ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌2 ನಲ್ಲಿ ಮಿಟ್ಟಿ ಕೆಫೆಯ ಹೊಸ ಶಾಖೆ ಪ್ರಾರಂಭ

ಟರ್ಮಿನಲ್‌2 ನಲ್ಲಿ ಮಿಟ್ಟಿ ಕೆಫೆಯ ಹೊಸ ಶಾಖೆ ಪ್ರಾರಂಭ

ವಿಶೇಷ ಚೇತನರಿಗೆ ಅವಕಾಶಗಳು ಸಿಗುತ್ತವೆಯಾದರೂ ಅತಿ ಕಡಿಮೆ. ಹೀಗಾಗಿ ವಿಶೇಷ ಚೇತನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ ಕೆಫೆ ಪ್ರಾರಂಭಿಸಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ತಯಾರಿಕರಿಂದ ಹಿಡಿದು, ಕ್ಲೀನಿಂಗ್‌, ಕ್ಯಾಶಿಯರ್‌ ಸಹ ವಿಶೇಷ ಚೇತನರೇ ಆಗಿರುತ್ತಾರೆ. ಈಗಾಗಲೇ ಟರ್ಮಿನಲ್‌ ೧ರಲ್ಲಿ ಮಿಟ್ಟಿ ಕೆಫೆ ತೆರೆದಿದ್ದು, ಸಾಕಷ್ಟು ವಿಶೇಷಚೇತನರು ಕೆಲಸ ಪಡೆದಿದ್ದಾರೆ.

Bangalore News: ಪದೇಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲೂ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ

ಪದೇಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲೂ ಬೆಂಗಳೂರು ದೇಶದಲ್ಲೇ ಮೊದಲು

ನಗರದಲ್ಲಿ 14.5 ಲಕ್ಷಕ್ಕೂ ಹೆಚ್ಚು ಸಂಚಾರ ತಪಾಸಣೆಗಳನ್ನು ನಡೆಸಲಾಗಿದ್ದು, ಸುಮಾರು ಶೇ. 61 ಮಂದಿ ಅಂದರೆ, ಪ್ರತಿ 10 ಜನರಲ್ಲಿ ಸುಮಾರು 6 ಮಂದಿ ಕನಿಷ್ಠ ಒಂದು ಸಂಚಾರ ದಂಡವನ್ನು ಹೊಂದಿರುವುದು ಕಂಡುಬಂದಿದೆ. ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವ ಪ್ರವೃತ್ತಿ ಹೆಚ್ಚಾಗಿ ಕಂಡು ಬಂದಿದ್ದು, ಹೆಚ್ಚಿನ ಪ್ರಕರಣಗಳು ಹೆಲ್ಮೆಟ್ ಸಂಬಂಧಿತ ದಂಡಗಳೇ ಕಂಡುಬಂದಿವೆ.

ಸಂಚಾರ ನಿರ್ವಹಣೆಗೆ (ಟ್ರಾಫಿಕ್ ಮ್ಯಾನೇಜ್ಮೆಂಟ್) ಇರುವೆಗಳ ಮಾರ್ಗದರ್ಶನ ಅಥವಾ ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

ಇರುವೆಗಳ ಸ್ವಭಾವ ಹಾಗೂ ವರ್ತನೆಯು ಕೆಲವೊಮ್ಮೆ ಮನುಷ್ಯರಿಗೆ ನಡವಳಿಕೆಯ ಪಾಠವನ್ನು ಹೇಳಿಕೊಡುತ್ತದೆ. ಅಂದಹಾಗೆ, ಆಹಾರ ಅರಸಿ ಹೊರಡುವ ಇರುವೆಗಳ ಸಂಚಾರಕ್ಕೆ ಅಥವಾ ಅವುಗಳ ಸುದೀರ್ಘ ಚಲನೆಗೆ ಅಡ್ಡಿಯಾಗಿರುವುದನ್ನು ನೀವೂ ಎಂದಾದರೂ ಕಂಡಿದ್ದೀರಾ. ಇರುವೆಗಳು ಒಂದರ ಹಿಂದೆ ಒಂದರಂತೆ ಬಹುದೂರ ಕ್ರಮಿಸುವ ಹಾಗೂ ನಮ್ಮಂತೆಯೇ (ಮನುಷ್ಯರಂತೆ) ದ್ವಿಮುಖ ಸಂಚಾರ ವನ್ನೂ ಅನುಸರಿಸುತ್ತವೆ.

ಒರಾಯನ್ ಮಾಲ್ಸ್ ಬೆಂಗಳೂರು ಆಯೋಜಿಸಿರುವ ದೀಪಾವಳಿ ವಿಷಯದ DIY ಕಾರ್ಯಾಗಾರಗಳು

ದೀಪಾವಳಿ ವಿಷಯದ DIY ಕಾರ್ಯಾಗಾರಗಳು

ವರ್ಕ್‌ಶಾಪ್‌ಗಳು ಅಕ್ಟೋಬರ್ 11 ಮತ್ತು 12, ಹಾಗೂ ಅಕ್ಟೋಬರ್ 18 ಮತ್ತು 19, 2025 ರಂದು ನಡೆಯಲಿವೆ. ಭಾಗವಹಿಸುವವರು ತಾವು ಇಚ್ಛಿಸುವ ರಚನೆಗಳನ್ನು ತಯಾರಿಸಬಹುದು — ಟೆರಾ ಕೋಟಾ ದೀಪಗಳ ಪೈಂಟಿಂಗ್, ಮೆಣಚುಬತ್ತಿ ಹಾಗೂ ಮೆಣಚುಬತ್ತಿ ಹೋಲ್ಡರ್‌ಗಳ ನಿರ್ಮಾಣ, ಗೋಡೆಯ ಅಲಂಕಾರಗಳು, ಆಕರ್ಷಕವಾದ ತಮರೆಯ ಗೋಡೆ ಡೆಕೋರ್ ಮತ್ತು ದೀಪಾವಳಿಗೆ ಸಂಬಂಧಿಸಿದ ಇನ್ನೂ ಹಲವಾರು ಕೈಚೆಲುವು ಕಲಾಕೃತಿಗಳನ್ನು ತಯಾರಿಸಲು ಅವಕಾಶ.

Ashok Pattan: ರೈತರ ಬೆಂಬಲದಿಂದ ನಾನು ಗೆಲುವು ಸಾಧಿಸುತ್ತೇನೆ

ರೈತರ ಬೆಂಬಲದಿಂದ ನಾನು ಗೆಲುವು ಸಾಧಿಸುತ್ತೇನೆ

ಗುರುವಾರ ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮಾತನಾಡಿದರು. ನಾನು ಯಾರ ಬಣದಲ್ಲಿ ಯೂ ಗುರುತಿಸಿಕೊಂಡಿಲ್ಲ. ನನ್ನ ಕ್ಷೇತ್ರದ ರೈತರ ಒತ್ತಾಯದ ಮೇರೆಗೆ ಚುನಾವಣೆ ಸ್ಪರ್ಧೆ ಮಾಡಿದ್ದು ಗೆಲುವು ಸಾಧಿಸುವ ವಿಶ್ವಾಸ ಇದೆ

Former MLA Mahadevappa Yadav: ಡಿಸಿಸಿ ಚುನಾವಣೆಯಲ್ಲಿ ಗೆಲುವು ನಮ್ಮದೆ ; ಮಲ್ಲಣ್ಣ ಯಾದವಾಡ

ಡಿಸಿಸಿ ಚುನಾವಣೆಯಲ್ಲಿ ಗೆಲುವು ನಮ್ಮದೆ ; ಮಲ್ಲಣ್ಣ ಯಾದವಾಡ

ರಮೇಶ್ ಜಾರಕಿಹೊಳಿ ಸಂಪರ್ಕ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಎರಡು ಬಾರಿ ಶಾಸಕನಾಗಿರುವ ನನಗೆ ಮತ್ತೊಬ್ಬರ ಸಂಪರ್ಕ ಮಾಡುವ ಅವಶ್ಯಕತೆ ಇಲ್ಲ. ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಹುಮತ ಪಡೆದಿದ್ದೇವೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದರು.

Balachandra Jarkiholi: ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ

ನಾವು 13 ಸ್ಥಾನಗಳಿಗೆ ಸ್ಪರ್ಧಿಸಲಿದ್ದೇವೆ. ಆದರೆ, ಅವಿರೋಧ ಆಯ್ಕೆ ನಡೆಯುತ್ತದೆಯೋ? ಇಲ್ಲವೋ? ಎಂಬುದು ಅ. 11 ರ ಮಧ್ಯಾಹ್ನ 3 ಗಂಟೆವರೆಗೆ ಗೊತ್ತಾಗಲಿದೆ. ನಮ್ಮ 13 ಜನ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಇದೆ. ಗೆಲ್ಲಬೇಕೆಂದೇ ನಾವು ಚುನಾವಣೆಗೆ ಸ್ಪರ್ಧಿಸುತ್ತೇದ್ದೇವೆ. ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ. ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಉತ್ತಮ ಆಡಳಿತ ನಡೆಸುತ್ತೇವೆ

Mahesh shetty thimarodi: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ; ಮಹೇಶ್‌ ತಿಮರೋಡಿ ಜಾಮೀನು ಅರ್ಜಿ ವಜಾ

ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ; ಮಹೇಶ್‌ ತಿಮರೋಡಿ ಜಾಮೀನು ಅರ್ಜಿ ವಜಾ

Mangaluru News: ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ತಿಮರೋಡಿ, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅವರಿಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Self Harming: ಬೆಂಗಳೂರಿನ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

ಬೆಂಗಳೂರಿನ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

Bengaluru News: ಮನೆಯವರಿಂದ ಪ್ರೀತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ. ಸ್ಥಳಕ್ಕೆ ಯಲಹಂಕ ನ್ಯೂ ಟೌನ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

Internal Reservation: ಎಸ್‌ಟಿಗಳಿಗೂ ಒಳಮೀಸಲಾತಿ ವಿಸ್ತರಿಸಿ: ಸರ್ಕಾರಕ್ಕೆ ಆದಿವಾಸಿ ನಾಯಕರ ಆಗ್ರಹ

ಪರಿಶಿಷ್ಟ ಪಂಗಡಗಳಿಗೂ ಒಳಮೀಸಲಾತಿ ವಿಸ್ತರಿಸಿ: ಆದಿವಾಸಿ ನಾಯಕರ ಆಗ್ರಹ

ST reservation: ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮಾತ್ರ ಒಳಮೀಸಲಾತಿ ಜಾರಿ ಪ್ರಕ್ರಿಯೆ ನಡೆಸಿದೆ. ಪರಿಶಿಷ್ಟ ಪಂಗಡಗಳಿಗೂ ಒಳಮೀಸಲಾತಿ ವಿಸ್ತರಿಸಲು ಆಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆಯಲ್ಲಿ ಆದಿವಾಸಿ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

Mahalaya Movie: ಮೋಹನ್ ಮಾಯಣ್ಣ ನಿರ್ದೇಶನದ ʼಮಹಾಲಯʼ ಚಿತ್ರಕ್ಕೆ ನಟ ಶ್ರೀಮುರಳಿ ಚಾಲನೆ

ಮೋಹನ್ ಮಾಯಣ್ಣ ನಿರ್ದೇಶನದ ʼಮಹಾಲಯʼ ಚಿತ್ರಕ್ಕೆ ಶ್ರೀಮುರಳಿ ಚಾಲನೆ

Mahalaya Movie: ಮೋಹನ್ ಮಾಯಣ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ʼಮಹಾಲಯʼ ಚಿತ್ರದ ಮೊದಲ ದೃಶ್ಯಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಕುರಿತ ವಿವರ ಇಲ್ಲಿದೆ.

Kodagu school Tragedy: ಮಡಿಕೇರಿ ಶಾಲೆ ಅಗ್ನಿ ದುರಂತ; 51 ಮಕ್ಕಳನ್ನು ರಕ್ಷಿಸಿದ ಇಬ್ಬರು ಧೈರ್ಯವಂತ ಬಾಲಕರು!

ಮಡಿಕೇರಿ ಶಾಲೆ ಅಗ್ನಿ ದುರಂತ; 51 ಮಕ್ಕಳನ್ನು ರಕ್ಷಿಸಿದ ಇಬ್ಬರು ಬಾಲಕರು!

Fire Accident at Madikeri school: ಮಡಿಕೇರಿ ತಾಲೂಕಿನ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ನಡೆದ ಅಗ್ನಿ ದುರಂತದಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದಾನೆ. ಅವಘಡದ ಸಂದರ್ಭದಲ್ಲಿ ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರಿಬ್ಬರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿದೆ. ಹೀಗಾಗಿ ಇವರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Cabinet meeting: 2000 ಕೋಟಿ ವೆಚ್ಚದಲ್ಲಿ ಸೇತುವೆಗಳ ಮರು ನಿರ್ಮಾಣ, ಪುನಶ್ಚೇತನ ಕಾಮಗಾರಿಗಳಿಗೆ ಸಂಪುಟ ಅಸ್ತು

2000 ಕೋಟಿ ವೆಚ್ಚದಲ್ಲಿ ಸೇತುವೆಗಳ ಮರು ನಿರ್ಮಾಣ, ಪುನಶ್ಚೇತನ

Karnataka Road Development: ಲೋಕೋಪಯೋಗಿ ಇಲಾಖೆಯಡಿ ಸೇತುವೆಗಳು ಪುನರ್ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು 2000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ತಾತ್ವಿಕ ಅನುಮೋದನೆ ಹಾಗೂ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ವೈದ್ಯಕೀಯ ಕಾಲೇಜು ಕಟ್ಟಡ ಸೇರಿ ವಿವಿಧ ಕಾಮಗಾರಿಗಳನ್ನು 550.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

Bengaluru Metro Fare Hike: ಅಸಮಂಜಸವಾಗಿ ಮೆಟ್ರೋ ಟಿಕೆಟ್‌ ದರ ಏರಿಕೆ; ಬಿಎಂಆರ್‌ಎಸಿಎಲ್‌ಗೆ ಸಂಸದ ತೇಜಸ್ವಿ ಸೂರ್ಯ ಪತ್ರ

ಅಸಮಂಜಸವಾಗಿ ಮೆಟ್ರೋ ಟಿಕೆಟ್‌ ದರ ಏರಿಕೆ; ತೇಜಸ್ವಿ ಸೂರ್ಯ ಪತ್ರ

Bengaluru Metro Fare Hike: ಮೆಟ್ರೋ ಟಿಕೆಟ್‌ ದರ ಪರಿಷ್ಕರಣೆಯಲ್ಲಿನ ದೋಷ ಸರಿಪಡಿಸಲು ಬಿಎಂಆರ್‌ಸಿಎಲ್‌ ಎಂಡಿಗೆ ಪತ್ರ ಬರೆದಿದ್ದೇನೆ. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸುದೀರ್ಘ ವಿಳಂಬದ ನಂತರ ಬಿಎಂಆರ್‌ಸಿಎಲ್‌ ಎಫ್‌ಎಫ್‌ಸಿ ವರದಿ ಬಿಡುಗಡೆ ಮಾಡಿತ್ತು. ಆದರೆ, ದರ ಪರಿಷ್ಕರಣೆಯಲ್ಲಿ ಹಲವು ದೋಷಗಳಿವೆ ಎಂದು ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ಹೊರಹಾಕಿದ್ದಾರೆ.

Indira Food Kit: ಅನ್ನಭಾಗ್ಯ ಯೋಜನೆ; 5 ಕೆಜಿ ಅಕ್ಕಿ ಬದಲಿಗೆ ʼಇಂದಿರಾ ಆಹಾರ ಕಿಟ್‌ʼ ವಿತರಣೆಗೆ ಸಂಪುಟ ನಿರ್ಧಾರ

ಅನ್ನಭಾಗ್ಯ ಯೋಜನೆಯಲ್ಲಿ ʼಇಂದಿರಾ ಆಹಾರ ಕಿಟ್‌ʼ ವಿತರಣೆಗೆ ಸಂಪುಟ ನಿರ್ಧಾರ

Anna Bhagya Scheme : ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ಗಳಿಗೆ ಅನ್ನಭಾಗ್ಯದ 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಇತರ ಆಹಾರ ಸಾಮಗ್ರಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಇಂದಿರಾ ಆಹಾರ ಕಿಟ್‌ನಲ್ಲಿ (Indira Food Kit) ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು ತಲಾ 1 ಕೆಜಿ ಹಾಗೂ 1 ಲೀಟರ್‌ ಅಡುಗೆ ಎಣ್ಣೆ ಇರಲಿದೆ.

Menstrual leave: ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ದಿನ ಋತುಚಕ್ರ ರಜೆ; ಕ್ಯಾಬಿನೆಟ್ ಅನುಮೋದನೆ

ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ದಿನ ಋತುಚಕ್ರ ರಜೆ; ಸಂಪುಟ ಅಸ್ತು

Menstrual leave: ಕಾರ್ಮಿಕ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಋತು ಚಕ್ರ ರಜೆ ನೀತಿ 2025 ಜಾರಿಯಾದರೆ ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿ ಕಂಪನಿಗಳು, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಸಂಬಳ ಸಹಿತ ಋತು ಚಕ್ರ ರಜೆ ನೀಡಲಾಗುತ್ತದೆ.

Kantara Chapter 1: ಅಪಚಾರ ಮಾಡುವವರಿಗೆ ಹುಚ್ಚು ಹಿಡಿಸುತ್ತೇನೆ: ಪಿಲಿಚಂಡಿ ದೈವದ ನುಡಿ

ಅಪಚಾರ ಮಾಡುವವರಿಗೆ ಹುಚ್ಚು ಹಿಡಿಸುತ್ತೇನೆ: ಪಿಲಿಚಂಡಿ ದೈವದ ನುಡಿ

‘ಕಾಂತಾರ ಚಾಪ್ಟರ್‌ 1’ ಸಿನಿಮಾದಲ್ಲಿ ದೈವದ ಚಿತ್ರಣ ಮತ್ತು ವಿವಿಧೆಡೆ ದೈವದ ಅಪಹಾಸ್ಯ ಮಾಡುತ್ತಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೆರಾರ ಕ್ಷೇತ್ರದಲ್ಲಿ ನಡೆದ ಪುದರ್‌ ಮೆಚ್ಚಿ ನೇಮದಲ್ಲಿ ಪಿಲಿಚಂಡಿ ಹಾಗೂ ಬಲವಂಡಿ ದೈವದ ಮುಂದೆ ಪ್ರಾರ್ಥನೆ ಮಾಡಲಾಗಿದೆ.

Menstrual Leave: ರಾಜ್ಯದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌!  ಶೀಘ್ರದಲ್ಲೇ ಮುಟ್ಟಿನ ರಜೆ?

ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ಶೀಘ್ರದಲ್ಲೇ ಮುಟ್ಟಿನ ರಜೆ?

Working Women: ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಪರಿಚಯಿಸಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ. ಈ ಬಗ್ಗೆ ಸಿಎಂ ಶೀಘ್ರದಲ್ಲೇ ನೀಡುವ ಸಾಧ್ಯತೆ ಇದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಮುಟ್ಟಿನ ರಜೆ ನೀತಿಯ ಕುರಿತು ಚರ್ಚಿಸುವ ಸಾಧ್ಯತೆಯಿದೆ.

Green Movie: ʼಗ್ರೀನ್ʼ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್

ʼಗ್ರೀನ್ʼ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ನಟ ಶಿವರಾಜಕುಮಾರ್

Green Movie: ರಾಜ್ ವಿಜಯ್ ನಿರ್ದೇಶನದ ಹಾಗೂ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ. ವಿಕ್ಕಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಗ್ರೀನ್ʼ ಚಿತ್ರದ ಟ್ರೇಲರ್ ಅನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಬಿಡುಗಡೆ ಮಾಡಿದರು. ಈ ಕುರಿತ ವಿವರ ಇಲ್ಲಿದೆ.

Cabinet Meeting: ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ, ಋತು ಚಕ್ರ ರಜೆ ನೀತಿ ಜಾರಿಗೆ ಸಚಿವ ಸಂಪುಟ ಒಪ್ಪಿಗೆ

ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ, ಋತು ಚಕ್ರ ರಜೆಗೆ ಸಂಪುಟ ಒಪ್ಪಿಗೆ

Age limit relaxation: ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ, ಮಹಿಳೆಯರಿಗೆ ಋತು ಚಕ್ರ ರಜೆ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ಸೇರಿ ಪ್ರಮುಖ ನಿರ್ಣಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಹೊಸ ಮಳಿಗೆ ಉದ್ಘಾಟಿಸುವ ಮೂಲಕ 17ನೇ ವರ್ಷ ಆಚರಿಸಿದ ಕ್ಯಾರಟ್‌ಲೇನ್‌

ಹೊಸ ಮಳಿಗೆ ಉದ್ಘಾಟಿಸುವ ಮೂಲಕ 17ನೇ ವರ್ಷ ಆಚರಿಸಿದ ಕ್ಯಾರಟ್‌ಲೇನ್‌

ಕ್ಯಾರಟ್‌ಲೇನ್‌ ಬ್ರ್ಯಾಂಡ್‌ ತನ್ನ 17 ವರ್ಷಗಳ ಪಯಣದಲ್ಲಿ ಗ್ರಾಹಕ ಕೇಂದ್ರಿತ ಮಾರಾಟ ವ್ಯವಸ್ಥೆಯ ಮೂಲಕ ಭಾರತದಲ್ಲಿನ ಆಭರಣ ಖರೀದಿ ಅನುಭವಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಎಂ.ಜಿ. ರಸ್ತೆಯಲ್ಲಿನ ಮಳಿಗೆಯು ಹೊಸ ಕಾಲದ ವಿನ್ಯಾಸವನ್ನು ಸ್ಥಳೀಯ ಬಯಕೆಗಳೊಂದಿಗೆ ಬೆರೆಸುವ ಕೆಲಸ ಮಾಡಿದೆ.

Hasanamba Jathra 2025: ಹಾಸನಾಂಬ ದರ್ಶನ ಆರಂಭ; ಶಾಸ್ತ್ರೋಕ್ತವಾಗಿ ತೆರೆದ ಗರ್ಭಗುಡಿ ಬಾಗಿಲು

ಶಾಸ್ತ್ರೋಕ್ತವಾಗಿ ತೆರೆದ ಹಾಸನಾಂಬ ಗರ್ಭಗುಡಿ ಬಾಗಿಲು

ನಾಳೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕೆ 1 ಸಾವಿರ ಹಾಗೂ 300 ರೂ. ದರದ ಟಿಕೆಟ್ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಭಕ್ತರು ಟಿಕೆಟ್ ಪಡೆಯಬಹುದಾಗಿದೆ. ಅ. 23 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ.

Girl Murder Case: ಮೈಸೂರು ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಬಾಲಕಿಯ ಶವ ಪತ್ತೆ, ಅತ್ಯಾಚಾರ ಎಸಗಿ ಕೊಲೆ ಶಂಕೆ

ಮೈಸೂರು ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಬಾಲಕಿಯ ಶವ ಪತ್ತೆ

Mysuru Dasara: ರಾತ್ರಿ ವ್ಯಾಪಾರ ಮುಗಿಸಿ ಬಂದ ಬಾಲಕಿ ತಂದೆ, ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಮಳೆ ಬಂದು ಎಲ್ಲರೂ ಎದ್ದಾಗ ಬಾಲಕಿ ಸ್ಥಳದಿಂದ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಟೆಂಟ್‌ನಿಂದ 50 ಮೀ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

Actress Ramya: ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ ಪ್ರಕರಣ: 380 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ ಪ್ರಕರಣ: 380 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Actor Darshan: ಆರೋಪಿಗಳ ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ ಸ್ಕ್ರೀನ್ ಶಾಟ್‌, ವಿಡಿಯೋ ಶೇರ್ ಆಗಿರುವ ಲಿಂಕ್‌ಗಳು, ದೂರುದಾರೆ ರಮ್ಯಾ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಆರೋಪಿಗಳ ಸ್ವ ಇಚ್ಚಾ ಹೇಳಿಕೆ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.

Loading...