ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Karkala News: ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ಗೆ ಪಿತೃವಿಯೋಗ

ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ಗೆ ಪಿತೃವಿಯೋಗ

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘ ಚಾಲಕರಾಗಿದ್ದರು. ವಾಸುದೇವ ಅವರಿಗೆ 87 ವರ್ಷ ವಯಸ್ಸಾಗಿತ್ತು. ಪ್ರಖರ ವಾಗ್ಮಿಯಾಗಿದ್ದ ವಾಸುದೇವ್, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

Road Block: ಭಾರಿ ಮಳೆಗೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ಸಂಚಾರ ಬಂದ್‌

ಭಾರಿ ಮಳೆಗೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ಸಂಚಾರ ಬಂದ್‌

Road Block: ಕಡಬ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೇಲೆ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದೆ. ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು ಸಾಗುವ ಲಾರಿ, ಬಸ್, ಟ್ರಕ್​ಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಕಾರು, ಬೈಕ್​ಗಳು ಬದಲಿ ಮಾರ್ಗ ಬಳಸಲು ಎಸ್​​ಪಿ ಡಾ.ಅರುಣ್ ಮನವಿ ಮಾಡಿದ್ದಾರೆ.

Actor Darshan: ಇಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ

ಇಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ

Actor Darshan: ಡಿಸೆಂಬರ್ 2024ರಲ್ಲಿ ದರ್ಶನ್‌ಗೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ. ಕೊಲೆಯಲ್ಲಿ ದರ್ಶನ್‌ ಪಾತ್ರದ ಬಗ್ಗೆ ಕೋರ್ಟ್‌ಗೆ ಇನ್ನಷ್ಟು ಮಾಹಿತಿಯನ್ನು ವಕೀಲರ ಮೂಲಕ ಪೊಲೀಸರು ನೀಡಲಿದ್ದಾರೆ.

CM Siddaramaiah: ಇನ್ನು ರಾಜ್ಯ ಪೊಲೀಸರಿಗೆ ಟೋಪಿ ಬದಲು ಪಿ-ಕ್ಯಾಪ್‌, ಆರೋಗ್ಯ ತಪಾಸಣೆ ವೆಚ್ಚ  ಹೆಚ್ಚಳ

ಪೊಲೀಸರಿಗೆ ಟೋಪಿ ಬದಲು ಪಿ-ಕ್ಯಾಪ್‌, ಆರೋಗ್ಯ ತಪಾಸಣೆ ವೆಚ್ಚ ಹೆಚ್ಚಳ

2023ಕ್ಕೆ ಹೋಲಿಸಿದರೆ ಸೈಬರ್ ಅಪರಾಧಗಳು 2024ರಲ್ಲಿ ಹೆಚ್ಚಾಗಿವೆ. ಕೊಲೆ, ದರೋಡೆ, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಮಾದಕ ವಸ್ತುಗಳಿಂದ ನಮ್ಮ ಯುವ ಪೀಳಿಗೆ ಹಾಳಾದರೆ ಭವಿಷ್ಯ ಹಾಳಾಗುತ್ತದೆ. ಪೊಲೀಸರನ್ನು ಕಂಡರೆ ನಾಗರಿಕರಿಗೆ ಭಯ ಹಾಗೂ ಸ್ನೇಹ ಎರಡೂ ಇರಬೇಕು ಎಂದು ಸಿಎಂ (CM Siddaramaiah) ಹೇಳಿದ್ದಾರೆ.

Heart Attack: ನವಜಾತ ಶಿಶುವಿಗೇ ಹೃದಯಾಘಾತ, ಕೊಪ್ಪಳದಲ್ಲಿ 26ರ ಯುವತಿ ಬಲಿ

ನವಜಾತ ಶಿಶುವಿಗೇ ಹೃದಯಾಘಾತ, ಕೊಪ್ಪಳದಲ್ಲಿ 26ರ ಯುವತಿ ಬಲಿ

ರಾಜ್ಯದಲ್ಲಿ ಹೃದಯಾಘಾತದಿಂದ ನಿನ್ನೆ ಒಂದೇ ದಿನ 5 ಜನರು ಬಲಿಯಾಗಿದ್ದಾರೆ. ಕೊಪ್ಪಳದಲ್ಲಿ 26ರ ಯುವತಿ, ಸವಣೂರಲ್ಲಿ 25ರ ಯುವಕ ಸೇರಿ ನಿನ್ನೆ 5 ಜನ ಹೃದಯಾ ಘಾತಕ್ಕೆ ಬಲಿಯಾಗಿದ್ದಾರೆ. ಕೊಪ್ಪಳದ 26 ವರ್ಷದ ಮಹಿಳೆ ಮಂಜುಳಾ ಹೂಗಾರ (26) ಹೃದಯಾಘಾತದಿಂದ ಬುಧವಾರ ಮೃತಪಟ್ಟರು.

Cyber Fraud: ಸೈಬರ್‌ ವಂಚನೆ, ದಯಾನಾಯಕ್‌ ಹೆಸರು ಬಳಸಿ ಭೂವಿಜ್ಞಾನಿಯಿಂದ ಲಕ್ಷಾಂತರ ಹಣ ಸುಲಿಗೆ

ಸೈಬರ್‌ ವಂಚನೆ, ದಯಾನಾಯಕ್‌ ಹೆಸರಿನಲ್ಲಿ ಭೂವಿಜ್ಞಾನಿಯಿಂದ ಹಣ ಸುಲಿಗೆ

Cyber Fraud: ಚಿಕ್ಕಬಳ್ಳಾಪುರದ ಸೈಬರ್ ಠಾಣೆ ಪೊಲೀಸರು, ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದರು. ಆರೋಪಿಗಳು ಕಾಂಬೋಡಿಯಾದಲ್ಲಿ ಕುಳಿತು ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Actress Ranya Rao Case: ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

actress ranya rao: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. ರನ್ಯಾ ಸೇರಿದಂತೆ 3 ಆರೋಪಿಗಳು 1 ವರ್ಷ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕಾಫಿಪೋಸಾ ಅಡ್ವೈಸರಿ ಬೋರ್ಡ್‌ನಿಂದ ಆದೇಶ ಹೊರಡಿಸಲಾಗಿದೆ.

Karnataka Rains: ‌ಆರೆಂಜ್‌ ಅಲರ್ಟ್; ಇಂದು ಕೊಡಗು, ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

ಇಂದು ಕೊಡಗು, ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

Karnataka Rains: ಜುಲೈ 17ರಂದು ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಮೈಸೂರು ಸೇರಿ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

Model Fashion 2025: ಮಾಡೆಲ್‌ ಹರಿಣಿ ಆನಂದ್‌ ಫ್ಯಾಷನ್‌ ಲೋಕದ ಕನಸು

ಮಾಡೆಲ್‌ ಹರಿಣಿ ಆನಂದ್‌ ಫ್ಯಾಷನ್‌ ಲೋಕದ ಕನಸು

Model Fashion 2025: ಫ್ಯಾಷನ್‌ ಕ್ಷೇತ್ರದಲ್ಲಿ ಒಂದಿಷ್ಟು ಸಾಧನೆ ಮಾಡುವ ಕನಸಿದೆ ಎನ್ನುತ್ತಾರೆ ಮಿಸ್‌ ಯೂನಿವರ್ಸ್ ಕರ್ನಾಟಕ 2025 ರ ಫಿನಾಲೆಗೆ ಆಯ್ಕೆಯಾಗಿರುವ ಮಾಡೆಲ್‌ ಹರಿಣಿ ಆನಂದ್‌. ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತಂತೆ ಹೇಳಿರುವ ಅವರು ತಮ್ಮ ಫ್ಯಾಷನ್‌ ಬಗ್ಗೆಯೂ ಮಾತನಾಡಿದ್ದಾರೆ.

Self Harming: ಮುಖ್ಯ ಪೇದೆ ನೇಣಿಗೆ ಶರಣು

ಮುಖ್ಯ ಪೇದೆ ನೇಣಿಗೆ ಶರಣು

ಕರ್ತವ್ಯದಲ್ಲಿದ್ದ ಮುಖ್ಯಪೇದೆ ರಾಜಶೇಕರ್ ಮಂಚೇನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ನಡೆಯುತ್ತಿದ್ದ ದೀಪೋತ್ಸವದ ಬಂದೋಬಸ್ತಿಗೆ ಹೋಗಿದ್ದರು,ನಂತರ ಅಲ್ಲಿಂದ ಮಂಚೇನ ಹಳ್ಳಿ ಪೊಲೀಸ್ ಠಾಣೆಗೆ ಮರಳಿದ ಅವರು ಠಾಣೆಯ ಸಮೀಪವಿರುವ ಪೊಲೀಸ್ ಕ್ವಾಟರ್ಸನ ವಿಶ್ರಾಂತಿ ಕೋಣೆಗೆ ತೆರಳಿ,ಕೋಣೆಯಲ್ಲಿದ್ದ ಸೀಲಿಂಗ್ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ

ಬಗರ್‌ಹುಕುಂ ಸಾಗುವಳಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ಸೋಮವಾರ ಸಭೆ - ಶಾಸಕ ಸಿ.ಬಿ.ಸುರೇಶ್‌ಬಾಬು

ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ಸೋಮವಾರ ಸಭೆ

ನಮ್ಮ ತಾಲ್ಲೂಕಿನ ಸಾರ್ವಜನಿಕರಿಗಾಗಿ ಒಂದು ವಿಶೇಷ ಯೋಜನೆಯನ್ನು ರೂಪಿಸಿದ್ದು ಅದರಂತೆ ತಾಲ್ಲೂಕಿನ ಎಲ್ಲಾ ಭಾಗದ ಜನರು ತಮ್ಮ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳಿಗೆ ಹಾಗೂ ಸಾಗುವಳಿ ಚೀಟಿ, ಬಗರ್‌ಹುಕುಂ, ಖಾತೆಗಳಿಗೆ ಸಂಬಂಧಿಸಿದಂತೆ ತಮ್ಮ ಸಮಸ್ಯೆಗಳಿಗಾಗಿ ಎಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಿನ ಸೋಮವಾರದಿಂದ ಪ್ರತಿ ಸೋಮವಾರ ಮಧ್ಯಾಹ್ನ ೨.೩೦ರಿಂದ ಮದ್ಯಾಹ್ನ ೪ ಗಂಟೆಯವರೆಗೆ ತಾಲ್ಲೂಕು ಆಡಳಿತ ಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಅವಕಾಶವಿದ್ದು ಇದನ್ನು ಸಾರ್ವಜನಿಕರು ಉಪ ಯೋಗಿಸಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ

SIRA (Tumkur) News: ಎಲ್ಲಾ ಚೆಕ್ ಡ್ಯಾಮ್ ಹಾಗೂ ಕೆರೆಗಳು ತುಂಬುವ ವಿಶ್ವಾಸವಿದೆ

ಎಲ್ಲಾ ಚೆಕ್ ಡ್ಯಾಮ್ ಹಾಗೂ ಕೆರೆಗಳು ತುಂಬುವ ವಿಶ್ವಾಸವಿದೆ

ಮಾರಮ್ಮನ ಗುಡಿಯ ಪಕ್ಕದಲ್ಲಿರುವ ಜಾಗದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚ ಮಾಡಿ ಸಮುದಾಯ ಭವನವನ್ನು ನಗರಸಭೆ ವತಿಯಿಂದ ನಿರ್ಮಿಸಲಾಗುತ್ತಿದೆ, ಈ ಭಾಗದಲ್ಲಿ ಬಡವರ ಸಂಖ್ಯೆಹೆಚ್ಚಾಗಿರುವ ಕಾರಣ ಶುಭ ಕಾರ್ಯಗಳಿಗೆ ಅನುಕೂಲವಾಗಲಿ ಎಂದು ಈ ನಿರ್ಧಾರ ಸರ್ಕಾರ ಕೈಗೊಂಡಿದೆ

Chikkaballapur News: ರೈತರ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು

ರೈತರ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಜಯಲಕ್ಷ್ಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪನೇಂದ್ರ, ಭೂಮಾಪನ ಇಲಾಖೆಯ ಸರ್ವೆಯರ್ ಖಾದರ್ ಸಾಬ್ ಸ್ಥಳಕ್ಕೆ ಭೇಟಿ ನೀಡಿ ಅಳತೆ ಕಾರ್ಯ ಮಾಡಿ ರೈತರ ಅನುಕೂಲಕ್ಕೆ ತಕ್ಕಂತೆ 8 ಅಡಿ ಕಾಲು ದಾರಿಯನ್ನು ಗುರುತಿಸಿ ತೆರವು ಮಾಡಿ ಕೊಟ್ಟ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿದರು.

Chikkaballapur News: ನೆಲಗಡಲೆ ಮೂಟೆ ಕಳವು ಸಮಗ್ರ ತನಿಖೆಗೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ಆಗ್ರಹ

ನೆಲಗಡಲೆ ಮೂಟೆ ಕಳವು ಸಮಗ್ರ ತನಿಖೆಗೆ ಡಿ.ಟಿ.ಮುನಿಸ್ವಾಮಿ ಆಗ್ರಹ

ಕೃಷಿ ಇಲಾಖೆಯ ಅಸಮರ್ಥ ವಿಧಾನ ಹಾಗೂ ಶಾಮೀಲಿನಿಂದಾಗಿ ಯಾವುದೇ ಭಯವಿಲ್ಲದೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕಾನೂನುಬಾಹಿರವಾಗಿ ಪಾತಪಾಳ್ಯದ ರೈತ ಸಂಪರ್ಕ ಕೇಂದ್ರದ ಗೋದಾ ಮಿಗೆ ನುಗ್ಗಿ ದೌರ್ಜನ್ಯ ದಿಂದ ನೆಲಗಡಲೆಯನ್ನು ದೋಚಿಕೊಂಡು ಹೋಗಿರುವುದು ತಾಲ್ಲೂಕಿನ ಆಡಳಿತ ಯಂತ್ರದ ದುಃಸ್ಥಿತಿಗೆ ಕನ್ನಡಿಯಾಗಿದೆ.

ಕಾಂಗ್ರೆಸ್ ನಾಯಕರಿಗೆ ಅಭಿವೃದ್ದಿ ಚಿಂತೆ ಇಲ್ಲ, ಕುರ್ಚಿ ಚಿಂತೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ನಾಯಕರಿಗೆ ಅಭಿವೃದ್ದಿ ಚಿಂತೆ ಇಲ್ಲ, ಕುರ್ಚಿ ಚಿಂತೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ, ಉಪಮುಖ್ಯ ಮಂತ್ರಿಗಳಿಗೆ ಮುಖ್ಯಮಂತ್ರಿಯಾಗುವ ಚಿಂತೆ ಸದಾ ದಿಲ್ಲಿ ಓಡಾಟ ಇದು ಸಾಧನೆಯೇ ? ಈ ರಾಜ್ಯದ ಬಡವರ, ರೈತರ, ಸಾಮಾನ್ಯ ಜನತೆಯ ಚಿಂತೆ ಇಲ್ಲದಾಗಿದೆ. ತಮ್ಮ ಚಿಂತೆಯಲ್ಲಿಯೇ ಕಾಂಗ್ರೆಸ್ ದಿನ ಕಳೆಯುತ್ತಿದೆ

ಸನ್‌ಫೀಸ್ಟ್ ವೌಜರ್ಸ್ ನ ರಾಯಭಾರಿಯಾಗಿ ತನ್ನ ಅನುಭವ ಹಂಚಿಕೊಂಡಿರುವ ನಟ ಶಾರುಖ್‌ ಖಾನ್

ಸನ್‌ಫೀಸ್ಟ್ ವೌಜರ್ಸ್ ನ ರಾಯಭಾರಿಯಾಗಿ ನಟ ಶಾರುಖ್‌ ಖಾನ್

ಸನ್‌ಫೀಸ್ಟ್ ವೌಜರ್ಸ್ ಶಾರುಖ್ ಖಾನ್ ಒಳಗೊಂಡ ಅತ್ಯಾಕರ್ಷಕ ಟಿವಿಸಿಯನ್ನು ಪ್ರಾರಂಭಿಸುತ್ತಿದೆ, ಅಲ್ಲಿ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ರುಚಿಗೆ ಜೀವ ತುಂಬು ತ್ತಾರೆ. ಓಗಿಲ್ವಿ ಪರಿಕಲ್ಪನೆಯ 'ಇಸ್ಕೆ ಹರ್ ಬೈಟ್ ಮೇ ಹೈ ವಾವ್!' ಎಂಬ ಟ್ಯಾಗ್‌ಲೈನ್, ಈ ಆಟವನ್ನು ಬದಲಾಯಿಸುವ ಬೈಟ್‌ನ ಸಾರ ವನ್ನು ಸೆರೆ ಹಿಡಿಯುತ್ತದೆ.

Theft case: ಕಲಬುರಗಿಯಲ್ಲಿ ಹಾಡಹಗಲೇ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಕದ್ದ ಕಳ್ಳರು!

ಕಲಬುರಗಿಯಲ್ಲಿ ಹಾಡಹಗಲೇ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಕದ್ದ ಕಳ್ಳರು!

Theft case: ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆ ಬಳಿಯ ನಾಗಾರ್ಜುನ ಬಾರ್ ಬಳಿ ಕಳ್ಳತನ ನಡೆದಿದೆ. ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿದೆ. ಕಳ್ಳರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Just Married Movie: ಜಸ್ಟ್ ಮ್ಯಾರೀಡ್ ಚಿತ್ರದ ʼಮಾಂಗಲ್ಯಂ ತಂತು ನಾನೇನಾʼ ಹಾಡಿಗೆ ಅಭಿಮಾನಿಗಳು ಫಿದಾ

ಜಸ್ಟ್ ಮ್ಯಾರೀಡ್ ಚಿತ್ರದ ʼಮಾಂಗಲ್ಯಂ ತಂತು ನಾನೇನಾʼ ಹಾಡು ಬಿಡುಗಡೆ

Just Married Movie: ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಜಸ್ಟ್ ಮ್ಯಾರೀಡ್ ಚಿತ್ರದ ʼಮಾಂಗಲ್ಯಂ ತಂತು ನಾನೇನಾʼ ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Bengaluru Power Cut: ಜು.17, 18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಜು.17, 18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 66/11 ಕೆ.ವಿ. ಎಲ್‌ಆರ್‌ ಬಂಡೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜು.17ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

KGF Babu: ಮಗ, ಆತನ ಮಾವನಿಂದ 45 ಕೋಟಿ ವಂಚನೆ: ಕೆಜಿಎಫ್‌ ಬಾಬು ಆರೋಪ

ಮಗ, ಆತನ ಮಾವನಿಂದ 45 ಕೋಟಿ ವಂಚನೆ: ಕೆಜಿಎಫ್‌ ಬಾಬು ಆರೋಪ

KGF Babu: ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಉದ್ಯಮಿ ಕೆಜಿಎಫ್‌ ಬಾಬು ಸುಳ್ಳು ಭರವಸೆ ನೀಡಿದ್ದಾರೆ ಎಂದು ಅವರ ಬೆಂಗಳೂರಿನ ನಿವಾಸ ಮುಂದೆ ಕ್ಷೇತ್ರದ ಜನರು ಪ್ರತಿಭಟನೆ ಮಾಡಿದ್ದಾರೆ. ಮತ್ತೊಂದೆಡೆ ತನಗೆ ಮಗ ಮತ್ತು ಅವನ ಮಾವನೇ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕೆಜಿಎಫ್‌ ಬಾಬು ಆರೋಪಿಸಿದ್ದಾರೆ.

NEET UG 2025: ನೀಟ್‌ ಯುಜಿ 2025 ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ನೀಟ್‌ ಯುಜಿ 2025 ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

NEET UG 2025: ಕರ್ನಾಟಕದ ವಿವಿಧ ವೈದ್ಯಕೀಯ, ದಂತ, ಆಯುರ್ವೇದ, ಯುನಾನಿ, ಹೋಮಿಯೋಪಥಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ನೀಟ್‌ ಯುಜಿ 2025 ಕೌನ್ಸೆಲಿಂಗ್‌ಗೆ ನೋಂದಣಿ ಮಾಡಿಸಿ, ದಾಖಲೆಗಳ ಪರಿಶೀಲನೆ ಮಾಡಿಸಬೇಕಾಗುತ್ತದೆ ಎಂದು ಕೆಇಎ ತಿಳಿಸಿದೆ.

Mangaluru News: ಪತ್ನಿ ಮೇಲೆಯೇ ಅತ್ಯಾಚಾರ ಎಸಗಲು ಪೊಲೀಸ್‌ ಪೇದೆಗೆ ಸಹಕರಿಸಿದ ಪತಿ; ಇಬ್ಬರು ಅರೆಸ್ಟ್‌

ಪತ್ನಿ ಮೇಲೆಯೇ ಅತ್ಯಾಚಾರ ಎಸಗಲು ಪೊಲೀಸ್‌ ಪೇದೆಗೆ ಸಹಕರಿಸಿದ ಪತಿ!

Physical Abuse: ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಕೆಲವೇ ವರ್ಷ ಆಗಿತ್ತು. ಪತ್ನಿಯ ಖಾಸಗಿ ವಿಡಿಯೋವನ್ನು ಪತಿ ಸೆರೆ ಹಿಡಿದು, ಬ್ಲ್ಯಾಕ್‌ಮೇಲ್​​​ ಕೂಡ ಮಾಡುತ್ತಿದ್ದ. ತಾನು ಹೇಳಿದವರ ಜತೆ ಮಲಗಬೇಕು ಅಂತ ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಪತ್ನಿ ಮೇಲೆ ಅತ್ಯಾಚಾರ ಎಸಗಲು ಪೊಲೀಸ್‌ ಪೇದೆಗೆ ಸಹಕರಿಸದ ಆರೋಪ ಕೇಳಿಬಂದಿದೆ.

ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ ಯಶಸ್ವಿ: ಸಿಎಂ ಸಿದ್ದರಾಮಯ್ಯ

ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ ಯಶಸ್ವಿ: ಸಿಎಂ

AICC OBC advisory council meeting: ನ್ಯಾಯ ಯೋಧರಾದ ರಾಹುಲ್ ಗಾಂಧಿ ಅವರ ಧೀರ ಮತ್ತು ನಿರ್ಭಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ನಿರ್ಧರಿಸಿ, ಹೋರಾಡಲು ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Yadgir Case: ಗಂಡನನ್ನು ನದಿಗೆ ತಳ್ಳಿದ ಆರೋಪ ಪ್ರಕರಣ; ಮೂರೇ ತಿಂಗಳಿಗೆ ಮುರಿದುಬಿತ್ತು ದಾಂಪತ್ಯ!

ಗಂಡನನ್ನು ನದಿಗೆ ತಳ್ಳಿದ ಪ್ರಕರಣ; ಮೂರೇ ತಿಂಗಳಿಗೆ ಮುರಿದುಬಿತ್ತು ದಾಂಪತ್ಯ!

Yadgir Case: ಗಂಡನನ್ನು ಪತ್ನಿಯೇ ನದಿಗೆ ತಳ್ಳಿದ ಆರೋಪ ಪ್ರಕರಣದಲ್ಲಿ ತನನ್ನು ಸಾಯಿಸಲು ಯತ್ನಿಸಿದ್ದಾಳೆಂದು ಪತ್ನಿ ಗದ್ದೆಮ್ಮ ಮೇಲೆ ಪತಿ ತಾತಪ್ಪ ಆರೋಪ ಮಾಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪತಿ ತಾತಪ್ಪ, ಗದ್ದೆಮ್ಮನಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.