ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haryana Crime: ಬದುಕನ್ನೇ ನುಂಗಿದ ಸಾಲದ ಹೊರೆ... ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ..!

Haryana Crime: ಉತ್ತರಾಖಂಡ ಡೆಹ್ರಾಡೂನ್‌ನ ಒಂದೇ ಕುಟುಂಬದ ಏಳು ಜನರು, ಭಾರೀ ಸಾಲದ ಒತ್ತಡದಿಂದ ಬೇಸತ್ತು, ಹರಿಯಾಣದ ಪಂಚಕುಲಾದಲ್ಲಿವಿಷ ಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಸೆಕ್ಟರ್ 27ರ ಒಂದು ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಲಾಕ್ ಆಗಿದ್ದ ಶವಗಳನ್ನು ಪತ್ತೆಹಚ್ಚಲಾಗಿದೆ.

ಹರಿಯಾಣದಲ್ಲಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ..!

Profile Sushmitha Jain May 27, 2025 11:50 AM

ಪಂಚಕುಲ: ಉತ್ತರಾಖಂಡ (Uttarakhand) ಡೆಹ್ರಾಡೂನ್‌ನ (Dehradun) ಒಂದೇ ಕುಟುಂಬದ ಏಳು ಜನರು, ಭಾರೀ ಸಾಲದ ಒತ್ತಡದಿಂದ ಬೇಸತ್ತು, ಹರಿಯಾಣ(Haryana)ದ ಪಂಚಕುಲಾದಲ್ಲಿ (Panchkula) ವಿಷ ಸೇವಿಸಿ ಆತ್ಮಹತ್ಯೆ(Self Harming) ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಸೆಕ್ಟರ್ 27ರ ಒಂದು ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಲಾಕ್ ಆಗಿದ್ದ ಶವಗಳನ್ನು ಪತ್ತೆಹಚ್ಚಲಾಗಿದೆ. ಮೂಲಗಳ ಪ್ರಕಾರ, ಡೆಹ್ರಾಡೂನ್‌ನ ನಿವಾಸಿ ಪ್ರವೀಣ್ ಮಿತ್ತಲ್ (42) ತಮ್ಮ ಕುಟುಂಬದೊಂದಿಗೆ ಪಂಚಕುಲದ ಬಾಗೇಶ್ವರ್ ಧಾಮ್‌ನಲ್ಲಿ ನಡೆದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು.

ಆದರೆ, ಭಾರೀ ಸಾಲ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬವು ಈ ಕಠಿಣ ನಿರ್ಧಾರ ಕೈಗೊಂಡಿತು. ಭಾನುವಾರ ಕಾರ್ಯಕ್ರಮ ಮುಗಿದ ನಂತರ ಡೆಹ್ರಾಡೂನ್‌ಗೆ ವಾಪಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಕಾರಿನೊಳಗೆ ಕುಟುಂಬದವರು ಕಷ್ಟಪಡುತ್ತಿರುವುದನ್ನು ಕಂಡ ಸ್ಥಳೀಯರು, ಅವರನ್ನು ಹೊರತೆಗೆಯಲು ಯತ್ನಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಪ್ರತ್ಯಕ್ಷದರ್ಶಿಯಾದ ಪುನೀತ್, ಘಟನೆಯನ್ನು ವಿವರಿಸುತ್ತಾ, ನಮ್ಮ ಮನೆಯ ಸಮೀಪ ಈ ಘಟನೆ ನಡೆಯಿತು. ಕಾರಿನ ಗ್ಲಾಸ್‌ಗಳನ್ನು ಟವೆಲ್‌ನಿಂದ ಮುಚ್ಚಲಾಗಿದೆ ಎಂದು ಯಾರೋ ಹೇಳಿದರು. ಅಲ್ಲಿಗೆ ಹೋಗಿ ಕೇಳಿದಾಗ, ಅವರು ಬಾಬಾನ ಕಾರ್ಯಕ್ರಮಕ್ಕೆ ಬಂದಿದ್ದು, ಹೊಟೇಲ್ ಸಿಗದ ಕಾರಣ ಕಾರಿನಲ್ಲೇ ಮಲಗಿದ್ದಾರೆ ಎಂದರು. ನಾವು ಕಾರನ್ನು ಬೇರೆಕಡೆಗೆ ಪಾರ್ಕ್‌ ಮಾಡಲು ಸೂಚಿಸಿದೆವು. ಆದರೆ, ಅವರು ಒಬ್ಬರ ಮೇಲೊಬ್ಬರು ವಾಂತಿ ಮಾಡಿಕೊಂಡಿರುವುದನ್ನು ಗಮನಿಸಿದೆವು. ನಾವು ಒಬ್ಬ ವ್ಯಕ್ತಿಯನ್ನು ಹೊರತೆಗೆದೆವು ಎಂದು ಸುದ್ದಿಗಾರರಿಗೆ ತಿಳಿಸಿದರು.

ಈ ಸುದ್ದಿಯನ್ನು ಓದಿ: Viral Video: ಅಬ್ಬಬ್ಬಾ..! ಇವನ ಬಂಗಾರದ ಮೋಹ ನೋಡಿದ್ರೆ ನೀವು ಕೂಡ ಶಾಕ್‌ ಆಗ್ತೀರಿ

“ಆ ಸಮಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ಉಸಿರಾಡುತ್ತಿದ್ದ. ಉಳಿದವರು ಪ್ರಜ್ಞೆ ತಪ್ಪಿದ್ದರು. ಹೊರತೆಗೆದ ವ್ಯಕ್ತಿ, ನಾನು ಐದು ನಿಮಿಷದಲ್ಲಿ ಸಾಯುತ್ತೇನೆ, ನಾವು ವಿಷ ಸೇವಿಸಿದ್ದೇವೆ, ಸಾಲದಲ್ಲಿ ಮುಳುಗಿದ್ದೇವೆ ಎಂದು ಹೇಳಿದರು” ಎಂದು ಪುನೀತ್ ಆ ವ್ಯಕ್ತಿಯ ಕೊನೆಯ ಮಾತುಗಳನ್ನು ನೆನಪಿಸಿಕೊಂಡರು. ಪೊಲೀಸರು ಸಕಾಲಕ್ಕೆ ಆಗಮಿಸಿದರೂ, ಆಂಬುಲೆನ್ಸ್ 45 ನಿಮಿಷ ತಡವಾಗಿ ಬಂದಿತು ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಕುಟುಂಬದ ಎಲ್ಲ ಸದಸ್ಯರು ಮೃತರಾಗಿದ್ದರು. ಮೃತರಲ್ಲಿ ಪ್ರವೀಣ್ ಮಿತ್ತಲ್ (42), ಅವರ ತಂದೆ-ತಾಯಿ, ಪತ್ನಿ ಮತ್ತು ಮೂವರು ಮಕ್ಕಳು (ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ) ಸೇರಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಹಿಮಾದ್ರಿ ಕೌಶಿಕ್, “ಪ್ರಾಥಮಿಕ ತನಿಖೆಯಿಂದ ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತದೆ. ಫೊರೆನ್ಸಿಕ್ ತಂಡವು ಸ್ಥಳಕ್ಕೆ ತಲುಪಿದೆ. ಸ್ಥಳದಿಂದ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುವುದು” ಎಂದು ತಿಳಿಸಿದರು. ಪೊಲೀಸರು ಘಟನಾ ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆ ಮಾಡಿದೆ. ಶವಗಳನ್ನು ಪಂಚಕುಲಾದ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ.