ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chinthamani News: ನಿವೃತ್ತ ನೌಕರರ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ನಿವೃತ್ತ ನೌಕರರ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸಂಘದ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಸಾಧನೆಗೈದ ಎನ್.ಕಾರುಣ್ಯ,ಎನ್ ವೇದ,ಸ್ಕಂದ ಶ್ರೀ ವಾತ್ಸವ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕ ಗಳಿಸಿದ ಜಿ ಆರ್.ನಯನ ರವರನ್ನು ಸನ್ಮಾನಿಸಿ, ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.

Chinthamani News: ಚಿಂತಾಮಣಿಯಲ್ಲಿ ಜೆಸಿಬಿಗಳ ಅಬ್ಬರ: ಐಡಿಎಸ್‌ಎಂಟಿ ಮಾರುಕಟ್ಟೆ ಕಟ್ಟಡ ನೆಲಸಮ ಕಾರ್ಯಾರಂಭ

ಐಡಿಎಸ್‌ಎಂಟಿ ಮಾರುಕಟ್ಟೆಕಟ್ಟಡ ನೆಲಸಮ ಕಾರ್ಯಾರಂಭ

ಹಲವು ದಿನಗಳಿಂದ ಈ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಲಾಗಿತ್ತು. ಇಂದು ಮಾರುಕಟ್ಟೆ ಆವರಣದಲ್ಲಿ ಜೆಸಿಬಿ ಯಂತ್ರಗಳ ಗರ್ಜನೆ ಕೇಳಿಬರುತ್ತಿದ್ದು, ಹಳೆಯ ಮಳಿಗೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹೊಸ ಮತ್ತು ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Gubbi News: ತ್ವರಿತವಾಗಿ ಜನರಿಗೆ ಜಾಗೃತಿ ಮೂಡಿಸಲು ಸುಲಭ ಸಂವಹನ ಸಾಧನ ಡಿಜಿಟಲ್‌ ಮಾಧ್ಯಮ

ಜಾಗೃತಿ ಮೂಡಿಸಲು ಡಿಜಿಟಲ್‌ ಮಾಧ್ಯಮ ಸುಲಭ ಸಂವಹನ ಸಾಧನ

ಕೈಯಲ್ಲಿ ಮೊಬೈಲ್ ಫೋನ್ ಇರುವ ಪ್ರತಿಯೊಬ್ಬರೂ ಸುದ್ದಿಯನ್ನು, ಮಾಹಿತಿಯನ್ನು, ಅನಿಸಿಕೆಯನ್ನು ಬರೆಯಬಹುದು, ಮಾತಾಡಬಹುದು ಮತ್ತು ಅವರೇ ಅದನ್ನು ಪ್ರಸಾರ ಸಹ ಮಾಡಬಹುದು. ಇದೇ ಡಿಜಿಟಲ್ ಮೀಡಿಯಾದ ಸಾಧ್ಯತೆ. ಆದರೆ, ಅವನ್ನು ವ್ಯವಸ್ಥಿತ ವಾಗಿ, ಯೋಜಿತವಾಗಿ ಮತ್ತು ವೃತ್ತಿಪರವಾಗಿ ಮಾಡಲು ಈದಿನ ಡಾಟ್ ಕಾಮ್ ರಾಜ್ಯದ ನಾಗರಿಕ ರಿಗೂ ಅವಕಾಶ ಕಲ್ಪಿಸುತ್ತದೆ, ತರಬೇತಿ ನೀಡುತ್ತದೆ ಮತ್ತು ವೇದಿಕೆ ಕಲ್ಪಿಸುತ್ತದೆ.

PM Modi’s Bengaluru visit: ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಆರ್ಟ್‌ ಆಫ್‌ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗಿ

ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

PM Narendra Modi to visit Karnataka: ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್‌ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

Minister Dr.M.C.Sudhakar: ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ: ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟನೆ

ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ

ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಧ್ಯಮದವರೊಂದಿಗೆ ಸವಿಸ್ತಾರವಾಗಿ ಮಾತನಾಡಿದ ಸಚಿವರು ಜಿಲ್ಲೆಯ ಹಳ್ಳಿಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿದರು. ಎಚ್.ಎನ್.ವ್ಯಾಲಿ ಯೋಜನೆಯ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಯ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ

BSY Abhimanotsava: ಬರಪೀಡಿತ ಜಿಲ್ಲೆಗಳಿಗೆ ನೀರು ನೀಡಿದ ಭಗೀರಥ ಬಿಎಸ್‍ವೈ: ಬಸವರಾಜ ಬೊಮ್ಮಾಯಿ

ಬರಪೀಡಿತ ಜಿಲ್ಲೆಗಳಿಗೆ ನೀರು ನೀಡಿದ ಭಗೀರಥ ಬಿಎಸ್‍ವೈ: ಬೊಮ್ಮಾಯಿ

BSY Abhimanotsava: ಚಿತ್ರದುರ್ಗದಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ನೀರಿಲ್ಲದ ಜಿಲ್ಲೆಗಳಿಗೆ ನೀರು ನೀಡಿದ ಭಗೀರಥ ಎಂದು ಬಣ್ಣಿಸಿದ್ದಾರೆ.

ಕೈವಾರ-ಹುಲಗುಮ್ಮನಹಳ್ಳಿ ರಸ್ತೆ ಅಭಿವೃದ್ಧಿಗೆ ಚಾಲನೆ: 56 ಲಕ್ಷದ ಕಾಮಗಾರಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ಗುದ್ದಲಿ ಪೂಜೆ

ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಯೇ ನಮ್ಮ ಆದ್ಯತೆ

ಸುಮಾರು 56 ಲಕ್ಷಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಶಾಸ್ತ್ರೋಕ್ತವಾಗಿ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಯಾಗಿದ್ದ ಈ ರಸ್ತೆ ಕಾಮಗಾರಿಯು ಈಗ ಸಾಕಾರಗೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

Chinthamani News: ಕಾಗತಿ ಗ್ರಾಮದಲ್ಲಿ ರೈತರಿಗೆ ಒಂದು ದಿನದ ತೋಟಗಾರಿಕೆ ತರಬೇತಿ ಕಾರ್ಯಕ್ರಮ

ಕಾಗತಿ ಗ್ರಾಮದಲ್ಲಿ ರೈತರಿಗೆ ಒಂದು ದಿನದ ತೋಟಗಾರಿಕೆ ತರಬೇತಿ ಕಾರ್ಯಕ್ರಮ

ಐ ಐ ಎಚ್ ಆರ್ ಪರವಾಗಿ ಆಗಮಿಸಿದ್ದ ಡಾ.ಚೇತನ್ ಅವರು ಮಣ್ಣು ಪರೀಕ್ಷೆ ಹಾಗೂ ಕೃಷಿ ಯಲ್ಲಿ ಸಾವಯವ ಉತ್ಪನ್ನಗಳ ಬಳಕೆಯ ಮಹತ್ವದ ಕುರಿತು ರೈತರಿಗೆ ಸವಿಸ್ತಾರವಾಗಿ ವಿವರಿಸಿ ದರು. ತರಬೇತಿಯ ಅಂಗವಾಗಿ ರೈತರಿಗೆ ಹೊಂಗೆ ಹಿಂಡಿ, ಬೇವಿನ ಹಿಂಡಿ ಹಾಗೂ ಮ್ಯಾಂಗೋ ಸ್ಪೆಷಲ್ ಒಳಗೊಂಡ ಕಿಟ್ ಪೆಟ್ಟಿಗೆಗಳನ್ನು ವಿತರಿಸಲಾಯಿತು.

BSY Abhimanotsava: ತ್ಯಾಗ, ಪರಿಶ್ರಮ, ಹೋರಾಟಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ: ಬಿ.ವೈ.ವಿಜಯೇಂದ್ರ

ತ್ಯಾಗ, ಪರಿಶ್ರಮ, ಹೋರಾಟಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ

ಬಿಎಸ್‍ವೈ ಅವರ ಹೋರಾಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ತಮ್ಮ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಜೀವನದುದ್ದಕ್ಕೂ ಯಾವುದೇ ಸವಾಲುಗಳು ಬಂದರೂ ಬೆನ್ನು ತೋರಿಸಿ ಓಡಿ ಹೋದವರಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Chinthamani News: ರೇಷ್ಮೆ ತೋಟದ ಮೇಲೆ ಅಧಿಕಾರಿಗಳ ಕಣ್ಣು: ರೈತನ ಕಣ್ಣೀರು, ಆತ್ಮಹತ್ಯೆಯ ಎಚ್ಚರಿಕೆ

ರೇಷ್ಮೆ ತೋಟದ ಮೇಲೆ ಅಧಿಕಾರಿಗಳ ಕಣ್ಣು

ಸರ್ವೆ ನಂಬರ್ 75ರಲ್ಲಿ ರೈತರು ರೇಷ್ಮೆ ಬೆಳೆಯನ್ನು ಬೆಳೆದಿದ್ದಾರೆ. ರಸ್ತೆ ಅಳತೆಯ ಹೆಸರಿ ನಲ್ಲಿ ಈ ರೇಷ್ಮೆ ಬೆಳೆಯನ್ನು ನಾಶ ಮಾಡಲು ಎದುರಾಳಿಗಳು ಸಂಚು ರೂಪಿಸಿದ್ದಾರೆ. ನಾವು ಯಾವುದೇ ರಸ್ತೆ ಒತ್ತುವರಿ ಮಾಡಿಕೊಂಡಿಲ್ಲ.ಕೇವಲ ವೈಯಕ್ತಿಕ ದ್ವೇಷಕ್ಕಾಗಿ ಪದೇ ಪದೇ ಅಳತೆ ಮಾಡಿಸಿ ನಮ್ಮ ಬೆಳೆಯನ್ನು ನಾಶ ಮಾಡಲು ಪ್ರಯತ್ನಿಸಲಾಗುತ್ತಿದೆ

Shidlaghatta News: ಕನಸಾಗಿಯೇ ಉಳಿದ ಸೀಕಲ್ ರಾಮಚಂದ್ರಗೌಡರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಭರವಸೆ

2023ರ ಚುನಾವಣೆಯಲ್ಲಿ ನೀಡಿದ ಭರವಸೆ ಇಷ್ಟು ಬೇಗ ಮರೆತು ಹೋಯಿತೆ!!!!!

ತಾಲೂಕಿನಲ್ಲಿ ಸಮರ್ಪಕ ಆರೋಗ್ಯ ಸೌಲಭ್ಯಗಳ ಕೊರತೆ ಇದ್ದ ಹಿನ್ನೆಲೆ ಈ ಭರವಸೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಮೂರುವರೆ ನಾಲ್ಕು ವರ್ಷಗಳು ಕಳೆದರೂ ಆಸ್ಪತ್ರೆ ನಿರ್ಮಾಣದ ಕೆಲಸ ಆರಂಭವಾಗದೇ ಇರುವುದು ಇವರ ಬದ್ಧತೆಯನ್ನು ಜನತೆ ಅನುಮಾನ ದಿಂದ ನೋಡುವಂತೆ ಮಾಡಿದೆ.

ಅಭಿವೃದ್ದಿಗೆ ಸಹಕರಿಸಿ, ಎತ್ತಿ ಕಟ್ಟುವ ಆಟ ನಿಲ್ಲಿಸಿದರೆ ನಿಮಗೇ ಕ್ಷೇಮ: ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಆಕ್ರೋಶ

ಅಭಿವೃದ್ದಿಗೆ ಸಹಕರಿಸಿ : ಎತ್ತಿಕಟ್ಟುವ ಆಟ ನಿಲ್ಲಿಸಿದರೆ ನಿಮಗೇ ಕ್ಷೇಮ

ಕ್ಷೇತ್ರದ ನಿವೇಶನ ರಹಿತರಿಗೆ ನಿವೇಶನಗಳನ್ನು ಒದಗಿಸಿ ಕೊಡಬೇಕೆಂಬ ದೃಡ ಸಂಕಲ್ಪ ದಿಂದ ಕಳೆದ ಆರು ತಿಂಗಳಿಂದಲೂ ನಿರಂತರವಾಗಿ ತಹಶಿಲ್ದಾರರು ಹಾಗೂ ತಾಲೂಕು ಪಂಚಾಯಿತಿ ಇಓ ಅವರೊಂದಿಗೆ ಸೇರಿ ತಾಲೂಕಿನಲ್ಲಿ ಸುಮಾರು 176 ಏಕರೆ ಸರ್ಕಾರಿ ಜಮೀನುಗಳನ್ನು ಗುರುತಿಸಿ,ಸದರಿ ಜಮೀನಿನಲ್ಲಿ ಸುಮಾರು ನಾಲ್ಕು ಸಾವಿರ ನಿವೇಶನಗಳನ್ನು ಗುರುತಿಸಿ ಹಗಲು ಇರುಳು ಕೆಲಸ ಮಾಡುತ್ತಿದ್ದೇವೆ.

BSY Abhimanotsava: ʼಬಿಎಸ್‌ವೈ ಅಭಿಮಾನೋತ್ಸವʼ ಒಂದು ಐತಿಹಾಸಿಕ ಕಾರ್ಯಕ್ರಮ: ಬಿ.ವೈ. ರಾಘವೇಂದ್ರ

ʼಬಿಎಸ್‌ವೈ ಅಭಿಮಾನೋತ್ಸವʼ ಒಂದು ಐತಿಹಾಸಿಕ ಕಾರ್ಯಕ್ರಮ: ಬಿ.ವೈ. ರಾಘವೇಂದ್ರ

BSY Abhimanotsava: ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವವು ಒಂದು ಐತಿಹಾಸಿಕ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.

Chikkaballapur News: ಮಕ್ಕಳಿಗೆ ಭೂಮಿ ಆಕಾಶ ಮಣ್ಣು ಮಳೆಯ ಗಮಲಿನ ಸಂಬಂಧ ಅನುಬಂಧ ಕಲಿಸಬೇಕಿದೆ: ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಮತ

ಮಕ್ಕಳಿಗೆ ಭೂಮಿ ಆಕಾಶ ಮಣ್ಣು ಮಳೆಯ ಗಮಲಿನ ಸಂಬಂಧ ಅನುಬಂಧ ಕಲಿಸಬೇಕಿದೆ

ಇದು ಮೊಬೈಲ್ ಕಾಲ ಮೋಹದ ಕಾಲ ನೆಲಮೂಲ ಭಾವನೆಗಳಿಗೆ ಕೊಳ್ಳಿಯಿಟ್ಟ ಕಾಲ ಇದಾ ಗಿದೆ. ಕೆರೆ-ಕುಂಟೆ ಬಾವಿ, ನದಿ, ಹಳ್ಳ, ಕಾಡು ಕಣಿವೆ ತೋಪು ಅರಣ್ಯ,ಬೆಟ್ಟ ಗುಡ್ಡ ಮಣ್ಣು ಮಳೆಯ ವಾಸನೆಯಂತಹ ಸಹಜ ಗುಣಗಳನ್ನು ಮಕ್ಕಳಿಗೆ ಪರಿಚಯ ಮಾಡ ಬೇಕೆಂಬ ಕನಿಷ್ಟ ಪ್ರಜ್ಞೆಯನ್ನು ನಾವು ಕಳೆದುಕೊಂಡಿದ್ದೇವೆ.

Madhugiri News: ವಿಜೃಂಭಣೆಯಿಂದ ನೆರವೇರಿದ ಶ್ರೀ ಅಮ್ಮಾಜಿ ಕಾವಲ್ಲೇಶ್ವರಿ ದೇವಿ, ನರಸಿಂಹ ಸ್ವಾಮಿ ಜಲಧಿ ಮಹೋತ್ಸವ

ವಿಜೃಂಭಣೆಯಿಂದ ನೆರವೇರಿದ ಅಮ್ಮಾಜಿ ಕಾವಲ್ಲೇಶ್ವರಿ ಜಲಧಿ ಮಹೋತ್ಸವ

Madhugiri News: ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ (ಶೆಟ್ಟನವರ) ಕುಲದೇವತೆ ಅಮ್ಮಾಜಿ ಕಾವಲ್ಲೇಶ್ವರಿ ದೇವಿ ಹಾಗೂ ನರಸಿಂಹ ಸ್ವಾಮಿಯ ಜಲಧಿ ಮಹೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನಾಳೆ ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಗುರುವಂದನೆ

ನಾಳೆ ಗೋಡೆಕೆರೆ ಮಠದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಗಳಿಗೆ ಗುರುವಂದನೆ

Chikkanayakanahalli News: ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ 1108 ಜಗದ್ಗುರು ಭೂಸುಕ್ಷೇತ್ರ ಗೋಡೆಕೆರೆ ಮಠದ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮೀಜಿ ಅವರಿಗೆ ಮೇ 10 ರಂದು ಭಾನುವಾರ ಭಕ್ತಸಮೂಹವು ಭಕ್ತಿಪೂರ್ವಕ ಗುರುವಂದನೆಯನ್ನು ಸಲ್ಲಿಸುತ್ತಿದೆ.

BSY Abhimanotsava: ಸೈಕಲ್‌ ಮೂಲಕ ಹಳ್ಳಿಗಳನ್ನು ಸುತ್ತಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ: ಬಿಎಸ್‌ವೈರನ್ನು ಹಾಡಿ ಹೊಗಳಿದ ಅಮಿತ್‌ ಶಾ

ಅಭಿಮಾನೋತ್ಸವದಲ್ಲಿ ಬಿಎಸ್‌ವೈರನ್ನು ಹಾಡಿ ಹೊಗಳಿದ ಅಮಿತ್‌ ಶಾ

ಬಿ.ಎಸ್‌. ಯಡಿಯೂರಪ್ಪ ಅವರು ಬಸ್ ಸಿಗದಿದ್ದರೆ ಸೈಕಲ್‍ನಲ್ಲೇ ಹಳ್ಳಿಗೆ ತೆರಳಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದರು. ಸಾವಿರಾರು ಕಿ.ಮೀ. ಪಾದಯಾತ್ರೆ ಮಾಡಿ ರೈತರ ಪರವಾಗಿ ಹೋರಾಟ ಮಾಡಿದವರು. ಈ ಮೂಲಕ ರೈತ ನಾಯಕರಾಗಿ ಹೊರಹೊಮ್ಮಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

BSY Abhimanotsava: ಬಿಎಸ್‌ವೈ ಅಭಿಮಾನೋತ್ಸವ; ಮಾಜಿ ಸಿಎಂ ಕುರಿತು ಪ್ರಧಾನಿ ಮೋದಿಯಿಂದ ಬಂತು ವಿಶೇಷ ಸಂದೇಶ

ಬಿ.ಎಸ್‌. ಯಡಿಯೂರಪ್ಪಗೆ ಪ್ರಧಾನಿ ಮೋದಿಯಿಂದ ಬಂತು ವಿಶೇಷ ಸಂದೇಶ

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ರಾಜಕೀಯ ಜೀವನ ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅತ್ಯಂತ ತಳ ಮಟ್ಟದಿಂದ ಬೆಳೆದು ಅವರು ತಮ್ಮ ಸಾಮಾಜಿಕ ಜೀವನವನ್ನು ಹಂತ ಹಂತವಾಗಿ ಕಠಿಣ ನಿರಂತರ ಪರಿಶ್ರಮದ ಮೂಲಕ ಕಟ್ಟಿದರು ಎಂದು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.

BSY Abhimanotsava: ಬಗರ್‌ ಹುಕುಂ ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ: ಜೋಶಿ Video

ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ

ಬಂಗಾಳದಲ್ಲಿ ನಮ್ಮ ವಿಚಾರಧಾರೆಗೆ ಪ್ರಚಂಡ ಗೆಲುವು ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಈ ಮೊದಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಮತ್ತೊಮ್ಮೆ ಬಿಎಸ್‌ವೈ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದ್ದಾರೆ.

ಕತಾರ್‌ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ವ್ಯವಸ್ಥಾಪಕ ಸಮಿತಿ ಸದಸ್ಯರಿಗೆ ಭಾರತದ ರಾಯಭಾರ ಕಚೇರಿಯಿಂದ ಸನ್ಮಾನ

ಕತಾರ್‌ನಲ್ಲಿ ಐಸಿಸಿ ವ್ಯವಸ್ಥಾಪಕ ಸಮಿತಿ ಸದಸ್ಯರಿಗೆ ಸನ್ಮಾನ

Indian Cultural Centre: ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) 2023–2024ರ ವ್ಯವಸ್ಥಾಪಕ ಸಮಿತಿಯನ್ನು ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಭಾರತದ ರಾಯಭಾರ ಕಚೇರಿಯು ಇತ್ತೀಚೆಗೆ ಐಸಿಸಿ ಅಶೋಕ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

BSY Abhimanotsava: ಅಧಿಕಾರದ ಬೆನ್ನತ್ತಿ ಹೋರಾಟಕ್ಕಿಳಿಯಲಿಲ್ಲ, ನಾಡಿದ ಜನರ ಋಣ ತೀರಿಸಲು ಸಾಧ್ಯವಿಲ್ಲ: ಬಿ.ಎಸ್‌.ಯಡಿಯೂರಪ್ಪ ಭಾವುಕ

ಅಧಿಕಾರದ ಬೆನ್ನತ್ತಿ ಹೋರಾಟಕ್ಕಿಳಿಯಲಿಲ್ಲ: ಬಿಎಸ್‌ವೈ ಭಾವುಕ

B.S. Yediyurappa: ನಿಮ್ಮ ಯಡಿಯೂರಪ್ಪ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಸಾರ್ವಜನಿಕ ಬದುಕಿಗೆ ಬಂದವನಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಅನಿರೀಕ್ಷಿತ ತಿರುವುಗಳಾಗಿ ನಾನು ನಾಡಿನ ಜನರ ಸೇವೆಗೆ ಸಮರ್ಪಣೆಗೊಂಡವನು ಎಂದು ಹೇಳುತ್ತಾ, ತಮ್ಮ ಹೋರಾಟದ ಜೀವನವನ್ನು ನೆನೆದು ಮಾಜಿ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿದ್ದಾರೆ.

BSY Abhimanotsava: ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್‌ ಲೀಡರ್‌: ಬೊಮ್ಮಾಯಿ Video

ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್‌ ಲೀಡರ್‌: ಬೊಮ್ಮಾಯಿ

ವಿರೋಧ ಪಕ್ಷದಲ್ಲಿದ್ದಾಗ ಯಾವುದಕ್ಕಾಗಿ ಹೋರಾಟ ಮಾಡಿದ್ದರೋ ಆ ಬೇಡಿಕೆಗಳನ್ನು ಅಧಿಕಾರಕ್ಕೆ ಬಂದಮೇಲೆ ಈಡೇರಿಸಲು ಬಿ.ಎಸ್‌.ಯಡಿಯೂರಪ್ಪ ಅವರು ಶ್ರಮಿಸಿದ್ದರು. ವಿಜಯಪುರ, ಶಿಗ್ಗಾಂವಿ, ದಾವಣಗೆರೆಯ ರಾಜನಹಳ್ಳಿಯಲ್ಲಿ ಕೆರೆ ತುಂಬಿಸುವ ಯೋಜನೆ ಸೇರಿ ಹಲವು ಯೋಜನೆಗಳನ್ನು ಕೈಗೊಂಡಿದ್ದರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

Kunigal Accident: ಕುಣಿಗಲ್‌ನಲ್ಲಿ ಭೀಕರ ಅಪಘಾತ; ಕಾರಿಗೆ ಲಾರಿ ಡಿಕ್ಕಿಯಾಗಿ ನಾಲ್ವರ ದುರ್ಮರಣ

ಕುಣಿಗಲ್‌ನಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ನಾಲ್ವರ ದುರ್ಮರಣ

ಕುಣಿಗಲ್‌ ತಾಲೂಕಿನ ಚಿಗನಿಪಾಳ್ಯ ಬಳಿ ರಾಜ್ಯ ಹೆದ್ದಾರಿ 33ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ತುಮಕೂರು ಕಡೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Nisha Yogeshwar: ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್‌ ಕಣ್ಣೀರು, Video

ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್‌

ಚನ್ನಪಟ್ಟಣದ ತಮ್ಮ ಸ್ವಗೃಹದ ಮುಂದೆ ನಿಂತು ಅಸಹಾಯಕತೆ ವ್ಯಕ್ತಪಡಿಸಿರುವ ನಿಶಾ ಯೋಗೇಶ್ವರ್‌ ಅವರು, ನಾವು ಹುಟ್ಟಿ ಬೆಳೆದ ನಮ್ಮ ಮನೆಗೆ ನಮಗೆ ಪ್ರವೇಶವಿಲ್ಲ. ನಮ್ಮ ಮನೆಗೆ ಈಗ ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Loading...