Viral Video: ಸೆಲ್ಫಿ... ಎನ್ನುತ್ತಿದ್ದಂತೆ ಮುದ್ದಾದ ನಗು ಚೆಲ್ಲಿದ ಶ್ವಾನ; ಗೋಲ್ಡನ್ ರಿಟ್ರೀವರ್‌ನ ಕ್ಯೂಟ್ ವಿಡಿಯೊ ವೈರಲ್!
ಗೋಲ್ಡನ್ ರಿಟ್ರೀವರ್‌ಗಳಾದ ಎಲ್ಲೀ ಮತ್ತು ಎಮ್ಮಾ ಎಂಬ ಎರಡು ಮುದ್ದಾದ ನಾಯಿಗಳೊಂದಿಗೆ ಪ್ರಪಂಚ ಸುತ್ತುತ್ತಿದ್ದ ಅಮೆರಿಕನ್ ವ್ಲಾಗರ್ ಅವುಗಳ ಜೊತೆಗೆ ಸೆಲ್ಫಿ ತೆಗೆಸಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.


ಸಾಕು ಪ್ರಾಣಿಗಳ ಜೊತೆ ಮನುಷ್ಯರ ಒಡನಾಟದ ಸಾಕಷ್ಟು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.ಇತ್ತೀಚೆಗೆ ಕುಂಭಮೇಳಕ್ಕೆ ವ್ಯಕ್ತಿಯೊಬ್ಬ ನಾಯಿಯೊಂದನ್ನು ಕರೆದುಕೊಂಡ ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಅಮೆರಿಕನ್ ವ್ಲಾಗರ್ ತನ್ನ ಮುದ್ದಾದ ಎರಡು ಗೋಲ್ಡನ್ ರಿಟ್ರೀವರ್ ನಾಯಿಮರಿಗಳ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಈ ನಾಯಿಮರಿಗಳ ಜೊತೆ ಆತ ಪ್ರಪಂಚವನ್ನು ಸುತ್ತುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ಇದನ್ನು ನೋಡಿ ಫುಲ್ ಫಿದಾ ಆಗಿದ್ದಾರೆ.
ವ್ಲಾಗರ್ ಕೆವಿನ್ ಬುಬೋಲ್ಜ್ ಮತ್ತು ಅವನ ಪತ್ನಿ ಕೇಟೀ ತಮ್ಮ ಗೋಲ್ಡನ್ ರಿಟ್ರೀವರ್‌ಗಳೊಂದಿಗೆ, ಕಳೆದ ಅದ್ಭುತ ಕ್ಷಣಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.ಇತ್ತೀಚೆಗೆ ಎಲ್ಲೀ ಮತ್ತು ಎಮ್ಮಾ ಜೊತೆಗಿನ "ಟಾಪ್ 7 ಜಾಗತಿಕ ಸೆಲ್ಫಿಗಳ" ಮೋಜಿನ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ.
ಶ್ವಾನದ ಮುದ್ದಾದ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊದಲ್ಲಿ ಕೆವಿನ್ ಪ್ಯಾರಿಸ್‌ನಲ್ಲಿ ಐಫೆಲ್ ಟವರ್ ಮುಂದೆ ನಿಂತು, ಸೆಲ್ಫಿಗಾಗಿ ಎಲ್ಲೀಯನ್ನು ಕರೆದಿದ್ದಾನೆ. ಅದು ಖುಷಿಯಿಂದ ಅವನ ಬಳಿ ಓಡಿ ಬಂದಿದೆ. ಇನ್ನು ಸೆಲ್ಪಿ ತೆಗೆದುಕೊಳ್ಳುವಾಗ ಕೆವಿನ್ ನಗು ಎಂದಾಗ ಎಲ್ಲೀ ಖುಷಿಯಿಂದ ನಕ್ಕಿದೆ. ನಂತರ ಇದರ ಜೊತೆ ಎಮ್ಮಾ ಕೂಡ ಸೇರಿಕೊಂಡು ಫೋಟೊಗೆ ಪೋಸ್ ನೀಡಿದ್ದಾವೆ. ಹಾಗೇ ಇಟಲಿಯಲ್ಲಿ ಕೂಡ ಇವುಗಳ ತುಂಟಾಟದ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ಈ ಕೋತಿ ಚೇಷ್ಟೆಗೆ ಪ್ರವಾಸಿಗರು ಸುಸ್ತೋ... ಸುಸ್ತು! 500 ರೂ. ನೋಟುಗಳ ಬಂಡಲ್ ಎಗರಿಸಿದ ಕಪಿರಾಯ
ಈ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬರು ವಿಡಿಯೊ ನೋಡಿ ಖುಷಿಯಾಯ್ತು ಎಂದು ಬರೆದರೆ, ಇನ್ನೊಬ್ಬರು "ಇದು ನನಗೆ ತುಂಬಾ ನಗು ತರಿಸಿತು!!!!!" ಎಂದು ಪೋಸ್ಟ್ ಮಾಡಿದ್ದಾರೆ. "ವಿಡಿಯೊ ನೋಡಿದವರು ನಗದೆ ಇರಲು ಸಾಧ್ಯವಿಲ್ಲ” ಎಂದು ಮತ್ತೊಬ್ಬರು ಕಾಮೆಂಟ್‍ನಲ್ಲಿ ಬರೆದಿದ್ದಾರೆ.