Operation Sindoor: ನೂರ್ ಖಾನ್ ವಾಯುನೆಲೆಯನ್ನು ನುಜ್ಜುಗುಜ್ಜು ಮಾಡಿದ ಬ್ರಹ್ಮೋಸ್; ಸ್ಯಾಟ್‌ಲೈಟ್ ಫೋಟೋ ರಿಲೀಸ್
ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಸಂಘರ್ಷಕ್ಕೆ ಇದೀಗ ತೆರೆ ಬಿದ್ದಿದೆ. ಗುರುವಾರ ಸಿರ್ಸಾ ವಾಯುನೆಲೆ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಸಿತ್ತು. ಇದರ ಪ್ರತೀಕಾರವಾಗೀ ಭಾರತ ಪಾಕಿಸ್ತಾನಕ್ಕೆ ಬಹು ದೊಡ್ಡ ಆಘಾತವನ್ನೇ ನೀಡಿದೆ. ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ಶುಕ್ರವಾರ ಭಾರತ ನಡೆಸಿದ ದಾಳಿಯು "ಮೇ 7 ರಂದು ನಡೆದ 'ಆಪರೇಷನ್ ಸಿಂದೂರ್' ಗಿಂತ ದೊಡ್ಡದಾಗಿದೆ" ಎಂದು ಭಾರತ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.


ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ (Operation Sindoor) ಸಂಘರ್ಷಕ್ಕೆ ಇದೀಗ ತೆರೆ ಬಿದ್ದಿದೆ. ಗುರುವಾರ ಸಿರ್ಸಾ ವಾಯುನೆಲೆ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಸಿತ್ತು. ಇದರ ಪ್ರತೀಕಾರವಾಗೀ ಭಾರತ ಪಾಕಿಸ್ತಾನಕ್ಕೆ ಬಹು ದೊಡ್ಡ ಆಘಾತವನ್ನೇ ನೀಡಿದೆ. ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ಶುಕ್ರವಾರ ಭಾರತ ನಡೆಸಿದ ದಾಳಿಯು "ಮೇ 7 ರಂದು ನಡೆದ 'ಆಪರೇಷನ್ ಸಿಂದೂರ್' ಗಿಂತ ದೊಡ್ಡದಾಗಿದೆ" ಎಂದು ಭಾರತ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಇದೀಗ ನೂರ್ ಖಾನ್ (Nur Khan) ವಾಯುನೆಲೆ ಮೇಲೆ ಹಾರಿಸಿದ್ದ ಕ್ಷಿಪಣಿಯ ಸ್ಯಾಟ್‌ಲೈಟ್ ಚಿತ್ರಗಳು ಬಿಡುಗಡೆಯಾಗಿದೆ.
ಚೀನಾದ ಉಪಗ್ರಹ ಸಂಸ್ಥೆ (MIZAZVISION) ಬಿಡುಗಡೆ ಮಾಡಿದ ಉಪಗ್ರಹ ಚಿತ್ರಣವು ಭಾರತೀಯ ಸಶಸ್ತ್ರ ಪಡೆಗಳ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿನ ಹಾನಿಯನ್ನು ತೋರಿಸಿದೆ. ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ಪಾಕಿಸ್ತಾನ ವಾಯುಪಡೆಯ ನೆಲೆ ನೂರ್ ಖಾನ್, ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.
New satellite imagery from China’s MizarVision shows visible damage at Pakistan’s Nur Khan Air Base following the recent Indian strike.#IndiaPakistanWar #IndianArmy #IndiaPakistanWar2025 pic.twitter.com/u8sAnScCKz
— Rudra (@CosmicEnergy108) May 11, 2025
ಪಿಂಡಿ ವಾಯು ನೆಲೆ ಸೇರಿದಂತೆ ಹಲವು ಕಡೆ ಭಾರತ ಅತೀ ದೊಡ್ಡ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ದಾಳಿ ಮಾಡಲು ಬ್ರಹ್ಮೋಸ್ ಕ್ಷಿಪಣಿಗಳ ಬಳಕೆಯಾಗಿದೆ ಎಂದು ಭಾರತ ಹೇಳಿದೆ. 90 ನಿಮಿಷಗಳಲ್ಲಿ ಭಾರತವು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫೀಕಿ ವಾಯುನೆಲೆ, ಪಂಜಾಬ್‌ನ ಮುರಿಯದ್ ವಾಯುನೆಲೆ, ಸಿಂಧ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್ ವಾಯುನೆಲೆ, ಪಸ್ರೂರ್ ವಾಯುನೆಲೆ, ಸರ್ಗೋಧಾ ವಾಯುನೆಲೆ, ಸ್ಕಾರ್ಡು ವಾಯುನೆಲೆ, ಕರಾಚಿ ಬಳಿಯ ಭೋಲಾರಿ ವಾಯುನೆಲೆ ಮತ್ತು ಜಕೋಬಾಬಾದ್ ವಾಯುನೆಲೆಯ ಮೇಲೆ ದಾಳಿ ಮಾಡಿತು. ಚುನಿಯನ್ ರಾಡಾರ್ ಸ್ಥಾಪನೆಯನ್ನು ಸಹ ಧ್ವಂಸ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Brahmos missile: ಸೇನೆಗೆ ಮತ್ತೊಂದು ಬಲ; ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟಿಸಿದ ರಾಜನಾಥ್ ಸಿಂಗ್
ನೂರ್ ಖಾನ್ ಮತ್ತು ರಫೀಕಿ ವಾಯುನೆಲೆಗಳ ಮೇಲಿನ ದಾಳಿಯು ನಿರ್ಣಾಯಕವಾಗಿತ್ತು ಏಕೆಂದರೆ ಇದು ಪಾಕಿಸ್ತಾನದ ವಾಯು ಲಾಜಿಸ್ಟಿಕ್ಸ್ ಹೊಂದಿದೆ. ನೂರ್ ಖಾನ್ ನೆಲೆಯು ಇಸ್ಲಾಮಾಬಾದ್‌ಗೆ ಹತ್ತಿರದಲ್ಲಿದೆ, ಇದನ್ನು ಹೆಚ್ಚಾಗಿ ವಿಐಪಿ ಸಾಗಣೆ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್‌ಗಾಗಿ ಬಳಸಲಾಗುತ್ತದೆ. ಭಾರತದ ಬ್ರಹ್ಮಾಸ್ತ್ರಕ್ಕೆ ಪಾಕಿಸ್ತಾನ ಬೆದರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಶುಕ್ರವಾರ ಕದನ ವಿರಾಮ ಘೋಷಿಸಲಾಗಿದೆ. ಭಾರತದ ದಾಳಿಗೆ ಬೆಚ್ಚಿ ಬಿದ್ದ ಪಾಕಿಸ್ತಾನ ಅಮೆರಿಕದ ಮೊರೆ ಹೋಗಿತ್ತು.