B Kenchappa Gowda Interview: ನಮ್ಮನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ
ಒಕ್ಕಲಿಗರನ್ನು ನೇರವಾಗಿ ವಿರೋಧಿಸಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ, ಒಡೆದು ಆಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚ್ಚಪ್ಪಗೌಡ ಆಗ್ರಹಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ವಿಶ್ವವಾಣಿಯೊಂದಿಗೆ ಮಾತನಾಡಿರುವ ಅವರು, ಜಾತಿ ಗಣತಿಗೆ ವಿರೋಧಿಸುತ್ತಿರುವುದಕ್ಕೆ ಕಾರಣ, ಉಪಜಾತಿಗಳ ಲೆಕ್ಕಾಚಾರ, ಜನಸಂಖ್ಯೆಯಲ್ಲಿನ ವ್ಯತ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಮಾತ ನಾಡಿದ್ದಾರೆ.


ವಿಶ್ವವಾಣಿ ಸಂದರ್ಶನ: ಜಯಂತ್ ಬಸವರಾಜ್
ಒಕ್ಕಲಿಗ ಸಮುದಾಯ ಉಪಜಾತಿಗಳಾಗಿ ಒಡೆದು ಸಂಖ್ಯೆ ಕಡಿಮೆ ಮಾಡುವ ಸಂಚು
ವರದಿಯ ಅಂಕಿ ಅಂಶಕ್ಕೂ, ನೈಜ ಸಂಖ್ಯೆಗೂ ವ್ಯತ್ಯಾಸವಿದೆಯೇ?
ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಒಕ್ಕಲಿಗರಿದ್ದಾರೆ. ಆದರೆ ಈ ವರದಿಯಲ್ಲಿ 60 ಲಕ್ಷ ಎಂದು ತೋರಿಸಲಾಗಿದೆ. ಬೇರೆ ಸಮುದಾಯಗಳ ಸಂಖ್ಯೆ ಅದಕ್ಕಿಂತ ಹೆಚ್ಚಿದ್ದರೂ ಪರವಾಗಿಲ್ಲ ಆದರೆ ನೈಜ ಸಂಖ್ಯೆ ನೀಡಿ ಸರಕಾರ ಆ ಜನ ಸಂಖ್ಯೆಗಳ ಆಧಾರದಲ್ಲಿ ಸೌಲಭ್ಯಗಳನ್ನು ನೀಡಲಿ. ಈ ಹಿಂದೆ ವರದಿ ತಯಾರಿಸುವ ಸಂದರ್ಭದಲ್ಲಿ ಅವರಿಗೆ ಹೇಗೆಬೇಕೋ ಹಾಗೆ ಬರೆಸಿಕೊಂಡಿದ್ದಾರೆ. ಒಕ್ಕಲಿಗ ಜಾತಿಯವರನ್ನೂ ಬೇರೆ ಬೇರೆ ಜಾತಿಗಳಿಗೆ ಸೇರಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಸುಮಾರು ಏಳು ಕೋಟಿ ಜನರಿದ್ದಾರೆ ಎಂಬುದು ನಮಗೆ ತಿಳಿದಿರುವ ವಿಷಯ, ಆದರೆ ಈ ವರದಿ ಯಲ್ಲಿ ಸುಮಾರು 5 ಕೋಟಿ 95 ಲಕ್ಷ ಜನರು ಎಂದು ತೋರಿಸಿದ್ದಾರೆ. ಹಾಗಾದರೆ ಇನ್ನುಳಿದ 1 ಕೋಟಿ ಜನರ ಕಥೆಯೇನು ಅವರನ್ನು ಎಲ್ಲಿಗೆ ಸೇರಿಸುತ್ತಾರೆ. ಹಾಗೆ ನೋಡಿದರೆ ಒಕ್ಕಲಿಗರಲ್ಲಿ ಮರಸು ಒಕ್ಕಲಿಗ ಎಂಬ ಉಪ ಜಾತಿಯಿದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ ಭಾಗದಲ್ಲಿ ಈ ಉಪ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾಂತರಾಜ್ ಆಯೋಗ ಸಲ್ಲಿಸಿರುವ ವರದಿಯಲ್ಲಿ ಮರಸು ಒಕ್ಕಲಿಗ ಸಂಖ್ಯೆ 3800 ಎಂದು ತೋರಿಸಲಾಗಿದೆ. ಆದರೆ ನಮ್ಮ ಒಕ್ಕಲಿಗರ ಸಂಘದಲ್ಲಿ ಹೊಸಕೋಟೆ ಭಾಗದ 10 ಸಾವಿರ ಜನ ಸದಸ್ಯರಿದ್ದಾರೆ, ಅಲ್ಲಿ ಮರಸು ಒಕ್ಕಲಿಗ ಬಿಟ್ಟರೆ ಬೇರೆ ಒಕ್ಕಲಿಗರಿಲ್ಲ ಹಾಗಾದರೆ ಈ ಸಂಖ್ಯೆ ಹೇಗೆ ಬಂತು, ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿದೆ.
ಒಕ್ಕಲಿಗರನ್ನು ನೇರವಾಗಿ ವಿರೋಧಿಸಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ, ಒಡೆದು ಆಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚ್ಚಪ್ಪಗೌಡ ಆಗ್ರಹಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿ ದಂತೆ ವಿಶ್ವವಾಣಿಯೊಂದಿಗೆ ಮಾತನಾಡಿರುವ ಅವರು, ಜಾತಿ ಗಣತಿಗೆ ವಿರೋಧಿಸುತ್ತಿರುವುದಕ್ಕೆ ಕಾರಣ, ಉಪಜಾ ತಿಗಳ ಲೆಕ್ಕಾಚಾರ, ಜನಸಂಖ್ಯೆಯಲ್ಲಿನ ವ್ಯತ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಇದನ್ನೂ ಓದಿ: S Raghunath Interview: ವೈಜ್ಞಾನಿಕ ಸಮೀಕ್ಷೆ ನಡೆಸಲಿ
ಕಾಂತರಾಜ್ ಸಮಿತಿ ವರದಿ ಮಂಡನೆಗೆ ಒಕ್ಕಲಿಗ ಸಮುದಾಯದ ವಿರೋಧವೇಕೆ?
ಒಕ್ಕಲಿಗ ಸಮುದಾಯ ಮಾತ್ರ ಈ ವರದಿಯನ್ನು ವಿರೋಧಿಸುತ್ತಿಲ್ಲ, ಇದನ್ನು ಎಲ್ಲಾ ಸಮುದಾಯ ಗಳು ವಿರೋಧಿಸುತ್ತಿವೆ. ಇದಕ್ಕೆ ಕಾರಣ ಎಂದರೆ ಕಾಂತರಾಜ್ ಆಯೋಗ ವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಿಲ್ಲ. ಮೊದಲನೆಯದಾಗಿ ಸಮಿತಿ ಯಾವಾಗ ರಚನೆಯಾಯಿತು, ಯಾವಾಗ ಮತ್ತು ಯಾವ ರೀತಿ ಸಮೀಕ್ಷೆ ನಡೆಸಿದ್ದಾರೆ ಎಂಬ ಮಾಹಿತಿ ನಮಗಂತೂ ಇಲ್ಲ. ಆದರೆ ಸರಕಾರ ಹೇಳುತ್ತದೆ 2014ರಲ್ಲಿ ಕಾಂತರಾಜ್ ಆಯೋಗ ಸಮಿತಿ ರಚಿಸಿ ಪ್ರತಿ ಮನೆಗಳಿಗೂ ತೆರಳಿ ಸಮೀಕ್ಷೆ ನಡೆಸಲಾಗಿದೆ ಎಂದು. ಆದರೆ ನನಗಂತೂ ನೆನಪಿಲ್ಲ ನಮ್ಮ ಮನೆ ಬಳಿ ಬಂದು ಮಾಹಿತಿ ಪಡೆದಿರುವುದು. ಹೀಗಿರು ವಾಗ ಸುಮಾರು 10 ವರ್ಷಗಳ ಬಳಿಕ ಇದರ ಮಂಡನೆಗೆ ಸರಕಾರ ಮುಂದಾಗಿದೆ. ನಮಗೆ ಈಗ ಮೂಡುವ ಪ್ರಶ್ನೆ ಏನೆಂದರೆ ಇಷ್ಟು ವಿರೋಧಗಳಿದ್ದರು, ಸರಕಾರ ಮರು ಸಮೀಕ್ಷೆ ನಡೆಸದೆ ಆತುರ ದಿಂದ ವರದಿ ಮಂಡನೆಗೆ ಮುಂದಾಗಿದೆ?. ಯಾವ ಸಮುದಾಯವನ್ನು ಓಲೈಸಲು ಮುಂದಾ ಗಿದೆ ಎಂಬುದು ಆದ್ದರಿಂದ ಕಾಂತರಾಜ್ ಆಯೋಗ ಸಲ್ಲಿಸಿರುವ ಈ ವರದಿ ಮಂಡನೆಗೆ ನಮ್ಮ ಸಂಪೂರ್ಣ ವಿರೋಧವಿದೆ.
ಒಕ್ಕಲಿಗರನ್ನು ಉಪಜಾತಿಗಳಾಗಿ ವಿಂಗಡನೆ ಮಾಡಿದ್ದಕ್ಕೆ ನಿಮ್ಮ ಅಭಿಪ್ರಾಯವೇನು?
ಕರ್ನಾಟಕದಲ್ಲಿ ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗ ಜಾತಿ ಸಂಖ್ಯೆ ಕಡಿಮೆ ಮಾಡಬೇಕು ಎಂದೇ ಕೆಲವರೂ ಈ ರೀತಿ ಉಪಜಾತಿಗಳಾಗಿ ವಿಂಗಡನೆ ಮಾಡಿದೆ. ಒಕ್ಕಲಿಗರಲ್ಲಿ ಒಟ್ಟು 114 ಉಪ ಪಂಗಡ ಗಳಿವೆ. ಸಮೀಕ್ಷೆಯಲ್ಲಿ ಇವರ ವಿವರ ಪಡೆಯುವಾಗ ಉಪಜಾತಿಗಳ ಮುಂದೆ ಒಕ್ಕಲಿಗ ಎಂದು ಸೇರಿಸಿ ಬರೆಯಬೇಕು. ಆದರೆ ಸಮೀಕ್ಷೆ ನಡೆಸಿದವರು ಬರೀ ಉಪಜಾತಿಗಳನ್ನು ಬರೆದುಕೊಂಡು ಅದನ್ನು ಒಂದು ಜಾತಿ ಎಂದು ಸೇರಿಸಿದ್ದಾರೆ. ಹೀಗಾಗಿ ಪ್ರಬಲ ಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯವನ್ನು ಉಪಜಾತಿಗಳಾಗಿ ಒಡೆದು ಸಂಖ್ಯೆ ಕಡಿಮೆ ಮಾಡುವ ಸಂಚು ರೂಪಿಸಲಾಗಿದೆ. ಮುಸ್ಲಿಂ ಸಮುದಾಯದಲ್ಲೂ ಉಪಜಾತಿಗಳಿವೆ ಆದರೆ ಏಕೆ ಅದನ್ನು ತೋರಿಸಲಾಗಿಲ್ಲ ಈ ರೀತಿಯ ತುಷ್ಟೀಕರಣಕ್ಕಾಗಿ ನಡೆಸಿರುವ ಸಮೀಕ್ಷೆಗೆ ನಮ್ಮ ವಿರೋಧವಿದೆ.
ವರದಿಯಲ್ಲಿ ಯಾವ ಬದಲಾವಣೆಗಳನ್ನು ನೀವು ಬಯಸುತ್ತೀರಾ?
ಕಾಂತರಾಜ್ ಆಯೊಗ ಸಮಿತಿ ರಚನೆಯೇ ಸೂಕ್ತವಲ್ಲ. ಕಾಂತರಾಜು ರಾಜ್ಯದವರು ಯಾವುದೋ ಒಂದು ಜಾತಿಗೆ ಸೇರಿದವರು, ಅವರು ಹೇಗೆ ನಿಷ್ಪಕ್ಷಪಾತವಾಗಿ ವರದಿ ನೀಡುವರು. ಸರಕಾರ ಬೇರೆ ರಾಜ್ಯದಿಂದ ಸಮಿತಿ ಕರೆಸಿ ಹೊಸತಾಗಿ ಡಿಜಿಟಲ್ ಸಮೀಕ್ಷೆ ನಡೆಸಲಿ. ಅಥವಾ ಸಮೀಕ್ಷೆ ನಡೆಸಲು ಎಲ್ಲಾ ಸಮುದಾಯ ಗಳಿಗೂ ತಿಳಿಸಲಿ. ನಾವೇ ಡಿಜಿಟಲ್ ಸಮೀಕ್ಷೆ ನಡೆಸಿ ಮಾಹಿತಿಯನ್ನು ಸರಕಾರಕ್ಕೆ ನೀಡುತ್ತೇವೆ. ಅನುಮಾನವಿದ್ದಲ್ಲಿ ಸರಕಾರ ಅದನ್ನು ಮರು ಪರಿಶೀಲಿಸಿ ಸರಿಪಡಿಸಿ ಕೊಳ್ಳಲಿ.
ಸರಕಾರ ಒಕ್ಕಲಿಗರನ್ನು ಕಡೆಗಣಿಸದೆಯಾ?
ರಾಜ್ಯದಲ್ಲಿ ಒಕ್ಕಲಿಗರನ್ನು ಕಡೆಗಣಿಸಲು ಸಾಧ್ಯವಿಲ್ಲ, ಒಕ್ಕಲಿಗರೆಂದರೆ ರೈತಾಪಿ ಜನ ನಾವು ತಿರುಗಿ ಬಿದ್ದರೆ ಏನು ಬೇಕಾದರೂ ಮಾಡಲು ನಮ್ಮಿಂದ ಸಾಧ್ಯ. ಅದಕ್ಕೆಂದು ಸರಕಾರ ಈ ರೀತಿ ಯುಕ್ತಿ ಯಿಂದ ನಮ್ಮ ಸಂಖ್ಯೆ ಒಡೆದು ನಮ್ಮಿಂದ ಸೌಲಭ್ಯ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇತಿಹಾಸ ದಿಂದಲೂ ಒಕ್ಕಲಿಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರಬಲವಾಗಿದೆ. ರಾಜಕೀಯದಲ್ಲೂ ಅಷ್ಟೇ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರನ್ನು ಮಣಿಸುವ ಸಲುವಾಗಿ ಹಾಗೂ ಕೆಲ ಸಮುದಾಯಗಳನ್ನು ಓಲೈಸಿ ಓಟ್ ಬ್ಯಾಂಕ್ ಖಾತ್ರಿಗೊಳಿಸಲು ಸರಕಾರ ಈ ರೀತಿ ಮಾಡುತ್ತಿದೆ.
ಕೈ ನಾಯಕರಿಂದ ನೀವು ಬಯಸುವುದೇನು?
ಕಾಂಗ್ರೆಸ್‌ನಲ್ಲಿ ಈ ರೀತಿ ಅವೈಜ್ಞಾನಿಕ ವರದಿ ಮಂಡನೆ ಅವರ ಹೈಕಮಾಂಡ್ ಸೂಚನೆಯಾಗಿದೆ. ಕಾಂಗ್ರೆಸ್ ನಲ್ಲಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರು ಹೈಕಮಾಂಡ್‌ಗೆ ಹೆದರಿ ಪ್ರತಿ ಭಟಿಸುತ್ತಿಲ್ಲ, ಅವರೆಲ್ಲರು ಅಸಹಾಯಕರಾಗಿದ್ದಾರೆ. ಯಾರೋ ನೀಡಿದ ಆದೇಶಗಳನ್ನು ಏಕೆ ಕುರುಡ ರಂತೆ ಜಾರಿಗೊಳಿಸಬೇಕು ಕೂತು ವಿಮರ್ಶಿಸಲಿ ದೋಷಗಳಿದ್ದರೆ ಪ್ರಶ್ನಿಸಲಿ. ನ್ಯಾಯ ಕೇಳುವುದರಲ್ಲಿ ತಪ್ಪೇನಿದೆ.