ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

E-Khata Corruption: ಇ-ಖಾತಾ ಲಂಚಾವಾತಾರ ರಿವೀಲ್‌; ಸದನದಲ್ಲಿ ಪೆನ್‌ಡ್ರೈವ್‌ ತೋರಿಸಿದ ಅಶೋಕ್‌ Video

ಇ-ಖಾತಾ ಲಂಚಾವಾತಾರ ರಿವೀಲ್‌; ಸದನದಲ್ಲಿ ಪೆನ್‌ಡ್ರೈವ್‌ ತೋರಿಸಿದ ಅಶೋಕ್‌

Karnataka assembly session 2026: ಬೆಂಗಳೂರಿನ ಪ್ರತಿಯೊಂದು ವಾರ್ಡ್‌ನಲ್ಲೂ ಇ-ಖಾತೆಗೆ ಲಂಚದ ಬೇಡಿಕೆ ಇಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ದಂಧೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತ ವಿಡಿಯೊ ಇಲ್ಲಿದೆ.

ಬೆಂಗಳೂರು ಟ್ರಾಫಿಕ್‌ಗೆ ಸ್ವಲ್ಪ ರಿಲೀಫ್‌, ನೈಸ್ ರಸ್ತೆ- ದೀಪಾಂಜಲಿ ನಗರ ಲಿಂಕ್‌ ರೋಡ್ ಪ್ರಾಯೋಗಿಕ ಸಂಚಾರ ಶುರು

ನೈಸ್ ರಸ್ತೆ- ದೀಪಾಂಜಲಿ ನಗರ ಲಿಂಕ್‌ ರೋಡ್ ಪ್ರಾಯೋಗಿಕ ಸಂಚಾರ ಶುರು

ಸುಮಾರು 1.5 ಕಿಮೀ ಉದ್ದದ ಈ ನಾಲ್ಕು ಪಥದ ರಸ್ತೆ ದೀಪಾಂಜಲಿ ನಗರದಿಂದ ಹೊಸಕೆರೆಹಳ್ಳಿ ಭಾಗದವರೆಗೆ ಸಂಪರ್ಕ ಕಲ್ಪಿಸುತ್ತದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ಭಾಗದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರಿಗೆ ಈ ಲಿಂಕ್ ರಸ್ತೆ ದೊಡ್ಡ ಮಟ್ಟದ ಪರಿಹಾರ ನೀಡಲಿದೆ. ನೇರ ಹಾಗೂ ಸಿಗ್ನಲ್-ರಹಿತ ಸಂಚಾರಕ್ಕೆ ಅವಕಾಶ ಸಿಗುವುದರಿಂದ ಸಂಚಾರ ಸುಗಮವಾಗಲಿದೆ.

ಮಹಿಳೆಯರಿಗೆ ಸಮಗ್ರ ಆರೋಗ್ಯ ಶಿಬಿರಗಳ ವಿಸ್ತರಣೆ

ಮಹಿಳೆಯರಿಗೆ ಸಮಗ್ರ ಆರೋಗ್ಯ ಶಿಬಿರಗಳ ವಿಸ್ತರಣೆ

ಈ ಶಿಬಿರದಲ್ಲಿ ವೃದ್ಧ ಮಹಿಳೆಯರು, ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರು ಮತ್ತು ಕಿಶೋರಿಯರಿಗೆ ಉಚಿತ ಹಾಗೂ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸ ಲಾಯಿತು. ಈ ಮಹತ್ವದ ತಪಾಸಣೆಗಳಲ್ಲಿ ತಜ್ಞ ವೈದ್ಯರೊಂದಿಗೆ ವೈದ್ಯಕೀಯ ಸಲಹೆ, ನಿರ್ಣಾಯಕ ತಪಾಸಣೆಗಳು ಹಾಗೂ ಮಹಿಳಾ ಆರೋಗ್ಯ ಮತ್ತು ಸರ್ಕಾರದ ಪ್ರಯೋಜನ ಗಳನ್ನು ಪಡೆಯುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಒಳಗೊಂಡಿದ್ದವು.

ಮೆರಿಲ್‌ನ ಟ್ರೀಟಮೆಂಟ್ ಜರೂರಿ ಹೈ' ಆಂದೋಲನದಲ್ಲಿ ಎಂಎಸ್ ಧೋನಿ

ಮೆರಿಲ್‌ನ ಟ್ರೀಟಮೆಂಟ್ ಜರೂರಿ ಹೈ' ಆಂದೋಲನದಲ್ಲಿ ಎಂಎಸ್ ಧೋನಿ

ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ನೀವು ಮಾಡಬಹುದಾದ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ - ನಿಮಗಾಗಿ ಮತ್ತು ನಿಮ್ಮನ್ನು ಪ್ರೀತಿಸುವ ಜನರು,ನಮ್ಮ ಪೋಷಕರು ಮತ್ತು ಅಜ್ಜ-ಅಜ್ಜಿಯರು ಅರ್ಹವಾದ ಆರೈಕೆ, ಗಮನ ಮತ್ತು ಬೆಂಬಲವನ್ನು ಪಡೆಯುವುದನ್ನು ಖಚಿತ ಪಡಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ವಿಶೇಷವಾಗಿ ಯುವ ಪೀಳಿಗೆಗೆ ಇದೆ

ಮಹಾದೇವಪುರದ ಕಿಮ್ಸ್ ಆಸ್ಪತ್ರೆಯಿಂದ ಕರ್ನಾಟಕದ ಮೊದಲ ನೈ*ಟ್ರೆಕ್ಸ್  ಮೆಡಿಯಲ್ ಪಿವೋಟ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

ಕಿಮ್ಸ್ ಆಸ್ಪತ್ರೆಯಿಂದ ಮೊದಲ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

ಮೊಣಕಾಲಿನ ಗ್ರೇಡ್ 4 ಅಸ್ಥಿಸಂಧಿವಾತ ಹೊಂದಿದ್ದ 65 ವರ್ಷದ ಮಹಿಳಾ ರೋಗಿಯ ಮೇಲೆ ಈ ಚಿಕಿತ್ಸೆಯನ್ನು ನಡೆಸಲಾಯಿತು. ಇದು ಸಂಧಿವಾತದ ಅತ್ಯಂತ ಮುಂದುವರಿದ ಹಂತ ವಾಗಿದ್ದು, ಸಾಕಷ್ಟು ನೋವು, ವಿರೂಪತೆ ಮತ್ತು ನಡೆಯುವಾಗ ಸ್ಥಿರತೆಯ ಸಮಸ್ಯೆ ಇರುತ್ತದೆ. ಆದರೂ, ಆಕೆಯ ಆ ಸ್ಥಿತಿಯ ಹೊರತಾಗಿಯೂ, ರೋಗಿ ತುಂಬಾ ಸಕ್ರಿಯಳಾಗಿದ್ದರು ಮತ್ತು ತನ್ನ ನಡೆಯುವ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಪರಿಹಾರ ಹುಡುಕುತ್ತಾ ನಿಯಮಿತವಾಗಿ ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಿದ್ದರು.

ತೈಲ ಕೊರತೆ ವದಂತಿ; ಬೆಳಗಾವಿಯಲ್ಲಿ ನೀರು ತುಂಬುವ ಬ್ಯಾರೆಲ್‌ನೊಂದಿಗೆ ಪೆಟ್ರೋಲ್‌ ಬಂಕ್‌ಗೆ ಲಗ್ಗೆ ಇಟ್ಟ ಗ್ರಾಹಕರು Video

ತೈಲ ಕೊರತೆ ವದಂತಿ; ಬೆಳಗಾವಿ ಪೆಟ್ರೋಲ್‌ ಬಂಕ್‌ಗೆ ಲಗ್ಗೆ ಇಟ್ಟ ಗ್ರಾಹಕರು

Belagavi News: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಸಹಜವಾಗಿ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ವಾಣಿಜ್ಯ ಸಿಲಿಂಡ್‌ರ್ ಪೂರೈಕೆ ಸ್ಥಗಿತಗೊಂಡು ಜನರು ಆತಂಕಗೊಂಡಿದ್ದಾರೆ. ಅದರ ಮಧ್ಯೆ ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ವದಂತಿ ಹಬ್ಬಿದ್ದರಿಂದ ಸೋಮವಾರ (ಮಾರ್ಚ್‌ 23) ರಾತ್ರೋರಾತ್ರಿ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಿಗೆ ಜನರು ಮುಗಿಬಿದ್ದರು. ಹಲವರು ನೀರು ತುಂಬುವ ಬ್ಯಾರೆಲ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ತುಂಬಲು ಮುಂದಾದರು.

Digital use policy: ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ: ಡಿಜಿಟಲ್ ಬಳಕೆ ಕರಡು ನೀತಿ ಬಿಡುಗಡೆ

ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ: ಡಿಜಿಟಲ್ ಬಳಕೆ ಕರಡು ನೀತಿ ಬಿಡುಗಡೆ

ಕರಡು ನೀತಿ ಪ್ರಕಾರ, ಶಾಲಾ ಕೆಲಸ ಹೊರತುಪಡಿಸಿ ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್‌ ಬಳಸಬಹುದು. ಜೊತೆಗೆ, ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಡಿಜಿಟಲ್ ಸಾಧನಗಳನ್ನು ನಿಲ್ಲಿಸುವ ‘ಟೆಕ್ ಕರ್ಫ್ಯೂ' ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಪ್ರತಿ ಶಾಲೆಯು ತನ್ನದೇ ಆದ ಡಿಜಿಟಲ್ ಬಳಕೆ ನೀತಿ ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಡಿಜಿಟಲ್ ವೆಲ್‌ನೆಸ್ ಸಮಿತಿ ಸ್ಥಾಪಿಸಬೇಕು ಎಂದು ಸೂಚಿಸಲಾಗಿದೆ.

ಎಂಬಿಬಿಎಸ್‌ ವಿದ್ಯಾರ್ಥಿ ಕಾಲೇಜಿನಲ್ಲೇ ಆತ್ಮಹತ್ಯೆ

ಎಂಬಿಬಿಎಸ್‌ ವಿದ್ಯಾರ್ಥಿ ಕಾಲೇಜಿನಲ್ಲೇ ಆತ್ಮಹತ್ಯೆ

ಅನಿಷ್ಕಾರ್ ಅವರು ಬಿರಿಮ್ಸ್ ಕಾಲೇಜಿನ ಹಾಸ್ಟೆಲ್ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣದ ಅಂತಿಮ ಘಟ್ಟದಲ್ಲಿದ್ದ ಇವರು, ಇನ್ನೇನು ಕೆಲವೇ ದಿನಗಳಲ್ಲಿ ವೈದ್ಯರಾಗಿ ಸಮಾಜದ ಸೇವೆಗೆ ಸಿದ್ಧರಾಗಬೇಕಿತ್ತು. ಆದರೆ ಅನಿಷ್ಕಾರ್ ಅವರ ಈ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಸಹಪಾಠಿಗಳಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.

Gold Price Today On 24th March: ಮತ್ತೆ ಇಳಿಕೆಯಾಯ್ತು ಚಿನ್ನದ ದರ; ಇಂದು ಕಡಿಮೆಯಾಗಿದ್ದು ಬರೋಬ್ಬರಿ 2,160 ರುಪಾಯಿ

ಮತ್ತೆ ಇಳಿಕೆಯಾಯ್ತು ಚಿನ್ನದ ದರ

Gold Silver Price Today: ಸತತ 2ನೇ ದಿನವಾದ ಮಂಗಳವಾರ (ಮಾರ್ಚ್‌ 24)ವೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 270 ರುಪಾಯಿ ಕಡಿಮೆಯಾಗಿದ್ದು 12,865 ರುಪಾಯಿಗೆ ಕುಸಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 294 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಬಂದು ತಲುಪಿದೆ.

ಗುಡ್ ನ್ಯೂಸ್: ಜೂನ್‌ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

ಜೂನ್‌ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈಗಾಗಲೇ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.

Bengaluru Towing: ಬೆಂಗಳೂರಿನಲ್ಲಿ ಇಂದಿನಿಂದ ಮತ್ತೆ ಟೋಯಿಂಗ್‌, ಎಲ್ಲೆಂದರಲ್ಲಿ ಪಾರ್ಕ್‌ ಮಾಡೋರೇ ಎಚ್ಚರ!

ಬೆಂಗಳೂರಿನಲ್ಲಿ ಇಂದಿನಿಂದ ಮತ್ತೆ ಟೋಯಿಂಗ್‌, ವಾಹನ ಪಾರ್ಕ್‌ ವೇಳೆ ಎಚ್ಚರ!

ಕೆಲ ದಿನಗಳ ಹಿಂದಷ್ಟೆ ಡಿಸಿಎಂ ಡಿಕೆ ಶಿವಕುಮಾರ್ ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸೋ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ, ಟೋಯಿಂಗ್ ಮಾಡೋಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ತಲಾ ಎರಡು ವಾಹನಗಳಂತೆ ಹತ್ತು ಟೋಯಿಂಗ್ ವಾಹನಗಳನ್ನು ಸರ್ಕಾರದ ವತಿಯಿಂದ ನೀಡಲಾಗಿದೆ.

Murder Case: ಚಿಲ್ಲರೆ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನ ಕೊಂದು ಸುಟ್ಟುಹಾಕಿದ ಐವರ ಸೆರೆ

ಚಿಲ್ಲರೆ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನ ಕೊಂದು ಸುಟ್ಟ ಐವರ ಸೆರೆ

ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ ವರುಣ್(22) ನನ್ನ ಆತನ ಸ್ನೇಹಿತ ಶಶಾಂಕ್ ಹಾಗೂ ಇತರೆ 7 ಜನರು ಸೇರಿ ಮಾರ್ಚ್ 10ರಂದು ಅಪಹರಿಸಿದ್ದಾರೆ. 7 ಸಾವಿರ ರೂ ಸಾಲದ ಹಣ ಕೊಟ್ಟಿಲ್ಲ ಎಂದು ಕರೆದೊಯ್ದು ಕಿರಣ್ ಎಂಬಾತನ ತೋಟದ ಮನೆಯಲ್ಲಿಟ್ಟು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಮಾರ್ಚ್ 12ರವರೆಗೆ ಎರಡು ದಿನ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

Davanagere South Assembly Bypoll: ದಾವಣಗೆರೆಯಲ್ಲಿ ಮುಸ್ಲಿಮರ ಬಂಡಾಯ, ಕಾಂಗ್ರೆಸ್‌ಗೆ ಸಡ್ಡು ಹೊಡೆದು 23 ಮಂದಿ ನಾಮಪತ್ರ

ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಮರ ಸಡ್ಡು, 23 ಮಂದಿಯಿಂದ ನಾಮಪತ್ರ

ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರದ ಟಿಕೆಟ್‌ ನಮಗೆ ನಮ್ಮ ಸಮುದಾಯ ನಾಯಕರಿಗೆ ನೀಡಬೇಕೆಂದು ಮುಸ್ಲಿಮ್‌ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಮುಸ್ಲಿಮರ ಬೇಡಿಕೆಗೆ ಸ್ಪಂದಿಸದೇ ಎಸ್‌ಎಸ್‌ ಮಲ್ಲಿಕಾರ್ಜುನ್‌ ಪುತ್ರ ಸಮರ್ಥ್‌ಗೆ ಟಿಕೆಟ್‌ ನೀಡಿತ್ತು.

New bill: 12 ವರ್ಷಗಳಿಂದ ಶಾಲೆ-ಕಾಲೇಜು ನಡೆಯುತ್ತಿರುವ ಖಾಸಗಿ ಜಾಗ ಇನ್ನು ಸರ್ಕಾರದ ಸ್ವತ್ತು: ಹೊಸ ವಿಧೇಯಕ

12 ವರ್ಷಗಳಿಂದ ಶಾಲೆ-ಕಾಲೇಜು ನಡೆದರೆ ಆ ಖಾಸಗಿ ಜಾಗ ಇನ್ನು ಸರ್ಕಾರದ ವಶ

ಯಾವುದೇ ಖಾಸಗಿ ಜಾಗದಲ್ಲಿ ಕನಿಷ್ಠ 12 ವರ್ಷಗಳಿಂದ ಸತತವಾಗಿ ಸರ್ಕಾರಿ ಶಾಲೆ ಅಥವಾ ಕಾಲೇಜು ನಡೆಯುತ್ತಿದ್ದರೆ, ಆ ಭೂಮಿ ಇನ್ನು ಮುಂದೆ ಅಧಿಕೃತವಾಗಿ ಸರ್ಕಾರದ ಸ್ವತ್ತಾಗಲಿದೆ. ಈ ಭೂಮಿಯ ಮೇಲೆ ಈ ಹಿಂದೆ ಯಾವುದೇ ಸಾಲ, ಹಕ್ಕು ಪ್ರತಿಪಾದನೆ ಅಥವಾ ವಿವಾದಗಳಿದ್ದರೂ, ಅವೆಲ್ಲವೂ ಇನ್ನು ಮುಂದೆ ಮಾನ್ಯವಾಗುವುದಿಲ್ಲ.

Bengaluru Karaga Festival: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ

ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ

ಪ್ರಧಾನ ಅರ್ಚಕರಾದ ವಿ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಕರಗ ಹೊರುವ ಮೂಲಕ ಈ ಬಾರಿಯ ಉತ್ಸವವನ್ನು ನಡೆಸಿಕೊಡಲಿದ್ದಾರೆ. ಇಂದಿನಿಂದ ಏಪ್ರಿಲ್ 3ರವರೆಗೆ ಪ್ರತಿದಿನ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ನಿಗದಿತ ಕೆರೆ ಪ್ರದೇಶಗಳಲ್ಲಿ ಗಂಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.

64 Illegally gas cylinders seized: ಗುಡಿಬಂಡೆಯಲ್ಲಿ ತಹಸೀಲ್ದಾರ್ ಭರ್ಜರಿ ಬೇಟೆ: ಅಕ್ರಮವಾಗಿ ಸಂಗ್ರಹಿಸಿದ್ದ 64 ಗ್ಯಾಸ್ ಸಿಲಿಂಡರ್ ಜಪ್ತಿ

ಅಕ್ರಮವಾಗಿ ಸಂಗ್ರಹಿಸಿದ್ದ 64 ಗ್ಯಾಸ್ ಸಿಲಿಂಡರ್ ಜಪ್ತಿ

ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ನೆಪವೊಡ್ಡಿ ಭಾರತದಲ್ಲೂ ಸಿಲಿಂಡರ್ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಜೋರಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಲಾಭದ ಆಸೆಗೆ ಬಿದ್ದ ಹಲವರು ಅಕ್ರಮವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಈ ಗಂಭೀರ ವಿಚಾರವನ್ನು ಗಮನಿಸಿದ ಚಿಕ್ಕಬಳ್ಳಾಪುರ ಜಿಲ್ಲಾಧಿ ಕಾರಿಗಳು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದ್ದರು

Chikkaballapur News: ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ, ಹಳೆಯ ಮೀಸಲಾತಿಯಡಿ ನೇಮಕಾತಿ ನಡೆಯಬೇಕು : ಕೈವಾರ ಮಂಜುನಾಥ್ ಆಗ್ರಹ

ಹಳೆಯ ಮೀಸಲಾತಿಯಡಿ ನೇಮಕಾತಿ ನಡೆಯಬೇಕು

ಘನ ಸುಪ್ರಿಂಕೋರ್ಟ್ ಒಳಮೀಸಲಾತಿ ಸಂಬಂಧ 1 ಆಗಸ್ಟ್ 2024ರ ತನ್ನ ತೀರ್ಪಿನಲ್ಲಿ ಜಾರಿಯ ಪರಮಾಧಿಕಾರ ಆಯಾ ರಾಜ್ಯ ಸರಕಾರಗಳಿಗೆ ನೀಡಿದೆಯಲ್ಲದೆ ಅನುಕೂಲ ಸಿಂಧು ರಾಜಕೀಯಕ್ಕಾಗಿ ಮನಸ್ಸಿಗೆ ಬಂದಂತೆ ಒಳಮೀಸಲು ನೀಡಲಾಗದು. ರಾಜ್ಯ ಸರಕಾರಗಳು ಮಾಡುವ ಮೀಸಲಾತಿ ವರ್ಗೀಕರಣವು ನ್ಯಾಯಾಂಗದ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ ಆದರೂ ನಾಗಮೋಹನ್‌ದಾಸ್ ಅಧ್ಯಕ್ಷತೆ ಯಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಒಳಮೀಸಲಾತಿ ಸಂಬಂಧ ಆರ್ಥಿಕ ಸಾಮಾಜಿಕ ಔದ್ಯೋಗಿಕ, ಶೈಕ್ಷಣಿಕ ಸಮಗ್ರ ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಿಲ್ಲ

MLA Pradeep Eshwar: ಲೋಕಕ್ಕೆ ಆಧ್ಯಾತ್ಮಿಕ ಮುಕ್ತಿಮಾರ್ಗ ತೋರಿದ ಶ್ರೇಷ್ಠ ಸಂತ ಕಾಲಜ್ಞಾನಿ ಕೈವಾರ ತಾತಯ್ಯ : ಶಾಸಕ ಪ್ರದೀಪ್ ಈಶ್ವರ್ ಬಣ್ಣನೆ

ಲೋಕಕ್ಕೆ ಆಧ್ಯಾತ್ಮಿಕ ಮುಕ್ತಿಮಾರ್ಗ ತೋರಿದ ಶ್ರೇಷ್ಠ ಸಂತ ಕೈವಾರ ತಾತಯ್ಯ

ಜೀವನದಲ್ಲಿ ಶಿಕ್ಷಣಕ್ಕಿಂತ ದೊಡ್ಡದು ಯಾವುದು ಇಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಸಾಧಕರ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ. ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆ, ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು. ತಾತಯ್ಯ ಅವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು

MLA B.N. Ravikumar: ದಿಬ್ಬೂರಹಳ್ಳಿ–ತಿಮ್ಮಸಂದ್ರ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಬಿ.ಎನ್. ರವಿಕುಮಾರ್

ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಬಿ.ಎನ್. ರವಿಕುಮಾರ್

ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರಿಗೆ ದೀರ್ಘಕಾಲ ಉಪಯೋಗವಾಗುವಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು. ಗುಣಮಟ್ಟ ದಲ್ಲಿ ಯಾವುದೇ ರೀತಿಯ ರಾಜಿ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ದಿಬ್ಬೂರಹಳ್ಳಿ–ತಿಮ್ಮಸಂದ್ರ ರಸ್ತೆ ನಿರ್ಮಾಣದಿಂದ ಈ ಭಾಗದ ಗ್ರಾಮಗಳಿಗೆ ಉತ್ತಮ ಸಂಚಾರ ಸೌಲಭ್ಯ ಸಿಗಲಿದ್ದು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ

ಬನ್ನಿಕುಪ್ಪೆ ಗ್ರಾಮಕ್ಕೆ ಆಪದ್ಭಾಂದವನಾಗಿ ಶುದ್ದ ಕುಡಿಯುವ ನೀರು ಒದಗಿಸಿ ಮಾತು ಉಳಿಸಿಕೊಂಡ ಸಂದೀಪ್‌ರೆಡ್ಡಿ

ಶುದ್ದ ಕುಡಿಯುವ ನೀರು ಒದಗಿಸಿ ಮಾತು ಉಳಿಸಿಕೊಂಡ ಸಂದೀಪ್‌ರೆಡ್ಡಿ

ನಗರಕ್ಕೆ ಹೊಂದಿಕೊಂಡಂತಿರುವ ಬನ್ನಿಕುಪ್ಪೆ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಪಡಿಪಾಟಲನ್ನು ಮಾಧ್ಯಮಗಳ ಮೂಲಕ ತಿಳಿದು ಮರುಗಿದ್ದ ಸಮಾಜ ಸೇವಕ ಸಂದೀಪ್‌ರೆಡ್ಡಿ, ಯುಗಾದಿ ಹಬ್ಬದ ದಿನವೇ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಶ್ವತ್ಥಕಟ್ಟೆ ಮೇಲೆ ಕುಳಿತು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ್ದರಲ್ಲದೆ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಮಾತು ಕೊಟ್ಟಿದ್ದರು.

Chikkaballapur News: ಐತಿಹಾಸಿಕ ಕಲ್ಯಾಣಿಗಳಿಗೆ ಮರುಜೀವ ನೀಡುವ ಮೂಲಕ ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ: ಡಾ.ನವೀನ್ ಭಟ್

ಐತಿಹಾಸಿಕ ಕಲ್ಯಾಣಿಗಳಿಗೆ ಮರುಜೀವ, ಜಲಮೂಲಗಳ ಸಂರಕ್ಷಣೆಗೆ ಒತ್ತು

ತಾಲ್ಲೂಕಿನಾದ್ಯಂತ 30 ಕಲ್ಯಾಣಿಗಳನ್ನು ಗುರುತಿಸಿದ್ದು ಅದರಲ್ಲಿ ಕೊಂಡಪ್ಪ ಕಲ್ಯಾಣಿ ಯು ಒಂದು ಈ ಕಲ್ಯಾಣಿಗೆ ಅನೇಕ ವರ್ಷಗಳ ಇತಿಹಾಸವಿದೆ ಆದರೆ ಮಣ್ಣು, ತ್ಯಾಜ್ಯ, ಕಸ ಕಡ್ಡಿಗಳು ತುಂಬಿಕೊಂಡು ನೀರು ಶೇಖರಣೆ  ಆಗುತ್ತಿರಲ್ಲಿಲ್ಲ ಈಗಾಗಿ ಸ್ವಚ್ಛತಾ ಅಭಿಯಾನವನ್ನು ಇಂದು ಹಮ್ಮಿಕೊಳ್ಳಲಾಗಿದೆ, ಈ ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು

Bagepally News: ಮಾ.25ರಂದು ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಮಾ.25ರಂದು ಫ್ರಿಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ (Internal reservation) ವಿಷಯ ಹಾಗೂ ನಾಗಮೋಹನ್ ದಾಸ್ ಆಯೋಗ(Nagamohan Das Commission) ನೀಡಿರುವ ವರದಿಯನ್ನು ವಿರೋಧಿಸಿ ಮಾ.25ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳ ಲಾಗಿದೆ

Puneeth Kerehalli: ಅಕ್ರಮ ಗೋ ಸಾಗಾಣಿಕೆ ವಿರೋಧಿಸಿ ಬಂದ್; ತುಮಕೂರು ಜಿಲ್ಲೆ ಪ್ರವೇಶಕ್ಕೆ ಪುನೀತ್ ಕೆರೆಹಳ್ಳಿಗೆ ನಿರ್ಬಂಧ

ಕೊಪ್ಪಳ ಬಳಿಕ ತುಮಕೂರು ಜಿಲ್ಲೆ ಪ್ರವೇಶಕ್ಕೆ ಪುನೀತ್ ಕೆರೆಹಳ್ಳಿಗೆ ನಿರ್ಬಂಧ

ಮಾರ್ಚ್‌ 23ರಂದು ತಿಪಟೂರು ಬಂದ್‌ಗೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ತಿಪಟೂರಿಗೆ ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಆಗಮಿಸುತ್ತಿದ್ದರು. ಅವರನ್ನು ಸೋಮವಾರ ರಾತ್ರಿ ಪೊಲೀಸರು ತಡೆದು ತುಮಕೂರು ಜಿಲ್ಲೆಗೆ ಪ್ರವೇಶಿಸದಂತೆ ನೋಟಿಸ್‌ ನೀಡಿದ್ದಾರೆ.

ಭಾರತದ ಮುಂದಿನ ಸಾಮೂಹಿಕ ಚಲನಶೀಲತೆಯ ಯುಗಕ್ಕೆ ಶಕ್ತಿ ತುಂಬಲಿರುವ ಟಾಟಾ ಮೋಟಾರ್ಸ್

ಸಾರಿಗೆ ಸಂಸ್ಥೆಗಳಿಂದ 5 ಸಾವಿರ ಬಸ್‌ಗಳ ಪ್ಯಾನ್ ಇಂಡಿಯಾ ಆರ್ಡರ್‌

ಹಲವು ರಾಜ್ಯ ಸಾರಿಗೆ ಸಂಸ್ಥೆಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಈ ಆದೇಶವೇ ಸಾಕ್ಷಿ. ವಿವಿಧ ಭೂಪ್ರದೇಶಗಳು ಮತ್ತು ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ, ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಬಸ್‌ ಗಳನ್ನು ವಿನ್ಯಾಸ ಗೊಳಿಸಲಾಗಿದೆ.

Loading...