Kareena kapoor: ʼಮುಜ್ ಸೇ ದೋಸ್ತಿ ಕರೋಗೆʼ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ ಪೋರಿ! ಕ್ಯೂಟ್ ವಿಡಿಯೊ ಫುಲ್ ವೈರಲ್
ಉಜ್ಬೇಕಿಸ್ತಾನದ 6 ವರ್ಷದ ನರ್ಮಿನಾ ಸೋಡಿಕೋವಾ ಎಂಬ ಹುಡುಗಿ ಬಾಲಿವುಡ್ ಚಲನಚಿತ್ರ ಮುಜ್ಸೆ ದೋಸ್ತಿ ಕರೋಗೆ (2002) ಚಿತ್ರದ 'ಓ ಮೈ ಡಾರ್ಲಿಂಗ್' ಹಾಡಿಗೆ ಕರೀನಾ ಕಪೂರ್ ಖಾನ್ ಅವರ ಅಪ್ರತಿಮ ನೃತ್ಯವನ್ನು ಮರುಸೃಷ್ಟಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ಸಿನಿಮಾ ಹಾಡುಗಳನ್ನು ಮರುಸೃಷ್ಟಿಸಿದ ವಿಡಿಯೊಗಳು ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಉಜ್ಬೇಕಿಸ್ತಾನದ 6 ವರ್ಷದ ನರ್ಮಿನಾ ಸೋಡಿಕೋವಾ ಎಂಬ ಹುಡುಗಿ ಬಾಲಿವುಡ್ ಚಲನಚಿತ್ರ ಮುಜ್ ಸೇ ದೋಸ್ತಿ ಕರೋಗೆ (2002) ಚಿತ್ರದ 'ಓ ಮೈ ಡಾರ್ಲಿಂಗ್' ಹಾಡಿಗೆ ಕರೀನಾ ಕಪೂರ್ ಖಾನ್‌ನಂತೆ ನೃತ್ಯ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಈ ಪೋರಿಯ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ನರ್ಮಿನಾ ಹಾಡಿನಲ್ಲಿ ಕರೀನಾ ಕಪೂರ್ ತರ ಹೇರ್‌ಸ್ಟೈಲ್ ಮಾಡಿಕೊಂಡಿದ್ದಾಳೆ. ಅದು ಅಲ್ಲದೇ, ಕರೀನಾ ರೀತಿ ಮುಖದ ಹಾವಭಾವ ಮಾಡುತ್ತಾ, ಪುಟ್ಟ ಹುಡುಗಿ ಕರೀನಾ ಅವರ 'ಟೀನಾ' ಪಾತ್ರವನ್ನು ಅಚ್ಚುಕಟ್ಟಾಗಿ ಮರುಸೃಷ್ಟಿಸಿದ್ದಾಳೆ.
ಬಾಲಕಿಯ ನೃತ್ಯದ ಝಲಕ್ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಲ್ಲಿ ಎಲ್ಲರ ಗಮನ ಸೆಳೆದಿದೆ. ಕೆಲವರಂತೂ ಅವಳ ಡ್ಯಾನ್ಸ್ ಮೂವೆಂಟ್‌ಗೆ ಫಿದಾ ಆಗಿದ್ದಾರೆ. ಹಾಗೇ ಬಹಳಷ್ಟು ನೆಟ್ಟಿಗರು ಇವಳು ನೋಡುವುದಕ್ಕೆ ಥೇಟ್ ಸಾರಾ ಅಲಿಖಾನ್ ರೀತಿ ಇದ್ದಾಳೆ ಎಂದು ಹೇಳಿದ್ದಾರೆ. ಈ ಡ್ಯಾನ್ಸ್ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು 18.8 ಮಿಲಿಯನ್ ವ್ಯೂವ್ಸ್ ಮತ್ತು ಒಂದು ಮಿಲಿಯನ್ ಲೈಕ್ಸ್ ಗಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಎಂಥಾ ಕಾಲ ಬಂತಪ್ಪ! ಫೋನ್ ಕಸಿದುಕೊಂಡ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ!
ಇತ್ತೀಚೆಗಷ್ಟೇ ಅಮಿಟಿ ಯೂನಿವರ್ಸಿಟಿ ಜಾರ್ಖಂಡ್‍ನ ಅಮಿಫೋರಿಯಾ 2025 ಕಾರ್ಯಕ್ರಮದ ಸಮಯದಲ್ಲಿ, ಡ್ಯಾನ್ಸರ್ ಒಬ್ಬ ಮೈಕಲ್ ಜಾಕ್ಸನ್‌ನ ಫೇಮಸ್ ಡ್ಯಾನ್ಸ್ ಸ್ಟೆಪ್ ಆದ ಮೂನ್‌ವಾಕ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದನು. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗದ ಕಾರಣ ಅವನನ್ನು ಟ್ರೋಲ್ ಮಾಡಿದ್ದರು.