Safest Airlines: 2025ರ ಟಾಪ್ 10 ಸುರಕ್ಷಿತ ವಿಮಾನಯಾನ ಸಂಸ್ಥೆಗಳು ಇವು
ಇತ್ತೀಚೆಗಷ್ಟೇ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿ ನೂರಾರು ಜನ ಸ್ಥಳದಲ್ಲಿ ಅಸುನೀಗಿ ಒಬ್ಬರು ಮಾತ್ರವೇ ಪವಾಡ ಸದೃಶ್ಯ ಎಂಬಂತೆ ಪಾರಾಗಿದ್ದರು. ಈ ಘಟನೆ ನಡೆದ ಬಳಿಕ ವಿಶ್ವದ ಪ್ರಮುಖ ವಿಮಾನ ಸಂಸ್ಥೆಗಳ ಸುರಕ್ಷತೆ ವಿಚಾರವು ಹೆಚ್ಚು ಚರ್ಚೆಯಲ್ಲಿದೆ. ವಿಶ್ವದ 10 ಅತ್ಯಂತ ಸುರಕ್ಷಿತ ವಿಮಾನಯಾನ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ.

Safest Airlines Of 2025


ಟರ್ಕಿಶ್ ಏರ್ಲೈನ್ಸ್
ಯುರೋಪ್, ಏಷ್ಯಾ, ಓಷಿಯಾನಿಯಾ, ಆಫ್ರಿಕಾ ಮತ್ತು ಅಮೆರಿಕದ 352 ಸ್ಥಳಗಳಿಗೆ ವಿಮಾನ ಸೇವೆ ಒದಗಿಸುವ ಟರ್ಕಿಶ್ ಏರ್ಲೈನ್ಸ್ 10ನೇ ಸ್ಥಾನದಲ್ಲಿದೆ. 1933ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಟರ್ಕಿಶ್ ಏರ್ಲೈನ್ಸ್ 92 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಒಂದೇ ವಿಮಾನ ನಿಲ್ದಾಣದಿಂದ ಹೆಚ್ಚಿನ ಸ್ಥಳಗಳಿಗೆ ತಡೆರಹಿತ ಸೇವೆಯನ್ನು ಒದಗಿಸುವ ನೆಲೆಯಲ್ಲಿ ಟಾಪ್ 10ನೇ ಸ್ಥಾನ ಇದಕ್ಕೆ ಸಿಕ್ಕಿದೆ.

ಅಲಾಸ್ಕಾ ಏರ್ಲೈನ್ಸ್
ಅಮೆರಿಕದ ಪ್ರಮುಖ ವಿಮಾನಯಾನ ಸಂಸ್ಥೆಯಲ್ಲಿ ಒಂದಾದ ಅಲಾಸ್ಕಾ ಏರ್ಲೈನ್ಸ್ ಟಾಪ್ 9ನೇ ಸ್ಥಾನದಲ್ಲಿದೆ. ವಾಷಿಂಗ್ಟನ್ನ ಸೀಟಾಕ್ನಲ್ಲಿ ಇದರ ಪ್ರಧಾನ ಕಚೇರಿ ಇದೆ. ಅಮೆರಿಕ, ಬಹಾಮಾಸ್, ಬೆಲೀಜ್, ಕೆನಡಾ, ಮೆಕ್ಸಿಕೋ ಸೇರಿದಂತೆ 100ಕ್ಕೂ ಹೆಚ್ಚಿನ ಸ್ಥಳಗಳಿಗೆ ವಿಮಾನ ಸೇವೆ ಒದಗಿಸುವ ಈ ಸಂಸ್ಥೆ ರಕ್ಷಣಾತ್ಮಕ ವಿಚಾರದಿಂದ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಕೊರಿಯನ್ ಏರ್ಲೈನ್ಸ್
ಉನ್ನತ ಶ್ರೇಣಿಯ ಅಂತಾರಾಷ್ಟ್ರೀಯ ಸರಕು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಕೊರಿಯನ್ ಏರ್ಲೈನ್ಸ್ಗೆ ಟಾಪ್ 8ನೇ ಸ್ಥಾನ ದೊರಕಿದೆ. ಫ್ಲಿಟ್ ಗಾತ್ರ ಹಾಗೂ ಡೆಸ್ಟಿನೇಶನ್ ವಿಚಾರದಲ್ಲಿ ಈ ಏರ್ಲೈನ್ಸ್ ಅತೀ ದೊಡ್ಡ ವಿಮಾನ ಸಂಸ್ಥೆಯಾಗಿದೆ. ಹಾಂಗ್ ಕಾಂಗ್, ಜಪಾನ್, ತೈವಾನ್, ಲಾಸ್ ಏಂಜಲೀಸ್, ಪ್ಯಾರಿಸ್, ಫ್ರಾನ್ಸ್ ಪ್ರದೇಶಕ್ಕೆ ಸುರಕ್ಷಿತ ಸೇವೆ ನೀಡುತ್ತದೆ.

ಇವಿಎ ಏರ್ಲೈನ್ಸ್
ತೈವಾನ್ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದ ಇವಿಎ ಏರ್ಲೈನ್ಸ್ಗೆ ಟಾಪ್ 7ನೇ ಸ್ಥಾನ ದೊರೆತಿದೆ. ಇದು ಚೀನಾ ಏರ್ಲೈನ್ಸ್ ವ್ಯಾಪ್ತಿಗೆ ಒಳಪಟ್ಟಿದ್ದು ಖಾಸಗಿ ಸಂಸ್ಥೆಗೆ ಈ ವಿಮಾನಯಾನ ಒಳಪಟ್ಟಿದೆ. ಏಷ್ಯಾ, ಆಸ್ಟ್ರೇಲಿಯಾ, ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತಾಣಗಳಿಗೆ ಪ್ರಯಾಣಿಕ ಮತ್ತು ಸರಕು ಸೇವೆಗಳನ್ನು ಒದಗಿಸುತ್ತದೆ.

ಆಲ್ ನಿಪ್ಪಾನ್ ಏರ್ಲೈನ್ಸ್
ಜಪಾನ್ನ ಏರ್ ವೇಸ್ನಲ್ಲಿ ಅತ್ಯಂತ ಪ್ರಚಲಿತ ಹೊಂದಿರುವ ಆಲ್ ನಿಪ್ಪಾನ್ ಏರ್ವೇಸ್ ಟಾಪ್ 6ನೇ ಸ್ಥಾನದಲ್ಲಿದೆ. 1952ರಿಂದ ಸಕ್ರಿಯವಾಗಿದ್ದ ಈ ಸಂಸ್ಥೆ ಸುಮಾರು 72ವರ್ಷಗಳಿಂದಲೂ ವಿಮಾನ ಯಾನದ ಸೇವೆ ನೀಡುತ್ತಾ ಬಂದಿದೆ. ಒಸಾಕಾ, ಟೋಕಿಯೊ, ಪ್ಯಾರಿಸ್, ಸಿಂಗಾಪುರ, ಸಿಯೋಲ್, ಲಂಡನ್, ಸಿಡ್ನಿ, ನ್ಯೂಯಾರ್ಕ್ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ವಿಮಾನ ಸೇವೆಯನ್ನು ಅತ್ಯಂತ ಸುರಕ್ಷಿತವಾಗಿ ನೀಡುತ್ತಾ ಬಂದಿದೆ.

ಎತಿಹಾದ್ ಏರ್ಲೈನ್ಸ್
ಅರಬ್ ರಾಷ್ಟ್ರಗಳ ಪ್ರಮುಖ ಏರ್ವೇಸ್ನಲ್ಲಿ ಎತಿಹಾದ್ ಏರ್ವೇಸ್ 5ನೇ ಸ್ಥಾನದಲ್ಲಿದೆ. 2003ರಿಂದ ಈ ಏರ್ವೇಸ್ ಸೇವೆ ಆರಂಭ ಆಗಿದ್ದು ಖಲೀಫಾ ನಗರದಲ್ಲಿ ಇದರ ಪ್ರಧಾನ ಕಚೇರಿ ಇದೆ. ವಿಮಾನಯಾನ ಸಂಸ್ಥೆಯು ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕದ 120ಕ್ಕೂ ಹೆಚ್ಚು ಪ್ರಯಾಣಿಕ ಮತ್ತು ಸರಕು ಸಾಗಣೆ ತಾಣಗಳಿಗೆ ವಿಮಾನ ಸೇವೆ ಒದಗಿಸುತ್ತಿದೆ.

ವರ್ಜಿನ್ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ವಿಮಾನ ಯಾನ ಸಂಸ್ಥೆಗಳಲ್ಲಿ ಒಂದಾದ ವರ್ಜಿನ್ ಆಸ್ಟ್ರೇಲಿಯಾವು ಟಾಪ್ 4ನೇ ಸ್ಥಾನದಲ್ಲಿದೆ. 2000ರಿಂದ ಇಲ್ಲಿ ವಿಮಾನ ಯಾನದ ಸೇವೆ ಆರಂಭ ಆಗಿದ್ದು, ಇದು ಆಸ್ಟ್ರೇಲಿಯಾದ 33 ಸ್ಥಳಗಳಿಗೆ ಪ್ರಯಾಣಿಕರು ಮತ್ತು ಸರಕು ಸಾಗಣೆ ತಾಣಗಳಿಗೆ ವಿಮಾನ ಸೇವೆ ಒದಗಿಸುತ್ತಿದೆ.

ಕ್ಯಾಥೆ ಪೆಸಿಫಿಕ್
ಅಮೆರಿಕದ ಪ್ರಮುಖ ಏರ್ವೇಸ್ನಲ್ಲಿ ಒಂದಾದ ಕ್ಯಾಥೆ ಪೆಸಿಫಿಕ್ಗೆ ಮೂರನೇ ಸ್ಥಾನ ದೊರೆತಿದೆ. 1946ರಿಂದ 78ವರ್ಷಗಳ ವಿಮಾನ ಸೇವೆ ನೀಡುತ್ತಾ ಬಂದಿದೆ. ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಕ ಮತ್ತು ಸರಕು ಸೇವೆಗಳಿಗೆ ವಿಮಾನ ಸೇವೆ ನೀಡುತ್ತಿದೆ. ಕತಾರ್ ಏರ್ವೇಸ್, ಎಮಿರೇಟ್ಸ್ ಕೂಡ 3ನೇ ಸ್ಥಾನದಲ್ಲಿದೆ.

ಕ್ವಾಂಟಾಸ್ ಏರ್ವೇಸ್
ಆಸ್ಟ್ರೇಲಿಯಾದ ಫ್ಲ್ಯಾಗ್ ಕ್ಯಾರಿಯರ್ ವಿಮಾನಯಾನ ಸಂಸ್ಥೆಯ ಕ್ವಾಂಟಾಸ್ ಏರ್ವೇಸ್ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಲ್ಲಿ ಇದು ಒಂದು.

ಏರ್ ನ್ಯೂಜಿಲೆಂಡ್
ವಿಶ್ವದ ಅತ್ಯಂತ ಸುರಕ್ಷಿತ ವಿಮಾನಯಾನ ಸಂಸ್ಥೆ ಎಂಬ ಖ್ಯಾತಿಗೆ ಏರ್ ನ್ಯೂಜಿಲೆಂಡ್ ಪಾತ್ರವಾಗಿದೆ. 1940ರಿಂದ 85 ವರ್ಷಗಳ ಸುದೀರ್ಘ ವಿಮಾನ ಸೇವೆ ನೀಡುತ್ತಾ ಬಂದಿದೆ. 18 ದೇಶಗಳಲ್ಲಿ 20 ದೇಶೀಯ ಮತ್ತು 28 ಅಂತಾರಾಷ್ಟ್ರೀಯ ತಾಣಗಳಿಗೆ ನಿಗದಿತ ಪ್ರಯಾಣಿಕ ವಿಮಾನ ಸೇವೆಯನ್ನು ನಿರ್ವಹಿಸುತ್ತಾ ಬಂದಿದೆ. ಎರಡು ವರ್ಷಗಳಲ್ಲಿನ ಗಂಭೀರ ಘಟನೆಗಳು, ವಿಮಾನಗಳ ಸಂಖ್ಯೆ, ಅವುಗಳ ವಿಮಾನಗಳ ವಯಸ್ಸು, ಅಪಘಾತಗಳ ಪ್ರಮಾಣ, IOSA ಪ್ರಮಾಣೀಕರಣ, ಪೈಲಟ್ ಕೌಶಲ್ಯ, ತರಬೇತಿ, ಇತರ ಅಂಶಗಳ ಆಧಾರದ ಮೇಲೆ ಸುರಕ್ಷಿತ ವಿಮಾನಯಾನ ಸಂಸ್ಥೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.