ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮಳೆ ಕೈ ಕೊಟ್ಟಿತು, ಅಂತರ್ಜಲ ಪಾತಾಳಕ್ಕಿಳಿಯಿತು!

ಮಳೆ ಕೈ ಕೊಟ್ಟಿತು, ಅಂತರ್ಜಲ ಪಾತಾಳಕ್ಕಿಳಿಯಿತು!

ಮಳೆ ಬರಬೇಕಾದ ಕಾಲದಲ್ಲೇ ಮಳೆ ಕೈಕೊಟ್ಟಿದೆ. ಕೆರೆ-ಕಟ್ಟೆಗಳು ತುಂಬಿಲ್ಲ. ಜಲಾಶಯಗಳಿಗೆ ನಿರೀಕ್ಷಿತ ಒಳಹರಿವು ಇಲ್ಲ. ಕೊಳವೆಬಾವಿಗಳು ರೀಚಾರ್ಜ್ ಆಗಿಲ್ಲ. ಪರಿಣಾಮ, ಮೈಸೂರು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದ್ದು, ಕೃಷಿ ಮತ್ತು ಗ್ರಾಮೀಣ ಬದುಕಿನ ಮೇಲೆ ನೀರಿನ ಬಿಕ್ಕಟ್ಟಿನ ಕರಿನೆರಳು ಆವರಿಸಿದೆ.

11th Kannada Sahitya Sammelana: ನ.19ರಿಂದ ಚಿಂತಾಮಣಿಯಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಗೊಲ್ಲಹಳ್ಳಿ ಶಿವಪ್ರಸಾದ್ ಸಮ್ಮೇಳನಾಧ್ಯಕ್ಷ

ನ.19ರಿಂದ ಚಿಂತಾಮಣಿಯಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಚಿಂತಾಮಣಿಯ ನೂತನ ಅಂಬೇಡ್ಕರ್ ಭವನದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದ್ದು ವಿಜೃಂಭಣೆಯಿಂದ ನುಡಿಹಬ್ಬ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ.

MLA becoming a father: ಹೆಣ್ಣು ಮಗುವಿನ ಜನನದಿಂದ ಕುಟುಂಬದಲ್ಲಿ ಸಂಭ್ರಮ; ತಂದೆಯಾದ ಸಂತಸ ಹಂಚಿಕೊಂಡ ಶಾಸಕ

ಶಾಸಕ ಪ್ರದೀಪ್ ಈಶ್ವರ್ ದಂಪತಿ ಮನೆಗೆ ಮಹಾಲಕ್ಷ್ಮಿಯ ಆಗಮನ

ಹೆಣ್ಣು ಮಗುವಿನ ಜನನವನ್ನು ಮಹಾಲಕ್ಷ್ಮಿಯ ಆಗಮನವೆಂದು ಭಾವಿಸಿ ಸಂಭ್ರಮಿಸಿರುವ ಶಾಸಕರ ಮಾತು ಹೆಣ್ಣು ಮಗುವಿನ ಮೇಲಿನ ಪ್ರೀತಿ, ಗೌರವ ಹಾಗೂ ಕುಟುಂಬದ ಸಂತೋಷವನ್ನು ಪ್ರತಿಬಿಂಬಿಸಿದೆ. ರಾಜಕೀಯದ ಒತ್ತಡ, ಸಾರ್ವಜನಿಕ ಜೀವನದ ಜವಾಬ್ದಾರಿಗಳ ನಡುವೆ ತಂದೆಯಾದ ಕ್ಷಣ ಅವರ ಪಾಲಿಗೆ ಮರೆಯಲಾಗದ ಭಾವನಾತ್ಮಕ ಅನುಭವವಾಗಿದೆ.

ಮಹಿಳೆಯರಿಗೆ ಗೌರವ ಸಲ್ಲಿಸಲು ಡಿಸೆಂಬರ್ 20ಕ್ಕೆ ಬೃಹತ್ ಮಾತೃಸಂಗಮ ಕಾರ್ಯಕ್ರಮ: ಡಾ.ಗಿರಿಧರ ಕಜೆ

ಡಿಸೆಂಬರ್ 20ಕ್ಕೆ ಬೃಹತ್ ಮಾತೃಸಂಗಮ: ಡಾ.ಗಿರಿಧರ ಕಜೆ

Dr Giridhara Kaje: ಪ್ರತಿಬಿಂಬ ಸ್ಪರ್ಧಾ ಸೌರಭವನ್ನು 31 ವರ್ಷಗಳ ಹಿಂದೆ ಆರಂಭಿಸಲಾಯಿತು. ಇದು ಅಂದಿನಿಂದ ಇಂದಿನವರೆಗೂ ಸಮಾಜದ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಂಡು ಬಂದಿದೆ. ಈ ವರ್ಷ ವಿಶೇಷವಾಗಿ ರಾಜ್ಯ, ಹೊರ ರಾಜ್ಯಗಳ 13 ಪ್ರಾಂತ್ಯಗಳಲ್ಲಿ ಪ್ರತಿಬಿಂಬವನ್ನು ನಡೆಸಲಾಗಿದ್ದು, ಸಮಾಜದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದ್ದಾರೆ.

ಜನವರಿ 3ರಿಂದ ಎಲ್ಲ ಜಿಲ್ಲೆಗಳಲ್ಲಿ ಫ.ಗು.ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಸಚಿವ ಎಂ.ಬಿ. ಪಾಟೀಲ್‌

ಜನವರಿ 3ರಿಂದ ಎಲ್ಲ ಜಿಲ್ಲೆಗಳಲ್ಲಿ ಫ.ಗು.ಹಳಕಟ್ಟಿ ಜೀವನ-ಸಾಧನೆ ಅಭಿಯಾನ

MB Patil: ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜೀವನ ಮತ್ತು ಸಾಧನೆ ಕುರಿತ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಎಲ್ಲ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಮತ್ತು ಉಪನ್ಯಾಸಗಳು ನಡೆಯಲಿವೆ. ಏಪ್ರಿಲ್ 26ರಂದು ವಿಜಯಪುರದಲ್ಲಿ ಕೊನೆಯ ಜಿಲ್ಲಾ ಮಟ್ಟದ ಸಮಾರಂಭ ನಡೆಯಲಿದೆ. ಅಂತಿಮವಾಗಿ ರಾಜ್ಯ ಮಟ್ಟದ ಕಾರ್ಯಕ್ರಮವು 2027ರ ಮೇ 16ರಂದು ಬೆಂಗಳೂರಿನಲ್ಲಿ ಜರುಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಏರ್‌ಪೋರ್ಟ್‌ಗೆ ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್

ಏರ್‌ಪೋರ್ಟ್‌ಗೆ ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ಚಿಂತನೆ: ಸಿಎಂ

CM DK Shivakumar: ಫ್ಲೈಓವರ್ ಅನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕು ಅಥವಾ ಬೇರೆ ರೀತಿಯ ವ್ಯವಸ್ಥೆ ಮಾಡಬೇಕೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದು, ಯಾವ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

R Hithendra IPS: ಬೆಂಗಳೂರಿನಲ್ಲಿ 5 ಪ್ರತ್ಯೇಕ ಪೊಲೀಸ್‌ ಕಮಿಷನರೇಟ್‌; ನಗರದ ಮೊದಲ ಮುಖ್ಯ ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ

ಬೆಂಗಳೂರು ಮುಖ್ಯ ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ

New Chief Police commissioner of Bengaluru: ರಾಜ್ಯ ಸರ್ಕಾರವು ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ನಗರವನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ ವಿಭಜಿಸಿದೆ. ಆರ್. ಹಿತೇಂದ್ರ ಅವರು ಬೆಂಗಳೂರು ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

MEIL Group: ಜಾಗತಿಕ ಹೂಡಿಕೆದಾರರ ಬೆಂಬಲ; 1 ಲಕ್ಷ ಕೋಟಿ ರೂ.ಗೆ ಏರಿದ ಎಂ.ಇ.ಐ.ಎಲ್‌ ಮೌಲ್ಯ!

ಜಾಗತಿಕ ಹೂಡಿಕೆದಾರರ ಬೆಂಬಲ; 1 ಲಕ್ಷ ಕೋಟಿಗೆ ಏರಿದ ಎಂ.ಇ.ಐ.ಎಲ್‌ ಮೌಲ್ಯ!

MEIL: ಮೇಘಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್‌) ಗ್ರೂಪ್ ಸುಮಾರು 700 ಮಿಲಿಯನ್ ಡಾಲರ್ ಮೊತ್ತದ ಬೃಹತ್ ಹೂಡಿಕೆಯನ್ನು ಆಕರ್ಷಿಸಿದೆ. ರಚನಾತ್ಮಕ ಈಕ್ವಿಟಿ ಹೂಡಿಕೆ ಮತ್ತು ಆಸ್ತಿಗಳ ಪ್ರಸ್ತಾವಿತ ಹಣಗಳಿಕೆ ಒಳಗೊಂಡ ನವೀನ ಹಣಕಾಸು ವ್ಯವಸ್ಥೆಯ ಮೂಲಕ ಈ ಹೂಡಿಕೆ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. !

ಕೊಲ್ಕತ್ತಾದಿಂದ ಹೊರಟು 45 ದಿನಗಳ ಬಳಿಕ ಬೆಂಗಳೂರು ತಲುಪಿದ ಬೋಯಿಂಗ್‌ ವಿಮಾನ!

ಕೊಲ್ಕತ್ತಾದಿಂದ ಹೊರಟು 45 ದಿನಗಳ ಬಳಿಕ ಬೆಂಗಳೂರು ತಲುಪಿದ ಬೋಯಿಂಗ್‌ ವಿಮಾನ!

ಈ ಹಿಂದೆ ‘ಬೇಬಿ ಬೋಯಿಂಗ್ʼ ಎಂದು ಕರೆಯಲ್ಪಡುತ್ತಿದ್ದ ದೈತ್ಯ ಬೋಯಿಂಗ್ 737-200 ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹಾರಾಟ ನಿಲ್ಲಿಸಿ ನಿಂತಿತ್ತು. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ. (ಬಿಐಎಎಲ್‌) ಇದನ್ನು ಖರೀದಿಸಿ ತಂದು ಅದಕ್ಕೆ ‘ಫೀನಿಕ್ಸ್ʼ ಎಂದು ಹೆಸರು ಇಟ್ಟಿದೆ.

Chikkaballapur Accident: ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ; ಬೊಲೆರೊಗೆ ಕಾರು ಡಿಕ್ಕಿಯಾಗಿ ನಾಲ್ವರ ದುರ್ಮರಣ!

ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ; ನಾಲ್ವರ ದುರ್ಮರಣ!

ಬೆಂಗಳೂರು ಕಡೆಯಿಂದ ಚಿಕ್ಕಬಳ್ಳಾಪುರದತ್ತ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ರಸ್ತೆ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ನಂದಿ ಗಿರಿಧಾಮ ಪೊಲೀಸ್ ಠಾಣೆ ಎದುರು ಅಪಘಾತ ನಡೆದಿದೆ.

IPS Officers Transfer: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿ ರಾಜ್ಯದ 32 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೇರಿ 32 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.

Draw Your Dreams: 400ಕ್ಕೂ ಹೆಚ್ಚು ಮಕ್ಕಳ ಕನಸುಗಳಿಗೆ ಬಣ್ಣ: ಬಿಎಂಎಸ್ ಕಾಲೇಜಿನಲ್ಲಿ ಡ್ರಾ ಯುವರ್ ಡ್ರೀಮ್ಸ್ ಚಿತ್ರಕಲಾ ಸ್ಪರ್ಧೆ

ಬಿಎಂಎಸ್ ಕಾಲೇಜಿನಲ್ಲಿ ಡ್ರಾ ಯುವರ್ ಡ್ರೀಮ್ಸ್ ಚಿತ್ರಕಲಾ ಸ್ಪರ್ಧೆ

ಸಮಾಜದ ವಿವಿಧ ಸ್ತರಗಳ ಮಕ್ಕಳಿಗೆ ತಮ್ಮ ಸೃಜನಶೀಲತೆ ಮತ್ತು ಭವಿಷ್ಯದ ಕನಸುಗಳನ್ನು ಚಿತ್ರಗಳ ಮೂಲಕ ಅನಾವರಣಗೊಳಿಸಲು ಇದೊಂದು ಏಕೀಕೃತ ವೇದಿಕೆಯಾಯಿತು. 100ಕ್ಕೂ ಹೆಚ್ಚು ಸಮರ್ಪಿತ ಸ್ವಯಂಸೇವಕರ ಬೆಂಬಲದೊಂದಿಗೆ ಈ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಂಡಿತು.

Akasa Air: ಬೆಂಗಳೂರಿನಿಂದ ಚಂಡೀಗಢಕ್ಕೆ ಮತ್ತೊಂದು ದೈನಂದಿನ ನೇರ ವಿಮಾನ: ಡಿ.1ರಿಂದ ಹಾರಾಟ ಶುರು

ಬೆಂಗಳೂರಿನಿಂದ ಚಂಡೀಗಢಕ್ಕೆ ಮತ್ತೊಂದು ದೈನಂದಿನ ನೇರ ವಿಮಾನ

ದೇಶಾದ್ಯಂತ ನಮ್ಮ ವಿಮಾನಯಾನ ಜಾಲ ವಿಸ್ತರಿಸುವ ದೀರ್ಘಕಾಲೀನ ಗುರಿಯಲ್ಲಿ ಪಂಜಾಬ್ ಪ್ರವೇಶವು ಮಹತ್ವದ ಮೈಲುಗಲ್ಲಾಗಿದೆ. ಉತ್ತರ ಭಾರತದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರ ವಾದ ಚಂಡೀಗಢವನ್ನು ಬೆಂಗಳೂರು ಹಾಗೂ ಗೋವಾದಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸುವು ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ

Shakti Sangam 2026: ನವೆಂಬರ್‌ 27ಕ್ಕೆ ಬೆಂಗಳೂರಿನಲ್ಲಿ ʼಮಹಿಳಾ ಉದ್ಯಮಿಗಳ ಶಕ್ತಿ ಸಂಗಮʼ

ನವೆಂಬರ್‌ 27ಕ್ಕೆ ಬೆಂಗಳೂರಿನಲ್ಲಿ ʼಮಹಿಳಾ ಉದ್ಯಮಿಗಳ ಶಕ್ತಿ ಸಂಗಮʼ

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಕೇಂದ್ರದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಮತ್ತು ಸ್ವಕೃತ ಚಾರಿಟೇಬಲ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಸಾವಿರಾರು ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಮಹಿಳಾ ಉದ್ಯಮಿಗಳು ಬಂದು ತಮ್ಮ 100 ಮಳಿಗೆಗಳನ್ನು ತೆರೆಯಲಿದ್ದಾರೆ.

Haveri News: ಜಿಲ್ಲೆಯ ಕಬ್ಬು ಬೆಳೆಗಾರರಿಗೆ ತಕ್ಷಣವೇ ಟನ್‌ಗೆ 3,600 ರೂ. ದರ ನಿಗದಿಪಡಿಸಿ: ಚುನ್ನಪ್ಪ ಪೂಜಾರಿ ಆಗ್ರಹ

ಕಬ್ಬಿಗೆ ತಕ್ಷಣವೇ ಟನ್‌ಗೆ 3,600 ರೂ. ದರ ನಿಗದಿಪಡಿಸಿ: ಚುನ್ನಪ್ಪ ಪೂಜಾರಿ

Chunnappa Pujari: ಕಬ್ಬಿಗೆ ಪ್ರತಿ ಟನ್‌ಗೆ 3,600 ರೂ. ದರವನ್ನು ತಕ್ಷಣವೇ ನಿಗದಿಪಡಿಸಬೇಕು. ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ ಆಗ್ರಹಿಸಿದ್ದಾರೆ.

Bengaluru Power Cut: ನ.19, 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ನ.19, 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

BESCOM: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆ.ವಿ ಎಲ್.ಆರ್. ಬಂಡೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ನ.19ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಆಶಾ ಕಾರ್ಯಕರ್ತೆಯರ ಧರಣಿ: ಹಸುಗೂಸುಗಳೊಂದಿಗೆ ಚಳಿಯಲ್ಲಿ ಮಲಗಿರುವ ತಾಯಂದಿರ ಕಣ್ಣೀರು ಸಿಎಂಗೆ ಕಾಣುತ್ತಿಲ್ಲವೇ?: ನಿಖಿಲ್‌ ಕಿಡಿ

ಹಸುಗೂಸುಗಳೊಂದಿಗೆ ಚಳಿಯಲ್ಲಿ ಮಲಗಿರುವ ತಾಯಂದಿರ ಕಣ್ಣೀರು ಕಾಣುತ್ತಿಲ್ಲವೇ?

ASHA workers protest: ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೇಡಿಕೆಗಳ ಈಡೇರಿಕೆ ಕುರಿತು ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಪತ್ರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.

ಕಬ್ಬು ದರ ನಿಗದಿ ವಿಫಲ; ಹಾವೇರಿಯಲ್ಲಿ ಸಕ್ಕರೆ ಸಚಿವರ ಮನೆ ಮುತ್ತಿಗೆಗೆ ಪೊಲೀಸರ ಬ್ರೇಕ್!

ಸಕ್ಕರೆ ಸಚಿವರ ಮನೆ ಮೇಲೆ ಕಬ್ಬು ಬೆಳೆಗಾರರ ಮುತ್ತಿಗೆಗೆ ಪೊಲೀಸರ ಬ್ರೇಕ್!

Haveri News: ರೈತರ ಮುತ್ತಿಗೆ ಹೋರಾಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾವೇರಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಚಿವರ ನಿವಾಸಕ್ಕೆ ತೆರಳುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಚಿವರ ಮನೆಗೆ ಪ್ರತಿಭಟನಾಕಾರರು ಪ್ರವೇಶಿಸದಂತೆ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ASHA workers protest: ಕೊರೆಯುವ ಚಳಿಯಲ್ಲೂ ಮುಂದುವರಿದ ಆಶಾ ಕಾರ್ಯಕರ್ತೆಯರ ಧರಣಿ; ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಕೊರೆಯುವ ಚಳಿಯಲ್ಲೂ ಮುಂದುವರಿದ ಆಶಾ ಕಾರ್ಯಕರ್ತೆಯರ ಧರಣಿ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಾಸಿಕ ₹15,000 ಗೌರವಧನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಶಿಶ್ LGBTQ+ ಚಲನಚಿತ್ರೋತ್ಸವ: ನವೆಂಬರ್ 20ರಿಂದ ಮೂರು ದಿನಗಳ ಚಿತ್ರಹಬ್ಬ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಶಿಶ್ LGBTQ+ ಚಲನಚಿತ್ರೋತ್ಸವ

ದಕ್ಷಿಣ ಏಷ್ಯಾದ ಅತಿದೊಡ್ಡ LGBTQ+ ಚಲನಚಿತ್ರೋತ್ಸವವಾದ ಕಾಶಿಶ್ ಪ್ರೈಡ್ ಫಿಲ್ಮ್ ಫೆಸ್ಟಿವಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ ಸಹಯೋಗದಲ್ಲಿ ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಕಾಶಿಶ್ x ಬೆಂಗಳೂರು 2026 ಚಿತ್ರೋತ್ಸವದಲ್ಲಿ 15 ದೇಶಗಳ 44 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ರಾಜ್ಯದ 5 ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ!

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್;5 ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ

Lokayukta Raid: ರಾಜ್ಯದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿರುವ ಆರೋಪ ಎದುರಿಸುತ್ತಿರುವ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ. ಹಾಸನ, ಬಾಗಲಕೋಟೆ, ಬೀದರ್, ಚಿತ್ರದುರ್ಗ ಮತ್ತು ತುಮಕೂರು ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

MP Basavaraj Bommai: ಷಡಕ್ಷರಿ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರ

ಷಡಕ್ಷರಿ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರ

ಪಾಶ್ಚಿಮಾತ್ಯ ತತ್ವಜ್ಞಾನಿಗಳಿಗೆ ಇಂದಿಗೂ ಭಾರತ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರು ವಿಜ್ಞಾನ ಆಳವಾಗಿ ಅಧ್ಯಯನ ಮಾಡಿದ್ದರೆ, ಭಾರತೀಯರು ಆಧ್ಯಾತ್ಮಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ತ್ಯಾಗ ಮಾಡುವುದು ನಮ್ಮ ಸಂಸ್ಕೃತಿ ಯಾದರೆ, ಸಂಗ್ರಹಿಸುವುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಹಲವು ಚಿಂತನೆ ಮತ್ತು ವೈವಿಧ್ಯತೆಗಳನ್ನು ಒಳಗೊಂಡಿರುವ ಭಾರತದಲ್ಲಿ ಜನಿಸಿರುವುದೇ ನಮ್ಮ ಪುಣ್ಯ

ರಾಜ್ಯದಲ್ಲಿ ಒಣಹವೆ ಮುಂದುವರಿಕೆ; ನ. 21ರಿಂದ ಹಲವೆಡೆ ಹಗುರ ಮಳೆ ಸಂಭವ

ರಾಜ್ಯದಲ್ಲಿ ಒಣಹವೆ ಮುಂದುವರಿಕೆ; ನ. 21ರಿಂದ ಹಲವೆಡೆ ಹಗುರ ಮಳೆ ಸಂಭವ

Karnatka Weather Today: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅಕ್ವಾನ್' (Akvan) ಚಂಡಮಾರುತದ ಪ್ರಭಾವ ಪೂರ್ವ ಕರಾವಳಿಯತ್ತ ಕೇಂದ್ರೀಕೃತವಾಗಿರುವುದರಿಂದ, ಕರ್ನಾಟಕದಾದ್ಯಂತ ಮುಂದಿನ ಮೂರು ದಿನಗಳ ಕಾಲ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

MLA Kothur Manjunath: ರೈತರ ನೆರವಿಗೆ 40 ಕೋಟಿ ಸಾಲ ನೀಡಲು ಸಿದ್ಧ: ಕೊತ್ತೂರು ಮಂಜುನಾಥ್

ರೈತರ ನೆರವಿಗೆ 40 ಕೋಟಿ ಸಾಲ ನೀಡಲು ಸಿದ್ಧ: ಕೊತ್ತೂರು ಮಂಜುನಾಥ್

ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಸಕಾಲದಲ್ಲಿ ಸಾಲ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು 40 ಕೋಟಿ ರೂ. ಸಾಲ ನೀಡಲು ಸಿದ್ಧನಿದ್ದೇನೆ. ಈ ಸಂಬಂಧ ಬ್ಯಾಂಕ್ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು

Loading...