ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸಹ ವಿದ್ಯಾರ್ಥಿ ಮೇಲೆ ಹಲ್ಲೆ: ನಟ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ಜಾಮೀನು ಮಂಜೂರು

ನಟ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ಜಾಮೀನು ಮಂಜೂರು

Actor Duniya Vijay Son Samrat Controversy: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ʼದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಎಸಿಜೆಎಂ 6ನೇ ನ್ಯಾಯಾಲಯದ ಆದೇಶ ಹೊರಡಿಸಿದೆ.

Fake Lokayukat Officer: ಲೋಕಾಯುಕ್ತ ಅಧಿಕಾರಿ ಎಂದು ನರ್ಸ್‌ಗೆ ಬೆದರಿಕೆ: 50 ಸಾವಿರ ವಸೂಲಿ: ನಕಲಿ ಅಧಿಕಾರಿ ಚೇತನ್‌ ಬಂಧನ

ನಕಲಿ ಅಧಿಕಾರಿ ಚೇತನ್‌ ಬಂಧನ

ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುನಿತಾ ಅವರು ತಮ್ಮ ಸ್ವಗ್ರಾಮ ಪೆರೇಸಂದ್ರದಲ್ಲಿನ ಮನೆಯಲ್ಲಿ ಸರ್ಕಾರಿ ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರೆನ್ನಲಾಗಿದೆ.

Chinthamani News: ಜನರು ತೋರಿದ ಪ್ರೀತಿ–ಸಹಕಾರ ಎಂದಿಗೂ ಮರೆಯಲ್ಲ: ಎಸ್‌ಪಿ ಕುಶಲ್ ಚೌಕ್ಸೆ

ಚಿಂತಾಮಣಿ ಜನರ ಆತ್ಮೀಯ ಸನ್ಮಾನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೃತಜ್ಞತೆ

ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳಿಗೆ ಬೀಳ್ಕೊಡುಗೆ ನೀಡುವುದು ಸಹಜ. ಆದರೆ ಚಿಂತಾಮಣಿ ಯ ಸಾರ್ವಜನಿಕರು ಹಾಗೂ ಸ್ನೇಹಿತರು ಸ್ವಯಂಪ್ರೇರಿತರಾಗಿ ತಮ್ಮನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿರುವುದು ಅತ್ಯಂತ ಸಂತಸ ತಂದಿದೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಜನರಿಂದ ದೊರೆತ ಸಹಕಾರ ಹಾಗೂ ಪ್ರೀತಿ ಸದಾ ಸ್ಮರಣೀಯವಾಗಿರಲಿದೆ ಎಂದು ತಿಳಿಸಿದರು

Chikkaballapur News: ಆದಿಚುಂಚನಗಿರಿ ಮಠದ ಬಗ್ಗೆ ಟೀಕೆ ಸಲ್ಲದು; ಮಾಜಿ ಶಾಸಕರ ಹೇಳಿಕೆಗೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ತಿರುಗೇಟು

ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಘನತೆಗೆ ತಕ್ಕಂತೆ ಮಾತನಾಡಲಿ

ಮಠ ಹಾಗೂ ಪೀಠಾಧಿಪತಿಗಳು ಭಕ್ತರು ಮತ್ತು ಸರ್ಕಾರ ನೀಡಿದ ದೇಣಿಗೆ ಅಥವಾ ಜಮೀನುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು. ಮಠದ ವತಿಯಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿವೆ. ಹೀಗಾಗಿ ಸಂಸ್ಥೆಯ ವಿರುದ್ಧ ಆಧಾರರಹಿತವಾಗಿ ಮಾತನಾಡುವುದನ್ನು ಖಂಡಿಸುವುದಾಗಿ ತಿಳಿಸಿ ದರು.

2 ದಿನಗಳಲ್ಲಿ ಕಬಿನಿ ಕಟ್ಟು ನೀರು ಸಮಸ್ಯೆ ಇತ್ಯರ್ಥ ಎಂದ ಸಚಿವ ಎನ್.ಚಲುವರಾಯಸ್ವಾಮಿ; ರೈತರ ಬೇಡಿಕೆಗೆ ಸ್ಪಂದನೆ

2 ದಿನಗಳಲ್ಲಿ ಕಬಿನಿ ಕಟ್ಟು ನೀರು ಸಮಸ್ಯೆ ಇತ್ಯರ್ಥ: ಸಚಿವ ಚಲುವರಾಯಸ್ವಾಮಿ

N Chaluvarayaswamy: ಕೃಷಿಗೆ ಅನುಕೂಲವಾಗಲು ನಾಲ್ಕು ತಿಂಗಳವರೆಗೂ ನಾಲ್ಕು ಕಟ್ಟು ನೀರು ನೀಡಬೇಕಾಗುತ್ತದೆ. ಮೈಸೂರು ಉಸ್ತುವಾರಿ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ನದಿಗೆ ನೀರು ಬಿಡದಿದ್ದರೆ ವನ್ಯಪ್ರಾಣಿಗಳಿಗೂ ಕಷ್ಟವಾಗಲಿದೆ. ಹೀಗಾಗಿ, ಇಂದು ರಾತ್ರಿಯೇ ಮುಖ್ಯ ಎಂಜಿನಿಯರ್ ಜತೆ ಚರ್ಚಿಸಿ, ಎರಡು ಅಥವಾ ನಾಲ್ಕು ಕಟ್ಟು ನೀರು ನೀಡುವ ಬಗ್ಗೆ ಕೇವಲ ಎರಡೇ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಭರವಸೆ ನೀಡಿದರು.

Krishna Janmastami 2026: ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಸಡಗರ

ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಸಡಗರ

ಉದ್ಯಾನನಗರಿ ಬೆಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್ ಸಂಭ್ರಮ ಹೆಚ್ಚಾಗಿದೆ. ಮಾರುಕಟ್ಟೆಗೆ ಬಗೆಬಗೆಯ ರೂಪದ ಮುದ್ದು ಕೃಷ್ಣನ ವಿಗ್ರಹ ಬಂದಿದೆ. ಇದಕ್ಕೆ ಪೂರಕ ಎಂಬಂತೆ, ನಾನಾ ವೆರೈಟಿಯ ಆಕರ್ಷಕ ಅಲಂಕಾರಿಕ ಸಾಮಗ್ರಿಗಳು ಎಲ್ಲೆಡೆ ರಾರಾಜಿಸುತ್ತಿವೆ.

ಕತ್ತಲಲ್ಲಿ ಬೆಳಕು ಹುಡುಕುವಂತೆ ಸಾತ್ವಿಕ ಆಹಾರವನ್ನು ಅರಸಿ: ರಾಘವೇಶ್ವರ ಭಾರತೀ ಶ್ರೀ ಕರೆ

ಮನುಷ್ಯ ಸತ್ವಗುಣದ ಸೃಷ್ಟಿ; ಅರಿವಿನ ಬದುಕು ಅಗತ್ಯ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ದೇವರ ಸೃಷ್ಟಿಯಲ್ಲಿ ಪ್ರಾಣಿಗಳು ರಾಜಸ ಸೃಷ್ಟಿಯಾದರೆ, ಗಿಡ, ಮರ, ಜಡವಸ್ತುಗಳು ತಾಮಸ ಸೃಷ್ಟಿ ಹಾಗೂ ತಲೆಯನ್ನು ಎತ್ತರದ ಸ್ಥಾನದಲ್ಲಿ ಹೊಂದಿರುವ, ಜ್ಞಾನವೇ ಪ್ರಧಾನವಾದ ಮನುಷ್ಯ ದೇವರ ಸಾತ್ವಿಕ ಸೃಷ್ಟಿ. ಸಾತ್ವಿಕ ಸೃಷ್ಟಿಯಾದ ಮನುಷ್ಯನಿಗೆ ರಾಜಸ ಸೃಷ್ಟಿ ಹಾಗೂ ತಾಮಸ ಸೃಷ್ಟಿಗಳು ಆಹಾರವಾಗಿವೆ. ಅಂದರೆ ಸಸ್ಯಜನ್ಯ ಹಾಗೂ ಪ್ರಾಣಿಜನ್ಯಗಳು ಮನುಷ್ಯನ ಆಹಾರಗಳಾಗಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ಡಾ.ದ.ರಾ. ಬೇಂದ್ರೆ ಬದುಕಿನ ಮೇಲೆ ಬೆಳಕು ಚೆಲ್ಲುವ ʼಗಂಗಾವತರಣʼ ನಾಟಕ ಪ್ರದರ್ಶನ

ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ʼಗಂಗಾವತರಣʼ ನಾಟಕ ಪ್ರದರ್ಶನ

Bengaluru News: ರಂಗಸೌರಭ ವತಿಯಿಂದ ಸೆಪ್ಟೆಂಬರ್ 6 ರಂದು ಭಾನುವಾರ ಬೆಂಗಳೂರಿನ ಜೆಪಿ ನಗರದ ರಂಗಶಂಕರದಲ್ಲಿ ವರಕವಿ ಡಾ. ದ.ರಾ. ಬೇಂದ್ರೆ ಅವರ ಬದುಕು ಮತ್ತು ಬರಹಗಳ ಸಮಗ್ರ ಚಿತ್ರಣವುಳ್ಳ ʼಗಂಗಾವತರಣʼ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಕೊಡುಗೆ; 105 ಕೋಟಿ ರುಪಾಯಿ ಮೊತ್ತದ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

ಕಲಬುರಗಿಯ 2 ಮಹತ್ವದ ನೀರಾವರಿ ಯೋಜನೆಗಳಿಗೆ ಸಂಪುಟ ಅನುಮೋದನೆ

Priyank Kharge: ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಮಹತ್ವದ ನೀರಾವರಿ ಯೋಜನೆಗಳಿಗೆ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ; ಕೇರ್ ಬೈ ಬಿಎಲ್‌ಆರ್ ಪ್ರೀಮಿಯಂ ಸೇವೆ ಆರಂಭ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೇರ್ ಬೈ ಬಿಎಲ್‌ಆರ್ ಪ್ರೀಮಿಯಂ ಸೇವೆ ಆರಂಭ

Care by BLR: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ತನ್ನ ಪ್ರಯಾಣಿಕರ ವಿಮಾನಯಾನ ಅನುಭವವನ್ನು ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಐಷಾರಾಮಿಯಾಗಿಸುವ ಉದ್ದೇಶದಿಂದ ʼಕೇರ್ ಬೈ ಬಿಎಲ್‌ಆರ್ʼ ಎಂಬ ಹೊಸ ವೈಯಕ್ತಿಕ ಸೇವಾ ಬ್ರ್ಯಾಂಡ್ ಅನ್ನು ಪರಿಚಯಿಸಿದೆ.

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ರಿಲೀಫ್: ಅಮಾನತು ಆದೇಶಕ್ಕೆ ತಡೆ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರ ಅಮಾನತು ರದ್ದು

RSS Route March: ಕಳೆದ ವರ್ಷ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಾನತುಗೊಂಡ ಇಬ್ಬರು ಶಿಕ್ಷಕರಿಗೆ ರಿಲೀಫ್‌ ಸಿಕ್ಕಿದೆ. ರಾಜ್ಯದ ಸರ್ಕಾರದ ಅಮಾನತು ಆದೇಶಕ್ಕೆ ಕಲಬುರಗಿ ಕೆಎಟಿ ತಡೆ ನೀಡಿದೆ. ಆ ಮೂಲಕ ಯಾದಗಿರಿ ಜಿಲ್ಲೆಯ ಇಬ್ಬರು ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾ ಸಾಹೇಬ್ ದೇಶಮುಖ್ ಅವರಿಗೆ ರಿಲೀಫ್‌ ಸಿಕ್ಕಿದೆ.

Tumkur News: ತುಮಕೂರಿನಲ್ಲಿ ಧ್ವಜ ಪೂಜೆಯೊಂದಿಗೆ ಹಿಂದೂ ಮಹಾ ಗಣಪತಿ ಮಹೋತ್ಸವಕ್ಕೆ ಚಾಲನೆ

ಧ್ವಜ ಪೂಜೆಯೊಂದಿಗೆ ಹಿಂದೂ ಮಹಾ ಗಣಪತಿ ಮಹೋತ್ಸವಕ್ಕೆ ಚಾಲನೆ

Tumkur News: ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ವತಿಯಿಂದ ಈ ವರ್ಷದ ಹಿಂದೂ ಮಹಾ ಗಣಪತಿ ಮಹೋತ್ಸವದ ಅಂಗವಾಗಿ ನಗರದ ಬಿ.ಎಚ್. ರಸ್ತೆಯ ಸೋಮೆಕಟ್ಟೆ ಮಠದ ಬಳಿ ಸಂಪ್ರದಾಯಬದ್ಧವಾಗಿ ಗೋ ಪೂಜೆ ಮತ್ತು ಧ್ವಜ ಪೂಜೆ ನೆರವೇರಿಸುವ ಮೂಲಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

BJP Padayatra: ಬರಗಾಲ; 5 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಿ: ಬಿ.ವೈ.ವಿಜಯೇಂದ್ರ ಆಗ್ರಹ

ಬರಗಾಲ; 5 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಿ: ಬಿವೈ ವಿಜಯೇಂದ್ರ

BY Vijayendra: ನಾಡಿನ ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು, ಬರಗಾಲದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕು. ಬರಗಾಲದ ಕಾರಣ 5 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

20 ವರ್ಷ ಕಳೆದರೂ ನಡೆಯದ ಭೂ ಹಂಚಿಕೆ: ಚಿಕ್ಕಬಳ್ಳಾಪುರದಲ್ಲಿ ಮನನೊಂದು ಕಾರ್ಗಿಲ್ ಯೋಧ ಆತ್ಮಹತ್ಯೆಗೆ ಯತ್ನ

ಕಾರ್ಗಿಲ್ ಯೋಧ ಆತ್ಮಹತ್ಯೆಗೆ ಯತ್ನ

chikkaballapur crime: ಕಾರ್ಗಿಲ್ ಯೋಧನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಭೂ ಹಂಚಿಕೆಯಲ್ಲಿ ದೀರ್ಘಕಾಲದ ವಿಳಂಬದ ಕಾರಣದಿಂದ ನೊಂದಿದ್ದ ಅವರು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರು ಚೇತರಿಸಿಕೊಂಡ ಬಳಿಕ ಅವರ ಹೇಳಿಕೆಗಳನ್ನು ಪಡೆಯುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜನಾಕ್ರೋಶಕ್ಕೆ ಮಣಿದ ಸರ್ಕಾರ; ಪಾರ್ಕ್‌ನ ಶೇಕಡಾ 5ರಷ್ಟು ಜಾಗ ಬಳಸುವ ಬಿಲ್‌ ವಾಪಸ್‌

ಪಾರ್ಕ್‌ನ ಶೇಕಡಾ 5ರಷ್ಟು ಜಾಗ ಬಳಸುವ ಬಿಲ್‌ ವಾಪಸ್‌

Karnataka Parks Bill Row: ಜನಾಕ್ರೋಶಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು, ಪಾರ್ಕ್‌ನ ಶೇಕಡಾ 5ರಷ್ಟು ಜಾಗ ಬಳಸುವ ಬಿಲ್‌ ವಾಪಸ್‌ ಪಡೆದಿದೆ. ಬಿಲ್‌ಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಸ್‌ ಪಡೆಯಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Bangalore News: ಕಾನೂನು ಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ. ಅನುದಾನ ವಾಪಸ್ ಪಡೆಯುವಂತೆ ಎರಡನೇ ಬಾರಿಗೆ ಹೈ ಕೋರ್ಟ್ ಆದೇಶ

ಕಾನೂನು ಬಾಹಿರವಾಗಿ ನೀಡಿರುವ ಐದು ಲಕ್ಷ ಅನುದಾನ ಹಿಂಪಡೆಯಿರಿ

ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯ ಪೀಠ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿತ್ತು.

Hubballi News: ಒಂದೇ ತಿಂಗಳಲ್ಲಿ 4.48 ದಶಲಕ್ಷ ಟನ್ ಸರಕು ಸಾಗಣೆ: ನೈಋತ್ಯ ರೈಲ್ವೆ 805.70 ಕೋಟಿ ರೂ. ಆಗಸ್ಟ್‌ ಗಳಿಕೆ

ನೈಋತ್ಯ ರೈಲ್ವೆ 805.70 ಕೋಟಿ ರೂ. ಆಗಸ್ಟ್‌ ಗಳಿಕೆ

2026-27ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ ಒಟ್ಟು ಸರಕು ಸಾಗಣೆ 21.67 JUಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.8% ರಷ್ಟು ಹೆಚ್ಚಳವಾಗಿದೆ. ಈ ದಾಖಲೆಯ ಸರಕು ಸಾಗಣೆಗೆ ಇಂಧನ ಮತ್ತು ಭಾರಿ ಕೈಗಾರಿಕಾ ಕಚ್ಚಾ ವಸ್ತುಗಳ ಸಾಗಣೆಯಲ್ಲಿನ ಗಣನೀಯ ಏರಿಕೆ ಪ್ರಮುಖ ಕಾರಣ ವಾಗಿದೆ.

ರಾಜ್ಯದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ದಾಳಿ: ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಶ್ವಾನಗಳ ಅಟ್ಯಾಕ್, ಗಂಭೀರ ಗಾಯ

4 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ

Stray Dogs attacks: ಮನೆ ಬಳಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳ ದಾಳಿಗೊಳಗಾಗಿ ನಾಲ್ಕು ವರ್ಷದ ಬಾಲಕಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೀನಹಬಲ್ ಗ್ರಾಮದಲ್ಲಿ ನಡೆದಿದೆ. ಶ್ವಾನಗಳ ದಾಳಿಯಿಂದ ಗಾಯಗೊಂಡ ಬಾಲಕಿಯನ್ನು ಸೇಡಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿದೆ.

ಸೆ.21 ರಿಂದ 3 ದಿನಗಳ ವಿಶೇಷ ಅಧಿವೇಶನಕ್ಕೆ ರಾಜ್ಯ ಸರ್ಕಾರದಿಂದ ಸಿದ್ಧತೆ; ಯಾವೆಲ್ಲ ವಿಷಯ ಚರ್ಚೆಯಾಗುತ್ತೆ?

ಸೆ.21 ರಿಂದ 3 ದಿನಗಳ ವಿಶೇಷ ಅಧಿವೇಶನಕ್ಕೆ ರಾಜ್ಯ ಸರ್ಕಾರದಿಂದ ಸಿದ್ಧತೆ

Special Join Assembly Session: ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಸಲು ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ರಾಜ್ಯ ಸರಕಾರ ಮುಂದಾಗಿದೆ. ನಾಗೇಂದ್ರ ರಾಜೀನಾಮೆ ಗದ್ದಲದಿಂದ ಸದನದಲ್ಲಿ ಯಾವುದೇ ವಿಷಯ ಸರಿಯಾಗಿ ಚರ್ಚೆಯಾಗಿರಲಿಲ್ಲ.

K.J. George: ಪ್ರವಾಸೋದ್ಯಮ ಹೂಡಿಕೆಗೆ ಉತ್ತೇಜನ: 1,080,97 ಕೋಟಿ ಮೊತ್ತದ 78 ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ: ಸಚಿವ ಕೆ.ಜೆ.ಜಾರ್ಜ್

1,080,97 ಕೋಟಿ ಮೊತ್ತದ 78 ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ

ಪ್ರವಾಸೋದ್ಯಮ ನೀತಿಯಡಿ 8 ಪ್ರೀಮಿಯಂ ಹಾಗೂ 10 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ ರಾಜ್ಯದ ಪ್ರವಾಸೋದ್ಯಮ ವಲಯದಲ್ಲಿ 314.93 ಕೋಟಿ ಹೂಡಿಕೆಯಾಗಿದ್ದು, 655 ಹೋಟೆಲ್ ಕೊಠಡಿಗಳು ಸೇರ್ಪಡೆಯಾಗಿವೆ ಹಾಗೂ 1542 ಉದ್ಯೋಗಗಳು ಸೃಷ್ಟಿಯಾಗಿವೆ. ಈ ಯೋಜನೆಗಳಿಗೆ ಅಂದಾಜು 47.23 ಕೋಟಿ ರು. ಸಹಾಯಧನ ನೀಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್‌ ಕ್ಯಾಂಪಸ್‌ನಲ್ಲಿ ಅದ್ದೂರಿ 'ಜೆಮಿನಿ ಡೇ' ಆಚರಣೆ

ಯುಪಿಇಎಸ್‌ ಕ್ಯಾಂಪಸ್‌ನಲ್ಲಿ ಅದ್ದೂರಿ 'ಜೆಮಿನಿ ಡೇ' ಆಚರಣೆ

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾ ಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ ಕ್ಯಾಂಪಸ್‌ನಲ್ಲಿ ಗೂಗಲ್ ಜೆಮಿನಿ ಡೇ ಆಚರಿಸಲಾಗಿದ್ದು, ವಿದ್ಯಾರ್ಥಿ ಗಳು ಮತ್ತು ಬೋಧಕರಿಗಾಗಿ ಬರೋಬ್ಬರಿ 10,100 ಜೆಮಿನಿ ಎಂಟರ್‌ಪ್ರೈಸ್ ಫಾರ್ ಎಜುಕೇಶನ್ ಲೈಸೆನ್ಸ್‌ಗಳನ್ನು ಪರಿಚಯಿಸಲಾಗಿದೆ.

ಚಿಕನ್‌ ಪ್ರಿಯರೇ ಗಮನಿಸಿ; ಇಂದು, ನಾಳೆ ಬೆಂಗಳೂರಿನಲ್ಲಿ ಕೋಳಿ ಮಾಂಸ ಮಾರಾಟ ಬಂದ್‌!

ಇಂದು ನಾಳೆ ಬೆಂಗಳೂರಿನಲ್ಲಿ ಕೋಳಿ ಮಾಂಸ ಮಾರಾಟ ಬಂದ್‌!

Bengaluru Chicken Shops Strike:‌ ಕೋಳಿ ತ್ಯಾಜ್ಯದ ಮೇಲೆ ಕೆ.ಜಿಗೆ 5 ರೂ. ತೆರಿಗೆ ವಿಧಿಸಿರುವ ಜಿಬಿಎ ಕ್ರಮವನ್ನು ವಿರೋಧಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘ ಗುರುವಾರ ಮತ್ತು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದು, ಇಂದು (ಸೆ. 03) ಹಾಗೂ ನಾಳೆ (04) ಕೋಳಿ ಮಾರಾಟ ರದ್ದು ಮಾಡಿದೆ.

Corporate NPS: ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ಬಜಾರ್ -ಉಬುಂಟು ಒಪ್ಪಂದ

ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್

ಈ ಪಾಲುದಾರಿಕೆಯು ಮಹಿಳಾ ಉದ್ಯಮಿಗಳಿಗೆ ಎನ್‌ಪಿಎಸ್ ಪರಿಚಯಿಸಲು ಮತ್ತು ತಮ್ಮ ಉದ್ಯಮ ಗಳಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಶಿಸ್ತುಬದ್ಧ, ದೀರ್ಘಕಾಲೀನ ಉಳಿತಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಉಬುಂಟು ಕನ್ಸೋರ್ಟಿಯಂನ "ಉಬುಂಟು - ಟುಗೆದರ್ ವಿ ಗ್ರೋ" ಕಾರ್ಯಕ್ರಮದ ಭಾಗವಾಗಿ ಈ ಪಾಲುದಾರಿಕೆಯನ್ನು ಘೋಷಿಸಲಾಯಿತು.

29,679 crore investment in Industrial Sector: ₹29,679 ಕೋಟಿ ಹೂಡಿಕೆಯ ಯೋಜನೆಗಳಿಗೆ ಅಸ್ತು; 9 ಹೊಸ ಯೋಜನೆ, 66 ಸಾವಿರ ಉದ್ಯೋಗ ಸೃಷ್ಟಿ

ಕೈಗಾರಿಕೆಗಳ ಸ್ಥಾಪನೆ ಮತ್ತು ವಿಸ್ತರಣೆಗೆ ಉತ್ತೇಜನ: ಮುಖ್ಯಮಂತ್ರಿ

ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಒಟ್ಟು 29,679 ಕೋಟಿ ರೂಪಾಯಿ ಬಂಡವಾಳ( 29,679 crore invest ment) ಹೂಡಿಕೆಯ 9 ಹೊಸ ಮತ್ತು ಹೆಚ್ಚುವರಿ ಹೂಡಿಕೆಯ 8 ಯೋಜನಾ ಪ್ರಸ್ತಾವನೆಗಳಿಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್(Chief Minister D K Shivakumar) ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು ಹಸಿರು ನಿಶಾನೆ ತೋರಿಸಿದೆ. ಈ ಯೋಜನೆಗಳಿಂದ ಒಟ್ಟಾರೆ 66,360 ಉದ್ಯೋಗಗಳು ಸೃಷ್ಟಿಯಾಗಲಿವೆ.

Loading...