Sangeetha Sringeri: ಸಂಗೀತಾ ಶೃಂಗೇರಿ ಸಿನಿಮಾ ಯಾಕೆ ಮಾಡ್ತಿಲ್ಲ ಗೊತ್ತೇ?: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ದೊಡ್ಮನೆಯಿಂದ ಹೊರ ಬಂದಮೇಲೆ ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೊನೆಯದಾಗಿ ಮಾರಿಗೋಲ್ಡ್ ಸಿನಿಮಾ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ಸಂಗೀತಾ, ದಿಗಂತ್ಗೆ ನಾಯಕಿಯಾಗಿ ನಟಿಸಿದ್ದರು. ಅದಾದ ಬಳಿಕ ಇವರು ಯಾವ ಸಿನಿಮಾದಲ್ಲಿ ಸಂಗೀತಾ ನಟಿಸಿರಲಿಲ್ಲ.

Sangeetha Sringeri

ಬಿಗ್ ಬಾಸ್ ರಿಯಾಲಿಟಿ ಶೋ ಅನೇಕ ಕಲಾವಿದರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಈ ಶೋಗೆ ಹೋಗಿ ಬಂದ ಮೇಲೆ ಅನೇಕ ಸ್ಪರ್ಧಿಗಳು ನಟನಾ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಆಫರ್‌ಗಳು ಇವರಿಗೆ ಹುಡುಕಿಕೊಂಡು ಬರುತ್ತವೆ.. ದೊಡ್ಡ ದೊಡ್ಡ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಹೀಗೆ ಬಿಗ್ ಬಾಸ್ನಿಂದ ಸಾಕಷ್ಟು ಫೇಮಸ್ ಆದವರು ಸಂಗೀತ ಶೃಂಗೇರಿ (Sangeetha Sringeri).
ಬಿಗ್ ಬಾಸ್ ಕನ್ನಡ ಸೀಸನ್ 10ರ ಚೆಲುವೆ, ನಟಿ ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಧೂಳೆಬ್ಬಿಸಿದ್ದರು. ಅಲ್ಲಿಂದ ಹೊರ ಬಂದ ಮೇಲೆ ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋ ಶೂಟ್, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ, ಇವರ ಸಿನಿಮಾ ಬಗ್ಗೆ ಮಾತ್ರ ಒಂದೇ ಒಂದು ಅಪ್ಡೇಟ್ ಇಲ್ಲ.
ಬಿಗ್ ಬಾಸ್ ಮನೆಗೆ ಹೋಗಿದ್ದಾಗ ನಟಿ ಸಂಗೀತಾ ಶೃಂಗೇರಿಗೆ ಭಾರೀ ಕ್ರೇಜ್ ಇತ್ತು. ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಸಂಗೀತಾ ಬಳಿಕ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದರು. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಟಾಪ್ 3 ಸ್ಪರ್ಧಿಯಾಗುವುದರ ಜೊತೆಗೆ ಕರ್ನಾಟಕದ ಕ್ರಷ್-ಸಿಂಹಿಣಿ ಎನ್ನುವ ಪಟ್ಟ ಕೂಡ ಪಡೆದುಕೊಂಡರು.
ದೊಡ್ಮನೆಯಿಂದ ಹೊರ ಬಂದಮೇಲೆ ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೊನೆಯದಾಗಿ ಮಾರಿಗೋಲ್ಡ್ ಸಿನಿಮಾ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ಸಂಗೀತಾ, ದಿಗಂತ್ಗೆ ನಾಯಕಿಯಾಗಿ ನಟಿಸಿದ್ದರು. ಅದಾದ ಬಳಿಕ ಇವರು ಯಾವ ಸಿನಿಮಾದಲ್ಲಿ ಸಂಗೀತಾ ನಟಿಸಿರಲಿಲ್ಲ. ಸಿನಿಮಾ ಕ್ಷೇತ್ರದಿಂದ ಕೊಂಚ ದೂರ ಇಳಿದು ತಮ್ಮ ಸ್ಪಿರೀಚುವಲ್ ಜರ್ನಿ ಹಾಗೂ ತಮ್ಮ ಹೊಸ ಕ್ರಿಸ್ಟಲ್ ಬೀಡ್ಸ್ ಗಳ ಬ್ಯುಸಿನೆಸ್ ಮಾಡುತ್ತ ಬ್ಯುಸಿಯಾಗಿದ್ದಾರೆ.
Bhagya Lakshmi Serial: ತಾಂಡವ್ ಲೈಫ್ ಚೇಂಜ್: ಬಂಪರ್ ಆಫರ್ ಕೊಟ್ಟ ಆದೀಶ್ವರ್ ಕಾಮತ್
ಆದರೆ, ಅಭಿಮಾನಿಗಳಲ್ಲಿ ಇರುವ ಪ್ರಶ್ನೆ, ಇವರಿಗೆ ಸಿನಿಮಾ ಆಫರ್‌ಗಳು ಬರುತ್ತಿಲ್ವಾ?, ಅಥವಾ ಬಂದರೂ ಒಪ್ಪಿಕೊಳ್ಳುತ್ತಿಲ್ವಾ? ಎಂಬುದು. ಇದಕ್ಕೆ ಸ್ವತಃ ಸಂಗೀತಾ ಅವರೇ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಆದರೆ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದ, ಜನರ ಮನದಲ್ಲಿ ಉಳಿಯದ ಪಾತ್ರಗಳನ್ನು ಒಪ್ಪಲು ಇಷ್ಟವಿಲ್ಲ. ಗ್ಲಾಮರ್‌ಗಷ್ಟೇ ಸೀಮಿತವಾದ, ಸಿನಿಮಾಗೊಬ್ಬರು ಹಿರೋಯಿನ್ ಬೇಕು ಎಂದು ಹಾಗೂ ನನಗಿರುವ ಜನಪ್ರಿಯತೆಗಾಗಿ ಬರುವ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. ಪ್ರತಿವಾರ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ ಮತ್ತು ಹೊಸತನದ ಹುಟಕಾಟದಲ್ಲಿದ್ದೇನೆ ಎಂದು ಹೇಳಿದ್ದಾರೆ.
‘ಈಗಿನ ಸಿನಿಮಾ ನಟಿಯರಿಗೆ ಕೊಡುವ ಸಂಭಾವನೆಯು ಸಿನಿಮಾ ಪ್ರಚಾರದಲ್ಲಿಯೇ ಖಾಲಿಯಾಗುತ್ತದೆ. ನಮಗೆ ಸಿಗುವುದೇ ಕಡಿಮೆ ಸಂಭಾವನೆ. ತಿಂಗಳುಗಟ್ಟಲೆ ಸಿನಿಮಾ ಶೂಟಿಂಗ್ ಆಗುತ್ತದೆ ಹಾಗೂ ನಟಿಯರಿಗೆ ಪ್ರಚಾರಕ್ಕೂ ಹೆಚ್ಚು ಹಣ ಬೇಕಾಗುತ್ತದೆ. ಇಲ್ಲಿನ ನಟಿಯರಿಗೆ ಪ್ರತಿಭೆ ಇದ್ದರೂ ಸ್ಕ್ರೀನ್ ಸ್ಪೇಸ್ ಸಿಗುತ್ತಿಲ್ಲ. ನಮ್ಮ ಹೀರೊಗಳು ಕನ್ನಡದ ನಟಿಯರನ್ನು ಕಾಸ್ಟ್ ಮಾಡಲು ಬೆಂಬಲ ಕೊಡುತ್ತಿಲ್ಲ. ಈ ರೀತಿ ಬಂದ ಸಿನಿಮಾಗಳನ್ನೆಲ್ಲ ನಾನು ಒಪ್ಪಿದ್ದರೆ ಎರಡು ತಿಂಗಳಿಗೊಂದು ನನ್ನ ಸಿನಿಮಾ ಬಿಡುಗಡೆ ಅಗುತ್ತಿತ್ತು. ನನಗೆ ಆ ಥರ ಸಿನಿಮಾ ಮಾಡಲು ಇಷ್ಟವಿಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.