ಪೋಕ್ಸೊ ಕೇಸ್ ವಿಚಾರಣೆಗೆ ಹಾಜರಾದ ಮಲ್ಲಿಕಾರ್ಜುನ ಮುತ್ಯಾ
ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗಾಗಿ ಶಹಾಪುರ ಸಿಪಿಐ ಕಚೇರಿಗೆ ಮಲ್ಲಿಕಾರ್ಜುನ ಮುತ್ಯಾ ಗುರುವಾರ ಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುತ್ಯಾ ಅವರು, ವಿಚಾರಣೆ ಹಾಜರಾಗಿ ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮುಂದೆಯೂ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.