ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Bengaluru cylinder blast: ಬೆಂಗಳೂರು ಸಿಲಿಂಡರ್‌ ಸ್ಫೋಟ ಪ್ರಕರಣ; ಗಾಯಗೊಂಡಿದ್ದ ತಾಯಿ-ಮಗು ಸಾವು

ಬೆಂಗಳೂರಿನ ಮನೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ತಾಯಿ-ಮಗು ಸಾವು

ಬೆಂಗಳೂರು ನಗರದ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಹಾಗೂ ಮೂರು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಗಾಲ ಹಿನ್ನೆಲೆ ಶಿಕಾರಿಪುರದ ಹರಿಗೆ ಗ್ರಾಮದಲ್ಲಿ ಭೀಗರ ಊಟಕ್ಕೆ ನಿಷೇಧ; ನಿಯಮ ಮೀರಿದ್ರೆ 1 ಲಕ್ಷ ದಂಡ!

ಬರಗಾಲ ಹಿನ್ನೆಲೆ ಹರಿಗೆ ಗ್ರಾಮದಲ್ಲಿ ಭೀಗರ ಊಟಕ್ಕೆ ನಿಷೇಧ

Beegara Oota Ban: ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಬಡ – ಮಧ್ಯಮ ಕುಟುಂಬಗಳು ಪ್ರತಿಷ್ಠೆಗಾಗಿ ಸಾಲ ಮಾಡಿ, ಬೀಗರೂಟ ಆಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಲ್ಲದೆ ಈಗ ತೀವ್ರ ಬರಗಾಲ ಹಿನ್ನೆಲೆ ಗ್ರಾಮಸ್ಥರು ಸಭೆ ನಡೆಸಿ ಬೀಗರ ಊಟಕ್ಕೆ ನಿಷೇಧ ಹೇರಲು ನಿರ್ಣಯ ಕೈಗೊಂಡಿದ್ದಾರೆ.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ಗೆ ಅರ್ಜಿ ಆಹ್ವಾನ; ಅಕ್ಟೋಬರ್ 31 ಕೊನೆಯ ದಿನ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ಗೆ ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಿದ್ದುಪಡಿ ಮಾಡಲಾದ ಹೊಸ ಮಾರ್ಗಸೂಚಿಯನ್ವಯ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನವಾಗಿದೆ.

ತುಮಕೂರಿನಲ್ಲಿ ಅಕ್ಟೋಬರ್‌ 9ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ದುಶ್ಚಟ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಸಮಾವೇಶ

ತುಮಕೂರಿನಲ್ಲಿ ಅ.9ರಂದು ದುಶ್ಚಟ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಸಮಾವೇಶ

Tumkur News: ತುಮಕೂರು ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಅ. 9ರಂದು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್. ಕಾಮರಾಜ್ ತಿಳಿಸಿದ್ದಾರೆ.

Karnataka drought: ಬರ ಹಿನ್ನೆಲೆ ರೈತರ ಸಾಲ ವಸೂಲಿ ಮುಂದೂಡಿಕೆ; ಬ್ಯಾಂಕ್‌ ನೋಟಿಸ್‌ಗೆ ಆತಂಕಪಡಬೇಕಿಲ್ಲ ಎಂದ ಡಿಸಿಎಂ

ಬರ ಪರಿಸ್ಥಿತಿಯ ಹಿನ್ನೆಲೆ ರೈತರ ಸಾಲ ವಸೂಲಿ ಮುಂದೂಡಿಕೆ: ಡಿಸಿಎಂ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಸಾಲ ವಸೂಲಿ ವಿಚಾರದಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಸಾಲ ವಸೂಲಿಯನ್ನು ಮುಂದೂಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದ್ದು, ಸಾಲಗಳನ್ನು ಮರುಹೊಂದಿಕೆ ಮತ್ತು ಮರುಹಣಕಾಸು ಮಾಡುವ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ತಿಳಿಸಿದ್ದಾರೆ.

Half Helmet Ban: ಹಾಫ್ ಹೆಲ್ಮೆಟ್‌ ಬಳಕೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದ ರಾಜ್ಯ ಸರ್ಕಾರ

ಹಾಫ್ ಹೆಲ್ಮೆಟ್‌ ಬಳಕೆ, ಮಾರಾಟಕ್ಕೆ ನಿಷೇಧ ಹೇರಿದ ರಾಜ್ಯ ಸರ್ಕಾರ

ರಾಜ್ಯ ಸಾರಿಗೆ ಇಲಾಖೆಯಿಂದ ಹಾಫ್‌ ಹೆಲ್ಕೆಟ್‌ಗಳ ಬಳಕೆ ನಿಷೇಧ ಮಾಡಲಾಗಿದೆ. ಇನ್ನುಮುಂದೆ ಸವಾರರು BIS/ISI ಮಾನದಂಡದ ಹೆಲೈಟ್ ಧರಿಸುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಹಾಫ್ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ಮೇಲೂ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

Chikkaballapur News: ಕಲಿಕಾ ಕೇಂದ್ರದಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ: ಶಿಕ್ಷಣ ತಜ್ಞರ ಕರೆ

ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಗುಣಮಟ್ಟದ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ವಿವೇಕಾನಂದ ಸಾಮಾಜಿಕ ಸಂಸ್ಥೆ ಹಾಗೂ ತರಬೇತಿ ಸಂಸ್ಥೆಯ ವತಿಯಿಂದ ಆರಂಭಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಸ್ನೇಹಿ ಗೃಹಾಲಯ ಮತ್ತು ಕಲಿಕಾ ಕೇಂದ್ರದಲ್ಲಿ ‘ಕಲಿಕಾ ಸಂಭ್ರಮ’ ಕಾರ್ಯಕ್ರಮ ನಡೆಯಿತು.

Hospet News: ಸಮುದಾಯ ಆರೋಗ್ಯ ಅಧಿಕಾರಿಗಳು ಪಿಎಚ್ಸಿಒ, ಎಚ್ಐಒಗಳ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿರುವುದನ್ನು ಖಂಡನೀಯ: ಎಂ.ಧರ್ಮನಗೌಡ

ಅಸಂಬದ್ಧ ಹೇಳಿಕೆ ನೀಡಿರುವುದನ್ನು ಖಂಡನೀಯ

ಸಂಘದ ಕಲಬುರ್ಗಿ ವಿಭಾಗೀಯ ಕಾರ್ಯಾಧ್ಯಕ್ಷ ಎಂ.ಧರ್ಮನಗೌಡ ಮಾತನಾಡಿ, ಬೆಂಗಳೂರಿನಲ್ಲಿ ಮುಷ್ಕರ ನಡೆಸುತ್ತಿರುವ ಕೆಲವು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಟಿಯುಸಿ ನ ಗೌರವಾ ಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ ಪಿಎಚ್ಸಿಇ ಮತ್ತು ಎಚ್ಐಒ ಹುದ್ದೆಗಳನ್ನು ರದ್ದು ಪಡಿಸಿ ಎಂದು ಹಾಗೂ ಖಾಯಂ ನೌಕರರು ಏನೂ ಕೆಲಸ ಮಾಡುತ್ತಿಲ್ಲ

ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಲಿ: ಯುವ ಕಾಂಗ್ರೆಸ್ ಆಗ್ರಹ

ಪ್ರದೀಪ್ ಈಶ್ವರ್ ವಿರುದ್ಧ ದೆಹಲಿವರೆಗೆ ಸೈಕಲ್ ಜಾಥಾ: ರಾಗಾಗೆ ದೂರು

ರಾಜ್ಯದಲ್ಲಿ ಎಂ.ಎಸ್. ಸೀತಾರಾಮ್ ಅವರ ಕುಟುಂಬಕ್ಕೆ ಗೌರವವಿದೆ. ಅವರ ಪುತ್ರ ಹಾಗೂ ಕಳೆದ ಲೋಕಸಭಾ ಚುನಾವಣೆಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಏಕವಚನ ದಲ್ಲಿ ಮಾತನಾಡಿರುವುದು ಸರಿಯಲ್ಲ. ರಕ್ಷಾ ರಾಮಯ್ಯ ಕ್ಷೇತ್ರಕ್ಕೆ ಏಕೆ ಬರುತ್ತಾರೆ ಎಂದು ಪ್ರಶ್ನಿಸುವ ಅಧಿಕಾರ ಶಾಸಕರಿಗೆ ಇಲ್ಲ

ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ ಪ್ರಕರಣ; ಪತ್ನಿಯಿಂದ ಬಯಲಾಯ್ತು ಡಿಐಜಿ ಕಳ್ಳಾಟ

ಡಿಐಜಿ ಸೋಮಶೇಖರ್‌ ಕಳ್ಳಾಟ ಬಯಲಾಗಿದ್ದೇಗೆ?

ಸುಪ್ರೀಂ ಕೋರ್ಟ್‌ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಕಾರಾಗೃಹ ಇಲಾಖೆಯ ಡಿಐಜಿ (DIG) ಎಂ. ಸೋಮಶೇಖರ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದಲ್ಲಿ ಕೆಎಎಸ್‌ನಿಂದ ಐಎಎಸ್ ಬಡ್ತಿ ಅವಕಾಶ ಕುಸಿತ: ಐಎಎಸ್‌-ಕೆಎಎಸ್‌ ನಡುವೆ ಸದ್ದಿಲ್ಲದ ಹುದ್ದೆ ಗುದ್ದಾಟ

ಐಎಎಸ್‌- ಕೆಎಎಸ್‌ ನಡುವೆ ಸದ್ದಿಲ್ಲದ ಹುದ್ದೆ ಗುದ್ದಾಟ

ಇನ್ನು ಕೆಲವರ ಅಧಿಕಾರಿಗಳು ಇದು ‘ಐಎಎಸ್ ಲಾಬಿ’ ಎಂದು ಹೇಳುತ್ತಿದ್ದರೆ, ಅನೇಕರು ಇದು ಸರಕಾರದ ಜಾಣತನದ ವಂಚನೆ ಎನ್ನುವುದು ಟೀಕಿಸುತ್ತಿದ್ದಾರೆ. ಸದ್ಯ ಕೆಲವು ಕೆಎಎಸ್ ಅಧಿಕಾರಿಗಳು ನಿರ್ಲಕ್ಷದ ವಿರುದ್ಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಕೆಇಟಿ) ಮೊರೆ ಹೋಗಿದ್ದು, ನ್ಯಾಯ ಮಂಡಳಿ ಆರು ವಾರಗಳೊಳಗೆ ಸರಕಾರ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.

ಜಿಡ್ಡುಗಟ್ಟಿದ ಸಮಾಜಕ್ಕೆ ಅಂಬೇಡ್ಕರ್‌ ಪರಿಹಾರ: ಡಿ.ಎಸ್.ವೀರಯ್ಯ ವಿರಚಿತ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಕೃತಿ ಲೋಕಾರ್ಪಣೆ ವೇಳೆ ಕೇರಳ ರಾಜ್ಯಪಾಲ ಅರಳೇಕರ್

ಜಿಡ್ಡುಗಟ್ಟಿದ ಸಮಾಜಕ್ಕೆ ಅಂಬೇಡ್ಕರ್‌ ಪರಿಹಾರ

ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.ಎಸ್.ವಿ.ಫೌಂಡೇಶನ್ ಆಯೋಜಿಸಿದ್ದ ಡಿ.ಎಸ್.ವೀರಯ್ಯ(D S Veerayya) ವಿರಚಿತ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯ ದೇಹದ ಪ್ರತಿಯೊಂದು ಅಂಗಾಂಗ ಪರೀಕ್ಷಿಸಿ ರೋಗ ನಿರ್ಣಯ ಮಾಡುವಂತೆ ಅಂಬೇಡ್ಕರ್ ಅವರು ಅಂದಿನ ಜಿಡ್ಡುಗಟ್ಟಿದ್ದ ಭಾರತೀಯ ಸಮಾಜದ ಸಮಸ್ಯೆ ಗುರುತಿಸಿ ಪರಿಹಾರದ ಮಾರ್ಗ ತೋರಿಸಿದರು.

ಕರ್ನಾಟಕದ  ಕರಾವಳಿ, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಅಕ್ಟೋಬರ್ 7 ಮತ್ತು 8ರಂದು ಕರಾವಳಿ ಕರ್ನಾಟಕದ ಕೆಲವು ಕಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಮಳೆ ಹಾಗೂ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 2 ವರ್ಷದ ಮಗು ಸಾವು, ಐವರಿಗೆ ಗಂಭೀರ ಗಾಯ

ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಭೀಕರ ಅಪಘಾತ

ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ಚಿನ್ನಸಂದ್ರ ಗ್ರಾಮದ ಹೋಟೆಲ್ ಒಂದರ ಬಳಿ ತಲುಪಿದಾಗ ಜೋರು ಮಳೆ ಸುರಿಯುತ್ತಿತ್ತು. ಮಳೆಯ ಪರಿಣಾಮ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಚಾಲಕನಿಗೆ ಸ್ಪಷ್ಟವಾಗಿ ಕಾಣಿಸದೆ ಇದ್ದುದ್ದರಿಂದ, ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಡಿವೈಡರ್‌ಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ಭೀಕರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Volleyball: ಜಿಲ್ಲಾಮಟ್ಟದ ವಾಲಿಬಾಲ್‌ನಲ್ಲಿ ವಾಸವಿ ಬಾಲಕಿಯರ ಭರ್ಜರಿ ಗೆಲುವು

ಜಿಲ್ಲಾಮಟ್ಟದ ವಾಲಿಬಾಲ್‌ನಲ್ಲಿ ವಾಸವಿ ಬಾಲಕಿಯರ ಭರ್ಜರಿ ಗೆಲುವು

ವಾಸವಿ ವಿದ್ಯಾಸಂಸ್ಥೆಯ ಬಾಲಕಿಯರು ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಕ್ರೀಡೆಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಭವಿಷ್ಯ ರೂಪಿಸಿಕೊಳ್ಳುವ ಅವಕಾಶವಾಗಿ ಪರಿಗಣಿಸಬೇಕು. ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡುವುದರಿಂದ ದೈಹಿಕ ಆರೋಗ್ಯದೊಂದಿಗೆ ಆತ್ಮವಿಶ್ವಾಸ, ಶಿಸ್ತು, ಮಾನಸಿಕ ಸ್ಥೈರ್ಯ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.

K M Suresh: ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ನಾಮಪತ್ರ ಸಲ್ಲಿಕೆ

ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ನಾಮಪತ್ರ ಸಲ್ಲಿಕೆ

ಆಗ್ನೇಯ ಪದವೀಧರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್(K M Suresh) ಅವರು ಬೆಂಗಳೂರಿನ ಲಾಲ್‌ಬಾಗ್ ಪಶ್ಚಿಮ ದ್ವಾರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಉಪ ಚುನಾವಣಾಧಿಕಾರಿ ಜಿ. ಪ್ರಭು ಅವರಿಗೆ ನಾಮಪತ್ರ ಸಲ್ಲಿಸಿದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮ ಚಂದ್ರಗೌಡ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಯಿತು.

Pradeep Eshwar: ನಿಮ್ಮವನು ಅಲ್ಲವೆಂಬ ಕಾರಣಕ್ಕೆ ನನ್ನನ್ನು ತಡೆಯುವ ಪ್ರಯತ್ನ : ಪ್ರದೀಪ್ ಈಶ್ವರ್ ಆರೋಪ

ನಿಮ್ಮವನು ಅಲ್ಲವೆಂಬ ಕಾರಣಕ್ಕೆ ನನ್ನನ್ನು ತಡೆಯುವ ಪ್ರಯತ್ನ

ಬೆಂಗಳೂರಿನಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ತಮ್ಮ ರಾಜಕೀಯ ಅನುಭವ ಹಾಗೂ ವಿವಿಧ ರಾಜಕೀಯ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಮಾಜ ಸೇವೆಯ ಮೂಲಕ ಕೆ.ವಿ.ನವೀನ್ ಕಿರಣ್ 48ನೇ ಹುಟ್ಟುಹಬ್ಬ ಆಚರಣೆ: ರಕ್ತದಾನದಿಂದ ಸಾವಿರಾರು ಜೀವಗಳಿಗೆ ನೆರವು; ವಾರವಿಡೀ ಜನಪರ ಕಾರ್ಯಕ್ರಮ

ರಕ್ತದಾನದಿಂದ ಸಾವಿರಾರು ಜೀವಗಳಿಗೆ ನೆರವು; ವಾರವಿಡೀ ಜನಪರ ಕಾರ್ಯಕ್ರಮ

ಕಳೆದ ಎರಡು ದಶಕಗಳಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ತುರ್ತು ಸಂದರ್ಭಗಳಲ್ಲಿ ಅನೇಕ ಜೀವಗಳ ರಕ್ಷಣೆಗೆ ನೆರವಾಗಿರುವ ಕೆ.ವಿ. ಹಾಗೂ ಪಂಚಗಿರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ 48ನೇ ಹುಟ್ಟುಹಬ್ಬವನ್ನು ಈ ಬಾರಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ರೇಣುಕಾಸ್ವಾಮಿ ಕೊಲೆ ಕೇಸ್‌; ಮಾಫಿ ಸಾಕ್ಷಿ ಸಂಬಂಧ ನಟ ದರ್ಶನ್‌ ಸಲ್ಲಿಸಿದ್ದ ಎರಡು ಅರ್ಜಿಗಳು ವಜಾ

ರೇಣುಕಾಸ್ವಾಮಿ ಕೇಸ್‌; ನಟ ದರ್ಶನ್‌ ಸಲ್ಲಿಸಿದ್ದ ಎರಡು ಅರ್ಜಿಗಳು ವಜಾ

ಮಾಫಿ ಸಾಕ್ಷಿ ದಾಖಲು ವೇಳೆ ಮೊದಲ ದಿನ ಒಂದು ವಿಚಾರ ಹೇಳಲು ಮರೆತಿದ್ದೆ ಎಂದು ಪ್ರದೋಷ್ ಎರಡನೇ ದಿನ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯನ್ನು ಮಾಫಿ ಸಾಕ್ಷಿಯಲ್ಲಿ ದಾಖಲು ಮಾಡಿಕೊಳ್ಳಬಾರದು ಎಂದು ದರ್ಶನ್‌ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಹಿಮನಾಡಿನ ಯಾಕ್ ಹಾಗೂ ಮರುಭೂಮಿಯ ಒಂಟೆ ಒಂದೇ ಸೂರಿನಡಿ: ಶಿರಸಿಯಲ್ಲಿ ವಿಸ್ಮಯ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್!

ಶಿರಸಿಯಲ್ಲಿ ವಿಸ್ಮಯ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್!

ಹಿಮಾಲಯದ ಅತಿ ಶೀತಲ ಪ್ರದೇಶದ ಯಾಕ್ ಪ್ರಾಣಿಗಳನ್ನು ದಕ್ಷಿಣ ಭಾರತಕ್ಕೆ ಕರೆತಂದು, ವರ್ಷದ ಮೂರೂ ಋತುಗಳನ್ನು ಯಶಸ್ವಿಯಾಗಿ ಕಳೆದು ಸುಮಾರು ಹತ್ತು ತಿಂಗಳಿನಿಂದ ಅವುಗಳನ್ನು ಕಾಪಾಡುತ್ತಿರುವುದರ ಜತೆಗೆ, ಇದೀಗ ಮರುಭೂಮಿಯ ಒಂಟೆಯನ್ನೂ ಅದೇ ಪರಿಸರದಲ್ಲಿ ಜೋಪಾನ ಮಾಡುತ್ತಿದ್ದಾರೆ ಶಿರಸಿಯ ಪ್ರಾಣಿ ಹಾಗೂ ಪಕ್ಷಿ ತಜ್ಞ ರಾಜೇಂದ್ರ ಬಿ. ಸಿರಸಿಕರ್. ಇವರ ಈ ಅಪರೂಪದ ಸಾಧನೆ ಗುರುತಿಸಿ ಪ್ರತಿಷ್ಠಿತ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಸಂಸ್ಥೆಯು 'IBR Achiever' ಗೌರವ ನೀಡಿ ಸನ್ಮಾನಿಸಿದೆ.

ಬೆಂಗಳೂರಿನಲ್ಲಿ ಅ.11ರಿಂದ 21ವರೆಗೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ 'ನವರಾತ್ರ ನಮಸ್ಯಾ' ಮಹೋತ್ಸವ

ಬೆಂಗಳೂರಿನಲ್ಲಿ ಅ.11 ರಿಂದ 'ನವರಾತ್ರ ನಮಸ್ಯಾ' ಮಹೋತ್ಸವ

ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನವರಾತ್ರಿ ವ್ರತವು 'ನವರಾತ್ರ ನಮಸ್ಯಾ' ಎಂಬ ಹೆಸರಿನೊಂದಿಗೆ ಅಕ್ಟೋಬರ್ 11 ರಿಂದ 21ವರೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಮೂವರ ಸಾವು, ಟೈರ್‌ ಸ್ಫೋಟದಿಂದ ದುರಂತ!

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಮೂವರ ಸಾವು!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಕೆ.ಆರ್. ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ದಿಢೀರನೆ ಸಿಡಿದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಗೆ ಹಿಂಬದಿ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀ ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಹಂಪಿ ಕ್ಷೇತ್ರ ಭೇಟಿ; ಶ್ರೀ ವಿರೂಪಾಕ್ಷೇಶ್ವರ ದರ್ಶನ ಹಾಗೂ ವಿಜಯನಗರದ ವೈಭವಾವಲೋಕನ

ಶ್ರೀ ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಹಂಪಿ ಕ್ಷೇತ್ರ ಭೇಟಿ

Vijayanagara News: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಅವರ ಕರಕಮಲ ಸಂಜಾತಾರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವಾದ ಹಂಪಿಗೆ ಭೇಟಿ ನೀಡಿ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರ‍್ಯಾಪಿಡೋ ಸವಾರಿಯ ಜತೆ ಬೆಂಗಳೂರಿನಲ್ಲಿ ಹಾಲಿನ ಬ್ಯುಸಿನೆಸ್‌ಗೆ ಮಾರ್ಕೆಟಿಂಗ್ ರಿಸರ್ಚ್: ಒಡಿಶಾ ಯುವಕನ ವಿಶಿಷ್ಟ ಸಾಹಸ

ಡೇರಿ ವ್ಯವಹಾರಕ್ಕಾಗಿ ರ‍್ಯಾಪಿಡೋ ಓಡಿಸಲು ಮುಂದಾದ ಐಟಿ ಉದ್ಯೋಗಿ

Viral Video: ಒಡಿಶಾ ಮೂಲದ ಮಾಜಿ ಐಟಿ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ಸ್ವಂತ ಹಾಲಿನ ಫಾರ್ಮ್ ಉದ್ಯಮವಾಗಿ ಬೆಳೆಸುವ ಯೋಜನೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ರ‍್ಯಾಪಿಡೋ ಓಡಿಸುತ್ತ ಹಾಲಿನ ಉತ್ಪನ್ನಗಳ ಬಗ್ಗೆ ಮಾರ್ಕೆಟಿಂಗ್ ರಿಸರ್ಚ್ ಕೂಡ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Loading...