ಹಿಂದೂ ರುದ್ರಭೂಮಿ ದುರಸ್ತಿ ಮಾಡಲು ಮನವಿ ಸಲ್ಲಿಕೆ
ಶಿಡ್ಲಘಟ್ಟ ನಗರದ ಕನಕ ನಗರದಲ್ಲಿನ ಹಿಂದೂ ರುದ್ರ ಭೂಮಿಯ ನಿರ್ವಹಣೆ ಇಲ್ಲದೇ ಸೊರಗಿದೆ. ಈ ಕೂಡಲೆ ಇದರ ಅವ್ಯವಸ್ಥೆ ಸರಿಪಡಿಸಬೇಕು. ರುದ್ರ ಭೂಮಿಯ ಕಾಂಪೌಂಡ್, ಗಿಡಗಳು, ಮುಳ್ಳು ಪೊದೆಗಳಲ್ಲಿ ಹುಳ ಹುಪ್ಪಟಗಳು ಸೇರಿದ್ದು ಇದನ್ನು ಸ್ವಚ್ಛ ಮಾಡಿಸಬೇಕು.ಇನ್ನು ಸ್ಮಶಾನದಲ್ಲಿ ಸ್ನಾನಗೃಹದ ವ್ಯವಸ್ಥೆ ಮಾಡಿ ಇದಕ್ಕೆ ನೀರಿನ ಸರಬರಾಜು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸ ಬೇಕು.