Physical Abuse: BSF ಯೋಧನ ಪತ್ನಿ ಮೇಲೆ ಮೈದುನರಿಂದಲೇ ಅತ್ಯಾಚಾರ! ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್
UP Crime: ಪಾಪಿ ಮೈದುನರಿಬ್ಬರು ಅತ್ತಿಗೆಯ ಮೇಲೆ ಅತ್ಯಾಚಾರ ವೆಸಗಿದ ಹೀನ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಿಎಸ್‌ಎಫ್ ಯೋಧನ ಪತ್ನಿಯ ಮೇಲೆ ಆಕೆಯ ಇಬ್ಬರು ಮೈದುನರೇ ಹಲವು ಬಾರಿ ಅತ್ಯಾಚಾರ ಮಾಡಿದ್ದು, ಈ ದುಷ್ಕೃತ್ಯದ ವಿಡಿಯೊ ಚಿತ್ರೀಕರಿಸಿ, ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಹಾನಾಬಾದ್: ಬಿಎಸ್‌ಎಫ್ ಯೋಧನ (BSF Jawan) ಪತ್ನಿಯ ಮೇಲೆ ಆಕೆಯ ಇಬ್ಬರು ಮೈದುನರೇ ಹಲವು ಬಾರಿ ಅತ್ಯಾಚಾರ ಮಾಡಿ, ಅಶ್ಲೀಲ ವಿಡಿಯೋಗಳನ್ನು ಮಾಡಿಕೊಂಡಿದ್ದು (Obscene Videos) ಬ್ಲ್ಯಾಕ್‌ಮೇಲ್ (Blackmailed) ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಉತ್ತರ ಪ್ರದೇಶ ಜಹಾನಾಬಾದ್ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಒಬ್ಬ ಮೈದುನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಮದುವೆಯಾದ ಬಳಿಕ ಆಕೆ ತನ್ನ ಅತ್ತೆಯೊಂದಿಗೆ ಗ್ರಾಮದಿಂದ ಹೊರಗಿನ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ಪತಿ ಬಿಎಸ್‌ಎಫ್‌ನಲ್ಲಿ ಕರ್ತವ್ಯದಲ್ಲಿದ್ದ ಕಾರಣ ಕೆಲಸದ ನಿಮಿತ್ತ ದೂರದಲ್ಲಿ ಇರುತ್ತಿದ್ದರು. ಅತ್ತೆ ತನ್ನ ಸ್ವಂತ ಮನೆಗೆ ತೆರಳಿದಾಗಲೆಲ್ಲ, ಇಬ್ಬರು ಮೈದುನರು ಮನೆಗೆ ಬಂದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಲ್ಲದೇ ಕೃತ್ಯದ ವಿಡಿಯೊಗಳನ್ನು ಚಿತ್ರೀಕರಿಸಿ, ಆಕೆಯನ್ನು ಬೆದರಿಸಿ ಬಲವಂತವಾಗಿ ಅತ್ಯಾಚಾರ ಎಸಗಲು ಒಪ್ಪಿಗೆ ಪಡೆಯುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಸುದ್ದಿಯನ್ನು ಓದಿ: Viral Video: ಐತಿಹಾಸಿಕ ಹಿನ್ನೆಲೆಯುಳ್ಳ ಕೊಳದಲ್ಲಿ ಪ್ರವಾಸಿಗರ ಮೋಜು ಮಸ್ತಿ; ಇದೆಂಥಾ ಅನಾಗರಿಕ ವರ್ತನೆ ಎಂದು ಕಿಡಿಕಾರಿದ ನೆಟ್ಟಿಗರು
ಸಂತ್ರಸ್ತೆಯ ಪತಿ ರಜೆಯ ಮೇಲೆ ಮನೆಗೆ ಬಂದಾಗ, ಮೈದುನಂದಿರು ಆತನಿಗೆ ವಿಡಿಯೋಗಳನ್ನು ತೋರಿಸಿದ್ದಾರೆ. ಇದರ ಜೊತೆಗೆ, ತನ್ನ ಅತ್ತೆ, ಮಾವ ತನ್ನನ್ನು ಮತ್ತು ತನ್ನ ಪತಿಯನ್ನು ಹೊಡೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಆಕೆಯನ್ನು ಕತ್ತು ಹಿಸುಕಿ ಕೊಲ್ಲಲು ಸಹ ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ದೌರ್ಜನ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ, ಎಂದು ಜಹಾನಾಬಾದ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಹರಿಓಂನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಸಂತ್ರಸ್ತೆಗೆ ನ್ಯಾಯ ಒದಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.