ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ರೆಟ್ರೊ ಸೀರೆಯಲ್ಲಿ ಹಳೆಯ ಸಿನಿಮಾ ನಾಯಕಿಯಂತೆ ಕಾಣಿಸಿಕೊಂಡ ನಟಿ ರಜಿನಿ

ಕಿರುತೆರೆ ನಟಿ ರಜಿನಿ ರೆಟ್ರೊ ಸ್ಟೈಲ್‌ನ ಸೀರೆಯಲ್ಲಿ ಹಾಗೂ ಮೇಕಪ್‌ನಲ್ಲಿ ಹಳೆಯ ಕಾಲದ ಸಿನಿಮಾಗಳ ನಾಯಕಿಯಂತೆ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಇದ್ಯಾವ ಬಗೆಯ ರೆಟ್ರೊ ಲುಕ್‌? ಅವರ ಸ್ಟೈಲಿಂಗ್‌ ಹೇಗಿದೆ? ಈ ಬಗ್ಗೆ ಫ್ಯಾಷನ್‌ ವಿಮರ್ಶಕರು ವಿಶ್ಲೇಷಣೆ ನಡೆಸಿದ್ದಾರೆ.

ರೆಟ್ರೊ ಸೀರೆಯಲ್ಲಿ ಮಿಂಚು ಹರಿಸಿದ ನಟಿ ರಜಿನಿ

ಚಿತ್ರಗಳು: ರಜಿನಿ, ನಟಿ. ಫೋಟೋಗ್ರಾಫಿ: ಪಿಕ್ಸೆಲ್‌_ ಫೋಟೋಗ್ರಾಫಿ _ 04

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಿರುತೆರೆ ನಟಿ ರಜಿನಿ ರೆಟ್ರೊ ಸ್ಟೈಲ್‌ನಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಪೋಲ್ಕಾ ಡಾಟ್‌ ಸೀರೆಯಲ್ಲಿ ಹಾಗೂ ವಿಂಟೇಜ್‌ ಸ್ಟೈಲ್‌ನ ಮೇಕಪ್‌ನಲ್ಲಿ ಹಳೆಯ ಕಾಲದ ಸಿನಿಮಾಗಳ ನಾಯಕಿಯಂತೆ (Star Fashion 2025) ಕಾಣಿಸಿಕೊಂಡಿದ್ದಾರೆ. ಈ ಲುಕ್‌ ಅವರ ಫಾಲೋವರ್ಸ್‌ಗಳನ್ನು ಮಾತ್ರವಲ್ಲ, ಸೀರೆ ಪ್ರಿಯ ಮಾನಿನಿಯರನ್ನು ಸೆಳೆದಿದೆ.

Star Fashion 2025 1

ಫ್ಯಾಷೆನಬಲ್‌ ನಟಿ ರಜಿನಿ

ನಾನಾ ಸೀರಿಯಲ್‌ಗಳಲ್ಲಿ ನಟಿಸಿರುವ ರಜಿನಿ ಜಿಮ್‌ ಫ್ರೀಕ್‌ ಕೂಡ. ಅಲ್ಲದೇ ಸಾಕಷ್ಟು ಸಮಯೋಜಿತ ಕಾಮಿಡಿ ರೀಲ್ಸ್‌ಗಳ ಮೂಲಕ ಜನಪ್ರಿಯಗೊಂಡಿದ್ದಾರೆ. ಆಗಾಗ್ಗೆ ಫ್ಯಾಷನ್‌ ಶೂಟ್‌ಗಳಲ್ಲೂ ಸಖತ್‌ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರ ಒಂದೊಂದು ಫ್ಯಾಷನ್‌ ಡ್ರೆಸ್‌ಕೋಡ್‌ಗಳು ಕೂಡ ಚೆನ್ನಾಗಿ ಇವೆ ಎನ್ನುವ ಫ್ಯಾಷನ್‌ ವಿಮರ್ಶಕರ ಪ್ರಕಾರ, ರಜಿನಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ಸಮಯೋಜಿತವಾಗಿದೆಯಂತೆ.

Star Fashion 2025 2

ರಜಿನಿ ರೆಟ್ರೊ ಸೀರೆ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರ ವಿಶ್ಲೇಷಣೆ

ನೋಡಲು ಥೇಟ್‌ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಆರತಿಯಂತೆ ಕಾಣಿಸುವ ಅವರ ಈ ಲುಕ್‌ ಹಳೆಯ ಸಿನಿಮಾಗಳ ಹೀರೋಯಿನ್‌ಗಳ ಸ್ಟೈಲ್‌ ಅನ್ನು ನೆನಪಿಸುವಂತಿದೆ. ಅಲ್ಲದೇ ಎಂತಹವರನ್ನು ಸೆಳೆಯುವಂತಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Fashion 2025 3

ಪೋಲ್ಕಾ ಡಾಟ್‌ ಸೀರೆಯಲ್ಲಿ ರಜಿನಿ

ರೆಡ್‌ ಸೀರೆಯ ಬ್ಲ್ಯಾಕ್‌ ಪೋಲ್ಕ್‌ ಡಾಟ್ಸ್ ವಿನ್ಯಾಸ ಅದಕ್ಕೆ ಫುಲ್ ಸ್ಲೀವ್‌ನ ಬ್ಲ್ಯಾಕ್‌ ಬ್ಲೌಸ್‌ ಸ್ಟೈಲಿಂಗ್‌ ಮನಮೋಹಕವಾಗಿದೆ. ಅಲ್ಲದೇ, ಮೇಕಪ್‌ ಆರ್ಟಿಸ್ಟ್ ಸ್ನೇಹ ಪ್ರದೀಪ್‌ರ ಮೇಕಪ್‌ ಕೂಡ ಅಂದವಾಗಿದೆ. ಇನ್ನೂ ಅವರನ್ನು ತರುಣ್‌ ಯಡೂರ್‌ ಅವರ ಫೋಟೋಗ್ರಾಫಿ ಮತ್ತಷ್ಟು ಆಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Ashada Sale 2025: ಆಫರ್‌... ಆಫರ್‌! ಆಷಾಡಕ್ಕೆ ಭರ್ಜರಿ ಸೇಲ್‌