ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S Raghunath Interview: ವೈಜ್ಞಾನಿಕ ಸಮೀಕ್ಷೆ ನಡೆಸಲಿ

ಜಾತಿ ಗಣತಿಗೆ ಸಂಬಂಧಿಸಿದಂತೆ ಊಹಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮಾತಾಡುವು ದಕ್ಕಿಂತ, ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಅಭಿಪ್ರಾಯಪಟ್ಟಿದ್ದಾರೆ.

ವೈಜ್ಞಾನಿಕ ಸಮೀಕ್ಷೆ ನಡೆಸಲಿ

ಸಂದರ್ಶನ: ರಂಜಿತ್‌ ಎಚ್.ಅಶ್ವತ್ಥ

ಹೊಸದಾಗಿ ಸಮೀಕ್ಷೆ ನಡೆಸಲು ಅಧಿವೇಶನದಲ್ಲಿ ಚರ್ಚಸಿ ಗಮನ ಸೆಳೆಯಲಿ

ಜನಿವಾರ ಕತ್ತರಿಸಿದ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ

ಸಿಇಟಿ ಪರೀಕ್ಷೆಯ ನಿಯಮಾವಳಿಗಳಲ್ಲಿ ಎಲ್ಲಿಯೂ ಜನಿವಾರ ಧರಿಸಬಾರದು ಎಂದು ತಿಳಿಸಿಲ್ಲ. ಸಿಇಟಿ ಎಂಬುದು ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯ ಹಂತ, ಇದರೊಂದಿಗೆ ಅಧಿಕಾರಿಗಳು ಆಟವಾಡಬಾರದು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಸಿಇಟಿ ಬರೆಯಲು ಮಾನಸಿಕ ವಾಗಿ ತಯಾರಿ ಮಾಡಿಕೊಂಡು ಬಂದಿರುತ್ತಾರೆ. ಈ ರೀತಿಯ ಘಟನೆಗಳಿಂದಾಗಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಬ್ರಾಹ್ಮಣ ಸಮುದಾಯದ ಭಾವನೆಗೆ ಧಕ್ಕೆ ತಂದಿದೆ. ಗಾಯತ್ರಿ ಮಂತ್ರೋಪದೇಶವಾಗಿ ಧರಿಸಿರುವ ಜನಿವಾರವನ್ನು ಯಾರೋ ಕತ್ತರಿಸಿ ಬಿಸಾಕುವುದು ಒಂದು ದುಷ್ಕೃತ್ಯ ಇದನ್ನು ಸಮುದಾಯ ಖಂಡಿಸುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿದ್ದರೂ ಪರವಾಗಿಲ್ಲ ಜನಿವಾರ ಕತ್ತರಿಸುವುದಿಲ್ಲ ಎಂದು ಹಿಂತಿರುಗಿದ್ದಾರೆ, ಇನ್ನು ಕೆಲವರು ಭಯದಿಂದ ಜನಿವಾರ ಕತ್ತರಿಸಿಕೊಂಡು ಪರೀಕ್ಷೆ ಬರೆದಿದ್ದಾರೆ. ಸರಕಾರ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವ ಈಶ್ವರ್ ಖಂಡ್ರೆ ಪರೀಕ್ಷೆ ಬರೆಯದ ವಿದ್ಯಾರ್ಥಿಯನ್ನು ಭೇಟಿ ಮಾಡಿ ತಮ್ಮ ಕಾಲೇಜಿನಲ್ಲೇ ಸೀಟು ನೀಡುವುದಾಗಿ ಭರವಸೆ ನೀಡಿರು ವುದು ಸ್ವಾಗತಾರ್ಹ.

ಜಾತಿ ಗಣತಿಗೆ ಸಂಬಂಧಿಸಿದಂತೆ ಊಹಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮಾತಾಡುವು ದಕ್ಕಿಂತ, ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಅಭಿಪ್ರಾಯಪಟ್ಟಿದ್ದಾರೆ. ಕಾಂತಾರಾಜ್ ಹಾಗೂ ಜಯ ಪ್ರಕಾಶ್ ಹೆಗ್ಡೆ ಅವರು ಸಲ್ಲಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಸಂಬಂಧಿಸಿದಂತೆ ‘ವಿಶ್ವವಾಣಿ’ಯೊಂದಿಗೆ ಮಾತನಾಡಿರುವ ಅವರು, ಜಾತಿಗಣತಿಯನ್ನು ಯಾವ ರೀತಿ ನೋಡಲಾ ಗಿದೆ? ಮುಂದಿನ ಹೋರಾಟ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮಾತನಾಡಿ ದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಇದನ್ನೂ ಓದಿ: Star Summer Fashion Interview: ಬೇಸಿಗೆಯಲ್ಲಿ ನಟಿ ಸುಕೃತಾ ವಾಗ್ಲೆಯ ಕಾಟನ್‌ ಸೀರೆ ಲವ್‌

ಜಾತಿಗಣತಿಯನ್ನು ಬ್ರಾಹ್ಮಣ ಮಹಾಸಭಾ ಯಾವ ರೀತಿ ನೋಡುತ್ತದೆ?

ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ಜಾತಿ ಗಣತಿ ಪೂರ್ಣ ವರದಿಯನ್ನು ನಾವಿಲ್ಲ ಅಧ್ಯಯನ ಮಾಡಿಲ್ಲ. ಅಧ್ಯಯನ ಮಾಡದೇ ಮಾತನಾಡುವುದು ಸರಿಯಲ್ಲ. ಆದ್ದರಿಂದ ಈಗಾಗಲೇ ವರದಿಯನ್ನು ತರಿಸಿಕೊಂಡಿದ್ದು, ಪರಿಶೀಲಿಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಬ್ರಾಹ್ಮಣ ಸಮುದಾಯದ ಶಾಸಕರು, ಸಚಿವರು, ನಾಯಕರ ಸಭೆ ಕರೆಯುತ್ತಿದ್ದೇವೆ. ಸಭೆಯಲ್ಲಿ ವರದಿಯಲ್ಲಿ ರುವ ಅಂಶಗಳ ಬಗ್ಗೆ ಚರ್ಚಿಸಲಾಗುವುದು. ಬಳಿಕ ಸಾಧಕ-ಬಾಧಕವನ್ನು ನೋಡಿಕೊಂಡು ಮುಖ್ಯಮಂತ್ರಿಗಳಿಗೆ ಬ್ರಾಹ್ಮಣ ಮಹಾಸಭಾದ ನಿಲುವನ್ನು ಪತ್ರದ ಮೂಲಕ ತಿಳಿಸಲಾಗುವುದು. ಮಾಧ್ಯಮದಲ್ಲಿರುವ ಬರುತ್ತಿರುವ ವರದಿಯ ಪ್ರಕಾರ, ಬ್ರಾಹ್ಮಣ ಸಮುದಾಯದ ಸಂಖ್ಯೆ 17.83 ಲಕ್ಷ ಅಂದರೆ ಶೇ.2.89 ರಷ್ಟು ಎಂದು ತೋರಿಸಿದ್ದಾರೆ.

ನಮಗಿರುವ ಮಾಹಿತಿ ಪ್ರಕಾರ ಇದು ಬಹಳ ಕಡಿಮೆ ಸಂಖ್ಯೆ. ಈ ಗಣತಿಗೆ ಹಲವು ವಿರೋಧ ವಿದೆಯಲ್ಲ?

ಬಹುತೇಕರು ಹೇಳುತ್ತಿರುವ ಪ್ರಕಾರ ಇದೊಂದು ವೈಜ್ಞಾನಿಕ ವರದಿಯಲ್ಲ. ಏಕೆಂದರೆ ಮನೆ ಮನೆ ಭೇಟಿ ಮಾಡಿ ಮಾಹಿತಿ ಪಡೆಯುವುದೇ ವೈಜ್ಞಾನಿಕ ಸಮೀಕ್ಷೆ. ಆದರೆ ನಾವು ಸುಮಾರು ಜನರನ್ನು ವಿಚಾರಿಸಿದಾಗ ಅವರು ಮನೆ ಭೇಟಿ ಮಾಡಿ ಮಾಹಿತಿ ಪಡೆದಿಲ್ಲ ಎನ್ನುತ್ತಿದ್ದಾರೆ. ಇದು ಕೆಲವರ ಹೇಳಿಕೆ ಅಲ್ಲ ಬಹುತೇಕರು ಇದನ್ನೇ ಹೇಳುತ್ತಿದ್ದಾರೆ. ಆ ಕಾರಣದಿಂದಾಗಿ ಇದೊಂದು ಅವೈಜ್ಞಾನಿಕ ವರದಿಯಾಗಿದೆ. ಸರಕಾರ ಹೊಸದಾಗಿ ಸಮೀಕ್ಷೆ ನಡೆಸಲು ಶಾಸಕರು ಹಾಗೂ ಸಂಸದರು ಅಧಿವೇಶನಗಳಲ್ಲಿ ಚರ್ಚಿಸಿ ಗಮನ ಸೆಳೆಯಬೇಕಾಗಿದೆ. ಆದ್ದರಿಂದ ನಮ್ಮ ಶಾಸಕ-ಸಚಿವರೊಂದಿಗೆ ಚರ್ಚಿಸಿ ಅವರಿಗೆ ಮಹಾಸಭಾದಿಂದ ಕೆಲವೊಂದಷ್ಟು ಸಲಹೆ-ಸೂಚನೆ ಹಾಗೂ ವರದಿಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ.

ಮಹಾಸಭಾ ಪ್ರಕಾರ ಬ್ರಾಹ್ಮಣರ ಜನಸಂಖ್ಯೆ ಎಷ್ಟಿದೆ?

ಹಾಗೇ ನೋಡಿದರೆ, ರಾಜ್ಯದಲ್ಲಿ ಈವರೆಗೆ ಈ ರೀತಿಯ ಸಮುದಾಯದ ಜನಸಂಖ್ಯೆಯ ಸಮೀಕ್ಷೆ ಯನ್ನು ನಡೆಸಿರಲಿಲ್ಲ. ಕೆಲವರು 50 ಲಕ್ಷ ಎಂದರೆ, ಇನ್ನು ಕೆಲವರು 30 ಲಕ್ಷ ಎನ್ನುತ್ತಾರೆ. ಆದರೆ ಸ್ಪಷ್ಟವಾಗಿರುವ ಸಂಖ್ಯೆ ನಮ್ಮ ಬಳಿಯೂ ಇಲ್ಲ. ಆದರೆ ಆಂದಾಜು 17 ಲಕ್ಷ ಎನ್ನುವುದು ಸರಿ ಯಲ್ಲ. ಹಾಗೇ ನೋಡಿದರೆ, ಅಂದಾಜು ಎಂಬುದೇ ಒಂದು ಅವೈಜ್ಞಾನಿಕವಾಗಿದೆ. ಆದರೆ 17 ಲಕ್ಷ ಎಂಬುದು ತೀರಾ ಕಡಿಮೆ ಸಂಖ್ಯೆ ಎಂಬುದು ನಮ್ಮೆಲ್ಲರ ನಿಲುವು, ಆದ್ದರಿಂದ ಹೊಸತಾಗಿ ವೈಜ್ಞಾ ನಿಕ ಸಮೀಕ್ಷೆ ನಡೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ.

ಮಹಾಸಭಾದಿಂದಲೇ ಸಮೀಕ್ಷೆ ಇದೆಯೇ?

ಬ್ರಾಹ್ಮಣ ಮಹಾ ಸಭಾದಿಂದಲೂ ಬ್ರಾಹ್ಮಣ ಸಮುದಾಯದ ಸಮೀಕ್ಷೆ ನಡೆಸುವ ಯೋಚನೆ ಇದೆ. ಇದರ ಕುರಿತಾಗಿ ಸಮುದಾಯದ ಮುಖಂಡರು ಹೋಬಳಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಯಾವ ರೀತಿ ಮಾಹಿತಿ ಪಡೆಯಬಹುದು ಎಂದು ಚರ್ಚಿಸಿಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸಮೀಕ್ಷೆ ನಡೆಸುವುದು ಸುಲಭ, ಆದರೆ ಈ ನಗರ ಭಾಗದ ಸಮೀಕ್ಷೆ ನಡೆಸಲು ಸ್ವಲ್ಪ ಕಷ್ಟವಾಗ ಬಹುದು, ಸ್ವಲ್ಪ ಹೆಚ್ಚಿನ ಸಮಯವೂ ಇಡಿಯಬಹುದು. ಇದರ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ ಮುಂದಿನ ನಿರ್ಧಾರ ಮಾಡಲಾಗುವುದು.

ಲಿಂಗಾಯತ ಮತ್ತು ಒಕ್ಕಲಿಗರ ಜತೆ ಹೋರಾಟಕ್ಕೆ ಕೈ ಜೋಡಿಸುತ್ತೀರಾ?

ವರದಿ ಪರಿಶೀಲಿಸಿದ ನಂತರ ನಮಗೆ ಅನ್ಯಾಯ ವಾಗಿದೆ ಎಂದು ತಿಳಿದರೆ ಖಂಡಿತವಾಗಿಯೂ ನಾವೂ ಅವರ ಜತೆ ಹೋರಾಟಕ್ಕೆ ಕೈ ಜೋಡಿಸುತ್ತೇವೆ, ಅದರಲ್ಲಿ ಯಾವ ತಪ್ಪೂ ಇಲ್ಲ. ಎಲ್ಲಾ ಸಮುದಾಯಗಳು ಇದು ಅವೈಜ್ಞಾನಿಕ ಎಂದು ಪ್ರತಿಭಟನೆ ನಡೆಸಿದರೆ ನಾವು ಅವರೊಂದಿಗೆ ಧ್ವನಿ ಗೂಡಿಸುತ್ತೇವೆ. ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಲು ಸರಕಾರದ ಮೇಲೆ ಒತ್ತಡ ಹೇರುತ್ತೇವೆ.

*

ವರದಿಯ ಸಂಪೂರ್ಣ ಪರಿಶೀಲಿಸಿದ ಮೇಲೆ ಉಪಜಾತಿಗಳಿಗೆ ಸಂಬಂಧಿಸಿದಂತೆ ತಿಳಿಯುತ್ತದೆ. ಅದಕ್ಕು ಮೊದಲೇ ಉತ್ತರಿಸಿದರೆ ತಪ್ಪಾಗಬಹುದು. ಆದರೆ ನಮಗೆ ಬಂದಿರುವ ಮಾಹಿತಿಯಲ್ಲಿ 2ಎ, 2ಬಿ ಯಲ್ಲಿ ಕೆಲವು ಜಾತಿಯವರನ್ನು ಬ್ರಾಹ್ಮಣ ಉಪಜಾತಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿ ತಪ್ಪು ಎಂಬುದು ನಮಗೆ ತಿಳಿದಿಲ್ಲ.

ಎಸ್.ರಘುನಾಥ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ