ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೆಳಗಾವಿ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಪರಿಶೀಲನೆ: ಶ್ರೀ ಮಧುಸೂದನ ಸಾಯಿ

ಬೆಳಗಾವಿ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ: ಮಧುಸೂದನ ಸಾಯಿ

Sadguru Sri Madhusudan Sai: ಕೇವಲ ಗರ್ಭಿಣಿಯರಿಗಷ್ಟೇ ಪೌಷ್ಟಿಕಾಂಶದ ಪುಡಿಯನ್ನು ಕೊಟ್ಟರೆ ಹೆಚ್ಚು ಪ್ರಯೋಜನವಾಗುವುದಿಲ್ಲ. 13ನೇ ವಯಸ್ಸಿನಿಂದಲೇ ಬೆಳಗಾವಿ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಈ ಸೂತ್ರಾಧಾರಿತ ಪುಡಿ ಸಿಗುವಂತೆ ಆಗಬೇಕು. ಆಗ ಅವರ ಇಡೀ ಜೀವನ ಚೆನ್ನಾಗಿರುತ್ತದೆ. ಆರೋಗ್ಯವಂತ ಮಹಿಳೆಯರು ಆರೋಗ್ಯವಂತ ಮಕ್ಕಳಿಗೆ ಜನ್ಮನೀಡುತ್ತಾರೆ. ಅರೋಗ್ಯವಂತ ಸಮಾಜ ರೂಪುಗೊಳ್ಳುತ್ತದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದ್ದಾರೆ.

Telangana Accident: ತೆಲಂಗಾಣದಲ್ಲಿ ಭೀಕರ ಅಪಘಾತ; ಆಟೋಗೆ ಪೆಟ್ರೋಲ್‌ ಟ್ಯಾಂಕರ್‌ ಡಿಕ್ಕಿಯಾಗಿ ಬೀದರ್‌ ಮೂಲದ 7 ಕೃಷಿ ಕಾರ್ಮಿಕರ ದುರ್ಮರಣ

ತೆಲಂಗಾಣದಲ್ಲಿ ಭೀಕರ ಅಪಘಾತ; ಬೀದರ್‌ನ 7 ಕೃಷಿ ಕಾರ್ಮಿಕರ ದುರ್ಮರಣ

ಭೀಕರ ಅಪಘಾತಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.

KSET 2026: ಸಹಾಯಕ ಪ್ರಾಧ್ಯಾಯಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ

ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ

KSET 2026: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 (ಕೆಸೆಟ್) ಅನ್ನು 37 ವಿಷಯಗಳಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

ಒಂದು ತಿಂಗಳಲ್ಲಿ ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಒಂದು ತಿಂಗಳಲ್ಲಿ ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆ: ಸಿಎಂ

CM DK Shivakumar: ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆಗೆ ಮನವಿ ಬಂದಿದ್ದು, ಒಂದು ತಿಂಗಳಲ್ಲಿ ಅದಕ್ಕೆ ತೀರ್ಮಾನ ಮಾಡಲಾಗುವುದು. ಇದು ನಮ್ಮ ಸರ್ಕಾರದ ಪ್ರಣಾಳಿಕೆ ಭಾಗವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

Annabrahma Chaturmasya: ಉಪವಾಸದಿಂದ ದೇಹ, ಮನಸ್ಸು ಹಗುರ: ರಾಘವೇಶ್ವರ ಭಾರತೀ ಶ್ರೀ

ಉಪವಾಸದಿಂದ ದೇಹ, ಮನಸ್ಸು ಹಗುರ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 'ಉಪವಾಸ'ದ ಕುರಿತಾಗಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಮಂಗಳವಾರ ಪ್ರವಚನ ನೀಡಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆಯ ಉದ್ದೇಶದಿಂದ ಉಪವಾಸ ಮಾಡಬಾರದು ಹಾಗೂ ಧಾರ್ಮಿಕ ಉಪವಾಸಗಳನ್ನೂ ಕೂಡ ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Krantiya Kidigalu Book Release: ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಲೋಕಾರ್ಪಣೆ

ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಲೋಕಾರ್ಪಣೆ

Book Release: ಬೆಂಗಳೂರಿನ ಚಾಮರಾಜಪೇಟೆಯ ಕೇಶವಕೃ‍ಪಾದಲ್ಲಿ ಮಂಗಳವಾರ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ.ಆರ್. ಅವರು ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಬಿಡುಗಡೆಗೊಳಿಸಿ, ಮಾತನಾಡಿದ್ದಾರೆ.

Dharwad Accident: ಧಾರವಾಡದಲ್ಲಿ ದಾರುಣ ಘಟನೆ; ಶಾಲಾ ಬಸ್‌ ಹರಿದು 2 ವರ್ಷದ ಮಗು ಸಾವು

ಧಾರವಾಡದಲ್ಲಿ ದಾರುಣ ಘಟನೆ; ಶಾಲಾ ಬಸ್‌ ಹರಿದು 2 ವರ್ಷದ ಮಗು ಸಾವು

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ವಾಹನ ಹುಲ್ಲಿಕೇರಿ ಗ್ರಾಮಕ್ಕೆ ಬಂದಿತ್ತು. ಈ ವೇಳೆ ರಸ್ತೆ ಬದಿ ನಿಂತಿದ್ದ ಮಗು ಮೇಲೆ ಶಾಲಾ ಬಸ್‌ ಹರಿದು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

Belagavi News: ಬೆಳಗಾವಿಯಲ್ಲಿ ಅಪರೂಪದ ಘಟನೆ; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಬೆಳಗಾವಿಯಲ್ಲಿ ಅಪರೂಪದ ಘಟನೆ; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

Belagavi News: ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ರೇಣುಕಾ ಗಣಾಚಾರಿ ಅವರು ಒಂದೇ ಹೆರಿಗೆ ವೇಳೆ ಮೂವರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ. ವೈದ್ಯರ ತಂಡದ ಯಶಸ್ವಿ ಪ್ರಯತ್ನದಿಂದ ಹೆರಿಗೆ ಸುಗಮವಾಗಿ ನೆರವೇರಿದ್ದು, ತಾಯಿ ಹಾಗೂ ಮೂವರು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ.

Fashion News 2026: ಹೆರಿಟೇಜ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಸೈ ಎಂದ ದೀಪಿಕಾ ಗೋವಿಂದ್‌

ಹೆರಿಟೇಜ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಸೈ ಎಂದ ದೀಪಿಕಾ ಗೋವಿಂದ್‌

ಸೆಲೆಬ್ರೆಟಿ ಡಿಸೈನರ್ ದೀಪಿಕಾ ಗೋವಿಂದ್‌ರ ನೇತೃತ್ವದ ಹೈ ಫ್ಯಾಷನ್‌ ವೆಡ್ಡಿಂಗ್‌ ಡಿಸೈನರ್‌ವೇರ್‌ಗಳ ಪ್ರದರ್ಶನ ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆಯಿತು. ವೆಡ್ಡಿಂಗ್‌ನಲ್ಲೂ ಹೈ ಫ್ಯಾಷನ್‌ ಬಯಸುವವರ ಲಿಸ್ಟ್‌ಗೆ ಸೇರುವಂತಹ ಈ ವೈವಿಧ್ಯಮಯ ಹೆರಿಟೇಜ್‌ ಡಿಸೈನರ್‌ವೇರ್‌ಗಳು ವೆಡ್ಡಿಂಗ್‌ ಕಲೆಕ್ಷನ್‌ಗಳನ್ನು ಒಳಗೊಂಡಿದ್ದವು. ಅವುಗಳಲ್ಲಿ ಲೆಹೆಂಗಾ, ಹಾಫ್‌ ಸೀರೆ, ರೇಷ್ಮೆ ಸೀರೆ, ಧೋತಿ, ಪಂಚೆ ಹೀಗೆ ನಾನಾ ಬಗೆಯ ಸಸ್ಟೈನಬಲ್‌ ವೆಡ್ಡಿಂಗ್‌ ಫ್ಯಾಷನ್‌ವೇರ್‌ಗಳನ್ನು ಹೊಂದಿದ್ದವು. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ.

Cauvery Water Dispute: ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ಕಾವೇರಿ ನೀರು ಹರಿಸಿ; CWRC ಆದೇಶ ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ!

ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸಿ; ಸಿಡಬ್ಲ್ಯುಎಂಎ ಆದೇಶ

ನಾಳೆಯಿಂದಲೇ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು, 15 ದಿನಗಳಲ್ಲಿ 15.50 ಟಿಎಂಸಿ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಪ್ರಾಧಿಕಾರ ನಿರ್ದೇಶಿಸಿದೆ. ಈ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ.

Choice International Ltd: ಚಾಯ್ಸ್‌ ಇಂಟರ್‌ ನ್ಯಾಷನಲ್‌ಗೆ 2026-27ರ ಮೊದಲ ತ್ರೈಮಾಸಿಕದಲ್ಲಿ 319 ಕೋಟಿ ಆದಾಯ

ಚಾಯ್ಸ್‌ ಇಂಟರ್‌ ನ್ಯಾಷನಲ್‌ಗೆ 319 ಕೋಟಿ ಆದಾಯ

ಚಾಯ್ಸ್‌ ಇಂಟರ್‌ ನ್ಯಾಷನಲ್‌ ಸಂಸ್ಥೆಯು 214 ಶಾಖಾ ಕಚೇರಿಗಳನ್ನು ಒಳಗೊಂಡಿದೆ. 48 ಪ್ರಾಜೆಕ್ಟ್‌ ಆಫೀಸ್‌ಗಳನ್ನು ನಡೆಸುತ್ತಿದೆ. 1992ರಲ್ಲಿ ಸ್ಥಾಪಿತವಾದ 'ಚಾಯ್ಸ್ ಗ್ರೂಪ್' ಒಂದು ಹಣಕಾಸು ಸಂಸ್ಥೆಯಾಗಿದ್ದು, ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಎದುರಾಗುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅಂತರವನ್ನು ಕಡಿಮೆ ಮಾಡುವಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿದೆ.

ಪ್ರತಿದಿನ ಕೋರ್ಟ್‌ನಲ್ಲೇ ಇರಬೇಕಾದ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದೇಕೆ: ಆರ್. ಅಶೋಕ್ ಪ್ರಶ್ನೆ

ಕೇಸ್‌ನಿಂದ ಖುಲಾಸೆ ಆಗದಿದ್ರೂ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದೇಕೆ?

R Ashok: ವಿಧಾನಸಭೆ ಒಳಗಡೆಯೂ ನಾಗೇಂದ್ರ ಅವರ ವಿಚಾರ ಪ್ರಸ್ತಾಪಿಸಿ ರಾಜೀನಾಮೆಗೆ ಆಗ್ರಹಿಸಲಿದ್ದೇವೆ. ತಿಂಗಳಿಗೆ 31 ದಿನ ಇವೆ. 31 ದಿನ 31 ಕೇಸುಗಳಿವೆ. ಅವರು ಅಸೆಂಬ್ಲಿಗೆ ಬರುವುದು ಯಾವಾಗ? ಖಾತೆ ನೋಡುವುದು ಯಾವಾಗ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

Festival Saree Shopping 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಶುರುವಾದ ಸೀರೆ ಶಾಪಿಂಗ್‌!

ವರಮಹಾಲಕ್ಷ್ಮೀ ಹಬ್ಬಕ್ಕೆ ಶುರುವಾದ ಸೀರೆ ಶಾಪಿಂಗ್‌!

ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಶುರುವಾಗಿದೆ. ಹಬ್ಬಕ್ಕೆ ಇನ್ನೂ ಸಾಕಷ್ಟು ದಿನಗಳು ಬಾಕಿ ಇದೆ. ಆದರೂ ಆಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಶುರುವಾಗಿದೆ. ಸೀರೆ ಸೆಂಟರ್‌ಗಳಲ್ಲಿನ ಸದ್ಯದ ಚಿತ್ರಣ ಹೇಗಿದೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

Bidadi Township: ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲು ಸಿದ್ಧ; ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಸಿಎಂಗೆ ರೈತರ ಮನವಿ

ಬಿಡದಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಮಾಡಲು ಸಿಎಂಗೆ ರೈತರ ಮನವಿ

ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಬಿಡದಿ ರೈತರ ನಿಯೋಗವು ಭೇಟಿ ಮಾಡಿ, ರೆಡ್ ಜೋನ್‌ನಿಂದ ತಮಗಾಗಿರುವ ಕಷ್ಟ ವಿವರಿಸಿದ್ದಾರೆ. ಅಲ್ಲದೇ ತಾವು ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲು ಸಿದ್ಧವಿದ್ದು, ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ.

Chinthamani News: ಮಾದಕ ದ್ರವ್ಯ ಜಾಲಕ್ಕೆ ಕಠಿಣ ಚಾಟಿ: ನೂರಾನಿ ಮಸೀದಿ ಕಮಿಟಿ ಎಚ್ಚರಿಕೆ

ಮಾದಕ ದ್ರವ್ಯ ಜಾಲಕ್ಕೆ ಕಠಿಣ ಚಾಟಿ: ನೂರಾನಿ ಮಸೀದಿ ಕಮಿಟಿ ಎಚ್ಚರಿಕೆ

ನಗರದ ವೆಂಕಟಗಿರಿಕೋಟೆಯ ನೂರಾನಿ ಮಸೀದಿ ಕಮಿಟಿ ಹಾಗೂ ಸ್ಥಳೀಯ ಯುವಕರು ಮಾದಕ ದ್ರವ್ಯ ಜಾಲದ ವಿರುದ್ಧ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಪ್ರದೇಶದಲ್ಲಿ ಗಾಂಜಾ, ಅಫೀಮು ಹಾಗೂ ವಿವಿಧ ಮಾದಕ ಪದಾರ್ಥಗಳ ಮಾರಾಟ ಮತ್ತು ಬಳಕೆ ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

ಅಪಘಾತದಲ್ಲಿ ಕೋಳಿ ಸತ್ತರೂ ಪರಿಹಾರ ಕೊಡಬೇಕು: ಹೈಕೋರ್ಟ್‌ ಮಹತ್ವದ ತೀರ್ಪು!

ಅಪಘಾತದಲ್ಲಿ ಕೋಳಿ ಸತ್ತರೂ ಪರಿಹಾರ ಕೊಡಬೇಕು: ಹೈಕೋರ್ಟ್‌

Karnataka High Court: ಅಪಘಾತದ ವೇಳೆ ವಾಹನದಲ್ಲಿದ್ದ ಕೋಳಿಗಳಿಗೆ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ಬಾಲಾಜಿ ಪೌಲ್ಟ್ರಿಫಾರ್ಮ್ ಮಾಲೀಕ ಅರ್ಜಿ ಸಲ್ಲಿಸಿದ್ದರು. ಆದರೆ, ಕೋಳಿಗಳಿಗೆ ಪರಿಹಾರ ನೀಡಲು ಸೂಚನೆ ನೀಡಿದ್ದ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಧಿಕರಣದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಗೇಟ್‌ಗೆ ಡಿಕ್ಕಿ ಹೊಡೆದು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ವೇಗದ ಕಾರ್‌; ಬೆಂಗಳೂರಿನಲ್ಲಿ ಕೂದಲೆಳೆ ಅಂತರದಲ್ಲಿ ಸೆಕ್ಯೂರಿಟಿ ಗಾರ್ಡ್ ಪಾರು

ಅಪಾರ್ಟ್‌ಮೆಂಟ್ ಗೇಟ್‌ಗೆ ಕಾರ್‌ ಡಿಕ್ಕಿ: ಭಯಾನಕ ವಿಡಿಯೊ ನೋಡಿ

Viral Video: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಅಪಾರ್ಟ್‌ಮೆಂಟ್‌ ಒಂದರ ಗೇಟ್‌ಗೆ ಕಾರೊಂದು ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರಿನ ವೇಗಕ್ಕೆ ಕಬ್ಬಿಣದ ಗೇಟ್ ಪುಡಿ ಪುಡಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Gelatin Blast at Kalaburagi: ಪತ್ನಿ ನಡತೆ ಬಗ್ಗೆ ಸಂಶಯ ಪಟ್ಟು ಮನೆಯಲ್ಲೇ ಜಿಲೆಟಿನ್ ಸ್ಫೋಟ; ತಂದೆ–ಮಗಳು ಬಲಿ, ನಾಲ್ವರಿಗೆ ಗಂಭೀರ ಗಾಯ!

ಪತ್ನಿ ನಡತೆ ಬಗ್ಗೆ ಸಂಶಯ; ಜಿಲೆಟಿನ್ ಸ್ಫೋಟಕ್ಕೆ ತಂದೆ–ಮಗಳು ಬಲಿ

Kalaburagi News: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ನಡತೆ ಬಗ್ಗೆ ಸಂಶಯಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ 15 ವರ್ಷದ ಪುತ್ರಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮಂಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

Cauvery Water Dispute: ಕರ್ನಾಟಕಕ್ಕೆ ಮತ್ತೆ ಶಾಕ್‌ ನೀಡಿದ CWRC; ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್​ ನೀರು ಹರಿಸಲು ಆದೇಶ!

ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್​ ನೀರು ಹರಿಸಲು CWRC ಆದೇಶ

ಕರ್ನಾಟಕವು ಮಳೆ ಕೊರತೆ ಮತ್ತು ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕುಸಿತದ ಬಗ್ಗೆ ವಿವರಿಸಿದ್ದು, ಸದ್ಯ ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್‌​ನಷ್ಟು ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎನ್ನುವುದನ್ನು ಸಿಡಬ್ಲ್ಯುಆರ್​ಸಿಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮನದಟ್ಟು ಮಾಡಿದ್ದಾರೆ. ಆದರೂ, ನೀರು ಹರಿಸುವಂತೆ ಸಿಡಬ್ಲ್ಯುಆರ್ ಸೂಚನೆ ನೀಡಿದೆ.

ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಗೋವಾದಲ್ಲಿ ಅದ್ಧೂರಿಯಾಗಿ ನಡೆದ ಪ್ರಪ್ರಥಮ ಪ್ರತಿಬಿಂಬ ಕಾರ್ಯಕ್ರಮ

ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಗೋವಾದಲ್ಲಿ ಪ್ರಪ್ರಥಮ ಪ್ರತಿಬಿಂಬ ಕಾರ್ಯಕ್ರಮ

ಪ್ರತಿಬಿಂಬ ಕಾರ್ಯಕ್ರಮ ಪ್ರತಿಭೆಗಳಿಗೆ ಸ್ಫೂರ್ತಿ ನೀಡುತ್ತದೆ, ಪ್ರೇರಣೆ ನೀಡುತ್ತದೆ ಹಾಗೂ ಕಳೆದ ಮೂರು ದಶಕಗಳಿಂದ ಹವ್ಯಕ ಮಹಾಸಭೆ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವುದೇ ಇದರ ಪ್ರಾಮುಖ್ಯತೆಯನ್ನು ದೃಢೀಕರಿಸುತ್ತಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದ್ದಾರೆ.

Bengaluru Tragedy: ಬೆಂಗಳೂರಿನಲ್ಲಿ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು, ಮೂವರ ರಕ್ಷಣೆ

ಬೆಂಗಳೂರಿನಲ್ಲಿ ಅಂಡರ್‌ ಪಾಸ್‌ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರ ಸಾವು

Soil Wall Collapse in Bengaluru: ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂಡರ್‌ ಪಾಸ್‌ ಕಾಮಗಾರಿ ಸ್ಥಳದಲ್ಲಿ ಸುಮಾರು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸೌಂದರ್ಯಿಕರಣಗೊಂಡ ಮಮದಾಪುರ ಸರೋವರ, ಸಚಿವ ಡಾ.ಎಂ.ಬಿ.ಪಾಟೀಲ್ ಲೋಕಾರ್ಪಣೆ

ಸೌಂದರ್ಯಿಕರಣಗೊಂಡ ಮಮದಾಪುರ ಸರೋವರ

ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಡಾ.ಎಂ.ಬಿ.ಪಾಟೀಲ್ ಅವರು ಜಿಲ್ಲೆಯ ಬಬಲೇಶ್ವರ ತಾಲ್ಲೂಕಿ ನಲ್ಲಿರುವ ಐತಿಹಾಸಿಕ, ಸಮುದಾಯ ಮೂಲಸೌಕರ್ಯಗಳಿಂದ ಸೌಂದರ್ಯಿಕರಣ ಗೊಂಡ ಮಮದಾಪುರ ಸರೋವರವನ್ನು ಲೋಕಾರ್ಪಣೆ ಮಾಡಿದರು.

Bandh: ಬೆಳೆ ವಿಮೆ ತಾರತಮ್ಯ ಖಂಡಿಸಿ ಕಾಳಗಿ ಸಂಪೂರ್ಣ ಬಂದ್: ರೈತರ ಹೋರಾಟಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರ ಬೆಂಬಲ; ನ್ಯಾಯಯುತ ಪರಿಹಾರಕ್ಕೆ ಆಗ್ರಹ

ಬೆಳೆ ವಿಮೆ ತಾರತಮ್ಯ ಖಂಡಿಸಿ ಕಾಳಗಿ ಸಂಪೂರ್ಣ ಬಂದ್

ಬೆಳೆ ವಿಮೆ ಪಾವತಿಯಲ್ಲಿ ಅರ್ಹ ರೈತರಿಗೆ ಅನ್ಯಾಯವಾಗಿದ್ದು, ವಿಮೆ ಪಾವತಿಗೆ ಸಂಬಂಧಿಸಿದ ತಾರತಮ್ಯವನ್ನು ಸರಿಪಡಿಸಿ ನಷ್ಟಕ್ಕೊಳಗಾದ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಕೈಜೋಡಿಸಿದರು

ವಾಹನ ಮಾಲೀಕರಿಗೆ ಕನಿಷ್ಠ ಒಂದು ಲಕ್ಷ ರೂ ವಿಶೇಷ ಪ್ಯಾಕೇಜ್ ಘೋಷಿಸಿ: ಡಾ. ಆನಂದ ಕುಮಾರ್

ವಾಹನ ಮಾಲೀಕರಿಗೆ ಕನಿಷ್ಠ ಒಂದು ಲಕ್ಷ ರೂ ವಿಶೇಷ ಪ್ಯಾಕೇಜ್ ಘೋಷಿಸಿ

ಎಥೆನಾಲ್ ಮಿಶ್ರಣದ ಪೆಟ್ರೋಲ್ ಮಾರಾಟ ಅಳಿಸಲಾಗದ ಹಾನಿಯುಂಟು ಮಾಡಲಿದೆ. ಹೆಚ್ಚು ಉದ್ಯೋಗ ನೀಡಿರುವ ಸಾಗಾಣೆ ವಲಯಕ್ಕೆ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆ. ಎಥೆನಾಲ್ ಮಿಶ್ರಣದ ನಂತರವೂ ಪೆಟ್ರೋಲ್ ದರ ಕಡಿಮೆಯಾಗಿಲ್ಲ. "ಅದೇ ಬೆಲೆ, ಆದರೆ ದೂರ ಕಡಿಮೆ" ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದ ಜನರ ಸಾವಿರಾರು ಕೋಟಿ ರೂ ತೈಲ ಕಂಪೆನಿಗಳ ಜೇಬಿಗೆ ಸೇರುತ್ತಿದೆ.

Loading...