IND vs ENG: ಜಸ್‌ಪ್ರೀತ್ ಬುಮ್ರಾ ಸ್ಥಾನದಲ್ಲಿ ಆಕಾಶ್ ದೀಪ್‌ಗೆ ಸ್ಥಾನ ನೀಡಿ ಎಂದ ಇರ್ಫಾನ್ ಪಠಾಣ್!
Irfan Pathan on Akash Deep: ಇಂಗ್ಲೆಂಡ್ ವಿರುದ್ಧ ಜುಲೈ 2 ರಂದು ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIಗೆ ಜಸ್‌ಪ್ರೀತ್ ಬುಮ್ರಾ ಅಲಭ್ಯರಾದರೆ, ಮೊಹಮ್ಮದ್ ಶಮಿ ರೀತಿ ಸೀಮ್‌ನಲ್ಲಿ ಬೌಲ್ ಮಾಡಬಲ್ಲ ಆಕಾಶ್ ದೀಪ್‌ಗೆ ಸ್ಥಾನ ನೀಡಬೇಕೆಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕಾಶ ದೀಪ್ ಆಡಬೇಕೆಂದು ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಜುಲೈ 2 ರಂದು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ(IND vs ENG) ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಅಲಭ್ಯರಾದರೆ, ಅವರ ಸ್ಥಾನಕ್ಕೆ ಆಕಾಶ್ ದೀಪ್ (Akash Deep) ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಪರಿಗಣಿಸಬೇಕೆಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಸಲಹೆ ನೀಡಿದ್ದಾರೆ. ಈ ಸರಣಿಯಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಅವರ ರೀತಿ ಬೌಲ್ ಮಾಡುವ ಸಾಮರ್ಥ್ಯವನ್ನು ಆಕಾಶ್ ದೀಪ್ ಹೊಂದಿದ್ದಾರೆಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಗಾಯದಿಂದ ಗುಣಮುಖರಾಗಿರುವ ಶಮಿ ಸಂಪೂರ್ಣ ಫಿಟ್‌ನೆಸ್ ಇಲ್ಲದ ಕಾರಣ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಮುಂದಿನ ಟೆಸ್ಟ್ ಪಂದ್ಯಕ್ಕೆ ಆಕಾಶ್ ದೀಪ್ ಅರ್ಹರಾಗಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರ ಐದು ಶತಕಗಳ ಹೊರತಾಗಿಯೂ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 0-1 ಮುನ್ನಡೆಯನ್ನು ಹೊಂದಿದೆ.
IND vs ENG 2nd Test Preview: ಎಜ್‌ಬಾಸ್ಟನ್‌ನಲ್ಲಿ ಇತಿಹಾಸ ಬರೆಯಲು ಭಾರತ ಸಜ್ಜು!
ಜಸ್‌ಪ್ರೀತ್ ಬುಮ್ರಾ ಹೊರತುಪಡಿಸಿ ಇನ್ನುಳಿದೆಲ್ಲಾ ಬೌಲರ್‌ಗಳು ಸ್ಥಿರವಾದ ಲೆನ್ತ್‌ಗಳನ್ನು ಹಾಕಲು ವಿಫಲರಾಗಿದ್ದರು ಹಾಗೂ ಇಂಗ್ಲೆಂಡ್‌ನ ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗ ಭಾರೀ ಟೀಕೆಗೆ ಗುರಿಯಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಗಾಯಗೊಂಡ ನಂತರ ಟೀಮ್ ಮ್ಯಾನೇಜ್‌ಮೆಂಟ್ ಬುಮ್ರಾ ಅವರ ಕೆಲಸದ ಹೊರೆಯನ್ನು ನಿರ್ವಹಿಸುವ ಬಗ್ಗೆ ಜಾಗರೂಕರಾಗಿರುವುದರಿಂದ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ, ಬುಮ್ರಾ ಆಡಲು ಅನುಮತಿ ಪಡೆಯುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
IND vs ENG 2nd Test: ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ಗೆ ಮಳೆ ಭೀತಿ; ಪಿಚ್ ರಿಪೋರ್ಟ್ ಹೇಗಿದೆ?
ಜಸ್‌ಪ್ರೀತ್ ಬುಮ್ರಾ ಸ್ಥಾನದಲ್ಲಿ ಆಕಾಶ್ ದೀಪ್ ಆಡಬೇಕು
"ಜಸ್‌ಪ್ರೀತ್ ಬುಮ್ರಾ ಇಲ್ಲದಿದ್ದರೆ, ಅವರ ಸ್ಥಾನದಲ್ಲಿ ಯಾರು ತಂಡದ ಪ್ಲೇಯಿಂಗ್ XIಗೆ ಬರಬೇಕು? ನೆಟ್ಸ್‌ನಲ್ಲಿ ನೋಡಿದಂತೆ ಆಕಾಶ್ ದೀಪ್ ತಮ್ಮ ಲಯಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಅವರು ಮೊಹಮ್ಮದ್ ಶಮಿ ರೀತಿಯ ಬೌಲರ್ ಎಂದು ನಾನು ಭಾವಿಸುತ್ತೇನೆ," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಅಥವಾ ಪ್ರಸಿಧ್ ಕೃಷ್ಣರಂತಹ ಬೌಲರ್‌ಗಳ ಹಿಟ್-ದಿ-ಡೆಕ್ ವಿಧಾನಕ್ಕೆ ಹೋಲಿಸಿದರೆ, ಸೀಮ್ ಮತ್ತು ಸ್ವಿಂಗ್ ಮೇಲೆ ಹೆಚ್ಚು ಗಮನಹರಿಸುವ ಆಕಾಶ್ ದೀಪ್ ಅವರ ಬೌಲಿಂಗ್ ಶೈಲಿಯು ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಬಹುದು ಎಂದು ಅವರು (ಪಠಾಣ್) ಹೇಳಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ ಅವರ ನೇರ ಸೀಮ್ ಎಸೆತಗಳು ತಡವಾಗಿ ಚಲನೆಯನ್ನು ಉಂಟುಮಾಡಬಹುದು, ಇದು ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟಿಂಗ್ ಲೈನ್‌ಅಪ್‌ಗೆ ಕಠಿಣವಾಗಿಸುತ್ತದೆ.
IND vs ENG: ಜಸ್‌ಪ್ರೀತ್ ಬುಮ್ರಾ ಇಲ್ಲ? ಎರಡನೇ ಟೆಸ್ಟ್‌ಗೆ ಇಬ್ಬರು ಸ್ಪಿನ್ನರ್‌ಗಳು!
"ಅವರ ನೇರ ಸೀಮ್ ಎಸೆತಗಳು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಬಹುದು, ವಿಶೇಷವಾಗಿ ತಡವಾಗಿ ಚಲನೆ ಮಾಡುವಾಗ. ಆಕ್ರಮಣಕಾರಿಯಾಗಿ ಆಡುತ್ತಿದ್ದರೆ, ಇದು ಸಮಸ್ಯೆಯಾಗಬಹುದು. ನಾವು ಅರ್ಷದೀಪ್‌ಗೆ ಬರುತ್ತೇವೆ, ಆದರೆ ಬುಮ್ರಾ ಆಡದಿದ್ದರೆ, ಅವರ ಸ್ಥಾನದಲ್ಲಿ ಆಕಾಶ್ ದೀಪ್ ಬರಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.