ಸತ್ಯ ಸಾಯಿ ಗ್ರಾಮದ ನವರಾತ್ರಿ ಉತ್ಸವದಲ್ಲಿ ನೊಣವಿನಕೆರೆ ಶ್ರೀಗಳು ಭಾಗಿ
ರಾಜಕೀಯದಲ್ಲಿ ಧರ್ಮ ಉಳಿಯಬೇಕು ಎಂಬುದು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಆಶಯವಾಗಿತ್ತು. ಅದೇ ಮಾರ್ಗದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಮುನ್ನಡೆಯುತ್ತಿದ್ದಾರೆ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದ್ದಾರೆ.