ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ದಾವಣಗೆರೆಯಲ್ಲಿ ರಂಜಾನ್‌ ನಮಾಜ್‌ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಮಂದಿಗೆ ಗಾಯ

ರಂಜಾನ್ ನಮಾಜ್‌ ವೇಳೆ ಹೆಜ್ಜೇನು ದಾಳಿ; 25 ಮಂದಿಗೆ ಗಾಯ

Davangere Honey bee attack: ದಾವಣಗೆರೆ ತಾಲೂಕಿನ ಆನಗೋಡು ಬಳಿ ಘಟನೆ ನಡೆದಿದೆ. ರಂಜಾನ್‌ ಹಿನ್ನೆಲೆಯಲ್ಲಿ ರಂಜಾನ್ ಪ್ರಯುಕ್ತ 800ಕ್ಕೂ ಅಧಿಕ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ವೇಳೆ ಹೆಜ್ಜೇನು ದಾಳಿ ನಡೆಸಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸದ್ಗುರು ಸನ್ನಿಧಿಯಲ್ಲಿ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕರು

ಸದ್ಗುರು ಸನ್ನಿಧಿಯಲ್ಲಿ ನೆರವೇರಿದ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ

Saptarishi Avahanam ritual: ಕಾಶಿ ವಿಶ್ವನಾಥ ದೇವಾಲಯದಲ್ಲಿ ನಡೆಯುವ ಮಾದರಿಯಲ್ಲಿ ವಸಂತಕಾಲದ ವಿಷುವತ್ ಸಂಕ್ರಾಂತಿಯ ಸುಸಂದರ್ಭದಲ್ಲಿ ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ 'ಸಪ್ತಋಷಿ ಆವಾಹನಂ' ಪ್ರಕ್ರಿಯೆಯನ್ನು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರು ಶುಕ್ರವಾರ ನಡೆಸಿಕೊಟ್ಟಿದ್ದಾರೆ.

Karnataka bypolls: ಉಪಚುನಾವಣೆ ಟಿಕೆಟ್‌; ಮುಸಲ್ಮಾನ ಬಂಧುಗಳ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ ಎಂದ ಛಲವಾದಿ ನಾರಾಯಣಸ್ವಾಮಿ

ಮುಸಲ್ಮಾನರ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ: ಛಲವಾದಿ

Chalavadi Narayanaswamy: ಹಿಂದೆ ಕಾಂಗ್ರೆಸ್ಸಿನಲ್ಲಿ ಮಂಡ್ಯ ಹೊರತುಪಡಿಸಿ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡುತ್ತಿದ್ದರು. ಈಗ ಎಲ್ಲ ಕಡೆಯಲ್ಲಿ ಅವರಿಗೆ ಕಾಂಗ್ರೆಸ್ ಕೊಕ್ ಕೊಡುತ್ತ ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

Madhugiri News: ರಂಜಾನ್‌ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗಿ; ಪರಸ್ಪರ ಗೌರವ, ಐಕ್ಯತೆಯಿಂದ ಬಾಳಲು ಕರೆ

ರಂಜಾನ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗಿ

Madhugiri News: ಮಧುಗಿರಿ ಪಟ್ಟಣದ ಶಿರಾ ಗೇಟ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಭಾನುವಾರ ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಈದ್ಗಾ ಮೈದಾನದಲ್ಲಿ ಶಾಶ್ವತವಾಗಿ ಶೆಡ್ ನಿರ್ಮಾಣ ಮಾಡಿಸಲಾಗುವುದು. ಇದರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

Bengaluru Water Bill Relief: ಬೆಂಗಳೂರು ಜಲಮಂಡಳಿಯಿಂದ ಗುಡ್‌ನ್ಯೂಸ್‌; ನೀರಿನ ಬಿಲ್ ಬಾಕಿ ಪಾವತಿಗೆ OTS ಯೋಜನೆ ಜಾರಿ, ಶೇ.100 ಬಡ್ಡಿ ಮನ್ನಾ

ಬಿಡಬ್ಲ್ಯುಎಸ್‌ಎಸ್‌ಬಿ ನೀರಿನ ಬಿಲ್ ಬಾಕಿ ಪಾವತಿಗೆ ಶೇ.100 ಬಡ್ಡಿ ಮನ್ನಾ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 851.33 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ಹಾಗೂ ಬಡ್ಡಿ ರೂ. 311.90 ಕೋಟಿ ಸೇರಿದೆ. ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು 3 ತಿಂಗಳ ಅವಧಿಯ 𝗢𝗧𝗦 ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ

“ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ

ಮಕ್ಕಳು ಮತ್ತು ವಯಸ್ಕರಿಗೆ ದೈನಂದಿನ ಕಬ್ಬಿಣದ ಅವಶ್ಯಕತೆ 11 ರಿಂದ 32 ಮಿಗ್ರಾಂ ವರೆಗೆ ಇರಲಿದೆ. ಇದು 2 ರಿಂದ 7 ಬಟ್ಟಲು ಪಾಲಕ್ ಅಥವಾ 7 ರಿಂದ 21 ಬೀಟ್‌ರೂಟ್‌ ತಿನ್ನುವುದಕ್ಕೆ ಸಮಾನ. ಆದರೆ, ಇಷ್ಟು ಪ್ರಮಾಣದಲ್ಲಿ ತಿನ್ನಲು ಸಾಧ್ಯವಿಲ್ಲ. ಪ್ರಸ್ತುತ ಐಟಿಸಿ ಪರಿಚಯಿಸಿರುವ ಐರನ್‌ ಶಕ್ತಿ ಸಾಲ್ಟ್‌ ನ ಒಂದು ಟೀ ಚಮಚದಲ್ಲಿ ಶೇ. 25ರಷ್ಟು ಕಬ್ಬಿಣಾಂಶ ಒದಗಿಸಲಿದೆ

ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಭಾರತದ ಮೊದಲ DCGI-ಅನುಮೋದಿತ ಸೆಮಾಗ್ಲುಟೈಡ್ ಇಂಜೆಕ್ಷನ್ 'ಒಬೆಡಾ®' ಅನ್ನು ಟೈಪ್ 2 ಮಧುಮೇಹಕ್ಕೆ ಬಿಡುಗಡೆ

ಭಾರತದ ಮೊದಲ DCGI-ಅನುಮೋದಿತ ಟೈಪ್ 2 ಮಧುಮೇಹಕ್ಕೆ ಬಿಡುಗಡೆ

ಡಾ.ರೆಡ್ಡೀಸ್ ಜೆನೆರಿಕ್ ಸೆಮಾಗ್ಲುಟೈಡ್‌ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆಯನ್ನು ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ. ಈ ಬಿಡುಗಡೆ ಯು ಕಂಪನಿಯು ಪೇಟೆಂಟ್ ಅವಧಿ ಮುಗಿದ ನಂತರ ಈ ವಿಭಾಗಕ್ಕೆ ಮೊದಲ ದಿನ ಪ್ರವೇಶ ವನ್ನು ಒತ್ತಿ ಹೇಳುತ್ತದೆ, ಭಾರತದಲ್ಲಿ ಪೂರೈಸದ ರೋಗಿಗಳ ಅಗತ್ಯಗಳನ್ನು ಪೂರೈಸಲು ಅದರ ಸಿದ್ಧತೆಯನ್ನು ಪ್ರದರ್ಶಿಸುತ್ತದೆ.

ಭಾರತೀಯರ ಸುರಕ್ಷತೆಗೆ ಕತಾರ್‌ ಸರ್ಕಾರದಿಂದ ಸಂಪೂರ್ಣ ಸಹಕಾರ

ಕತಾರ್‌ನಲ್ಲಿ ಭಾರತೀಯರು ಸುರಕ್ಷಿತ

ಯುಎಸ್, ಇಸ್ರೇಲ್ ಸೇನಾಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇದಕ್ಕೆ ಪ್ರತೀಕಾರವಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕತಾರ್ ನ ಹಲವು ಭಾಗಗಳ ಮೇಲೂ ದಾಳಿ ನಡೆಸಲಾಗಿತ್ತು. ಆದರೆ ಕತಾರ್ ಸರ್ಕಾರ ಜನತೆಯ ಸುರಕ್ಷತೆಗೆ ಸಂಪೂರ್ಣ ಒತ್ತು ನೀಡಿದ್ದು, ಭಾರತೀಯರು ಇಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಕನ್ನಡಿಗರಾದ ಕತಾರ್ ಭಾರತೀಯ ಕ್ರೀಡಾ ಕೇಂದ್ರದ ಸಲಹಾ ಮಂಡಳಿ ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತಿಳಿಸಿದ್ದಾರೆ.

ಮೂಡುಬಿದಿರೆ ಇನ್‌ಸ್ಪೆಕ್ಟರ್‌ ಸಂದೇಶ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದ ಕಮಿಷನರ್

ಇನ್‌ಸ್ಪೆಕ್ಟರ್‌ ಸಂದೇಶ್ ಲೈಂಗಿಕ ಕಿರುಕುಳ ನೀಡಿಲ್ಲ ಎಂದ ಕಮಿಷನರ್

ಇಬ್ಬರು ಮಹಿಳೆಯರ ಆರೋಪ ಸುಳ್ಳು ಎಂದು ಪೊಲೀಸ್ ವರದಿಯಲ್ಲಿ ತಿಳಿದು ಬಂದಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್‌ಸ್ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತು ಆಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದರು.

Belagavi Digital Arrest: ಬೆಳಗಾವಿಯಲ್ಲಿ ವೃದ್ಧ ಉದ್ಯಮಿಯ ಡಿಜಿಟಲ್ ಅರೆಸ್ಟ್‌; ಬರೋಬ್ಬರಿ 15 ಕೋಟಿ ರೂ. ಪೀಕಿದ ಸೈಬರ್‌ ವಂಚಕರು!

ಬೆಳಗಾವಿಯಲ್ಲಿ ಡಿಜಿಟಲ್ ಅರೆಸ್ಟ್‌; ವೃದ್ಧ ಉದ್ಯಮಿಗೆ 15 ಕೋಟಿ ವಂಚನೆ

ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಕೆ ಹಾಕಿರುವ ಸೈಬರ್‌ ಕಳ್ಳರು, ಉದ್ಯಮಿಯಿಂದ ಹಂತ ಹಂತವಾಗಿ 15 ಕೋಟಿ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Zameer ahmed khan: ದಾವಣಗೆರೆ ದಂಗಲ್:‌ ಜಮೀರ್‌ ಅಹಮದ್‌ ರಾಜೀನಾಮೆ ಬಾಂಬ್

ದಾವಣಗೆರೆ ದಂಗಲ್:‌ ಜಮೀರ್‌ ಅಹಮದ್‌ ರಾಜೀನಾಮೆ ಬಾಂಬ್

ಕರ್ನಾಟಕದ ದಾವಣೆಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ಕುರಿತು ಕಾಂಗ್ರೆಸ್ ಸತತ ಸಭೆ ನಡೆಸುತ್ತಿದೆ. ರಾಜ್ಯ ನಾಯಕರ ಜೊತೆ ಸಭೆ ನಡೆಸುತ್ತಿರುವ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದೆ ನಾಯಕರು ವಿವಿದ ಭೇಡಿಕೆ ಮುಂದಿಟ್ಟಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಮ್ ನಾಯಕರಿಗೆ ನೀಡಬೇಕು ಎಂದು ಜಮೀರ್ ಪಟ್ಟು ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಘೋರ ಘಟನೆ; ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುವ ವೇಳೆ ಲಾರಿ ಹರಿದು 4 ವರ್ಷದ ಬಾಲಕಿ ಸಾವು

ದೇವಸ್ಥಾನಕ್ಕೆ ತೆರಳುವ ವೇಳೆ ಲಾರಿ ಹರಿದು 4 ವರ್ಷದ ಬಾಲಕಿ ಸಾವು

ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಅಪಘಾತ ನಡೆದಿದೆ. ತಾಯಿ ಜತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಬಾಲಕಿ ಮೇಲೆ ಲಾರಿ ಹರಿದಿದ್ದರಿಂದ ದುರಂತ ಸಂಭವಿಸಿದೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Diesel Price: ತುಟ್ಟಿಯಾಯ್ತು ಬಲ್ಕ್‌ ಡೀಸೆಲ್‌, ಏರಲಿದೆಯಾ ಬಸ್‌ ಟಿಕೆಟ್‌ ದರ?

ತುಟ್ಟಿಯಾಯ್ತು ಬಲ್ಕ್‌ ಡೀಸೆಲ್‌, ಏರಲಿದೆಯಾ ಬಸ್‌ ಟಿಕೆಟ್‌ ದರ?

ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್‌ಗೆ 22 ರೂ. ಏರಿಕೆಯಾಗಿದೆ. 87.67 ರೂಪಾಯಿ ಇದ್ದ ಬಲ್ಕ್ ಡಿಸೇಲ್ ದರ 109.59 ರೂಪಾಯಿಗೆ ಏರಿಕೆಯಾಗಿದೆ. ಸಾರಿಗೆ ನಿಗಮಗಳಿಂದಲೂ ಬಲ್ಕ್‌ನಲ್ಲೇ ಡೀಸೆಲ್ ಖರೀದಿ ಮಾಡಲಾಗುತ್ತದೆ. ಇದರಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

First Night: ಫಸ್ಟ್‌ನೈಟ್‌ ಮಾಡಿಕೊಳ್ಳದ ಗಂಡ, ಪೊಲೀಸರಿಗೆ ದೂರು ನೀಡಿದ ಹೆಂಡತಿ

ಫಸ್ಟ್‌ನೈಟ್‌ ಮಾಡಿಕೊಳ್ಳದ ಗಂಡ, ಪೊಲೀಸರಿಗೆ ದೂರು ನೀಡಿದ ಹೆಂಡತಿ

ಮದುವೆಯ ದಿನದಿಂದಲೂ ತನ್ನ ಪತಿ ಯಾವುದೇ ದೈಹಿಕ ಸಂಬಂಧವನ್ನು ತಪ್ಪಿಸಿದ್ದಾನೆ.‌ ಸಾಮಾನ್ಯ ವೈವಾಹಿಕ ಜೀವನದ ನಿರೀಕ್ಷೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ, ತನ್ನ ಪತಿ ನಿರಂತರವಾಗಿ ದೂರ ಉಳಿದು 'ಮೊದಲ ರಾತ್ರಿ'ಗೆ ಒಪ್ಪಲಿಲ್ಲ. ಇದು ತನಗೆ ತೀವ್ರ ಮಾನಸಿಕ ಯಾತನೆಯನ್ನು ಉಂಟುಮಾಡಿತು ಎಂದು ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ.

Namma Metro: ನಮ್ಮ ಮೆಟ್ರೋ ಪಿಂಕ್‌ ಲೈನ್‌ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ, 4 ರೈಲು ಆಗಮನ

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ

ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್. ಈ ವರ್ಷ ಮೇನಲ್ಲಿ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ.

Self Harming: ನಿವೃತ್ತಿಗೆ ಒಂದೇ ವಾರ, ಕಚೇರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ!

ನಿವೃತ್ತಿಗೆ ಒಂದೇ ವಾರ, ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ!

ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಒಂದೇ ವಾರದಲ್ಲಿ ಇವರ ಸೇವಾವಧಿ ಮುಕ್ತಾಯಗೊಳ್ಳಬೇಕಿತ್ತು. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಕೃಷ್ಣಪ್ಪ ನೀಡಿದ ಕಿರುಕುಳವೇ ಈ ನಿರ್ಧಾರಕ್ಕೆ ಕಾರಣ ಎಂದು ವಿಡಿಯೋದಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

KMF products: ಕೆಎಂಎಫ್‌ಗೂ ತಟ್ಟಿದ ಯುದ್ಧದ ಬಿಸಿ, ನಂದಿನಿ ಉತ್ಪನ್ನಗಳ ತಯಾರಿ ಕಡಿತ

ಕೆಎಂಎಫ್‌ಗೂ ತಟ್ಟಿದ ಯುದ್ಧದ ಬಿಸಿ, ನಂದಿನಿ ಉತ್ಪನ್ನಗಳ ತಯಾರಿ ಕಡಿತ

ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್​ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ. ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ.

Surikumeru Govinda Bhat: ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್‌ ಇನ್ನಿಲ್ಲ

ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್‌ ಇನ್ನಿಲ್ಲ

ಗೋವಿಂದ ಭಟ್‌ ಅವರು, ಯಕ್ಷಗಾನದಲ್ಲಿ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದರಿಂದ ಅವರನ್ನು ʼಸವ್ಯಸಾಚಿʼ ಎಂದು ಕರೆಯಲಾಗುತ್ತಿತ್ತು. ಕೌರವ, ಇಂದ್ರಜಿತು, ಕರ್ಣ, ಹಿರಣ್ಯಕಶಿಪು, ಹಿರಣ್ಯಾಕ್ಷ, ರಕ್ತಬೀಜ, ಮಾಗಧ, ಅತಿಕಾಯ, ನರಕಾಸುರ,ದೇವೇಂದ್ರ, ಅರ್ಜುನ, ಹನುಮಂತ, ಭೀಷ್ಮ, ಬಾಹುಬಲಿ, ವಿಶ್ವಾಮಿತ್ರ ಮುಂತಾದ ವೇಷಗಳಲ್ಲಿ ಅದ್ವಿತೀಯ ಸಾಧನೆ ಮಾಡಿದರು.

Shidlaghatta News: ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಳ್ಳೂರು ಯುವಕ ಎಂ.ರಾಕೇಶ್‌ಗೆ ಬೆಳ್ಳಿ ಪದಕ ಗೌರವ

ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಳ್ಳೂರು ಯುವಕ

ಪಂಜಾಬ್ ರಾಜ್ಯದ ತಲ್ವಾಂಡಿ ಸಾಬೊದಲ್ಲಿರುವ ಗುರು ಕಾಶಿ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣದಲ್ಲಿ ನಡೆದ 45ನೇ ರಾಷ್ಟ್ರೀಯ ಮಾಜಿ ಸೈನಿಕರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ರಾಕೇಶ್ ಎಂ ಭಾಗವಹಿಸಿ ಗುಂಡು ಎಸೆತ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಬನ್ನಿಕುಪ್ಪೆ ಗ್ರಾಮಕ್ಕೆ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲು ಸಂದೀಪ್‌ ರೆಡ್ಡಿ ನೆರವು

ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಒದಗಿಸಿ

ಗ್ರಾಮಸ್ಥರೆಲ್ಲರೂ ಕೂಡಿಕೊಂಡು ತಮ್ಮ ಅಗತ್ಯಗಳಿಗೆ ತಕ್ಕಂತೆ ಟ್ಯಾಂಕರ್‌ಗಳಲ್ಲಿ ನೀರು ಪಡೆಯಬಹುದು.ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ನಾನು ಭರಿಸುತ್ತೇನೆ. ಮನುಷ್ಯ ಮನುಷ್ಯರಿಗೆ ನೆರವಾಗುವುದೇ ಮನುಷ್ಯತ್ವ ಎನಿಸಿಕೊಳ್ಳುತ್ತದೆ ಎಂದರು. ಮುಂದಿನ ದಿನಗಳಲ್ಲಿ ಇಲ್ಲಿ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸಲು ಕೂಡ ನೆರವು ನೀಡಲಾಗು ವುದು ಎಂದರು

ನಾಮಗೊಂಡ್ಲು ಡೇರಿಯಿಂದ ಹಾಲು ಉತ್ಪಾದಕರಿಗೆ ಯುಗಾದಿ ಕೊಡುಗೆ

ನಾಮಗೊಂಡ್ಲು ಡೇರಿಯಿಂದ ಹಾಲು ಉತ್ಪಾದಕರಿಗೆ ಯುಗಾದಿ ಕೊಡುಗೆ

ಕೃಷಿ ಚಟುವಟಿಕೆಗಳ ಜೊತೆಗೆ ಹೈನೋದ್ಯಮವು ರೈತಾಪಿ ವರ್ಗದವರಿಗೆ ಆಸರೆಯಾಗಿದೆ. ಪ್ರತೀ ರೈತಾಪಿ ಕುಟುಂಬಕ್ಕೆ ಆರ್ಥಿಕ ಮೂಲ ಒದಗಿಸುವ ಮೂಲಕ ಅವರ ಬಾಳಿಗೆ ಬೆಳಕು ನೀಡುತ್ತಿದೆ. ತಾಲ್ಲೂಕು ಬಹುತೇಕ ಡೇರಿಗಳು ನಷ್ಟದಲ್ಲಿರುವ ಕಾಲದಲ್ಲಿ ನಾಮಗೊಂಡ್ಲು ಡೇರಿಯು ಉತ್ತಮ ಲಾಭಾಂಶ ಹೊಂದಿರುವುದು ಸಂತಸದ ವಿಚಾರವಾಗಿದೆ.

MLA Ravikumar: ಜಯಂತಿಯನ್ನು ರಾಜಕೀಯಕ್ಕಿಂತ ಮೇಲಾಗಿ ಆಚರಿಸೋಣ: ಶಾಸಕ ರವಿಕುಮಾರ್

ಜಯಂತಿಯನ್ನು ರಾಜಕೀಯಕ್ಕಿಂತ ಮೇಲಾಗಿ ಆಚರಿಸೋಣ

ಅಂಬೇಡ್ಕರ್ ಜಯಂತಿ ಅಂಗವಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಹಾಗೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಸಮಾಜದ ಹಿಂದುಳಿದ ವರ್ಗಗಳ ಮಕ್ಕಳಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ

Ugadi celebration: ಯುಗಾದಿ ವರ್ಷದ ತೊಡಕು ಆಚರಣೆಗಾಗಿ ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದ ಜನತೆ : ವ್ಯಾಪಾರಿಗಳ ಮೊಗದಲ್ಲಿ ಅರಳಿದ ಮಂದಹಾಸ

ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದ ಜನತೆ

ಯುಗಾದಿ ವರ್ಷ ತೊಡಕಿನ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿತ್ತು. ಮಾಂಸವನ್ನು ಕೊಳ್ಳಲು ಜನತೆ ಸರದಿಗಾಗಿ ಕಾಯು ವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾನೆ 3 ಗಂಟೆಯಿಂದಲೇ ಅಂಗಡಿಗಳನ್ನು ತೆರೆದಿದ್ದ ಮಾಂಸದ ಅಂಗಡಿಗಳ ಮಾಲೀಕರು ವ್ಯಾಪಾರದ ವಹಿವಾಟನ್ನು ಭರ್ಜರಿಯಾಗಿ ಮಾಡಿದರು.

Karnataka Yuva Sena Vedike: ಕರ್ನಾಟಕ ಯುವಸೇನೆ ವೇದಿಕೆ ವತಿಯಿಂದ ಉಚಿತ ದಿನಸಿ ಕಿಟ್ ವಿತರಣೆ

ಕರ್ನಾಟಕ ಯುವಸೇನೆ ವೇದಿಕೆ ವತಿಯಿಂದ ಉಚಿತ ದಿನಸಿ ಕಿಟ್ ವಿತರಣೆ

ಕರ್ನಾಟಕ ಯುವ ಸೇನೆ ವೇಧಿಕೆವತಿಯಿಂದ ಈ ಭಾಗದಲ್ಲಿ ಹಲವು ಸಮಾಜಮುಖಿ ಸೇವೆ ಗಳನ್ನು ಹಮ್ಮಿಕೊಂಡು ಬಡವರಿಗೆ ಆಸರೆಯಾಗಿದ್ದೇವೆ, ನಮ್ಮ ಸಂಘಟನೆಯ ಸೇವಾ ಕಾರ್ಯ ದಲ್ಲಿ ಬಡವರ ಸೇವೆ ಒಂದು ಭಾಗವಾಗಿದ್ದು ಸೋದರ ಭಾವನೆಯೊಂದಿಗೆ ರಂಜಾನ್ ಹಬ್ಬದ ಪ್ರಯುಕ್ತ ಬಡ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ ಹಮ್ಮಿ ಕೊಂಡಿದ್ದೇವೆ.

Loading...