸಲಿದೆ ಎಂಬ ವಿಶ್ವಾಸವಿದೆ

ಯಶವಂತಪುರ-ನಾಗಸಂದ್ರ ನಡುವೆ ಮೆಟ್ರೊ ಸಂಚಾರ ಸ್ಥಗಿತ

ಯಶವಂತಪುರ-ನಾಗಸಂದ್ರ ನಡುವೆ ಮೆಟ್ರೊ ಸಂಚಾರ ಸ್ಥಗಿತ

ಮೆಟ್ರೊ ಸಂಚಾರ ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ತಾಂತ್ರಿಕ ತಂಡಗಳು ತುರ್ತುಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ರೇಷ್ಮೆ ಸಂಸ್ಥೆ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೊ ರೈಲುಗಳು ಶಾರ್ಟ್-ಲೂಪ್ ಆಗಿ ಸಂಚರಿಸುತ್ತಿವೆ.

Chikkaballapur News: ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ

ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ

ಗುರುಹುಣ್ಣಿಮೆಯ ಅಂಗವಾಗಿ ಶ್ರೀಕ್ಷೇತ್ರ ಕೈವಾರದಲ್ಲಿ ಹಲವಾರು ವರ್ಷಗಳಿಂದಲೂ ವೈಶಿಷ್ಟ್ಯತೆ ಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೈವಾರದ ಶ್ರೀಯೋಗಿನಾರೇಯಣ ತಾತಯ್ಯ ನವರು ತತ್ವಬೋಧನೆಗಳಿಂದ ಕೂಡಿರುವ ಹಲವಾರು ಕೀರ್ತನೆ, ಶತಕಗಳನ್ನು ಬರೆದು ಜನಮಾನಸ ದಲ್ಲಿ ನೆಲೆ ನಿಂತಿದ್ದಾರೆ. ಅವರು ರಚಿಸಿರುವ ಕೀರ್ತನೆಗಳನ್ನು ಭಜನೆಯ ರೂಪದಲ್ಲಿ ಹಾಡುತ್ತಾ ಜನಸಮೂಹಕ್ಕೆ ತಲುಪಿಸುವ ಕೆಲಸವನ್ನು ಸಹಸ್ರಾರು ಭಜನಾ ತಂಡಗಳು ಸಕ್ರಿಯವಾಗಿ ಮಾಡುತ್ತಿದ್ದಾರೆ.

Gauribidanur News: ಗೌರಿಬಿದನೂರು ರಾಜ್ಯ ಮಟ್ಟದಲ್ಲಿ ಮುಂಚೂಣಿ; 2.14 ಲಕ್ಷ ಮತದಾರರಲ್ಲಿ 1.65 ಲಕ್ಷ ಮಾಹಿತಿ ಸಂಗ್ರಹ

ಆ.8ರವರೆಗೆ ಮತದಾರರ ವಿಶೇಷ ಪರಿಷ್ಕರಣೆ ಅವಧಿ ವಿಸ್ತರಣೆ

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು-214210 ಮತದಾರರು ಇದ್ದು, ಇದುವರೆಗೆ 165007 ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ವಿಶೇಷ ಪರಿಷ್ಕರಣೆ ಕಾರ್ಯ ಯಶಸ್ವಿ ಯಾಗಿ ನಡೆಯುತ್ತಿದ್ದು, ಈ ಪ್ರಗತಿಯಲ್ಲಿ ಗೌರಿಬಿದನೂರು ತಾಲೂಕು ರಾಜ್ಯ ಮಟ್ಟದಲ್ಲೇ ಮುಂಚೂಣಿಯಲ್ಲಿದೆ

Chinthamani News: ಕೀರ್ತನೆ ಹಾಡುವಾಗ ಶಾಸ್ತ್ರೀಯತೆಗಿಂತಲೂ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು : ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಮನವಿ

ಕೀರ್ತನೆ ಹಾಡುವಾಗ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು

ಹಾಡುಗಾರರು ಪ್ರಾತ:ಕಾಲದಲ್ಲಿ ಒಂದು ಕಡೆ ಕುಳಿತು ಒಂದು ಕೀರ್ತನೆಯನ್ನು ಹಾಡುತ್ತಾ ಮಾನಸಿಕ ವಾಗಿ ಪರಮಾತ್ಮನಿಗೆ ಅರ್ಪಿಸಿದರೆ ಅದು ಧ್ಯಾನವಾಗುತ್ತದೆ. ಅದರಿಂದ ಹೆಚ್ಚಿನ ಫಲ ಸಿಗುತ್ತದೆ. ಭಕ್ತಿಯ ಗಾಯನದಿಂದ ಮನಸ್ಸು ಸ್ವಚ್ಛವಾಗಬೇಕು. ಬಹಿರಂಗಕ್ಕಿಂತಲೂ ಮಾನಸಿಕವಾದ ಅಂತರAಗದ ಸ್ವಚ್ಛತೆ ಬಹಳ ಶ್ರೇಷ್ಠವಾದುದು.

ಅಕ್ರಮ ನುಸುಳುಕೋರರ ಪತ್ತೆಗೆ 'SIR' ಅಸ್ತ್ರ...ಕಾಂಗ್ರೆಸ್ ವಿರೋಧಕ್ಕೆ ಸೀಕಲ್ ಆನಂದ್ ಗೌಡ ಕಿಡಿ...!

ಮತದಾರರ ಪಟ್ಟಿ ಪರಿಷ್ಕರಣೆ ವೇಗ ಹೆಚ್ಚಿಸಲು ಆನಂದ್ ಗೌಡ ಆಗ್ರಹ

​"ಕ್ಷೇತ್ರದ ದಂಡಾಧಿಕಾರಿಗಳು ಹಾಗೂ ಇ.ಆರ್.ಓ.ಅವರೊಂದಿಗೆ ನಾವು ನಿರಂತರ ಸಂಪರ್ಕ ದಲ್ಲಿದ್ದು, ಪ್ರತಿದಿನದ ಅಪ್‌ಡೇಟ್‌ಗಳನ್ನು ಪಡೆಯುತ್ತಿದ್ದೇವೆ.ಗ್ರಾಮೀಣ ಭಾಗದಲ್ಲಿ ಈಗಾಗಲೇ ಸುಮಾರು ಶೇಕಡಾ 50 ರಷ್ಟು ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿ,ಭರ್ತಿ ಮಾಡಿ ಕಲೆಕ್ಟ್ ಮಾಡಲಾಗಿದೆ. ಆದರೆ ಇನ್ನುಳಿದ ಶೇಕಡಾ 50 ರಷ್ಟು ಕಾರ್ಯ ಬಾಕಿ ಉಳಿದಿದೆ.ಇನ್ನು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕೇವಲ ಶೇಕಡಾ 40 ರಷ್ಟು ಮಾತ್ರ ಪ್ರಗತಿಯಾಗಿದ್ದು, ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ

ನಾಯಿಗಳ ದಾಳಿಗೆ ಸಿಲುಕಿ ತಪತೇಶ್ವರ ಕಾಲೋನಿಯ ಮನೆಯ ಶೌಚಾಲಯಕ್ಕೆ ಸೇರಿದ ಜಿಂಕೆ ರಕ್ಷಣೆ

ಕಾಲೋನಿಯ ಮನೆಯ ಶೌಚಾಲಯಕ್ಕೆ ಸೇರಿದ ಜಿಂಕೆ ರಕ್ಷಣೆ

ತಪತೇಶ್ವರ ಕಾಲೋನಿಗೆ ಆಕಸ್ಮಿಕವಾಗಿ ಕಾಡು ಜಿಂಕೆಯೊಂದು ಆಗಮಿಸಿತ್ತು. ಇದನ್ನು ಕಂಡ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿ ಕಚ್ಚಲು ಪ್ರಾರಂಭಿಸಿದವು. ನಾಯಿಗಳ ದಾಳಿಯಿಂದ ಭಯಭೀತಗೊಂಡ ಜಿಂಕೆ, ಪ್ರಾಣ ರಕ್ಷಿಸಿಕೊಳ್ಳಲು ಓಡುವಾಗ ಸ್ಥಳೀಯ ನಿವಾಸಿ ವೆಂಕಟರಮಣ ಎಂಬುವವರ ಮನೆಯ ಶೌಚಾಲಯದ ಒಳಗೆ ನುಗ್ಗಿತ್ತು

Chikkaballapur News: ಸಾಲ ನೀಡುವಾಗ ಬೆಳೆ ವಿಮೆಗೆ ರೈತರನ್ನು ಕಡ್ಡಾಯವಾಗಿ ಪ್ರೇರೇಪಿಸಿ: ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಸಾಲ ನೀಡುವಾಗ ಬೆಳೆ ವಿಮೆಗೆ ರೈತರನ್ನು ಕಡ್ಡಾಯವಾಗಿ ಪ್ರೇರೇಪಿಸಿ

ಜಿಲ್ಲಾಡಳಿತ ಭವನದಲ್ಲಿ ನಡೆದ ಬೆಳೆ ವಿಮೆ ನೋಂದಣಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2026-27ರ ಮುಂಗಾರು ಹಂಗಾಮಿಗೆ 80 ಸಾವಿರ ರೈತರನ್ನು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸುವ ಗುರಿ ಇದ್ದರೂ, ಇದುವರೆಗೆ ಕೇವಲ 22406 ಪ್ರಸ್ತಾವನೆಗಳು ಮಾತ್ರ ದಾಖಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Guarantee Scheme: ಗೃಹಲಕ್ಷ್ಮಿ ಸಮಸ್ಯೆ, ಬಸ್ ಕೊರತೆ ಸೇರಿ ವಿವಿಧ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ

ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಮುನಿಯಪ್ಪ ಸೂಚನೆ

ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಹಲವಾರು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗ ದಿರುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ಸದಸ್ಯರು ಅಧಿಕಾರಿಗಳ ಗಮನ ಸೆಳೆದರು. ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

Chikkaballapur News: ರಾಮಪ್ಪ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ ಆರೋಪ: ತಡೆಗೆ ಗ್ರಾಮಸ್ಥರ ಒತ್ತಾಯ

ರಾಮಪ್ಪ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ ಆರೋಪ

ಅಕ್ರಮ ಮಣ್ಣು ತೆಗೆಯುವ ಪರಿಣಾಮ ಕೆರೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಸಾರ್ವಜನಿಕರು ಅಥವಾ ಜಾನುವಾರುಗಳು ಅಜಾಗರೂಕತೆಯಿಂದ ಬಿದ್ದರೆ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇನ್ನೂ ಮಣ್ಣು ತುಂಬಿದ ಟಿಪ್ಪರ್ ಲಾರಿಗಳು ಗ್ರಾಮ ರಸ್ತೆಗಳ ಮೂಲಕ ಅತಿವೇಗದಲ್ಲಿ ಸಂಚರಿಸುತ್ತಿರುವುದರಿಂದ ಧೂಳು ಹೆಚ್ಚಾಗಿ ಏಳಿ, ರಸ್ತೆ ಬದಿಯ ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿದೆ.

Karnataka weather: ಹವಾಮಾನ ವರದಿ: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಹವಾಮಾನ ವರದಿ: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

Weather Report: ರಾಜ್ಯದಲ್ಲಿ ಮುಂಗಾರಿನಲ್ಲಿ ಮಳೆಯ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆಯ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬರದ ಸ್ಥಿತಿ ನಿರ್ಮಾಣವಾಗಿದೆ. I ಈ ನಡುವೆ ವಿವಿಧ ಜಿಲ್ಲೆಗಳಿಗೆ ಇಂದು ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Shidlaghatta News: ಶಿಡ್ಲಘಟ್ಟದಲ್ಲಿ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾ; ವೆಂಕಟೇಶ್ವರ ಚಿತ್ರಮಂದಿರದಲ್ಲಿ ಡಾ. ಸುಭಾಷ್ ಪತ್ರೀಜಿ ಜೀವನಾಧಾರಿತ ಕಿರುಚಿತ್ರ ಪ್ರದರ್ಶನ

ಧ್ಯಾನ–ಸಸ್ಯಾಹಾರದಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ: ಆರತಿ

ನಗರದಲ್ಲಿ ಪಿರಮಿಡ್ ಧ್ಯಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಧ್ಯಾನವು ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ಪೂರಕವಾಗಿದ್ದು, ಜೀವನವನ್ನು ಶಾಂತಿ, ಸಂತೃಪ್ತಿ ಮತ್ತು ಸಮತೋಲನದತ್ತ ಕೊಂಡೊಯ್ಯುತ್ತದೆ

Chikkaballapur News: ಆಕ್ಸಿಜನ್ ಕೊರತೆಯಿಂದ ಬಾಲಕಿ ಸಾವು ಆರೋಪ; ಆಸ್ಪತ್ರೆ ಎದುರು ಗ್ರಾಮಸ್ಥರ ಪ್ರತಿಭಟನೆ

ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವಿರುದ್ಧ ಆಕ್ರೋಶ

ಪೆರೇಸಂದ್ರ ಗ್ರಾಮದ ನವೀನ್–ಚಂದ್ರಿಕಾ ದಂಪತಿಯ ಪುತ್ರಿ ಶಶಿಕಲಾ ಮನೆ ಮುಂದೆ ತಿಂಡಿ ತಿನ್ನುತ್ತಿದ್ದ ವೇಳೆ ಕೋತಿ ದಾಳಿ ನಡೆಸಿ ಕೈಯಲ್ಲಿದ್ದ ತಿಂಡಿಯನ್ನು ಕಸಿದುಕೊಂಡಿದೆ. ಇದರಿಂದ ಭಯಗೊಂಡ ಬಾಲಕಿ ಓಡಿ ಹೋಗಿ ಮನೆಯಲ್ಲಿ ನೀರು ಕುಡಿದ ಬಳಿಕ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿ ದ್ದಾರೆ.

ಮಹಾಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ವಿಜ್ಞಾನ ಪ್ರದರ್ಶನ, ವೃಕ್ಷ ವಂದನೆ ಹಾಗೂ 2 ಸಾವಿರಕ್ಕೂ ಅಧಿಕ ಸೀಡ್ ಬಾಲ್ ತಯಾರಿಕೆ

ಅಗಲಗುರ್ಕಿ ಬಿಜಿಎಸ್ ಶಾಲೆಯಲ್ಲಿ ವಿಜ್ಞಾನ–ಪರಿಸರ ಸಂಭ್ರಮ

ಶಾಲೆಯ ವಿದ್ಯಾರ್ಥಿಗಳು ನೇರೆಳೆ, ಬೇವು, ಹೊಂಗೆ, ಹಿಪ್ಪೆ, ಕಾಡು ಹುಣಸೆ, ಸಪೋಟ, ಹೀಚಲ, ಕಾಡು ಬಾದಾಮಿ ಸೇರಿದಂತೆ ವಿವಿಧ ಜಾತಿಯ ಮರಗಳ ಬೀಜಗಳನ್ನು ಮನೆಗಳಿಂದ ತಂದು ಮಣ್ಣಿನ ಉಂಡೆಗಳೊಂದಿಗೆ ಸಂಯೋಜಿಸಿ ೨ ಸಾವಿರಕ್ಕೂ ಹೆಚ್ಚು ಸೀಡ್ ಬಾಲ್‌ಗಳನ್ನು ತಯಾರಿಸಿ ದರು. ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ ಸಂತೃಪ್ತಿಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು

Loading...