ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr B C Bhagwan Interveiw: ವೈದ್ಯಕೀಯ ಸಂಶೋಧನೆ, ಶೈಕ್ಷಣಿಕ ಪ್ರಗತಿಗೆ ಒತ್ತು

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ವೈದ್ಯಕೀಯ ಕ್ಷೇತ್ರ ಇನ್ನಷ್ಟು ಬಲಪಡಿಸಲು ಸಂಶೋ ಧನೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಿದೆ. ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿದೆ. ಉತ್ತಮ ಆಡಳಿತ ಹಾಗೂ ಪಾರದರ್ಶಕತೆಗೆ ಒತ್ತು ನೀಡುವ ಮೂಲಕ ವಿವಿಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ವಿದ್ಯಾರ್ಥಿ ಸ್ನೇಹಿ ವಿವಿಯನ್ನಾ ಗಿಸುವುದು ನನ್ನ ಸಂಕಲ್ಪ ಎಂದು ವಿಶ್ವವಾಣಿ ಸಂದರ್ಶನದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈದ್ಯಕೀಯ ಸಂಶೋಧನೆ, ಶೈಕ್ಷಣಿಕ ಪ್ರಗತಿಗೆ ಒತ್ತು

Profile Ashok Nayak Apr 27, 2025 11:28 AM

ವಿಶ್ವವಾಣಿ ಸಂದರ್ಶನ: ಬಾಲಕೃಷ್ಣ ಎನ್.

ಉತ್ತಮ ಆಡಳಿತಕ್ಕೆ ಒತ್ತು ನೀಡುವ ಮೂಲಕ ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಗೆ ಶ್ರಮ

ನೂತನವಾಗಿ ರಾಜೀವ್‌ಗಾಂಧಿ ವಿವಿಗೆ ಕುಲಪತಿ ಹುದ್ದೇಗೇರಿದ್ದು, ನಿಮ್ಮ ಗುರಿ ಏನು?

ರಾಜೀವ್ ಗಾಂಧಿ ವಿವಿ, ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವ ವಿದ್ಯಾಲಯವಾಗಿದೆ. 3.5 ಲಕ್ಷಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದ ರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸು ವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರವಾಗಿದೆ. ರಾಮನಗರದಲ್ಲಿ ಹೊಸದಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಿಸಲಾಗುತ್ತದೆ. ಉದ್ಯೋಗ ಕಲ್ಪಿಸುವ ಕೇಂದ್ರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರ, ಭಾರತ ಹಾಗೂ ವಿದೇಶಗಳ ಅತ್ಯುನ್ನತ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನಾ ಕೇಂದ್ರಗಳನ್ನು ತೆರೆದು ಆವಿಷ್ಕಾರಗಳಿಗೆ ಒತ್ತು ನೀಡಲಾಗುತ್ತದೆ. ದಾವಣಗೆರೆಯಲ್ಲಿ ಸ್ಕಿಲ್ ಲ್ಯಾಬ್ ತೆರೆಯಲಾಗುತ್ತದೆ. ಕಲಬುರಗಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಸ್ಥಾಪಿಸಲಾಗುತ್ತದೆ. ಮಂಗಳೂರಿನಲ್ಲಿ ಕ್ರೀಡಾ ಸಂಕೀರ್ಣ ವನ್ನು ತೆರೆಯಲಾಗುತ್ತದೆ.

ವೈದ್ಯಕೀಯ ವಲಯದಲ್ಲಿ ಸಂಶೋಧನೆಗೆ ಹೇಗೆ ಒತ್ತು ನೀಡುತ್ತೀರಾ?

ಕೆಂಗೇರಿ ಬಳಿಯ ಭೀಮನಕುಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ ‘ಸೆಂಟರ್ ಆಫ್ ಎಕ್ಸಲೆ’ ಕೇಂದ್ರ ತಲೆ ಎತ್ತಲಿದೆ. ಅ ಪುನರ್ವಸತಿ ಕೇಂದ್ರಗಳೂ ಇರಲಿವೆ. ಸಂಶೋಧನೆ, ವಂಶವಾಹಿಯ ಅಧ್ಯಯನ ನಡೆಯುವ ಸಂಸ್ಥೆಗಳ ಸಂಖ್ಯೆ ಭಾರತದಲ್ಲಿ ಕಡಿಮೆ ಇದ್ದು, ನಮ್ಮ ರಾಜ್ಯದಲ್ಲಿ ಇಂಥ ಕೇಂದ್ರ ಬರುತ್ತಿರುವುದು ಸಂತಸದ ವಿಷಯ. ಯಾವುದೇ ಆವಿಷ್ಕಾರಗಳು ಸಾಮಾನ್ಯವಾಗಿ ಆಗುವಂಥದ್ದು ತಂತ್ರeನ ಕ್ಷೇತ್ರದಲ್ಲಿ. ವೃತ್ತಿ ನಿರತ ವೈದ್ಯರು ಆವಿಷ್ಕಾರದಲ್ಲಿ ತೊಡಗಬೇಕು. ಅವರಿಂದ ಸಂಶೋ‌ ಧನೆಗಳಾಗಬೇಕು. ಈ ಅವಕಾಶ ಸೃಷ್ಟಿಸಲು ಸೆಂಟರ್ ಆಫ್ ಎಕ್ಸಲೆ ಸ್ಥಾಪಿಸಲು ಉದ್ದೇಶಿಸಿದ್ದೇವೆ. ವೈದ್ಯರು ತಮಗೆ ಬೇಕಾದ ತಂತ್ರಜ್ಞಾನವನ್ನು ರೂಪಿಸಿಕೊಳ್ಳುವಂತಾಗಬೇಕು.

ಇದನ್ನೂ ಓದಿ: Vishweshwar Bhat Column: ಅಗಲಿದವರ ನೆನಪಿಗೆ ಸಮಾಧಿ ಕಲ್ಲಿನ ಬದಲು ಸಸಿ ನೆಟ್ಟರೆ ಹೇಗಿದ್ದೀತು ?

ವೈದ್ಯಕೀಯ ಮತ್ತು ತಂತ್ರeನದ ಒಂದೆಡೆ ಸೇರಿದಾಗ ಹೊಸ ವೈದ್ಯಕೀಯ ಸಲಕರಣೆಗಳನ್ನು ಆವಿಷ್ಕರಿಸಬಹುದು. ಆರೋಗ್ಯ ಕ್ಷೇತ್ರದಲ್ಲಿ ಹೊಸದನ್ನು ತರಬೇಕು. ಯಾವುದೇ ಹೊಸ ಸಂಶೋ ಧನೆ 5 ರಿಂದ 10 ವರ್ಷಗಳು ಆಗುತ್ತದೆ. ನಮ್ಮ ಈ ಪ್ರಯತ್ನದಿಂದ ಪ್ರಯೋಗಾಲಯದಿಂದ ಮಾರುಕಟ್ಟೆಗೆ ತಲುಪುವ ಸಮಯ ಕಡಿಮೆ ಆಗುವುದು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು.

ರಾಜೀವ್‌ಗಾಂಧಿ ವಿವಿ ವಿಶ್ವಮಾನ್ಯ ಪಡೆಯುವಲ್ಲಿ ನಿಮ್ಮ ಅಭಿಪ್ರಾಯವೇನು?

ಕರ್ನಾಟಕ ರಾಜ್ಯಾದ್ಯಂತ ಹರಡಿರುವ ಸುಮಾರು 700ಕ್ಕಿಂತಲೂ ಅಧಿಕ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋ ಪತಿ, ನ್ಯಾಚುರೋಪತಿ ಹಾಗೂ ಯೋಗಶಿಕ್ಷಣ, ಯುನಾನಿ, ಫಾರ್ಮಸಿ, ನರ್ಸಿಂಗ್, ಫಿಜಿಯೋಥೆರಪಿ ಹಾಗೂ ಇತರೆ ಅರೆ ವೈದ್ಯಕೀಯ ಮಹಾ ವಿದ್ಯಾಲಯಗಳಿಗೆ ಸಂಯೋಜನೆ ನೀಡಿ, ದೇಶದಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯವು ಉತ್ತಮ ಬೋಧನೆ ಹಾಗೂ ವಿವಿಧ ಕೋರ್ಸ್‌ಗಳ ಪಠ್ಯಕ್ರಮದಲ್ಲಿ ಒಂದೇ ಸಮಾನತೆಯನ್ನು ನೀಡಿ ಸಮಾಜದ ಒಳಿತಿಗೋಸ್ಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟು ಕೊಂಡು ಹೊಸ ಹೊಸ ವಿಷಯಗಳನ್ನು ಸಹ ಪರಿಚಯಿಸಲಾಗುತ್ತಿದೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಭಾರತದ ಉತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಮುಂದಾಲೋಚನೆಯಿಂದ ವಿವಿಧ ಕೋರ್ಸ್‌ಗಳಿಗೆ ಬೇಕಾದ ರೀತಿ ಪಠ್ಯಕ್ರಮಗಳನ್ನು ರೂಪಿಸಿ ವಿಶ್ವದ ಉತ್ತಮ ಮಟ್ಟದ ಶಿಕ್ಷಣ ಕ್ರಮಕ್ಕೆ ಹೆಸರಾಗಿದ್ದು ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಪ್ರಶಂಸೆಯನ್ನು ಪಡೆದಿದೆ.

ವಿವಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಯಾವ ರೀತಿ ಕಡಿವಾಣ ಹಾಕುತ್ತೀರಾ?

ನಮ್ಮ ವಿಶ್ವವಿದ್ಯಾಲಯವು ತನ್ನದೇ ಆದ ಇತಿಹಾಸ ಹೊಂದಿದೆ. ವೈದ್ಯಕೀಯ ಸೀಟು ಬ್ಲಾಕಿಂಗ್ ದಂಧೆಗೂ ವಿವಿಗೂ ಸಂಬಂಧವಿಲ್ಲ. ನಿಷ್ಪಕ್ಷಪಾತವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿ ಸೀಟುಗಳನ್ನು ವಿತರಣೆ ಮಾಡಲಿದೆ. ಕೌನ್ಸಿಲಿಂಗ್ ಮಾಡುವ ಮೂಲಕ ಪಾರದರ್ಶಕವಾಗಿ ಸೀಟು ನೀಡಲಾಗುತ್ತಿದೆ. ಅಂಕಪಟ್ಟಿ ತಿದ್ದುಪಡಿಗೆ ಯಾವುದೇ ಆಸ್ಪದ ಇರುವುದಿಲ್ಲ. ಹೊಸ ಅಪ್ಲಿಕೇಷನ್‌ಗಳನ್ನು ಅಳವಡಿಸಿಕೊಂಡು ಅಂಕಪಟ್ಟಿಯ ಡೇಟಾ ಸುರಕ್ಷಿತವಾಗಿಡಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಯಾವುದೇ ಅಕ್ರಮ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಪಾದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ರಾಜೀವ್‌ಗಾಂಧಿ ವಿವಿಯನ್ನು ಮಾದರಿ ವಿಶ್ವವಿದ್ಯಾಲಯ ವನ್ನಾಗಿಸಲಾಗುತ್ತದೆ.

ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಒಲವು ತೋರುತ್ತಿದ್ದು, ಸೀಟುಗಳ ಹೆಚ್ಚಳ ಪ್ರಸ್ತಾಪವಿದೆಯೇ?

ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (ಎನ್‌ಎಂಸಿ) ನೀತಿ ನಿಯಮಗಳ ಪ್ರಕಾರ ಸೀಟುಗಳ ಹೆಚ್ಚಳ ಮಾಡುವ ಪ್ರಸ್ತಾಪ ಎನ್‌ಎಂಸಿಗೆ ಒಳಪಟ್ಟಿರುತ್ತದೆ. ಕಳೆದ ವರ್ಷ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿತ್ತು. ಪ್ರಾದೇಶಿಕ ವಲಯದಲ್ಲಿ ಹೊಸ ಕಾಲೇಜುಗಳು ಸ್ಥಾಪನೆ ಯಾಗುತ್ತಿದ್ದು, ಸಾಕಷ್ಟು ಆದ್ಯತಾ ಕ್ಷೇತ್ರವಾಗಿ ವೈದ್ಯಕೀಯ ವಲಯ ಹೊರಹೊಮ್ಮಿದೆ.

*

ಆಡಳಿತದಲ್ಲಿ ಅನುಭವ ಹೊಂದಿರುವ ನನಗೆ ರಾಜ್ಯ ಸರಕಾರ ಕುಲಪತಿ ಹುದ್ದೆ ನೀಡಿರುವುದು ನನಗೆ ಹೆಮ್ಮೆಯಾಗಿದೆ. ನಾನು ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (ಕಿಮ್ಸ್) 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಉತ್ತಮ ಆಡಳಿತ ನೀಡುವುದು ನನ್ನ ಗುರಿಯಾಗಿದೆ. ವೈದ್ಯ ಕೀಯ ವಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎಲ್ಲಾ ಕಾರ್ಯಕ್ರಮಗಳನ್ನು ರಾಜೀವ್‌ ಗಾಂಧಿ ವಿವಿಯಲ್ಲಿ ರೂಪಿಸಲಾಗುತ್ತದೆ.

-ಡಾ.ಬಿ.ಸಿ.ಭಗವಾನ್, ರಾಜೀವ್‌ಗಾಂಧಿ ಆರೋಗ್ಯ ವಿವಿ ಕುಲಪತಿ