ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonali Bendre: ರಾಜ್ ಠಾಕ್ರೆ ಜತೆ ಸಂಬಂಧ ವದಂತಿ; ಬೇಸರವಾಗಿದೆ...ಇದರಲ್ಲಿ ನನ್ನ ಕುಟುಂಬವೂ ಭಾಗಿಯಾಗಿದೆ ಎಂದ ನಟಿ ಸೋನಾಲಿ ಬೇಂದ್ರೆ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಕ್ರಶ್ ಇತ್ತು ಎನ್ನುವ ಗಾಸಿಪ್ ಗಳು ಇತ್ತೀಚೆಗೆ ಜೋರಾಗಿ ಕೇಳಿ ಬಂದಿದೆ. ಇದಕ್ಕೆ ಈಗ ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ. ರಾಜ್ ಠಾಕ್ರೆಗೂ ತಮಗೂ ಏನು ಸಂಬಂಧ, ಈ ಗಾಸಿಪ್ ಹುಟ್ಟಲು ಕರಣವಾಗಿದ್ದಾದರೂ ಏನು ಎನ್ನುವ ಕುರಿತು ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದಾರೆ.

ರಾಜ್ ಠಾಕ್ರೆ ಜತೆ ಸಂಬಂಧ ವದಂತಿಗೆ ಸ್ಪಷ್ಟನೆ ಕೊಟ್ಟ ನಟಿ ಸೋನಾಲಿ ಬೇಂದ್ರೆ

ಮುಂಬೈ: ಹಲವು ವರ್ಷಗಳ ಹಿಂದೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರೊಂದಿಗೆ ಬಾಲಿವುಡ್ ನಟಿ (Bollywood actress) ಸೋನಾಲಿ ಬೇಂದ್ರೆ (Sonali Bendre) ಸಂಬಂಧ ಹೊಂದಿದ್ದರು ಎನ್ನುವ ಗಾಸಿಪ್‌ಗಳ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಈ ಗಾಸಿಪ್ ಹುಟ್ಟಿಕೊಳ್ಳಲು ತಮ್ಮ ಕುಟುಂಬಗಳು ಭಾಗಿಯಾಗಿವೆ ಎಂದು ಹೇಳಿದ್ದಾರೆ. ಜನರು ಮಾಡುತ್ತಿರುವ ಗಾಸಿಪ್‌ಗಳಿಂದ ಬೇಸರವಾಗಿದೆ ಎಂದು ನಟಿ ತಮ್ಮ ಅಸಮಾಧಾನವನ್ನು ಈ ಸಂದರ್ಭದಲ್ಲಿ ಹೊರ ಹಾಕಿದ್ದಾರೆ.

ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ ಹಲವು ವರ್ಷಗಳ ಹಿಂದೆ ನಟಿ ಸೋನಾಲಿ ಬೇಂದ್ರೆ ಸಂಬಂಧ ಹೊಂದಿದ್ದರು ಎನ್ನುವ ವದಂತಿಯನ್ನು ತಿರಸ್ಕರಿಸಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕುಟುಂಬಗಳು ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ.

ರಾಜ್ ಠಾಕ್ರೆ ಅವರೊಂದಿಗಿನ ಹಳೆಯ ವಿಡಿಯೊವೊಂದು ವೈರಲ್ ಆದ ಬಳಿಕ ಈ ವದಂತಿಗಳು ಹುಟ್ಟಿಕೊಂಡಿತ್ತು. ರಾಜ್ ಠಾಕ್ರೆ ತಮ್ಮ ಮೇಲೆ ಕ್ರಶ್ ಹೊಂದಿದ್ದಾರೆ ಎನ್ನುವ ವದಂತಿಗಳಿಗೆ ಪ್ರತಿಕ್ರಿಯಿಸಿದ ನಟಿ ಬೇಂದ್ರೆ, ನನಗೆ ಗೊತ್ತಿಲ್ಲ. ನನ್ನ ಪ್ರಕಾರ ಬಹಳಷ್ಟು ಜನರು ಹೀಗೆ ಹೇಳಿರುವುದು ಸರಿಯಲ್ಲ. ಇದರಲ್ಲಿ ನನ್ನ ಕುಟುಂಬಗಳು ಭಾಗಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

sonal1

ತಮ್ಮ ಹಾಗೂ ಠಾಕ್ರೆ ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದಲೇ ಸಂಬಂಧವಿದೆ ಎಂದ ಸೋನಾಲಿ ಬೇಂದ್ರೆ, ನನ್ನ ಅಳಿಯ ಮತ್ತು ನನ್ನ ಸಹೋದರಿ ರಾಜ್ ಠಾಕ್ರೆ ಅವರ ಸೋದರ ಸಂಬಂಧಿಯೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಅಲ್ಲದೇ ಸಹೋದರಿಯ ಪತಿ ಮತ್ತು ರಾಜ್ ಠಾಕ್ರೆ ಅವರು ಯಾವಾಗಲೂ ಒಟ್ಟಿಗೆ ಆಡುತ್ತಿದ್ದರು. ನನ್ನ ತಂಗಿಯ ಅತ್ತೆ ರುಯಾ ಕಾಲೇಜಿನಲ್ಲಿ ನಮಗೆ ಇಂಗ್ಲಿಷ್ ಸಾಹಿತ್ಯವನ್ನು ಕಲಿಸುವ ವಿಭಾಗದ ಮುಖ್ಯಸ್ಥರಾಗಿದ್ದರು ಎಂದು ತಿಳಿಸಿದರು.

ರಾಜ್ ಠಾಕ್ರೆ ಅವರ ಪತ್ನಿ ಶರ್ಮಿಳಾ ಅವರ ತಾಯಿ ಮತ್ತು ಅವರ ತಾಯಿಯ ಚಿಕ್ಕಮ್ಮ ನಮ್ಮೊಂದಿಗೆ ಉತ್ತಮ ಸ್ನೇಹಿತರಾಗಿದ್ದರು ಎಂದು ಅವರು ತಿಳಿಸಿದ್ದಾರೆ.



ನಾವೆಲ್ಲರೂ ಒಬ್ಬರನ್ನೊಬ್ಬರು ತಿಳಿದುಕೊಂಡಿದ್ದೇವೆ. ನನಗೆ ಶರ್ಮಿಳಾ, ಅವರ ತಾಯಿ ಮತ್ತು ನನ್ನತಾಯಿಯ ಚಿಕ್ಕಮ್ಮ ಉತ್ತಮ ಸ್ನೇಹಿತರಾಗಿದ್ದರು. ಅವರ ತಾಯಿಯೊಂದಿಗೆ ನಾನು 10 ದಿನಗಳ ಕಾಲ ಇದ್ದೆ ಎಂದು ಸೋನಾಲಿ ಬೇಂದ್ರೆ ತಿಳಿಸಿದ್ದಾರೆ.

ಇದನ್ನೂ ಓದಿ: Sonia Gandhi: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಮತ್ತೆ ಏರುಪೇರು

ನಾನು ಯಾವಾಗಲೂ ಪ್ರಯಾಣಿಸುತ್ತಾ ಇರುತ್ತೇನೆ. ನಾನು ರಾಜ್ ಅವರನ್ನು ಹಲವು ಭಾರಿ ಭೇಟಿ ಮಾಡಿದ್ದೇನೆ. ಇದು ದೊಡ್ಡ ವಿಷಯವಲ್ಲ. ಬೇಸಿಗೆ ರಜಾದಿನಗಳಲ್ಲಿ ಮಹಾರಾಷ್ಟ್ರಕ್ಕೆ ಎರಡು ವರ್ಷಗಳಿಗೊಮ್ಮೆ ಬರುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ತಮಗೆ ರಾಜಕೀಯದಲ್ಲಿ ಯಾವುದೇ ಆಕಾಂಕ್ಷೆಗಳಿಲ್ಲ ಎಂದ ಸೋನಾಲಿ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೆ ತುಂಬಾ ದಪ್ಪ ಚರ್ಮ ಬೇಕು ಅಂತ ನನಗನ್ನಿಸುತ್ತೆ. ಆದರೆ ಅದು ನನ್ನಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ.