IPL 2025: ಕಾಂತಾರ ಶೈಲಿಯಲ್ಲೇ ರಾಹುಲ್‌ಗೆ ತಿರುಗೇಟು ಕೊಟ್ಟ ಕೊಹ್ಲಿ; ಇಲ್ಲಿದೆ ವಿಡಿಯೊ
ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ವೇಳೆ ರಾಹುಲ್ ಬಳಿ ನಗುತ್ತಲೇ ಬಂದ ವಿರಾಟ್ ಕೊಹ್ಲಿ ವೃತ್ತ ಎಳೆದಂತೆ ಸನ್ನೆ ಮಾಡಿ ಇದು ನನ್ನ ಮನೆ ಎಂದು ಸಂಭ್ರಮಿಸಲು ಮುಂದಾಗಿ ಬಳಿಕ ರಾಹುಲ್ ಅವರನ್ನು ತಬ್ಬಿಕೊಂಡರು.


ನವದೆಹಲಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಡೆಲ್ಲಿ ಮತ್ತು ಆರ್‌ಸಿಬಿ ನಡುವಣ ಮೊದಲ ಕಾದಾಟದಲ್ಲಿ ಅಜೇಯ 93 ರನ್‌ಗಳಿಸಿ ಡೆಲ್ಲಿ ಗೆಲ್ಲಿಸಿದ ನಂತರ ಕೆಎಲ್ ರಾಹುಲ್ ‘ಕಾಂತಾರ’ ಸಿನಿಮಾ ಶೈಲಿಯಲ್ಲಿ, ‘ಇದು ನನ್ನ ಮನೆ’ ಎಂದು ಸಂಭ್ರಮಿಸಿದ್ದರು. ಇದೀಗ ಮರುಮುಖಾಮುಖಿ ವಿರಾಟ್ ಕೊಹ್ಲಿ ತಮ್ಮ ತವರಾದ ನವದೆಹಲಿಯಲ್ಲಿ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ಕೂಡ ರಾಹುಲ್ ಮುಂದೆ ‘ಇದು ನನ್ನ ಮನೆ’ ಎಂದು ಸಂಭ್ರಮಿಸಿ ಕಾಲೆಳೆದಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ವೇಳೆ ರಾಹುಲ್ ಬಳಿ ನಗುತ್ತಲೇ ಬಂದ ವಿರಾಟ್ ಕೊಹ್ಲಿ ವೃತ್ತ ಎಳೆದಂತೆ ಸನ್ನೆ ಮಾಡಿ ಇದು ನನ್ನ ಮನೆ ಎಂದು ಸಂಭ್ರಮಿಸಲು ಮುಂದಾಗಿ ಬಳಿಕ ರಾಹುಲ್ ಅವರನ್ನು ತಬ್ಬಿಕೊಂಡರು. ಕೊಹ್ಲಿ ಕೇವಲ ತಮಾಷೆಯ ನಿಟ್ಟಿನಲ್ಲಿ ಈ ಸಂಭ್ರಮಾಚರಣೆ ಮಾಡಿದರು. ಏಕೆಂದರೆ ಕೊಹ್ಲಿ ಮತ್ತು ರಾಹುಲ್ ಉತ್ತಮ ಸ್ನೇಹಿತರಾಗಿದ್ದಾರೆ.
kohli😂❤️🫶🏻 https://t.co/7Nx1wejHw8 pic.twitter.com/otniekWn7Y
— S A K T H I ! (@Classic82atMCG_) April 27, 2025
ಇದಕ್ಕೂ ಮುನ್ನ ಪಂದ್ಯದ ವೇಳೆ ರಾಹುಲ್ ಮತ್ತು ವಿರಾಟ್ ಕೊಹ್ಲಿ ವಾಗ್ವಾದ ನಡೆಸುತ್ತಿರ ವಿಡಿಯೊ ಕೂಡ ವೈರಲ್ ಆಗಿದೆ. ಆದರೆ ಯಾವ ವಿಚಾರಕ್ಕೆ ಇವರಿಬ್ಬರು ದಿಢೀರ್ ವಾಗ್ವಾದ ನಡೆಸಿದರು ಎಂಬುದು ಸ್ಪಷ್ಟವಾಗಿಲ್ಲ. ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ, ಕೀಪಿಂಗ್ ಮಾಡುತ್ತಿದ್ದ ರಾಹುಲ್ ಬಳಿ ಏನೋ ವಾದ ಮಾಡುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ.
Virat Kohli and KL Rahul having chat together during the match. pic.twitter.com/bHXSSUcImm
— Tanuj (@ImTanujSingh) April 27, 2025
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆದಿದ ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿಗ ಕೆಎಲ್ ರಾಹುಲ್ (41 ರನ್, 39 ಎಸೆತ, 3 ಬೌಂಡರಿ) ಹಾಗೂ ಟ್ರಿಸ್ಟಾನ್ ಸ್ಟಬ್ಸ್ (34 ರನ್, 18 ಎಸೆತ, 5 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್ ಹೋರಾಟದಿಂದ 8 ವಿಕೆಟ್‌ಗೆ 162 ರನ್ ಬಾರಿಸಿತು.
ಇದನ್ನೂ ಓದಿ IPL 2025: ಗೆಲುವಿನೊಂದಿಗೆ ದಾಖಲೆ ಬರೆದ ರಜತ್ ಪಾಟೀದಾರ್
ಜವಾಬಿತ್ತ ಆರ್‌ಸಿಬಿ 26 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದರೂ, ವಿರಾಟ್ ಕೊಹ್ಲಿ (51 ರನ್, 47 ಎಸೆತ, 4 ಬೌಂಡರಿ) ಹಾಗೂ ಕೃನಾಲ್ ಪಾಂಡ್ಯ ಜೋಡಿಯ ಶತಕದ ಜತೆಯಾಟದ ನೆರವಿನಿಂದ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 165 ರನ್‌ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿ ಅಗ್ರಸ್ಥಾನಕ್ಕೇರಿದೆ.