ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೋಲ್ಕತಾ ಸಾಮೂಹಿಕ ಅತ್ಯಾಚಾರ ಆರೋಪಿ ಮೊನೊಜಿತ್ ಮಿಶ್ರಾನ ಕಾಮಕಾಂಡ ಒಂದೊಂದೇ ಬೆಳಕಿಗೆ; ಆತನಿಂದ ತಪ್ಪಿಸಿಕೊಳ್ಳಲು ಕ್ಲಾಸ್‌ ಬಂಕ್‌ ಮಾಡುತ್ತಿದ್ದ ವಿದ್ಯಾರ್ಥಿನಿಯರು

Kolkata Law College Horror: ಜೂ. 25ರಂದು ದಕ್ಷಿನ ಕೋಲ್ಕತಾದ ಕಾನೂನು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ದೇಶವೇ ಬೆಚ್ಚಿ ಬಿದ್ದಿದೆ. ಪ್ರಮುಖ ಆರೋಪಿ, ಟಿಎಂಸಿ ನಾಯಕ ಮೊನೊಜಿತ್ ಮಿಶ್ರಾ ಈ ಹಿಂದೆಯೂ ಹಲವು ಅಪರಾದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮೊನೊಜಿತ್‌ನಿಂದ ತಪ್ಪಿಸಿಕೊಳ್ಳಲು ಬಂಕ್‌ ಮಾಡುತ್ತಿದ್ದ ವಿದ್ಯಾರ್ಥಿನಿಯರು

ಮೊನೊಜಿತ್ ಮಿಶ್ರಾ.

Profile Ramesh B Jul 1, 2025 8:09 PM

ಕೋಲ್ಕತಾ: ಮತ್ತೊಂದು ಕೆಟ್ಟ ಕಾರಣಕ್ಕೆ ಕೋಲ್ಕತಾ ಸುದ್ದಿಯಲ್ಲಿದೆ. ಕಳೆದ ವರ್ಷ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ. ಅದಾಗಲೇ ಕೋಲ್ಕತಾದ ಕಾನೂನು ಕಾಲೇಜಿನಲ್ಲಿ 24 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಮುಖ ಆರೋಪಿ ಟಿಎಂಸಿ ನಾಯಕ ಮೊನೊಜಿತ್ ಮಿಶ್ರಾ (Monojit Mishra) ಈ ಹಿಂದೆಯೂ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನುವ ಸತ್ಯ ಬಹಿರಂಗಗೊಂಡಿದೆ (Kolkata Law College Horror). ಆತನ ಭಯಾನಕ ʼಇತಿಹಾಸʼದ ಬಗ್ಗೆ ಹಿರಿಯ ವಿದ್ಯಾರ್ಥಿನಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿ ಜತೆ ಮಾತನಾಡಿದ, ಗುರುತು ಹೇಳಲು ಇಚ್ಛಿಸದ ಹಿರಿಯ ವಿದ್ಯಾರ್ಥಿನಿಯೊಬ್ಬರು ಮೊನೊಜಿತ್ ಮಿಶ್ರಾ ಬಗೆಗಿನ ಭಯಾನಕ ಕೃತ್ಯಗಳನ್ನು ವಿವರಿಸಿದ್ದಾರೆ. ಆತನ ಬಗ್ಗೆ ಎಷ್ಟು ಭಯ ಇತ್ತೆಂದರೆ ಆತ ಎದುರಾಗುತ್ತಾನೆ ಎನ್ನುವ ಕಾರಣಕ್ಕೆ ಹಲವು ವಿದ್ಯಾರ್ಥಿನಿಯರು ಕೆಲವು ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರಂತೆ. ಇದೇ ಕಾಲೇಜಿನಲ್ಲಿ ಕಲಿತಿದ್ದ 31 ವರ್ಷದ ಮಿಶ್ರಾ ಕೆಲವು ಸಮಯಗಳ ಹಿಂದೆ ಗುತ್ತಿಗೆ ಉದ್ಯೋಗಿಯಾಗಿ ಮರಳಿದ್ದ.

ಮಿಶ್ರಾ ತಂದೆಯ ಮಾತು ಇಲ್ಲಿದೆ:



ಈ ಸುದ್ದಿಯನ್ನೂ ಓದಿ: ಮಹಿಳೆಯರಿಗೆ ಕಿರುಕುಳ, ಕಳವು, ಸೊತ್ತು ನಾಶ...ಕೋಲ್ಕತಾ ಸಾಮೂಹಿಕ ಅತ್ಯಾಚಾರ ಆರೋಪಿ ಮೊನೊಜಿತ್ ಮಿಶ್ರಾನ ಭಯಾನಕ ಇತಿಹಾಸ ಒಂದೆರಡಲ್ಲ

"ಕ್ಯಾಂಪಸ್‌ನಲ್ಲಿ ಬೆದರಿಕೆಯ ವಾತಾವರಣವಿತ್ತು. ಆತ ವಿದ್ಯಾರ್ಥಿನಿಯರ ಫೋಟೊಗಳನ್ನು ಕ್ಲಿಕ್ಕಿಸಿ, ಅವುಗಳನ್ನು ಮಾರ್ಫ್ ಮಾಡಿ ವ್ಯಾಟ್ಸ್‌ಆ್ಯಪ್‌ ಗುಂಪುಗಳಿಗೆ ಶೇರ್‌ ಮಾಡುತ್ತಿದ್ದ. ಕೆಲವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆತನ ಬಗ್ಗೆ ಭಯ ಎಷ್ಟಿತ್ತು ಎಂದರೆ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಲು ಹೆದರುತ್ತಿದ್ದರು" ಎಂದು ಅವರು ವಿವರಿಸಿದ್ದಾರೆ.

ʼʼಮಿಶ್ರಾ ವಿರುದ್ಧ ಕೋಲ್ಕತಾದ ವಿವಿಧ ಠಾಣೆಗಳಲ್ಲಿ ಹಲವು ದೂರು ದಾಖಲಾಗಿದೆ. 2019ರಲ್ಲಿ ಆತ ಕ್ಯಾಂಪಸ್‌ನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಮಾತ್ರವಲ್ಲ ಆಕೆಯ ಬಟ್ಟೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿದ್ದ. 2024ರಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕಾಲೇಜಿನ ಸೊತ್ತುಗಳನ್ನು ನಾಶಪಡಿಸಿದ್ದ. ಜತೆಗೆ ಕಳವು ಪ್ರಕರಣದಲ್ಲಿಯೂ ಆತನ ಹೆಸರು ಕೇಳಿ ಬಂದಿದೆ. ಈತನ ವಿರುದ್ಧ ಹಲವು ಎಫ್‌ಐಆರ್‌ ಕೂಡ ದಾಖಲಾಗಿದೆ. ರಾಜಕೀಯ ಪ್ರಭಾವ ಇರುವ ಕಾರಣ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಟಿಎಂಸಿಯ ಬೆಂಬಲ ಇರುವ ಕಾರಣ ಆತನ ವಿರುದ್ದ ಯಾರೂ ಮಾತನಾಡುತ್ತಿಲ್ಲʼʼ ಎಂದು ತಿಳಿಸಿದ್ದಾರೆ. ಆತನನ್ನು ಕಂಡರೆ ಪ್ರಧ್ಯಾಪಕರೂ ಹೆದರುತ್ತಿದ್ದರು ಎಂದು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ.

ಮಿಶ್ರಾ ತಂದೆ ಹೇಳಿದ್ದೇನು?

ಕಾಳಿಘಾಟ್‌ನಲ್ಲಿ ಅರ್ಚಕರಾಗಿರುವ ಮಿಶ್ರಾ ತಂದೆ ಈ ಬಗ್ಗೆ ಮಾತನಾಡಿ, ಮಗ ನಿರಪರಾಧಿ ಎಂದಿದ್ದಾರೆ. ʼʼಈಗಾಗಲೇ ಆತನ ವಿರುದ್ದ ಹಲವು ದೂರುಗಳು ದಾಖಲಾಗಿದ್ದವು ಎಂದು ಕೆಲವರು ಹೇಳುತ್ತಾರೆ. ಆದರೆ ಆತನನ್ನೇಕೆ ಬಂಧಿಸಿಲ್ಲ? ಸತ್ಯ ಒಂದಲ್ಲ ಒಂದು ಹೊರ ಬರಲಿದೆʼʼ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲು ಅವರು ನಿರಾಕರಿಸಿದ್ದಾರೆ.

ಪ್ರಮುಖ ಆರೋಪಿ ಮೊನೊಜಿತ್ ಮಿಶ್ರಾ ಜತೆಗೆ ಝೈಬ್‌ ಅಹಮ್ಮದ್‌, ಪ್ರಮಿತ್‌ ಮುಖರ್ಜಿ ಮತ್ತು ಪಿನಾಕಿ ಬ್ಯಾನರ್ಜಿಯನ್ನು ಬಂಧಿಸಲಾಗಿದೆ.