ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಹೇಮಾವತಿ ಹೆಗಡೆ ಜನ್ಮದಿನ ಹಿರಿಯ ಜೀವಿಗಳ ಯೋಗಕ್ಷೇಮ ವಿಚಾರಣೆ

ಹೇಮಾವತಿ ಹೆಗಡೆ ಜನ್ಮದಿನ ಹಿರಿಯ ಜೀವಿಗಳ ಯೋಗಕ್ಷೇಮ ವಿಚಾರಣೆ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ವಾತ್ಸಲ್ಯ ಮಾಶಾಸನ ಫಲಾನುಭವಿಗಳನ್ನು ಭೇಟಿ ಮಾಡಿದ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿ ವರ್ಗವು ಹಣ್ಣು ಹಂಪಲು ವಿತರಿಸಲಾಯಿತು. ಹೇಮಾವತಿ ಹೆಗಡೆಯವರ ಹುಟ್ಟಿದ ದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜ್ಞಾನ ವಿಕಾಸದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಾಶಾಸನ ಪಡೆಯುವ ಫಲಾನು ಭವಿಗಳಿಗೆ ಹಣ್ಣು ಹಂಪಲು ವಿತರಿಸಿ ಆರೋಗ್ಯ ಯೋಗ ಕ್ಷೇಮ ವಿಚಾರಿಸಲಾಯಿತು.

Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರೇಯಣ ಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ, ಮತ್ತು ಅಷ್ಟಾವಧಾನ ಸೇವೆಯನ್ನು ನೇರವೇರಿಸಿ, ಮಹಾ ಮಂಗಳಾರತಿ ಯನ್ನು ಬೆಳಗಲಾಯಿತು. ರಥೋತ್ಸವವನ್ನು ನಡೆಸಲಾಯಿತು. ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.

Hemavati Veerendra Heggade: ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ: ನಿರ್ಗತಿಕರಿಗೆ ಹಣ್ಣು ಹಂಪಲು ವಿತರಣೆ

ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ

ವಾತ್ಸಲ್ಯ ಯೋಜನೆಯಡಿ ಪ್ರತಿ ತಿಂಗಳು ನಿರ್ಗತಿಕರಿಗೆ ರೂ.1000 ಮಾಶಾಸನ ವಿತರಣೆ, ವಾಸ್ತವ್ಯ ವ್ಯವಸ್ಥೆ ಇಲ್ಲದವರಿಗೆ ಮನೆ ನಿರ್ಮಾಣ, ಹಳೆಯ ಮನೆಗಳ ದುರಸ್ಥಿ, ಪ್ರತಿ ವರ್ಷ ಬಟ್ಟೆ ಮತ್ತು ಪಾತ್ರೆ ಕಿಟ್ ವಿತರಣೆ ಸೇರಿದಂತೆ ಅನೇಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯು ತ್ತಿವೆ. ಜೊತೆಗೆ, ನೊಂದ ಹೆಣ್ಣುಮಕ್ಕಳ ಸಾಂತ್ವಾನಕ್ಕಾಗಿ ‘ಗೆಳತಿ’ ವಿಶೇಷ ಸಮಾಲೋಚನಾ ಕೇಂದ್ರ ಸ್ಥಾಪಿಸಿರುವುದು ಗಮನಾರ್ಹ

Brahmarathotsava: ಜನಸಾಗರದ ನಡುವೆ ನಡೆದ ಬಜಾರ್ ರಸ್ತೆಯ ಶ್ರೀಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಜನಸಾಗರದ ನಡುವೆ ನಡೆದ ಶ್ರೀಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಪಾತಪಾಳ್ಯ ಗ್ರಾಮದ ಪಿ.ಆರ್.ರಾಧಕೃಷ್ಣ ಹಾಗೂ ಗ್ರಾಮದ ಪ್ರಮುಖರು ಹಾಗೂ ಪ್ರಧಾನ ಅರ್ಚಕರಾದ ಎಂ.ಎಸ್.ಶ್ರೀರಾಮನ್ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಹೂವು, ಧವನ, ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಾದಿಗಳು ಹರಕೆ ತೀರಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

Chikkaballapur News: ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ದೃಢಪಡಿಸಿ ಮುಂದೆ ಸಾಗಬೇಕಿದೆ: ತಹಶೀಲ್ದಾರ್ ಗಗನಸಿಂಧು

ಮಹಿಳೆಯರು ಸಬಲೆಯರು ಎಂದು ದೃಢಪಡಿಸಿ ಮುಂದೆ ಸಾಗಬೇಕಿದೆ

ಇಂತಹ ವ್ಯವಸ್ಥೆಯ ನಡುವೆಯೂ ಕೂಡ ಅನಾದಿಕಾಲದಿಂದ ಈವರೆಗೆ ಮಹಿಳೆ ಸಾಧಿಸಿರುವ ಸಾಧನೆಗಳು, ಮೂಡಿಸಿರುವ ಹೆಜ್ಜೆ ಗುರುತುಗಳು ಸಾಮಾನ್ಯವಲ್ಲ. ಅವರೇ ಕ್ಷೇತ್ರಗಳಲ್ಲಿ ಇಂತಹ ಅಸಾಮಾನ್ಯ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಆರಿಸಿ ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆಯ ನೆಪದಲ್ಲಿ ಇಲ್ಲಿಗೆ ಕರೆಸಿ ಅಭಿನಂದಿಸುತ್ತಿರುವುದು ಸಂತೋಷದ ಸಂಗತಿ.

ಲೈಫ್‌ಟೈಮ್ ರಸ್ತೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿ

ಕರ್ನಾಟಕ ಏಕೆ ಹೀಗೆ ರಿವರ್ಸ್ ಗೇರ್ ಹಾಕುತ್ತಿದೆ? ಜೋಶಿ ಪ್ರಶ್ನೆ

Pralhad Joshi: ಕರ್ನಾಟಕ ಸರ್ಕಾರ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (EV) ಮೇಲೆ ವಿಧಿಸಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದು, ಈಗ ಲೈಫ್‌ಟೈಮ್ ರಸ್ತೆ ತೆರಿಗೆ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಮಧ್ಯಮ ವರ್ಗದವರ ಮೇಲೆ ಹೆಚ್ಚುವರಿ ಭಾರ ಹಾಕುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

Good Friday: ಗುಡ್‌ ಫ್ರೈಡೆ ಅಂಗವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ದಿನಸಿ ವಿತರಿಸಿದ ಸಂದೀಪ್‌ ರೆಡ್ಡಿ

ಗುಡ್‌ ಫ್ರೈಡೆ ಅಂಗವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ದಿನಸಿ ವಿತರಣೆ

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಸೇವಾ ಕಾರ್ಯಗಳ ಮೂಲಕ ಎಲ್ಲಾ ಸಮುದಾಯ ಗಳನ್ನು ಒಟ್ಟಿಗೆ ಬೆಸೆಯುವ ಕೆಲಸವನ್ನು ನಿರ್ವಂಚನೆಯಿಂದ ಮಾಡುತ್ತಾ ಬಂದಿದೆ. ರಂಜಾನ್ ಹಬ್ಬಕ್ಕೆ ಮುಸ್ಲಿಂ ಸಮುದಾಯಕ್ಕೆ ನೆರವು ನೀಡಿದಂತೆ ಶುಕ್ರವಾರ ನಡೆಯುವ ಗುಡ್‌ ಫ್ರೈಡೆ ಅಂಗವಾಗಿ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ

ಹೂವಿನ ಕರಗ ಮಹೋತ್ಸವ ಭಕ್ತಿ ಸಂಭ್ರಮ: ಗಣ್ಯರಿಂದ ದೇವಿ ದರ್ಶನ

ಹೂವಿನ ಕರಗ ಮಹೋತ್ಸವ ಭಕ್ತಿ ಸಂಭ್ರಮ: ಗಣ್ಯರಿಂದ ದೇವಿ ದರ್ಶನ

ನಗರದ ಮುತ್ತೂರು ಬೀದಿಯಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಕರಗತಮ್ಮ ದೇವಿ ದೇವಸ್ಥಾನ ದಲ್ಲಿ 66ನೇ ವರ್ಷದ ಹೂವಿನ ಕರಗ ಮಹೋತ್ಸವವನ್ನು ಭಕ್ತಿಭಾವ ದಿಂದ ಹಾಗೂ ಅದ್ದೂರಿ ಯಾಗಿ ಆಚರಿಸಲಾಯಿತು. ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಅಲಂಕಾರ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಭಕ್ತಿಯನ್ನು ಅರ್ಪಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಲೂಗಡ್ಡೆ ಬೆಳೆದ ರೈತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ : ಸಂದೀಪ್‌ ರೆಡ್ಡಿ ಮನವಿ

ಜಿಲ್ಲಾ ಉಸ್ತುವಾರಿ ಮಂತ್ರಿಗಳು ರೈತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ

ಆಲೂಗಡ್ಡೆ ವಾಣಿಜ್ಯ ಬೆಳೆಯಾಗಿದ್ದು ಈ ಬಾರಿ ಉತ್ತಮ ಇಳುವರಿ ಬಂದಿದೆ. ಒಂದು ಮೂಟೆಗೆ 450-500 ರೂಪಾಯಿ ಬೆಲೆಯಿದೆ. ಉತ್ತಮ ಬೆಲೆಯಿದಿದ್ದರೆ 1200 ರಿಂದ 1500 ರೂಪಾಯಿಗೆ ಒಂದು ಮೂಟೆ ಮಾರಾಟ ಮಾಡಬೇಕಿತ್ತು. ಹೀಗಾಗಿ ಹೆಚ್ಚಿನ ಬೆಲೆಯಿದ್ದಾಗ ಮಾರಾಟ ಮಾಡಲು ಶೀಥಲೀಕರಣ ಘಟಕಕ್ಕೆ ತಂದಿದ್ದಾರೆ. ಈಗ ಬಂದಷ್ಟಕ್ಕೆ ಮಾರಿದರೆ ಎಕರೆಗೆ 50 ರಿಂದ ಒಂದು ಲಕ್ಷದ ತನಕ ನಷ್ಟಕ್ಕೆ ಒಳಗಾಗುತ್ತಾರೆ

Murder Case: ಸ್ನೂಕರ್‌ ಸ್ಟಿಕ್‌ನಲ್ಲಿ ಹೊಡೆದು ಹೆಡ್‌ಕುಕ್‌ ಹತ್ಯೆ, ಹೆಣ ಸಾಗಿಸುವಾಗ ಸಿಕ್ಕಿಬಿದ್ದ ಹೋಟೆಲ್‌ ಮಾಲಿಕ

ಸ್ನೂಕರ್‌ ಸ್ಟಿಕ್‌ನಲ್ಲಿ ಬಡಿದು ಹೆಡ್‌ಕುಕ್‌ ಹತ್ಯೆ, ಹೆಣ ಸಾಗಿಸುವಾಗ ಪತ್ತೆ

ಕೊಲೆ ಮಾಡಿ, ಕಾರಿನಲ್ಲಿ ಮೃತದೇಹ ಸಾಗಿಸುವ ವೇಳೆ ಹೋಟೆಲ್‌ ಮಾಲೀಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹಣಕಾಸು ವ್ಯವಹಾರ ಹಾಗೂ ಹಣ ಕದ್ದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಾಗರ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾವು ಕಡಿತದಿಂದ ಸಾವು: ಕರ್ನಾಟಕದಲ್ಲಿಯೇ ಅತ್ಯಧಿಕ! 2025ರಲ್ಲಿ ದುಪ್ಪಟ್ಟು

ಹಾವು ಕಡಿತದಿಂದ ಸಾವು: ಕರ್ನಾಟಕದಲ್ಲಿಯೇ ಅತ್ಯಧಿಕ! 2025ರಲ್ಲಿ ದುಪ್ಪಟ್ಟು

ಕರ್ನಾಟಕದಲ್ಲಿ 2023 ರಲ್ಲಿ 183ಗಳಿದ್ದ ಹಾವು ಕಡಿತ ಪ್ರಕರಣಗಳು 2024ರಲ್ಲಿ 370ಕ್ಕೆ, 2025ರಲ್ಲಿ 431ಕ್ಕೆ ಏರುವುದರೊಂದಿಗೆ ಎರಡು ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ. ಹಳ್ಳಿಗಳಲ್ಲಿ ಸಂಭವಿಸುವ ಅನೇಕ ಹಾವು ಕಡಿತದ ಸಾವುಗಳು ಸಂಪೂರ್ಣವಾಗಿ ವರದಿಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ 153 ಮಂದಿ ಸಾವನ್ನಪ್ಪಿರುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸೂಟ್‌ಕೇಸ್ ವಿಚಾರ; ಬಿಜೆಪಿಯವರು ಇನ್ನು ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್

ಸೂಟ್‌ಕೇಸ್ ವಿಚಾರ; ಬಿಜೆಪಿಯವರು ಇನ್ನು ಯಾಕೆ ದೂರು ಕೊಟ್ಟಿಲ್ಲ ಎಂದ ಡಿಕೆಶಿ

DK Shivakumar: ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಸದಾನಂದ ಗೌಡರು ಪ್ರಚಾರಕ್ಕೆ ಬಂದಿದ್ದಾರಾ ಅವರು ಸೂಟ್‌ಕೇಸ್ ಎಷ್ಟು ದಪ್ಪ ಇದೆ, ಎಷ್ಟು ಅಗಲವಿದೆ ಎಂದು ಲೆಕ್ಕಾಚಾರ ಹಾಕಿದ್ದಾರಾ? ಅವರು ಈ ಬಗ್ಗೆ ದೂರು ನೀಡಲಿ ಎಂದು ತಿರುಗೇಟು ನೀಡಿದ್ದಾರೆ.

ಮ್ಯಾಜಿಕ್‌ಹೋಮ್ ಬೆಂಗಳೂರಿನಲ್ಲಿ ಒಳಾಂಗಣ ಶಾಪಿಂಗ್ ಮರು ವ್ಯಾಖ್ಯಾನ

ಮ್ಯಾಜಿಕ್‌ಹೋಮ್ ಬೆಂಗಳೂರಿನಲ್ಲಿ ಒಳಾಂಗಣ ಶಾಪಿಂಗ್ ಮರು ವ್ಯಾಖ್ಯಾನ

ಬೆಂಗಳೂರಿನ HSR ಲೇಔಟ್‌ನಲ್ಲಿರುವ ಎಕ್ಸ್‌ಪೀರಿಯೆನ್ಸ್ ಹಬ್ ಎರಡು ಮಹಡಿಗಳಲ್ಲಿ 6,200 ಚದರ ಅಡಿ ವಿಸ್ತೀರ್ಣದಲ್ಲಿದ್ದು, ಮ್ಯಾಜಿಕ್‌ಹೋಮ್‌ನ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ತಲ್ಲೀನಗೊಳಿಸುವ ತಾಣವಾಗಿದೆ. ಸಾಂಪ್ರದಾಯಿಕ ಶೋರೂಮ್‌ಗಿಂತ ಹೆಚ್ಚಾಗಿ ವಾಸಿಸುವ ಪರಿಸರವಾಗಿ ವಿನ್ಯಾಸಗೊಳಿಸಲಾದ ಈ ಸ್ಥಳವು ಮನೆಮಾಲೀಕರು ಒಳಾಂಗಣ ಗಳನ್ನು ಹೇಗೆ ಕಂಡುಕೊಳ್ಳುತ್ತಾರೆ

ನ್ಯಾಯಾಧೀಶರ ಕೊರತೆ: ಚಿಕ್ಕನಾಯಕನಹಳ್ಳಿ ಕೋರ್ಟ್‌ನಲ್ಲಿ ಬರೋಬ್ಬರಿ 3,500 ಪ್ರಕರಣ ಬಾಕಿ

ಚಿಕ್ಕನಾಯಕನಹಳ್ಳಿ ನ್ಯಾಯಾಲಯದ 3,500 ಪ್ರಕರಣ ಬಾಕಿ

Chikkanayakanahalli News: ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ನ್ಯಾಯದಾನ ಪ್ರಕ್ರಿಯೆ ಕುಂಠಿತಗೊಂಡಿದ್ದು, ತಕ್ಷಣವೇ ಖಾಲಿ ಇರುವ ಹೆಚ್ಚುವರಿ ಹಾಗೂ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ತಾಲೂಕಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಸದ್ಯ ಸುಮಾರು 3,500ಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ವಿಚಾರಣೆ ಕಾಣದೆ ಬಾಕಿ ಇದೆ.

Namma Metro Purple Line: ಏಪ್ರಿಲ್‌ 5ರಂದು ನೇರಳೆ ಮಾರ್ಗದಲ್ಲಿ 2 ಗಂಟೆ ಕಾಲ ನಮ್ಮ ಮೆಟ್ರೋ ಸ್ಥಗಿತ

ಏಪ್ರಿಲ್‌ 5ರಂದು ನೇರಳೆ ಮಾರ್ಗದಲ್ಲಿ 2 ಗಂಟೆ ಕಾಲ ನಮ್ಮ ಮೆಟ್ರೋ ಸ್ಥಗಿತ

ಬಿಎಂಆರ್‌ಸಿಎಲ್‌ ಅಗತ್ಯ ಕಾಮಗಾರಿಯನ್ನು ನೆರವೇರಿಸಲು ಏಪ್ರಿಲ್‌ 5ರಂದು ಬೆಳಿಗ್ಗೆ 07:00ರಿಂದ 09:00 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ.

Job fair: ಎರಡು ದಿನಗಳ ಬೃಹತ್ ಉದ್ಯೋಗ ಮೇಳದಲ್ಲಿ 100-ಕ್ಕೂ ಅಧಿಕ ಕಂಪನಿಗಳು ಭಾಗಿ

ಉಜಿರೆಯಲ್ಲಿ “ಎಸ್.ಡಿ.ಎಂ ಉದ್ಯೋಗಂ - 2026”

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಬೆಳಗ್ಗೆ 9.30 ರಿಂದ ‘ಎಸ್.ಡಿ.ಎಂ ಉದ್ಯೋಗಂ – 2026’ ಎಂಬ ಈ ಬೃಹತ್ ಉದ್ಯೋಗ ಮೇಳ ಆರಂಭವಾಗಲಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿರುವ ಈ ಉದ್ಯೋಗ ಮೇಳದಲ್ಲಿ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

Chamarajanagara: ಪ್ರೀತಿಗೆ ಪೋಷಕರ ವಿರೋಧ, ಆದಿವಾಸಿ ಯುವಕ- ಯುವತಿ ಆತ್ಮಹತ್ಯೆ

ಪ್ರೀತಿಗೆ ಪೋಷಕರ ವಿರೋಧ, ಆದಿವಾಸಿ ಯುವಕ- ಯುವತಿ ಆತ್ಮಹತ್ಯೆ

ತಮ್ಮ ಮಗಳು ನಾಪತ್ತೆಯಾಗಿದ್ದಾಳೆಂದು ಪೋಷಕರು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಷಯ ತಿಳಿದು ಹೆದರಿದ ನಾಗೇಂದ್ರ ಮತ್ತು ನದಿಯಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

Yettinahole Project: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಷರತ್ತುಬದ್ಧ ಅನುಮತಿ, ದೇವೇಗೌಡರ ಮನವಿಗೆ ಸ್ಪಂದನೆ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಷರತ್ತುಬದ್ಧ ಅನುಮತಿ

ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಯೋಜನೆಯ ವಿಳಂಬದ ಬಗ್ಗೆ ಭಾವನಾತ್ಮಕವಾಗಿ ಮಾತನಾಡುತ್ತಾ, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರವು ಬಾಕಿ ಇದ್ದ ಕಡತಗಳಿಗೆ ವೇಗ ನೀಡಿದ್ದು, ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿದೆ.

Dubai: ದುಬೈ ಕನ್ನಡಿಗರ ಕೂಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ ಪುನರಾಯ್ಕೆ

ದುಬೈ ಕನ್ನಡಿಗರ ಕೂಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ ಪುನರಾಯ್ಕೆ

ಪುನರ್ ಆಯ್ಕೆಯ ನಂತರ ಅಧ್ಯಕ್ಷ ಅರುಣ್ ಕುಮಾರ್ ಅವರು ಸಮಿತಿ ಮತ್ತು ಸಲಹಾ ಸದಸ್ಯರಿಗೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಅವರು ಸಂಸ್ಥೆಯ ಸ್ಥಾಪಕರು ನಿರ್ಮಿಸಿದ ಪರಂಪರೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು.

Chikkaballapuara: ಕಂಟೈನರ್‌ಗೆ ಕಾರು ಡಿಕ್ಕಿ, ಟೆಕ್ಕಿ ಸೇರಿ ಇಬ್ಬರು ಸಾವು

ಕಂಟೈನರ್‌ಗೆ ಕಾರು ಡಿಕ್ಕಿ, ಟೆಕ್ಕಿ ಸೇರಿ ಇಬ್ಬರು ಸಾವು

ರಕ್ಷಿತಾ ರೆಡ್ಡಿ ಮತ್ತು ರಾಜಶೇಖರ ರೆಡ್ಡಿ ಕಳೆದ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು. ಸ್ವಗ್ರಾಮ ಆಂಧ್ರದ ಅನಂತಪುರದ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಶೆಟ್ಟಿಗೆರೆ ಕ್ರಾಸ್ ಬಳಿ ಕಂಟೇನರ್​ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಮಿಸ್‌ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಡಿಜಿಟಲ್‌ ಪಾರ್ಟ್‌ನರ್‌

ಮಿಸ್‌ ಯೂನಿವರ್ಸ್ ಕರ್ನಾಟಕ; ವಿಶ್ವವಾಣಿ ಟಿವಿ ಡಿಜಿಟಲ್‌ ಪಾರ್ಟ್‌ನರ್‌

Ms Universe Karnataka 2026: ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಏಪ್ರಿಲ್‌ 3ರಂದು ನಡೆಯಲಿರುವ ಮಿಸ್‌ ಯೂನಿವರ್ಸ್ ಕರ್ನಾಟಕದ ರಿಜಿನಲ್‌ ಬ್ಯೂಟಿ ಪೇಜೆಂಟ್‌ಗೆ ವಿಶ್ವವಾಣಿ ಟಿವಿ ಸ್ಪೆಷಲ್‌ ಡಿಜಿಟಲ್‌ ಪಾರ್ಟ್‌ನರ್‌ ಆಗಿ ಕೈ ಜೋಡಿಸಿದೆ.

Drowned: ಇನ್ಫೋಸಿಸ್‌ ಉದ್ಯೋಗಿ ಕಾವೇರಿ ನದಿಯಲ್ಲಿ ಮುಳುಗಿ ಸಾವು

ಇನ್ಫೋಸಿಸ್‌ ಉದ್ಯೋಗಿ ಕಾವೇರಿ ನದಿಯಲ್ಲಿ ಮುಳುಗಿ ಸಾವು

ಬೆಂಗಳೂರಿನಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ ವಿಘ್ನೇಶ್, ಮೂವರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಶ್ರೀರಂಗಪಟ್ಟಣದ ಎಡಮುರಿಯಲ್ಲಿನ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದರು. ನದಿಯಲ್ಲಿನ ಆಳವಾದ ಜಾಗವನ್ನು ಅರಿಯದೆ ಅವರು ಮುಳುಗಿದ್ದಾರೆ. ನೀರಿನಲ್ಲಿ ಮುಳುಗಿದ ಅವರನ್ನು ರಕ್ಷಣೆ ಮಾಡಲು ಸ್ನೇಹಿತರಿಗೆ ಸಾಧ್ಯವಾಗಿಲ್ಲ.

Chitradurga news: ನಾಪತ್ತೆಯಾಗಿದ್ದ ಕಾಂಗ್ರೆಸ್‌ ಮುಖಂಡ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಕಾಂಗ್ರೆಸ್‌ ಮುಖಂಡ ಶವವಾಗಿ ಪತ್ತೆ

ಕಾಂಗ್ರೆಸ್‌ ಮುಖಂಡ (congress leader) ಶಿವಲಿಂಗಪ್ಪ (50) ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ (body found) ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಸಂಬಂಧಿಕರಿಂದ ಆಗ್ರಹ ವ್ಯಕ್ತವಾಗಿದ್ದು, ಚಿತ್ರದುರ್ಗ (Chitradurga news) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಏಪ್ರಿಲ್‌ 7ರಂದು ಮಹಿಳಾ ದಿನಾಚರಣೆ; ಸಮೀಕ್ಷೆ ಕಾರ್ಯದಿಂದ ಮಹಿಳಾ ನೌಕರರಿಗೆ ವಿನಾಯಿತಿ

ಸಮೀಕ್ಷೆಯಿಂದ ಮಹಿಳಾ ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಲು ಪಟ್ಟು

CS Shadakshari: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಏಪ್ರಿಲ್‌ 7ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಸರ್ಕಾರಿ ನೌಕರರು ಭಾಗವಹಿಸಲು ಅನುಕೂಲವಾಗುವಂತೆ ಅಂದು ಸಮೀಕ್ಷೆ/ಗಣತಿ ಕಾರ್ಯದಿಂದ ವಿನಾಯಿತಿ ನೀಡುವಂತೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.‌ ಷಡಾಕ್ಷರಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Loading...